IPL 2025: 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಪರೂಪದ ದಾಖಲೆ ಬರೆದ ಅಭಿಷೇಕ್ ಶರ್ಮಾ!
Abhishek Sharma Creates History: ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 18 ಎಸೆತಗಳಲ್ಲಿ 50 ರನ್ ಗಳಿಸಿದ ಅಭಿಷೇಕ್ ಶರ್ಮಾ ಸನ್ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಈ ಪಂದ್ಯದಲ್ಲಿ ಒಟ್ಟು 20 ಎಸೆತಗಳನ್ನು ಆಡಿದ ಅಭಿಷೇಕ್59 ರನ್ ಗಳಿಸಿ ಎಸ್ಆರ್ಎಚ್ ಗೆಲುವಿಗೆ ನೆರವು ನೀಡಿದರು.



ಸನ್ರೈಸರ್ಸ್ ಹೈದರಾಬಾದ್ಗೆ 6 ವಿಕೆಟ್ ಜಯ
ಸೋಮವಾರ ಲಖನೌದ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡ 6 ವಿಕೆಟ್ಗಳಿಂದ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯಲ್ಲಿ ನಾಲ್ಕನೇ ಗೆಲುವು ದಾಖಲಿಸಿತು.

ಅಭಿಷೇಕ್ ಶರ್ಮಾ ಬ್ಯಾಟಿಂಗ್ ಅಬ್ಬರ
ಲಖನೌ ಸೂಪರ್ ಜಯಂಟ್ಸ್ ತಂಡ ನೀಡಿದ್ದ 206 ರನ್ಗಳ ಗುರಿಯನ್ನು ಹಿಂಬಾಲಿಸಿದ ಸನ್ರೈಸರ್ಸ್ ಹೈದರಾಬಾದ್ ತಂಡ, ಅಭಿಷೇಕ್ ಶರ್ಮಾ ಅಬ್ಬರದ ಬ್ಯಾಟಿಂಗ್ ಬಲದಿಂದ 18.2 ಓವರ್ಗಳಿಗೆ 4 ವಿಕೆಟ್ ಕಳೆದುಕೊಂಡು 206 ರನ್ ಕಲೆ ಹಾಕಿತು. ಆ ಮೂಲಕ ಗೆದ್ದು ಬೀಗಿತು.

20 ಎಸೆತಗಳಲ್ಲಿ 59 ರನ್ ಸಿಡಿಸಿದ ಅಭಿಷೇಕ್
ಬೃಹತ್ ಮೊತ್ತವನ್ನು ಹಿಂಬಾಲಿಸಿದ ಸನ್ರೈಸರ್ಸ್ ಹೈದರಾಭಾದ್ ತಂಡದ ಪರ ಇನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ, ಕೇವಲ 20 ಎಸತೆಗಳಲ್ಲಿ 6 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 59 ರನ್ಗಳನ್ನು ಬಾರಿಸಿದರು. ಆ ಮೂಲಕ ಎಸ್ಆರ್ಎಚ್ ತಂಡದ ಗೆಲುವಿಗೆ ನೆರವು ನೀಡಿದರು.

ವಿಶೇಷ ದಾಖಲೆ ಬರೆದ ಅಭಿಷೇಕ್ ಶರ್ಮಾ
ಅಭಿಷೇಕ್ ಶರ್ಮಾ ಅವರು ಈ ಇನಿಂಗ್ಸ್ನಲ್ಲಿ ಕೇವಲ 18 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದ್ದಾರೆ. ತಮ್ಮ ಐಪಿಎಲ್ ಟೂರ್ನಿಯ ವೃತ್ತಿ ಜೀವನದಲ್ಲಿ ನಾಲ್ಕನೇ ಬಾರಿ 20 ಎಸೆತಗಳಿಗೂ ಮುನ್ನ ಅರ್ಧಶತಕವನ್ನು ಸಿಡಿಸಿದ್ದಾರೆ. ನಿಕೋಲಸ್ ಪೂರನ್ ಬಳಿಕ ಈ ದಾಖಲೆ ಬರೆದ ಎರಡನೇ ಬ್ಯಾಟ್ಸ್ಮನ್ ಆಗಿದ್ದಾರೆ.

ಮೊದಲ ಭಾರತೀಯ ಬ್ಯಾಟ್ಸ್ಮನ್
ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ 20 ಎಸೆತಗಳಿಗ ಒಳಗೆ ನಾಲ್ಕು ಬಾರಿ ಅರ್ಧಶತಕಗಳನ್ನು ಬಾರಿಸಿದ ಭಾರತದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಅಭಿಷೇಕ್ ಶರ್ಮಾ ಬರೆದಿದ್ದಾರೆ. ಈ ನಾಲ್ಕೂ ಅರ್ಧಶತಕಗಳನ್ನು ಅವರು ಸನ್ರೈಸರ್ಸ್ ಹೈದರಾಬಾದ್ ಪರ ಸಿಡಿಸಿರುವುದು ವಿಶೇಷವಾಗಿದೆ.

373 ರನ್ ಕಲೆ ಹಾಕಿರುವ ಅಭಿಷೇಕ್ ಶರ್ಮಾ
ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಆಡಿದ 11 ಇನಿಂಗ್ಸ್ಗಳಿಂದ 33.90ರ ಸರಾಸರಿ ಮತ್ತು 192.26ರ ಸ್ಟ್ರೈಕ್ ರೇಟ್ನಲ್ಲಿ 373 ರನ್ಗಳನ್ನು ಕಲೆ ಹಾಕಿದ್ದಾರೆ. ಆದರೆ, ಅವರಿಂದ ಕಳೆದ ಆವೃತ್ತಯಂತೆ ಈ ಬಾರಿ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ.