Paresh Rawal: ನಟ ಅಕ್ಷಯ್ ಗೆಳೆಯನಲ್ಲ ಎಂದ ಬಾಲಿವುಡ್ ಹಿರಿಯ ನಟ ಪರೇಶ್ ರಾವಲ್; ಕಾರಣ ಏನು?
ಬಾಲಿವುಡ್‌ನ ʼಫಿರ್ ಹೇರಾ ಪೇರಿʼಯ ಬಾಬುರಾವ್ ಖ್ಯಾತಿಯ ನಟ ಪರೇಶ್ ರಾವಲ್ ಜತೆಗೆ ಅಕ್ಷಯ್ ಕುಮಾರ್ ಉತ್ತಮ ಬಾಂಡಿಂಗ್ ಹೊಂದಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಪರೇಶ್ ಅವರು ಅಕ್ಷಯ್ ಕುಮಾರ್ ನನ್ನ ಗೆಳೆಯನಲ್ಲ ಎಂದು ಹೇಳಿಕೆ ನೀಡಿದ್ದು ಈ ವಿಚಾರ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ.

Paresh Rawal

ಮುಂಬೈ: ಬಾಲಿವುಡ್‌ನ ಕೆಲವು ಕಾಮಿಕ್ ಜೋಡಿಗಳು ಅಭಿಮಾನಿಗಳ ಮನ ಗೆದ್ದು ಬಿಟ್ಟಿವೆ. ಅಂತಹ ದಿಗ್ಗಜ ಜೋಡಿಯಲ್ಲಿ ಅಕ್ಷಯ್ ಕುಮಾರ್ (Akshay Kumar) ಮತ್ತು ಹಿರಿಯ ನಟ ಪರೇಶ್ ರಾವಲ್ (Paresh Rawal) ಕೂಡ ಒಂದು. ʼಬೂಲ್ ಬುಲಯ್ಯಾʼ, ʼಹೇರಾ ಪೇರಿʼ, ʼಫಿರ್ ಹೇರಾ ಪೇರಿʼ, ʼಹೇರಾ ಪೇರಿ 3ʼ, ʼವೆಲ್‌ಕಮ್ʼ ಸೇರಿದಂತೆ ಅನೇಕ ಕಾಮಿಡಿ ಸಿನಿಮಾದಲ್ಲಿ ಇವರಿಬ್ಬರು ನಟರು ಕೂಡ ಪ್ರೇಕ್ಷಕರನ್ನು ನಗಿಸಿದ್ದಾರೆ. ಇದರಿಂದ ʼಫಿರ್ ಹೇರಾ ಪೇರಿʼಯ ಬಾಬುರಾವ್ ಖ್ಯಾತಿಯ ನಟ ಪರೇಶ್ ರಾವಲ್ ಜತೆಗೆ ನಟ ಅಕ್ಷಯ್ ಕುಮಾರ್ ಉತ್ತಮ ಬಾಂಡಿಂಗ್ ಹೊಂದಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಪರೇಶ್ ಅವರು ಅಕ್ಷಯ್ ಕುಮಾರ್ ನನ್ನ ಗೆಳೆಯನಲ್ಲ ಎಂದು ಹೇಳಿಕೆ ನೀಡಿದ್ದು, ಈ ವಿಚಾರ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ.
ನಟ ಪರೇಶ್ ರಾವಲ್ ಅವರು ಅಕ್ಷಯ್ ಕುಮಾರ್ ಜತೆಗೆ ಅನೇಕ ಸಿನಿಮಾದಲ್ಲಿ ಅಭಿನಯಿಸಿದ್ದು ಇಬ್ಬರ ಆ್ಯಕ್ಟಿಂಗ್ ಅನೇಕ ಅಭಿಮಾನಿಗಳ ಮನಗೆದ್ದಿದೆ. ಯಾವಾಗಲೂ ಅಕ್ಷಯ್ ಕುಮಾರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದ ನಟ ಪರೇಶ್ ರಾವೆಲ್ ಈಗ ಇದ್ದಕ್ಕಿದ್ದ ಹಾಗೆ ಆತ ತನ್ನ ಗೆಳೆಯ ಅಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಪರೇಶ್ ರಾವಲ್ ಅವರು ಅಕ್ಷಯ್ ಬಗ್ಗೆ ಮಾತನಾಡಿದ್ದಾರೆ.
ಅಕ್ಷಯ್ ತಮ್ಮ ಸಹೋದ್ಯೋಗಿ ಎಂದು ಕರೆದಿದ್ದಾರೆ. ಚಿತ್ರರಂಗದಲ್ಲಿ ಸಹೋದ್ಯೋಗಿಗಳು ಮಾತ್ರ ಇರುತ್ತಾರೆಯೇ ಹೊರತು ಗೆಳೆಯರು ಇರೋದಿಲ್ಲ ಎಂದು ಹೇಳಿದ್ದಾರೆ. ಬಳಿಕ ಸ್ಪಷ್ಟನೆ ನೀಡಿ, ಇಂಡಸ್ಟ್ರಿಯಲ್ಲಿ ಎಲ್ಲರೂ ವೃತ್ತಿಪರರಾಗಿ ಇರುತ್ತಾರೆ. ಚಿತ್ರರಂಗದಲ್ಲಿ ಸಹೋದ್ಯೋಗಿಗಳು ಸಿಗುತ್ತಾರೆ ಹೊರತು ಪ್ರೀತಿ ತುಂಬಿದ್ದ ಗೆಳೆಯರು ಸಿಗುವುದು ವಿರಳ. ಆದರೆ ನಿಜವಾದ ಗೆಳೆಯರು ರಂಗಭೂಮಿಯಲ್ಲಿ ಸಿಗುತ್ತಾರೆ. ಶಾಲಾ ದಿನಗಳಲ್ಲಿ ದೋಸ್ತಿಗಳು ಸಿಗುತ್ತಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಸಿಗುವವರು ಕೇವಲ ಸಹೋದ್ಯೋಗಿಗಳು ಅಷ್ಟೇ ಇರುವುದಾಗಿ ಹೇಳಿದ್ದಾರೆ. ಅಕ್ಷಯ್ ಕುಮಾರ್ ಕೂಡ ಓರ್ವ ಸಹೋದ್ಯೋಗಿ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: Paresh Rawal: ಮೂತ್ರವನ್ನು ಬಿಯರ್‌ನಂತೆ ಕುಡಿದೆ... ಶಾಕಿಂಗ್ ಸಂಗತಿ ಬಿಚ್ಚಿಟ್ಟ ನಟ ಪರೇಶ್ ರಾವಲ್
ಅಕ್ಷಯ್ ಕುಮಾರ್ ನನ್ನ ಸಹೋದ್ಯೋಗಿಯಾಗಿದ್ದು ಅವರೊಂದಿಗೆ ಒಳ್ಳೆಯ ಬಾಂಡಿಂಗ್ ಖಂಡಿತವಾಗಿಯೂ ಇದೆ. ಆದರೆ ಅದು ಗೆಳೆತನ ಎಂದು ಹೇಳಲು ಆಗದು. ನನ್ನ ಸಿನಿಮಾ ವೃತ್ತಿ ಬದುಕಿನಲ್ಲಿ ಗೆಳೆಯರು ಬಹಳ ಕಡಿಮೆ ಇದ್ದಾರೆ. ಓಮ್ ಪುರಿ, ನಸೀರುದ್ದೀನ್ ಶಾ, ಜಾನಿ ಲಿವರ್ ಅವರನ್ನು ಮಾತ್ರ ನನ್ನ ಗೆಳೆಯರು ಎಂದು ಪರೇಶ್ ರಾವಲ್ ತಿಳಿಸಿದ್ದಾರೆ.