ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

YouTube: ಯೂಟ್ಯೂಬ್‌ಗೆ ಎರಡು ದಶಕಗಳ ಸಂಭ್ರಮ ; ಮೊದಲು ಶುರುವಾಗಿದ್ದೆಲ್ಲಿ? ಹಲವು ಆಸಕ್ತಿಕರ ಸಂಗತಿಗಳು ಇಲ್ಲಿವೆ

ಜಗತ್ತಿನ ಅತ್ಯಂತ ಬೃಹತ್‌ ಸಾಮಾಜಿಕ ಜಾಲತಾಣದಲ್ಲಿ ಒಂದಾದ ಯೂಟ್ಯೂಬ್‌ ಶುರುವಾಗಿ 20 ವರ್ಷಗಳು ಕಳೆದಿವೆ. ಯೂಟ್ಯೂಬ್‌ನಿಂದ ಯಾವ ದೇಶ ಅತೀ ಹೆಚ್ಚು ಹಣಗಳಿಸುತ್ತದೆ? ಯಾವ ದೇಶದ ಜನರು ಅತೀ ಹೆಚ್ಚು ಯೂಟ್ಯೂಬ್‌ ಚಾನೆಲ್‌ ಹೊಂದಿದ್ದಾರೆ ಎಂಬ ಸ್ವಾರಸ್ಯಕರ ಸಂಗತಿ ಇಲ್ಲಿವೆ.

ಯೂಟ್ಯೂಬ್‌ಗೆ ಎರಡು ದಶಕಗಳ ಸಂಭ್ರಮ ; ಮೊದಲು ಶುರುವಾಗಿದ್ದೆಲ್ಲಿ?

Profile Vishakha Bhat Apr 29, 2025 4:18 PM

ನವದೆಹಲಿ: ಜಗತ್ತಿನ ಅತ್ಯಂತ ಬೃಹತ್‌ ಸಾಮಾಜಿಕ ಜಾಲತಾಣದಲ್ಲಿ ಒಂದಾದ ಯೂಟ್ಯೂಬ್‌ (YouTube) ಶುರುವಾಗಿ 20 ವರ್ಷಗಳು ಕಳೆದಿವೆ. ಅಂತರ್ಜಾಲ ಬಳಸುವ 5 ಬಿಲಿಯನ್‌ ಜನರಲ್ಲಿ 2.1 ಬಿಲಿಯನ್‌ ಜನರು ಯೂಟ್ಯೂಬ್‌ ಬಳಸುತ್ತಾರೆ. ಮನರಂಜನೆಯ ತಾಣವಾದರೆ, ಜ್ಞಾನಾರ್ಜನೆಗಾಗಿ ಇನ್ನೂ ಕೆಲವರು ಬಳಸುತ್ತಾರೆ. ಅದೆಷ್ಟೋ ವಿದ್ಯಾರ್ಥಿಗಳು ಯೂಟ್ಯೂಬ್‌ ಮೂಲಕವೇ ಪರೀಕ್ಷೆ ತಯಾರಿ ಮಾಡಿ ಗುರಿ ಸಾಧಿಸಿದ ಉದಾಹರಣೆಗಳಿವೆ. ಅಷ್ಟೇ ಏಕೆ ಲಾಕ್‌ಡೌನ್‌ನಂತಹ ಪರಿಸ್ಥಿತಿಯಲ್ಲಿ ಯೂಟ್ಯೂಬ್‌ ನೋಡಿ ಅಡುಗೆ ಕಲಿತವರಿದ್ದಾರೆ. ಯೂಟ್ಯೂಬ್‌ನಿಂದ ಜೀವನ ಕಟ್ಟಿಕೊಂಡವರಿದ್ದಾರೆ. ಹಾಗಾದರೆ ಯೂಟ್ಯೂಬ್‌ನಿಂದ ಯಾವ ದೇಶ ಅತೀ ಹೆಚ್ಚು ಹಣಗಳಿಸುತ್ತದೆ? ಯಾವ ದೇಶದ ಜನರು ಅತೀ ಹೆಚ್ಚು ಯೂಟ್ಯೂಬ್‌ ಚಾನೆಲ್‌ ಹೊಂದಿದ್ದಾರೆ ಎಂಬ ಸ್ವಾರಸ್ಯಕರ ಸಂಗತಿ ಇಲ್ಲಿವೆ.

ಯೂಟ್ಯೂಬ್ ವೀಡಿಯೊಗಳನ್ನು ಅಪ್‌ಲೋಡ್ ಮಾಡುವಲ್ಲಿ ಅತ್ಯಂತ ಜನಪ್ರಿಯ ವೆಬ್‌ಸೈಟ್ ಆಗಿ ಮತ್ತು ಗೂಗಲ್ ನಂತರ ಎರಡನೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವೆಬ್‌ಸೈಟ್ ಆಗಿ ಮಾರ್ಪಟ್ಟಿದೆ. 2005 ರ ಏ. 23 ರಂದು ಯೂಟ್ಯೂಬ್‌ ಪ್ರಾರಂಭವಾಯಿತು. ಅದಾದ ಒಂದೇ ವರ್ಷಕ್ಕೆ ಅಂದರೆ ಅಕ್ಟೋಬರ್ 9,2006 ರಲ್ಲಿ ಗೂಗಲ್ ಸಂಸ್ಥೆಯು ಯೂಟ್ಯೂಬ್ ಅನ್ನು 12 ಸಾವಿರ ಕೋಟಿ ರೂಪಾಯಿ ಕೊಟ್ಟು ಖರೀದಿಸಿತು. ಪ್ರಾರಂಭವಾದ ಮೊದಲ ದಿನವೇ ಇದರಲ್ಲಿ ಜಾವೇದ್‌ ಕರೀಮ್‌ ಅವರೊಂದಿಗೆ "ಮಿ ಅಟ್ ದಿ ಝೂ" ಎಂಬ ಮೊದಲ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಹಾಕಲಾಯಿತು. ಈ ವೀಡಿಯೊ 240 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪೆಡೆದುಕೊಂಡಿದೆ. ಪ್ರಾರಂಭಿಕ ದಿನಗಳಲ್ಲಿ ಇದರ ಜನಪ್ರಿಯತೆ ಅಷ್ಟೇನೂ ಇರಲ್ಲಿಲ್ಲ. ಮೊದಲು ಅಷ್ಟೇನು ಜನಪ್ರಿಯತೆಯನ್ನು ಹೊಂದಿರಲಿಲ್ಲ. ಆದರೆ ಸಸತ ಪರಿಶ್ರಮ ಹಾಗೂ ನಿರಂತರತೆಯಿಂದ 20 ವರ್ಷಗಳ ಅವಧಿಯಲ್ಲಿ ಇಂದು ಈ ಮಟ್ಟಿಗಿನ ಜನಪ್ರಿಯತೆಯನ್ನು ಹೊಂದಿದೆ.

ಯೂಟ್ಯೂಬ್‌ ಹುಟ್ಟಿಕೊಳ್ಳಲು ಮೂಲ ಕಾರಣವನ್ನು ಹುಡುಕಿದರೆ ಆಶ್ಚರ್ಯವಾಗುತ್ತದೆ. 2004 ರಲ್ಲಿ ಭಾರತ ಸೇರಿದಂತೆ ಪ್ರಪಂಚದ ಹಲವು ಕಡೆ ಸುನಾಮಿ ಅಪ್ಪಳಿಸಿತ್ತು. ಹಲವು ರಾಷ್ಟ್ರಗಳಿಗೆ ಅಪ್ಪಳಿಸಿದ ಸುನಾಮಿಯ ವಿಡಿಯೋಗಳನ್ನು ಹುಡುಕಲು ಕರೀಮ್ ಯತ್ನಿಸಿದಾಗ ಅವು ಅಂತರ್ಜಾಲದಲ್ಲಿ ಸಿಗಲಿಲ್ಲ. ಆಗ ಅವರಿಗೆ ಅನಿಸಿದ್ದು, ವಿಡಿಯೋಗಳನ್ನು ಹಂಚಿಕೊಳ್ಳಲು ಮತ್ತೊಬ್ಬರು ಅವನ್ನು ನೋಡುವಂತಾಗಲು ವೇದಿಕೆಯೊಂದು ಬೇಕು ಎಂದು ಪ್ರಯತ್ನಿಸಿದಾಗಲೇ ಯೂಟ್ಯೂಬ್‌ನ ಐಡಿಯಾ ಹುಟ್ಟಿದ್ದು ಎನ್ನುತ್ತಾರೆ ಸಂಸ್ಥಾಪಕರು.

ದಿನದಿಂದ ದಿನಕ್ಕೆ ಯೂಟ್ಯೂಬ್‌ನ ಬಳಕೆದಾರರು ಹೆಚ್ಚುತ್ತಲೇ ಇದ್ದಾರೆ. ಡಿಸೆಂಬರ್ 2024 ರ ಹೊತ್ತಿಗೆ, ಪಾಶ್ಚಿಮಾತ್ಯ ದೇಶಗಳಲ್ಲಿ ಒಂದೇಯೇ ಬಳಕೆದಾರರ ಸಂಖ್ಯೆ ಶೇ 40 ರಷ್ಟು ಹೆಚ್ಚಿದೆ. ಈಜಿಪ್ಟ್‌ನಲ್ಲಿ 7 ಅಂಕಿಯ ಆದಾಯವನ್ನು ಪಡೆಯುವ ಯೂಟ್ಯೂಬ್‌ ಚಾನೆಲ್‌ಗಳು ಶೇ 60 ಕ್ಕೆ ಏರಿಕೆಯಾಗಿದೆ ಎಂಬುದು ಇತ್ತೀಚಿನ ದತ್ತಾಂಶಗಳಿಂದ ತಿಳಿದು ಬಂದಿದೆ. ಆಶ್ಚರ್ಯಕರ ಸಂಗತಿ ಏನೆಂದರೆ ಯೂಟ್ಯೂಬ್‌ ಇದುವರೆಗೆ ತನ್ನ ಬಳಕೆದಾರರ ನೈಜ ಸಂಖ್ಯೆಯನ್ನು ಎಂದಿಗೂ ಬಹಿರಂಗ ಪಡಿಸಿಲ್ಲ. ಯೂಟ್ಯೂಬ್‌ ಪ್ರಾರಂಭವಾಗಿ ಕೆಲ ವರ್ಷಗಳು ಕೆಲ ಭಾಷೆಗಳಿಗೆ ಮಾತ್ರ ಇದು ಸೀಮಿತವಾಗಿತ್ತು. ಆದರೆ ಇದೀಗ ಜಗತ್ತಿನ ಅರ್ಧಕ್ಕಿಂತಲೂ ಅಧಿಕ ಭಾಷೆಗಳಲ್ಲಿ ಯೂಟ್ಯೂಬ್‌ ಕಾರ್ಯ ನಿರ್ವಹಿಸುತ್ತಿದೆ. ವಿಶ್ವದಾದ್ಯಂತ 130 ಕೋಟಿಗೂ ಹೆಚ್ಚು ಮಂದಿ ಯೂಟ್ಯೂಬ್ ಅನ್ನು ಬಳಸುತ್ತಾರೆ. ಪ್ರತಿ ದಿನ 500 ಕೋಟಿ ಯೂಟ್ಯೂಬ್‌ ವಿಡಿಯೋಗಳನ್ನು ಜನರು ವೀಕ್ಷಿಸುತ್ತಾರೆ. ಅಂದರೆ ತಿಂಗಳಿಗೆ ಸರಾಸರಿ 3250 ಕೋಟಿ ಗಂಟೆಗಳ ಕಾಲದ ಯೂಟ್ಯೂಬ್ ವಿಡಿಯೋಗಳನ್ನು ನೋಡಲಾಗುತ್ತದೆ.

ಈ ಸುದ್ದಿಯನ್ನೂ ಓದಿ: Viral News: ಯೂಟ್ಯೂಬ್ ಚಾನೆಲ್‍ ತೊರೆದು, 8 ಲಕ್ಷ ರೂ. ಮೌಲ್ಯದ ಸಾಧನ ಸೇಲ್‌ಗಿಟ್ಟ ಖ್ಯಾತ ಯೂಟ್ಯೂಬರ್‌!

ಯೂಟ್ಯೂಬ್‌ ನಿರ್ವಹಣೆಗೆ ಆಗುವ ಖರ್ಚೆಷ್ಟು?

ಯೂಟ್ಯೂಬ್‌ ಕೇವಲ ನೀಡುವುದು ಮಾತ್ರವಲ್ಲ, ತಾನೂ ಸಾಕಷ್ಟು ಹಣವನ್ನು ಗಳಿಸುತ್ತದೆ. ಯೂಟ್ಯೂಬ್ ನ ಒಂದು ವರ್ಷದ ನಿರ್ವಹಣೆ ಖರ್ಚು ಸರಿಸುಮಾರು 46 ಸಾವಿರ ಕೋಟಿ ರುಪಾಯಿಗೂ ಹೆಚ್ಚು. ನಿರ್ವಣೆ, ಖರ್ಚು ಎಲ್ಲ ಕಳೆದು ಗೂಗಲ್ ಪ್ರತಿ ವರ್ಷ ಯೂಟ್ಯೂಬ್ ಒಂದರಿಂದಲೇ 29 ಸಾವಿರ ಕೋಟಿಗೂ ಹೆಚ್ಚು ಹಣ ಗಳಿಸುತ್ತದೆ. ಗೂಗಲ್‌ನ ಒಟ್ಟು ಜಾಹೀರಾತು ಲಾಭದ ಶೇ 6 ರಷ್ಟು ಯೂಟ್ಯೂಬ್ ಒಂದರಿಂದಲೇ ಬರುತ್ತದೆ.