ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RR vs GT: ರಾಜಸ್ಥಾನ್‌ ರಾಯಲ್ಸ್‌ ಗೆಲುವಿನ ಮಾಸ್ಟರ್‌ ಮೈಂಡ್‌ ಯಶಸ್ವಿ ಜೈಸ್ವಾಲ್‌!

ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಶತಕದ ಶತಕದ ಬಲದಿಂದ ರಾಜಸ್ಥಾನ ರಾಯಲ್ಸ್, ಎದುರಾಳಿ ಗುಜರಾತ್ ಟೈಟನ್ಸ್ ವಿರುದ್ಧ 8 ವಿಕೆಟ್‌ ಭರ್ಜರಿ ಗೆಲುವು ಪಡೆಯಿತು. ರಾಜಸ್ಥಾನ ಪರ ವೈಭವ್ ಸೂರ್ಯವಂಶಿ 38 ಎಸೆತಗಳಲ್ಲಿ 101 ರನ್ ಗಳಿಸಿದರು. ವೈಭವ್ ಜೊತೆ ಬ್ಯಾಟ್‌ ಮಾಡಿದ ಜೈಸ್ವಾಲ್ ಕೂಡ 70 ರನ್‌ಗಳ ಇನಿಂಗ್ಸ್‌ ಆಡುವ ಮೂಲಕ ಆರ್‌ಆರ್‌ ಗೆಲುವಿಗೆ ನೆರವಾದರು.

ವೈಭವ್‌ ಅಲ್ಲ! ಆರ್‌ಆರ್‌ ಜಯದ ಮಾಸ್ಟರ್‌ ಮೈಂಡ್‌ ಜೈಸ್ವಾಲ್‌!

ಯಶಸ್ವಿ ಜೈಸ್ವಾಲ್‌-ವೈಭವ್‌ ಸೂರ್ಯವಂಶಿ

Profile Ramesh Kote Apr 29, 2025 4:46 PM

ಜೈಪುರ: ಗುಜರಾತ್‌ ಟೈಟನ್ಸ್‌ ವಿರುದ್ಧ ಐಪಿಎಲ್‌ (IPL 2025) ಇತಿಹಾಸದ ಎರಡನೇ ವೇಗದ ಶತಕ ಸಿಡಿಸಿದ ವೈಭವ್‌ ಸೂರ್ಯವಂಶಿ ಅವರನ್ನು ಕ್ರಿಕೆಟ್‌ ಜಗತ್ತು ಮುಕ್ತಕಂಠದಿಂದ ಗುಣಗಾಣ ಮಾಡುತ್ತಿದೆ. ವೈಭವ್‌ ಶತಕದ ಬಲದಿಂದ ರಾಜಸ್ಥಾನ್‌ ರಾಯಲ್ಸ್‌ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ವೈಭವ್ ಕೇವಲ 38 ಎಸೆತಗಳಲ್ಲಿ 101 ರನ್‌ಗಳನ್ನು ಸಿಡಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕೇವಲ ಒಂದೇ ಒಂದು ಪಂದ್ಯದಲ್ಲಿ ಸೂರ್ಯವಂಶಿ ಹೀರೋ ಆಗಿ ಹೊರಹೊಮ್ಮಿದರು. ಆದರೆ, ವೈಭವ್‌ ಅವರ ಶತಕ ಹಾಗೂ ಆರ್‌ಆರ್‌ ಗೆಲುವಿನ ಹಿಂದೆ ಯಶಸ್ವಿ ಜೈಸ್ವಾಲ್‌ ಮಾಸ್ಟರ್‌ ಮೈಂಡ್‌ ಆಗಿದ್ದಾರೆ.

ಹೌದು! ವೈಭವ್ ಸೂರ್ಯವಂಶಿಯನ್ನು ಹೀರೋ ಮಾಡಿ ರಾಜಸ್ಥಾನ ರಾಯಲ್ಸ್‌ಗೆ ಗೆಲುವು ತಂದುಕೊಟ್ಟ ಹಿಂದಿನ ನಿಜವಾದ ಮಾಸ್ಟರ್ ಮೈಂಡ್ ಬೇರೊಬ್ಬರು. ಅದು ಬೇರೆ ಯಾರೂ ಅಲ್ಲ, ವೈಭವ್ ಅವರ ಆರಂಭಿಕ ಜೊತೆಗಾರ ಯಶಸ್ವಿ ಜೈಸ್ವಾಲ್ ಎಂದರೆ ತಪ್ಪಾಗಲಾರದು. ವೈಭವ್ ಸೂರ್ಯವಂಶಿ ಕ್ರೀಸ್‌ನಲ್ಲಿ ಬ್ಯಾಟ್‌ ಮಾಡುತ್ತಿದ್ದಾಗ, ಜೈಸ್ವಾಲ್‌ ಅಣ್ಣನಂತೆ ವೈಭವ್‌ಗೆ ಮಾರ್ಗದರ್ಶನ ನೀಡುತ್ತಿದ್ದರು. ಜೈಸ್ವಾಲ್‌ ಸ್ವತಃ ಆಕ್ರಮಣಕಾರಿ ಬ್ಯಾಟ್ಸ್‌ಮನ್, ಆದರೆ ಗುಜರಾತ್ ಟೈಟನ್ಸ್‌ ವಿರುದ್ಧದ ಈ ಪಂದ್ಯದಲ್ಲಿ ಅವರು ಸಿಂಗಲ್ಸ್ ತೆಗೆದುಕೊಂಡು ವೈಭವ್‌ಗೆ ಸ್ಟ್ರೈಕ್ ನೀಡುತ್ತಲೇ ಇದ್ದರು, ಇದರಿಂದ 14ನೇ ವಯಸ್ಸಿನ ಪೋರ ತಮ್ಮ ನೈಜ ಆಟವನ್ನು ಮುಕ್ತವಾಗಿ ಪ್ರದರ್ಶಿಸಲು ಸಾಧ್ಯವಾಯಿತು. ಇಷ್ಟೇ ಅಲ್ಲ, ವೈಭವ್ ಯಾವುದೇ ರೀತಿಯ ಕಷ್ಟದಲ್ಲಿ ಕಾಣಿಸಿಕೊಂಡಾಗಲೆಲ್ಲಾ ಜೈಸ್ವಾಲ್‌, ಬಾಲಕನ ಬಳಿಗೆ ಹೋಗಿ ಸಹಾಯ ಮಾಡುತ್ತಿದ್ದರು. ಇದರ ಫಲವಾಗಿ ವೈಭವ್ ತಂಡಕ್ಕೆ ಶಕ್ತಿಶಾಲಿ ಶತಕ ಸಿಡಿಸಿದರು.

IPL 2025: ದಾಖಲೆಯ ಶತಕ ಸಿಡಿಸಿ ಅಮ್ಮನ ತ್ಯಾಗವನ್ನು ಸ್ಮರಿಸಿದ ವೈಭವ್‌ ಸೂರ್ಯವಂಶಿ!

ಯಶಸ್ವಿ ಜೈಸ್ವಾಲ್ ಅಜೇಯ 70 ರನ್

ವೈಭವ್ ಸೂರ್ಯವಂಶಿ ಅಲ್ಲದೆ ಯಶಸ್ವಿ ಜೈಸ್ವಾಲ್ ಕೂಡ ರಾಜಸ್ಥಾನ್ ರಾಯಲ್ಸ್ ಪರ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಯಶಸ್ವಿ ಜೈಸ್ವಾಲ್ 40 ಎಸೆತಗಳಲ್ಲಿ 70 ರನ್ ಗಳಿಸಿ ಅಜೇಯರಾಗುಳಿದರು. ಈ ಇನಿಂಗ್ಸ್‌ನಲ್ಲಿ ಅವರು 9 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಸಹ ಬಾರಿಸಿದರು. ಅವರ ಆಟದಿಂದ ರಾಜಸ್ಥಾನ ತಂಡ, 15.4 ಓವರ್‌ಗಳಲ್ಲಿ ಗೆಲ್ಲುವ ಮೂಲಕ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ರಾಜಸ್ಥಾನ ಪರ ಪಂದ್ಯದಲ್ಲಿ ನಾಯಕ ರಿಯಾನ್ ಪರಾಗ್ ಕೂಡ 15 ಎಸೆತಗಳಲ್ಲಿ 32 ರನ್ ಸಿಡಿಸಿದ್ದರು.

IPL 2025: ಸಚಿನ್‌ ತೆಂಡೂಲ್ಕರ್‌ ಐಪಿಎಲ್‌ ದಾಖಲೆ ಮುರಿದ ಜೈಸ್ವಾಲ್‌

209 ರನ್‌ ಕಲೆ ಹಾಕಿದ್ದ ಜಿಟಿ

ಇದಕ್ಕೂ ಮುನ್ನ ಗುಜರಾತ್ ಟೈಟನ್ಸ್‌ ನಾಯಕ ಶುಭಮನ್ ಗಿಲ್ 50 ಎಸೆತಗಳಲ್ಲಿ 84 ರನ್ ಗಳಿಸಿದ್ದರು. ಇದಲ್ಲದೆ, ಜೋಸ್ ಬಟ್ಲರ್ ಕೂಡ 50 ರನ್ ಗಳಿಸಿದ್ದರು. ಇದಕ್ಕೂ ಮುನ್ನ ಸಾಯಿ ಸುದರ್ಶನ್ ಕೂಡ 30 ಎಸೆತಗಳಲ್ಲಿ 39 ರನ್ ಬಾರಿಸಿದ್ದರು. ಆ ಮೂಲಕ ಗುಜರಾತ್ ಟೈಟನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತು.

426 ರನ್‌ ಸಿಡಿಸಿರುವ ಜೈಸ್ವಾಲ್‌

ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ ಟೂರ್ನಿಯಲ್ಲಿ ಯಶಸ್ವಿ ಜೈಸ್ವಾಲ್‌ ಕೂಡ ಅತ್ಯಂತ ಸ್ಥಿರ ಪ್ರದರ್ಶನವನ್ನು ತೋರುತ್ತಿದ್ದಾರೆ. ಅವರು ಇಲ್ಲಿಯವರೆಗೂ ಆಡಿದ 10 ಪಂದ್ಯಗಳಿಂದ 47.33ರ ಸರಾಸರಿ ಮತ್ತು 152.69ರ ಸ್ಟ್ರೈಕ್‌ ರೇಟ್‌ನಲ್ಲಿ 426 ರನ್‌ ಸಿಡಿಸಿದ್ದಾರೆ. ಆ ಮೂಲಕ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದ್ದಾರೆ.