Tamil Nadu quarry Accident: ಕಲ್ಲು ಕ್ವಾರಿಯಲ್ಲಿ ದುರಂತ; ಬಂಡೆಗಳು ಕುಸಿದು ಐವರು ಸಾವು, ಹಲವರಿಗೆ ಗಾಯ
ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕಲ್ಲು ಕ್ವಾರಿ ಸ್ಥಳದಲ್ಲಿ ಮಂಗಳವಾರ ಇದ್ದಕ್ಕಿದ್ದಂತೆ ಬಂಡೆಗಳು ಕುಸಿದು ಐವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕಲ್ಲುಗಳನ್ನು ತೆರವುಗೊಳಿಸಿದ ನಂತರ ಮೂವರ ಶವಗಳನ್ನು ಹೊರತೆಗೆದಿದ್ದಾರೆ.


ಚೆನ್ನೈ: ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕಲ್ಲು ಕ್ವಾರಿ ಸ್ಥಳದಲ್ಲಿ (Tamil Nadu quarry Accident) ಮಂಗಳವಾರ ಇದ್ದಕ್ಕಿದ್ದಂತೆ ಬಂಡೆಗಳು ಕುಸಿದು ಐವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕಲ್ಲುಗಳನ್ನು ತೆರವುಗೊಳಿಸಿದ ನಂತರ ಮೂವರ ಶವಗಳನ್ನು ಹೊರತೆಗೆದಿದ್ದಾರೆ. ಗಾಯಗೊಂಡ ಇಬ್ಬರು ಕಾರ್ಮಿಕರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡ ಇನ್ನಿಬ್ಬರನ್ನು ಮಧುರೈ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮರಣೋತ್ತರ ಪರೀಕ್ಷೆಗಾಗಿ ಮಧುರೈನ ಸರ್ಕಾರಿ ಶಿವಗಂಗೈ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸರ್ಕಾರಿ ರಾಜಾಜಿ ಆಸ್ಪತ್ರೆಗೆ ದೇಹಗಳನ್ನು ರವಾನಿಸಲಾಗಿದೆ. ಅಧಿಕಾರಿಗಳ ಪ್ರಕಾರ, ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಬಂಡೆಗಳು ಕುಸಿದಿವೆಯೇ ಅಥವಾ ಕಲ್ಲುಗಣಿಯಲ್ಲಿ ಕೆಲಸಗಾರರು ಬಳಸಿದ ಸ್ಫೋಟಕಗಳೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೃತ ಐವರನ್ನು - ಒಡೈಪಟ್ಟಿಯ ಮುರುಗಾನಂದಂ, ಕೀಲವಲವುವಿನ ಆರುಮುಗಂ ಮತ್ತು ಮಧುರೈನ ಆಂಡಿಸಾಮಿ ಮತ್ತು ಗಣೇಶನ್ ಎಂದು ಗುರುತಿಸಲಾಗಿದೆ.
ಮೇ 2024 ರಲ್ಲಿ, ವಿರುಧುನಗರದ ಗ್ರಾನೈಟ್ ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದರು. ವಿರುಧುನಗರ ಪೊಲೀಸ್ ವರಿಷ್ಠಾಧಿಕಾರಿ ಕೆ ಫಿರೋಜ್ ಖಾನ್ ಅಬ್ದುಲ್ಲಾ ಅವರ ಪ್ರಕಾರ, ವಾಹನದಿಂದ ಸ್ಫೋಟಕಗಳನ್ನು ಇಳಿಸುವ ಸಮಯದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟಗಳ ಪರಿಣಾಮವಾಗಿ ಕಲ್ಲು ಕ್ವಾರಿಯ ಸ್ಥಳದಿಂದ 20 ಕಿಲೋಮೀಟರ್ ದೂರದವರೆಗೆ ಕಂಪನಗಳು ಉಂಟಾಗಿತ್ತು.
ಈ ಸುದ್ದಿಯನ್ನೂ ಓದಿ: Fire Accident: ಕರಾಳ ಭಾನುವಾರ; ಹೈದರಾಬಾದ್ ಜತೆಗೆ ಮಹಾರಾಷ್ಟ್ರದಲ್ಲಿಯೂ ಬೆಂಕಿ ಅವಘಡ: 8 ಮಂದಿ ಸಜೀವ ದಹನ
ಭಾನುವಾರ ಹೈದರಾಬಾದ್‌ನ ಸುಪ್ರಸಿದ್ಧ ಚಾರ್‌ಮಿನಾರ್‌ಗೆ ಹತ್ತಿರದಲ್ಲೇ ದೊಡ್ಡ ದುರಂತ ನಡೆದು ಹೋಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು, ಸ್ಥಳೀಯರು ಓಡಾಡುವ ಚಾರ್‌ಮಿನಾರ್ ಸಮೀಪದಲ್ಲೇ ಇರುವ ಕಟ್ಟಡವೊಂದು ಸಾವಿನ ಚೇಂಬರ್ ಆಗಿ ಕನಿಷ್ಠ ಹದಿನೇಳು ಜನರನ್ನು ಬಲಿ ಪಡೆದಿದೆ. ಅವರಲ್ಲಿ ಎಂಟು ಮಕ್ಕಳು ಹಾಗೂ ಐವರು ಮಹಿಳೆಯರೂ ಸೇರಿದ್ದಾರೆ. ಕಟ್ಟಡದೊಳಗೆ ಬೆಂಕಿ ಹೊತ್ತಿಕೊಂಡು ಒಳಗಿದ್ದವರು ಹೊರಗೆ ಬರೋಕೆ ಸಾಧ್ಯವಾಗದೆ ಸುಟ್ಟು ಕರಕಲಾಗಿದ್ದಾರೆ. ಗುಲ್ಜಾರ್ ಹೌಸ್ ರಸ್ತೆಯಲ್ಲಿರುವ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ಇಲಾಖೆಗೆ ಬೆಳಿಗ್ಗೆ 6:30ರ ವೇಳೆಗೆ ಕರೆ ಹೋಗಿದ್ದು, ಅವರು ಬಂದು ರಕ್ಷಣಾ ಕಾರ್ಯಾಚರಣೆ ನಡೆಸುವ ಹೊತ್ತಿಗಾಗಲೇ ಮನೆಯೊಳಗಿದ್ದವರಲ್ಲಿ ಹೆಚ್ಚಿನ ಜನರು ಪ್ರಜ್ಞೆ ಕಳೆದುಕೊಂಡು ನೆಲದಲ್ಲಿ ಬಿದ್ದಿದ್ದರು.