Nysa Devgan: ಕಾಜೋಲ್ ಮಗಳು ನೈಸಾ ದೇವಗನ್ ಹೇಗಿದ್ದಾರೆ ನೋಡಿ; ಫೋಟೊ ಶೇರ್ ಮಾಡಿದ ಮನೀಶ್ ಮಲ್ಹೋತ್ರಾ
ಕಾಜೋಲ್ ಮತ್ತು ಅಜಯ್ ದೇವಗನ್ ದಂಪತಿ ಪುತ್ರಿ ನೈಸಾ ದೇವಗನ್ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿಯೂ ನೈಸಾ ಫೋಟೊ ವೈರಲ್ ಆಗುತ್ತಿವೆ. ಇತ್ತೀಚೆಗೆ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಕಾಜಲ್ ಪುತ್ರಿ ನೈಸಾ ಲೆಹೆಂಗಾದಲ್ಲಿ ಮಿಂಚಿದ ಕೆಲವು ಅದ್ಭುತ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

Kajol’s Daughter Nysa Devgan


ಅಜಯ್ ದೇವಗನ್ ಮತ್ತು ಕಾಜೋಲ್ ಮಗಳು ನೈಸಾ ಬಾಲಿವುಡ್ನ ಫೇಮಸ್ ಸ್ಟಾರ್ ಕಿಡ್ಗಳಲ್ಲಿ ಒಬ್ಬರು. ಹಾಗೆಯೇ ಈ ಸ್ಟಾರ್ ಕಿಡ್ ಮಗಳು ಸಹ ಬ್ಯೂಟಿಯಲ್ಲೇನು ಕಡಿಮೆ ಇಲ್ಲ. ಹಾಟ್ನೆಸ್ನಲ್ಲಿ ತಾಯಿಯನ್ನೇ ಮೀರಿಸುವಂತಿದ್ದಾಳೆ. ನೈಸಾಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ. ಇತ್ತೀಚೆಗೆ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ನೈಸಾ ಅವರ ಅದ್ಭುತ ಲೆಹಂಗಾದ ಫೋಟೊ ಜತೆಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಈ ಪೋಸ್ಟ್ ಇದೀಗ ಅಭಿಮಾನಿಗಳಿಗೆ ಕುತೂಹಲ ಉಂಟು ಮಾಡಿದೆ. ಇದಕ್ಕೆ ನೈಸಾ ಅವರ ಸುಂದರ ಫೋಟೊ ಮಾತ್ರವಲ್ಲ, ಮನೀಶ್ ಅವರ ರಹಸ್ಯವಾದ ಕ್ಯಾಪ್ಶನ್. ಹೌದು, ಮನೀಶ್ ಮಲ್ಹೋತ್ರಾ ನೈಸಾ ಬಾಲಿವುಡ್ಗೆ ಪ್ರವೇಶಿಸಬಹುದು ಎಂದು ಕ್ಯಾಪ್ಶನ್ ಮೂಲಕ ಸೂಚನೆ ನೀಡಿದ್ದಾರೆ. ಈ ಕ್ಯಾಪ್ಶನ್ ನೋಡಿದ ಅಭಿಮಾನಿಗಳು ನೈಸಾ ಶೀಘ್ರದಲ್ಲೇ ಬಾಲಿವುಡ್ ಪದಾರ್ಪಣೆ ಮಾಡಲಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಸುತ್ತಿದ್ದಾರೆ.

ನೈಸಾ ದೇವಗನ್ ಗೋಲ್ಡ್ ಮತ್ತು ತಿಳಿ ಗುಲಾಬಿ ಬಣ್ಣದ ಲೆಹಂಗಾದಲ್ಲಿ ಮಿಂಚಿದ್ದಾರೆ. ಸ್ಲೀವ್ಲೆಸ್ ಚೋಲಿ, ದಪ್ಪ ಹಾಲ್ಟರ್ ನೆಕ್ಲೈನ್ ವಿನ್ಯಾಸವನ್ನು ಇದು ಹೊಂದಿದೆ. ಈ ಉಡುಗೆಗೆ ತಕ್ಕಂತಹ ದುಪಟ್ಟಾವನ್ನು ಕೂಡ ಅವರು ಧರಿಸಿದ್ದರು. ಹೋಟೆಲ್ ಒಂದರ ಕಾರಿಡಾರ್ನಲ್ಲಿ ಫೋಟೊಕ್ಕೆ ಪೋಸ್ ನೀಡಿದ್ದಾರೆ. ಮನೀಶ್ ಮಲ್ಹೋತ್ರಾ ಈ ಫೋಟೋ ಹಂಚಿಕೊಂಡು, ʼʼನಿಜವಾಗಿಯೂ ಅದ್ಭುತವಾಗಿ ಕಾಣುತ್ತಿದ್ದಾರೆ. ನೈಸಾ, ಸಿನಿಮಾ ನಿಮ್ಮನ್ನು ಕಾಯುತ್ತಿದೆʼʼ ಎಂದು ಬರೆದಿದ್ದಾರೆ. ಕಾಜೋಲ್ ಈ ಪೋಸ್ಟ್ಗೆ ಪ್ರತಿಕ್ರಿಯಿಸಿ, ರೆಡ್ ಹಾರ್ಟ್ ಇಮೋಜಿಗಳನ್ನು ಹಾಕಿದ್ದಾರೆ. ಅದೇ ಸಂದರ್ಭದಲ್ಲಿ ನೈಸಾ ಅವರ ಸ್ನೇಹಿತ ಒರ್ರಿ ಕೂಡ ಕಾಮೆಂಟ್ ಮಾಡಿದ್ದಾರೆ. ಸಿನಿಮಾ ನಟನೆಗಾಗಿ ಇನ್ನು ಕಾಯಲು ಸಾಧ್ಯವಿಲ್ಲ ಎಂದು ಹಾರ್ಟ್ ಇಮೋಜಿ ಹಾಕಿ ಪ್ರತಿಕ್ರಿಯೆ ನೀಡಿದ್ದಾರೆ.

ಕಾಜೋಲ್ ಮಗಳು ನೈಸಾ ದೇವಗನ್ ಈ ಲೆಹಂಗಾ ಡ್ರೆಸ್ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ನೈಸಾ ಈ ಫೋಟೊ ನೋಡಿ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ನೆಟಿಜನ್ ಒಬ್ಬರು ಬಹಳ ಸುಂದರ! ನೀವು ಕಾಜೋಲ್ ಅವರ ಫೋಟೋ ಕಾಪಿ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ನೈಸಾ ದೇವಗನ್ ಭವಿಷ್ಯದಲ್ಲಿ ಬಾಲಿವುಡ್ ನಾಯಕಿಯಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಕಾಮೆಂಟ್ ಮಾಡಿದ್ದಾರೆ.

ಈ ಪೋಸ್ಟ್ ನೈಸಾ ಅವರ ಸುಂದರ ಫೋಟೊಗಾಗಿ ಮಾತ್ರವಲ್ಲದೆ ಮನೀಶ್ ಅವರ ಕುತೂಹಲಕಾರಿ ಶೀರ್ಷಿಕೆಗಾಗಿಯೂ ಹೆಚ್ಚು ಗಮನ ಸೆಳೆಯಿತು. ಕಾಜೋಲ್ ಮತ್ತು ಅಜಯ್ ದೇವಗನ್ ಹಿಂದಿ ಚಿತ್ರದ ಜನಪ್ರಿಯ ಕಲಾವಿದರು. ಸದ್ಯ ಮಗಳು ನೈಸಾ ಕೂಡ ಶೀಘ್ರದಲ್ಲೇ ಬೆಳ್ಳಿ ಪರದೆಯ ಮೇಲೆ ಪದಾರ್ಪಣೆ ಮಾಡಬಹುದು ಎಂದು ನಿರೀಕ್ಷಿಸಿದ್ದಾರೆ.