ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಕಾರಿನೊಳಗೆ 1 BHK ಮನೆಯ ಸೌಲಭ್ಯ ! ಏನಿದು ಉಬರ್‌ ಚಾಲಕನ ಕರಾಮತ್ತು?

ಮಹಿಳೆಯೊಬ್ಬರು ಕ್ಯಾಬ್‌ನಲ್ಲಿ ಪ್ರಯಾಣಿಸಿದ್ದು ತನಗೆ '1 ಬಿಎಚ್‌ಕೆʼಯಲ್ಲಿ ಪ್ರಯಾಣಿಸಿದ ಅನುಭವವಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಮಹಿಳೆ ಹಂಚಿಕೊಂಡ ಚಿತ್ರಗಳಲ್ಲಿ ಕಾರಿನೊಳಗೆ ಅಚ್ಚುಕಟ್ಟಾಗಿ ಅಗತ್ಯ ವಸ್ತುಗಳನ್ನು ಜೋಡಿಸಿರುವುದನ್ನು ಕಂಡುಬಂದಿದೆ.

ಕ್ಯಾಬ್‌ನೊಳಗೆ ʼ1 ಬಿಎಚ್‌ಕೆʼ ! ಏನಿದು ವೈರಲ್‌ ಸ್ಟೋರಿ?

Profile pavithra Apr 29, 2025 6:57 PM

ದೆಹಲಿ: ಕ್ಯಾಬ್‌ನಲ್ಲಿ ಉಚಿತ ವೈ-ಫೈ ಸಂಪರ್ಕ, ಆಟೋದಲ್ಲಿ ಆಕ್ವೇರಿಯಂ, ಲೈಬ್ರೆರಿ ಇಂತಹ ಆಸಕ್ತಿದಾಯಕ ಸ್ಟೋರಿಗಳು ಆಗಾಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ. ಇದೀಗ ಮಹಿಳೆಯೊಬ್ಬರು ಕ್ಯಾಬ್‌ ಪ್ರಯಾಣದ ಅತ್ಯುತ್ತಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ ಕ್ಯಾಬ್‌ನಲ್ಲಿ ಪ್ರಯಾಣಿಸಿದ್ದು '1 ಬಿಎಚ್‌ಕೆʼಯಲ್ಲಿ ಪ್ರಯಾಣಿಸಿದ ಅನುಭವವಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral News) ಆಗಿದೆ.

ಮಹಿಳೆಯೊಬ್ಬರು ಉಬರ್‌ನಲ್ಲಿ ಬುಕ್ ಮಾಡಿದ ಕ್ಯಾಬ್‌ನಲ್ಲಿ ಪ್ರಯಾಣಿಸವಾಗ ತೆಗೆದ ಒಂದೆರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜತೆಗೆ ಪ್ರಯಾಣ ತುಂಬಾ ಸುಸಜ್ಜಿತವಾಗಿತ್ತು, 1 ಬಿಎಚ್‌ಕೆ ಅಪಾರ್ಟ್‌ಮೆಂಟ್‌ನಲ್ಲಿ ಇದ್ದ ಹಾಗೇ ಆಗಿದೆ ಎಂದು ಆಕೆ ಸಿಕ್ಕಾಪಟ್ಟೆ ಹೊಗಳಿದ್ದಾರೆ. "ಇಂದು ಅಕ್ಷರಶಃ 1 ಬಿಎಚ್‌ಕೆಯಲ್ಲಿ ಪ್ರಯಾಣಿಸುತ್ತಿದ್ದೇನೆ. ಇದುವರೆಗಿನ ಅತ್ಯಂತ ಆರಾಮದಾಯಕ ಉಬರ್ ಸವಾರಿ" ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ.



ಮಹಿಳೆ ಹಂಚಿಕೊಂಡ ಚಿತ್ರಗಳಲ್ಲಿ ಕಾರಿನೊಳಗೆ ಅಚ್ಚುಕಟ್ಟಾಗಿ ಅಗತ್ಯ ವಸ್ತುಗಳನ್ನು ಜೋಡಿಸಿರುವುದನ್ನು ಕಂಡು ಬಂದಿದೆ. ಮುಂದಿನ ಸೀಟ್‌ಗಳ ಹಿಂಭಾಗದಲ್ಲಿ ಕಪಾಟುಗಳು ಮತ್ತು ಹೋಲ್ಡರ್‌ಗಳನ್ನು ಅಳವಡಿಸಲಾಗಿದೆ. ಚಾಲಕ ವಾಹನದಲ್ಲಿ ವಿವಿಧ ರೀತಿಯ ತಂಪು ಪಾನೀಯಗಳು, ನೀರಿನ ಬಾಟಲಿಗಳು, ಚಿಪ್ಸ್, ಆಟಿಕೆಗಳು, ಅಗತ್ಯ ಔಷಧಿಗಳು ಮತ್ತು ಕಸದ ಬುಟ್ಟಿಯಂತಹ ವಸ್ತುಗಳನ್ನು ಜೋಡಿಸಿದ್ದಾನೆ. ಇದು ಪ್ರಯಾಣಿಕರಿಗೆ ತಮ್ಮ ಸವಾರಿಯ ಸಮಯದಲ್ಲಿ ಮನೆಯಂತಹ ಅನುಭವವನ್ನು ನೀಡುತ್ತದೆ.

ವಿಶೇಷವೆಂದರೆ, ಚಾಲಕ ಡಿಜೆನ್, ಡಿಸ್ಪ್ರಿನ್, ಸಿಟ್ರಿಜೈನ್, ಡೋಲೊ 650 ಮತ್ತು ಒಟ್ರಿವಿನ್‌ನಂತಹ ಮೋಷನ್‌ ಸಿಕ್‌ನೆಸ್‌ ಔಷಧಿಗಳನ್ನು ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಇಟ್ಟುಕೊಂಡಿದ್ದಾನೆ ಹಾಗೇ ಮತ್ತೊಂದು ವಿಭಾಗದಲ್ಲಿ ಟಿಶ್ಯು, ಛತ್ರಿ ಮತ್ತು ತಿಂಡಿ ಪ್ಯಾಕೆಟ್‌ಗಳನ್ನು ಇಟ್ಟಿದ್ದಾನೆ.

ಮಕ್ಕಳ ಶಿಕ್ಷಣಕ್ಕಾಗಿ ಡೊನೇಶನ್‌ ಬಾಕ್ಸ್‌ ಕೂಡ ಕ್ಯಾಬ್‌ನಲ್ಲಿದೆ. ಅಲ್ಲದೆ, ಇದು ಶೂ ಪಾಲಿಶ್, ಹೇರ್ ಆಯಿಲ್, ಕ್ರೀಮ್ ಮತ್ತು ಪೋರ್ಟಬಲ್ ಫ್ಯಾನ್‌ನಂತಹ ಹಲವಾರು ಸೌಲಭ್ಯಗಳನ್ನು ಹೊಂದಿದೆ. ಈ ಕ್ಯಾಬ್ ಸವಾರಿಯ ಅತ್ಯಂತ ಗಮನಾರ್ಹ ವೈಶಿಷ್ಟ್ಯವೆಂದರೆ ಇದು ವೈ-ಫೈ ಸಂಪರ್ಕ. ಕಾರಿನೊಳಗೆ ವೈ-ಫೈ ಉಚಿತವಾಗಿ ಲಭ್ಯವಿದೆ ಎಂದು ವಿವರಿಸುವ ಬೋರ್ಡ್ ಅನ್ನು ಚಾಲಕ ಹಾಕಿದ್ದಾನೆ. ಪಾಸ್‌ವರ್ಡ್ ಅನ್ನು ಪ್ರಯಾಣಿಕರಿಗೆ ಸ್ಪಷ್ಟವಾಗಿ ಬರೆಯಲಾಗಿದೆ.

ಉಬರ್ ಚಾಲಕ ಅಬ್ದುಲ್ ಖದೀರ್, ಪ್ರಯಾಣಿಕರು ತಮ್ಮ ಅನುಭವಗಳನ್ನು ಪುಸ್ತಕದಲ್ಲಿ ಮತ್ತು ಉಬರ್ ಅಪ್ಲಿಕೇಶನ್‌ನಲ್ಲಿ ಹಂಚಿಕೊಳ್ಳಲು ತಿಳಿಸಿದ್ದಾನೆ. ಡ್ರೈವರ್ ಸೀಟಿನ ಮೇಲೆ, ಉಬರ್ ಡ್ರೈವರ್ ಆಗಿ ಅಬ್ದುಲ್ ಕೆಲಸವನ್ನು ಮೆಚ್ಚಿದ ಪತ್ರಿಕೆಯ ತುಣುಕನ್ನು ಹಾಕಲಾಗಿದೆ.

ಈ ಸುದ್ದಿಯನ್ನೂ ಓದಿ:‌Viral Video: ಏರ್‌ಪೋರ್ಟ್‌ನಲ್ಲಿ ನೆಲದ ಮೇಲೆ ಕುಳಿತು ತಿಂಡಿ ತಿಂದ ಖ್ಯಾತ ನಟ; ವಿಡಿಯೊ ಫುಲ್‌ ವೈರಲ್‌

ಈ ಪೋಸ್ಟ್ ತಕ್ಷಣ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು "ನೀವು ಅವನಿಗೆ ಶುಲ್ಕವನ್ನು ಪಾವತಿಸುತ್ತಿಲ್ಲ, ನೀವು ಅವನಿಗೆ ಬಾಡಿಗೆಯನ್ನು ಪಾವತಿಸುತ್ತಿದ್ದೀರಿ" ಎಂದು ಬರೆದಿದ್ದಾರೆ. ಇನ್ನೊಬ್ಬರು "ಆ ಶೂ ಪಾಲಿಶ್ ನಂಬಲಾಗದ ಸೌಲಭ್ಯ" ಎಂದು ಬರೆದಿದ್ದಾರೆ. "ಇದು ಪೂರ್ಣ ಪ್ರಮಾಣದ ಮನೆಯಂತೆ ಕಾಣುತ್ತದೆ. ಇದು ಚಾಲಕ ಎಷ್ಟು ಉತ್ತಮವಾಗಿರಬೇಕು ಎಂಬುದರ ಸ್ಪಷ್ಟ ಪ್ರತಿಬಿಂಬ. ಅವರಿಗೆ 5 ಸ್ಟಾರ್ ರೇಟಿಂಗ್” ಎಂದು ಮತ್ತೊಬ್ಬರು ಬರೆದಿದ್ದಾರೆ.