ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kaustubha Mani: ಮೊದಲ ಮಗುವಿನ ನಿರೀಕ್ಷೆಯಲ್ಲಿ 'ನನ್ನರಸಿ ರಾಧೆ' ಕೌಸ್ತುಭಾ ಮಣಿ

ನಟಿ ಕೌಸ್ತುಭ ಮಣಿ ಇದೀಗ ತಾವು ತಾಯಿಯಾಗುತ್ತಿರುವ ಸಂಭ್ರಮದ ವಿಷಯವನ್ನು ಹಂಚಿ ಕೊಂಡಿದ್ದಾರೆ. ಕಳೆದ ವರ್ಷ ಸಿದ್ಧಾಂತ್‌ ಮತ್ತು ಕೌಸ್ತುಭ ಮಣಿ ಮದುವೆಯಾಗಿದ್ದರು. ಇದೀಗ ʼನನ್ನರಸಿ ರಾಧೆʼ ನಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದು ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಳ್ಳುವ ಖುಷಿಯಲ್ಲಿದ್ದಾರೆ.

ತಾಯಿಯಾಗುತ್ತಿರುವ ಖುಷಿಯಲ್ಲಿ ʼನನ್ನರಸಿ ರಾಧೆʼ ನಟಿ

Kaustubha Mani

Profile Pushpa Kumari Apr 29, 2025 9:30 PM

ಬೆಂಗಳೂರು: ಕೆಲವು ವರ್ಷಗಳ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ʼನನ್ನರಸಿ ರಾಧೆʼ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಪಡೆದಿತ್ತು. ಈ ಸೀರಿಯಲ್ ಮೂಲಕ ಮಿಂಚಿದ್ದ ನಟಿ ಕೌಸ್ತುಭ ಮಣಿ (Kaustubha Mani) ಇದೀಗ ತಾವು ತಾಯಿಯಾಗುತ್ತಿರುವ ಸಂಭ್ರಮದ ವಿಷಯವನ್ನು ಹಂಚಿಕೊಂಡಿದ್ದಾರೆ. ಕಳೆದ ವರ್ಷ ಸಿದ್ಧಾಂತ್‌ ಮತ್ತು ಕೌಸ್ತುಭ ಮಣಿ ಮದುವೆಯಾಗಿದ್ದರು. ಆಪ್ತರು, ಬಂಧು ಬಳಗದ ನಡುವೆ ಅದ್ಧೂರಿಯಾಗಿ ಇವರ ವಿವಾಹ ನೆರವೇರಿತ್ತು. ಇದೀಗ ʼನನ್ನರಸಿ ರಾಧೆʼ ನಟಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದು ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಳ್ಳುವ ಖುಷಿಯಲ್ಲಿದ್ದಾರೆ. ತಾಯಿಯಾಗುತ್ತಿರುವ ಶುಭಸುದ್ದಿಯನ್ನು ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಹೌದು, ʼನನ್ನರಸಿ ರಾಧೆʼ ಧಾರಾವಾಹಿಯ ಇಂಚರಾ (ಕೌಸ್ತುಭ ಮಣಿ) ಹಾಗೂ ಅಗಸ್ತ್ಯ (ಅಭಿನವ್‌ ವಿಶ್ವನಾಥ್‌) ಜೋಡಿಗೆ ಸಿರಿಯಲ್ ಪ್ರಿಯರು ಫಿದಾ ಆಗಿದ್ದರು. ಈ ಮುದ್ದಾದ ಜೋಡಿಗೆ ಫಾನ್ಸ್ ಕೂಡ ಸಿಕ್ಕಾಪಟ್ಟೆ ಇತ್ತು. ಅದರಲ್ಲೂ ಇಂಚರಾ ಮುದ್ದಾದ ನಟನೆಗೆ ಅಭಿಮಾನಿಗಳು ಮನ ಸೋತಿದ್ದರು. ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಈ ವಿಚಾರವನ್ನು ನಟಿಯೇ ಖುದ್ದಾಗಿ ಹೇಳಿಕೊಂಡಿದ್ದಾರೆ. ಈ ಸುದ್ದಿ ಕೇಳಿದ ಫ್ಯಾನ್ಸ್ ನಟಿಗೆ ಶುಭ ಕೋರುತ್ತಿದ್ದಾರೆ.

ಕಮ್ಮಿಂಗ್‌ ಸೂನ್‌, ಶೀಘ್ರದಲ್ಲಿ ಆಗಮಿಸಲಿದೆ ಎಂದು ಇನ್‌ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ನಟಿ ಕೌಸ್ತುಭ ಮಣಿ ಶುಭ ಸುದ್ದಿ ಶೇರ್ ಮಾಡಿದ್ದಾರೆ. ಮಗುವಿನ ಉಡುಗೆ, ಪುಟಾಣಿ ಶೂ ಸೇರಿದಂತೆ ಮಗುವನ್ನು ಸ್ವಾಗತಿಸುವ ಫೋಟೋವನ್ನು ಹಂಚಿ ಕೊಂಡಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳು ನಾನಾ ರೀತಿಯ ಕಾಮೆಂಟ್‌ ಮಾಡಿದ್ದಾರೆ. ನಟಿಗೆ ಅಭಿಮಾನಿಗಳು, ಆಪ್ತರು ಅಭಿನಂದನೆಗಳ ಮಹಾಪೂರ ಹರಿಸಿದ್ದಾರೆ.

ಇದನ್ನು ಓದಿ: Puppy Movie: 'ಪಪ್ಪಿ'ಗೆ ಧ್ರುವ ಸರ್ಜಾ ಸಾಥ್; ಮೇ 1ರಂದು ಉತ್ತರ ಕರ್ನಾಟದವರ ಚಿತ್ರ ತೆರೆಗೆ

ಕೌಸ್ತುಭ ಮಣಿ ಕಳೆದ ವರ್ಷ ಏಪ್ರಿಲ್‌ನಲ್ಲಿ ಸಿದ್ಧಾಂತ ಸತೀಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಂತರ ಕೌಸ್ತುಭ ನಟನೆಯಿಂದ ದೂರವೇ ಉಳಿದಿದ್ದಾರೆ.ಮದುವೆಯ ನಂತರ ಯಾವುದೇ ಧಾರಾವಾಹಿ ಆಫರ್ ಅನ್ನು ಸ್ವೀಕರಿಸದ ನಟಿ ಮಾಡೆಲಿಂಗ್, ಫೋಟೋ ಶೂಟ್, ಬ್ರಾಂಡ್ ಎಂಗೇಜ್‌ಮೆಂಟ್‌, ಬ್ರ್ಯಾಂಡ್‌ ಪ್ರಮೋಷನ್ ಇಂತಹ ವಿಚಾರಗಳಲ್ಲಿ ಬ್ಯುಸಿ ಇದ್ದಾರೆ.

ʼನನ್ನರಸಿ ರಾಧೆʼ ಅಲ್ಲದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʼಗೌರಿ ಶಂಕರʼ ಧಾರಾವಾಹಿಯಲ್ಲೂ ಸಹ ಕೌಸ್ತುಭ ಮಣಿ ಆರಂಭದಲ್ಲಿ ನಟಿಸಿದ್ದರು. ಆದರೆ ಅವರಿಗೆ ಮದುವೆ ಫಿಕ್ಸ್ ಆಗಿದ್ದರಿಂದ ಸೀರಿಯಲ್‌ನಿಂದ ಹೊರ ನಡೆದಿದ್ದರು. ಅಷ್ಟೇ ಅಲ್ಲದೆ ನಟಿ ಕೌಸ್ತುಭ ಮಣಿ ಹಿರಿತೆರೆಯಲ್ಲೂ ನಟಿಸಿದ್ದಾರೆ. ಅರ್ಜುನ್ ಜನ್ಯ ನಿರ್ದೇಶನದ ’45’ ಸಿನಿಮಾದಲ್ಲಿ ಶಿವ ರಾಜ್‌ಕುಮಾರ್‌, ಉಪೇಂದ್ರ, ರಾಜ್ ಬಿ. ಶೆಟ್ಟಿ ಜೊತೆ ಕೌಸ್ತುಭ ತೆರೆ ಹಂಚಿಕೊಂಡಿದ್ದಾರೆ.