ವೈಭವ್ ಸೂರ್ಯವಂಶಿಗೆ ಎದುರಾಗಿರುವ ಮುಂದಿನ ಸವಾಲು ರಿವೀಲ್ ಮಾಡಿದ ರವಿ ಶಾಸ್ತ್ರಿ!
Ravi Shastri warned to Vaibhav Suryavanshi: ಗುಜರಾತ್ ಟೈಟನ್ಸ್ ವಿರುದ್ಧ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎರಡನೇ ಅತ್ಯಂತ ವೇಗದ ಶತಕವನ್ನು ಸಿಡಿಸಿದ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅವರನ್ನು ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ಶ್ಲಾಘಿಸಿದ್ದಾರೆ. ಅಲ್ಲದೆ ಇವರಿಗೆ ಎದುರಾಗಿರುವ ಮುಂದಿನ ಸವಾಲನೇಂಬುದನ್ನು ರಿವೀಲ್ ಮಾಡಿದ್ದಾರೆ.

ವೈಭವ್ ಸೂರ್ಯವಂಶಿಗೆ ರವಿ ಶಾಸ್ತ್ರಿ ಎಚ್ಚರಿಕೆ.

ಜೈಪುರ: ಗುಜರಾತ್ ಟೈಟನ್ಸ್ ವಿರುದ್ಧ ದಾಖಲೆಯ ಶತಕ ಸಿಡಿಸಿದ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿಗೆ (Vaibhav Suryavanshi) ಟೀಮ್ ಇಂಡಿಯಾ ಹೆಡ್ ಕೋಚ್ ರವಿ ಶಾಸ್ತ್ರಿ(Ravi Shastri) ಎಚ್ಚರಿಕೆಯನ್ನು ನೀಡಿದ್ದಾರೆ. ವೈಭವ್‌ಗೆ ಇನ್ನೂ 14 ವರ್ಷ ವಯಸ್ಸು, ಹಾಗಾಗಿ ಅವರ ಮೇಲೆ ಹೆಚ್ಚಿನ ತಾಳ್ಮೆ ಹಾಗೂ ಜಾಗೃತಿಯನ್ನು ವಹಿಸಬೇಕೆಂದು ಸೂಚಿಸಿದ್ದಾರೆ. ಅಂದ ಹಾಗೆ ಸೋಮವಾರ ನಡೆದಿದ್ದ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ವೈಭವ್ ಹಲವು ದಾಖಲೆಗಳನ್ನು ಬ್ರೇಕ್ ಮಾಡಿದ್ದರು. ಐಪಿಎಲ್‌ನಲ್ಲಿ ವೇಗವಾಗಿ ಶತಕ ಸಿಡಿಸಿದ ಅತ್ಯಂತ ಯುವ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದಿದ್ದರು.
ಗುಜರಾತ್ ಟೈಟನ್ಸ್ ನೀಡಿದ್ದ 210 ರನ್‌ಗಳ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ್ ರಾಯಲ್ಸ್ ತಂಡ, ವೈಭವ್ ಸೂರ್ಯವಂಶಿ (101 ರನ್) ಹಾಗೂ ಯಶಸ್ವಿ ಜೈಸ್ವಾಲ್ (70 *) ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ 15.5 ಓವರ್‌ಗಳಿಗೆ 212 ರನ್‌ಗಳನ್ನು ಗಳಿಸಿ 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಇದರಲ್ಲಿ ವೈಭವ್ ಸೂರ್ಯವಂಶಿ 35 ಎಸೆತಗಳಲ್ಲಿ ಎರಡನೇ ಅತ್ಯಂತ ವೇಗದ ಶತಕ ಸಿಡಿಸಿದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
IPL 2025: ದಾಖಲೆಯ ಶತಕ ಸಿಡಿಸಿ ಅಮ್ಮನ ತ್ಯಾಗವನ್ನು ಸ್ಮರಿಸಿದ ವೈಭವ್ ಸೂರ್ಯವಂಶಿ!
ಐಸಿಸಿ ರಿವ್ಯೂವ್‌ನಲ್ಲಿ ಸಂಜನಾ ಗಣೇಶನ್ ಅವರ ಜೊತೆ ಮಾತನಾಡಿದ ರವಿ ಶಾಸ್ತ್ರಿ, ವೈಭವ್ ಸೂರ್ಯವಂಶಿ ಅವರು ಇನ್ನೂ ಕಚ್ಚಾ ಪ್ರತಿಭೆಯಾಗಿದ್ದಾರೆ. ಪ್ರಸಕ್ತ ಆವೃತ್ತಿಯ ಆರಂಭದಲ್ಲಿಯೇ ನಾವು ಇದನ್ನು ನೋಡಿದ್ದೇವೆ ಎಂದು ತಿಳಿಸಿದ್ದಾರೆ.
ವೈಭವ್ ಸೂರ್ಯವಂಶಿಗೆ ರವಿ ಶಾಸ್ತ್ರಿ ಎಚ್ಚರಿಕೆ
"ಲಖನೌ ಸೂಪರ್ ಜಯಂಟ್ಸ್ ಎದುರು ಅವರು ಆಡಿದ್ದ ಮೊಟ್ಟ ಮೊದಲ ಶಾಟ್ ಎಲ್ಲರ ಉಸಿರನ್ನು ಉಸಿರುಗಟ್ಟಿಸುತ್ತಿತ್ತು ಎಂದು ನಾನು ಭಾವಿಸುತ್ತೇನೆ," ಎಂದು ರವಿ ಶಾಸ್ತ್ರಿ, ಸಿಕ್ಸರ್ ಮೂಲಕ ತಮ್ಮ ಐಪಿಎಲ್ ವೃತ್ತಿ ಜೀವನವನ್ನು ಆರಂಭಿಸಿದ್ದನ್ನು ಸ್ಮರಿಸಿಕೊಂಡಿದ್ದಾರೆ.
ʻಐಪಿಎಲ್ ಇತಿಹಾಸದಲ್ಲಿಯೇ ಶ್ರೇಷ್ಠ ಪ್ರದರ್ಶನʼ-ವೈಭವ್ ಸೂರ್ಯವಂಶಿಗೆ ಶಾನ್ ಪೊಲಾಕ್ ಸೆಲ್ಯೂಟ್!
ಯುವ ಬ್ಯಾಟ್ಸ್‌ಮನ್ ಬಗ್ಗೆ ಈಗಲೇ ಭವಿಷ್ಯ ನುಡಿಯಲು ಭಾರತ ತಂಡದ ಮಾಜಿ ಹೆಡ್ ಕೋಚ್ ಮನಸು ಮಾಡಲಿಲ್ಲ. "ಅವರು ಇನ್ನು ಯುವ ಆಟಗಾರ ಹಾಗಾಗಿ ಅವರ ಪಾಡಿಗೆ ಆಟಲು ಬಿಡಿ. ಈ ವಯಸಿನಲ್ಲಿ ವೈಫಲ್ಯಗಳು ಎದುರಾಗುತ್ತವೆ. ವೈಫಲ್ಯ ಅನುಭವಿಸಿದಾಗ ಜನರು ನಿಮ್ಮ ಬಗ್ಗೆ ಮಾತನಾಡಲು ಶುರು ಮಾಡುತ್ತಾರೆ. ಇದನ್ನು ಅವರು ಹೇಗೆ ನಿರ್ವಹಿಸುತ್ತಾರೆಂಬುದು ಇಲ್ಲಿ ಮುಖ್ಯವಾಗುತ್ತದೆ," ಎಂದು ಮಾಜಿ ಆಲ್‌ರೌಂಡರ್ ತಿಳಿಸಿದ್ದಾರೆ.
ವೈಭವ್ ಸೂರ್ಯವಂಶಿಯ ಮುಂದಿನ ಸವಾಲು
"ಮುಂದಿನ ಅವರು ಬ್ಯಾಟಿಂಗ್‌ಗೆ ಬಂದಾಗ, ನಿಮಗೆ ಸಾಕಷ್ಟು ಶಾರ್ಟ್ ಎಸೆತಗಳನ್ನು ಹಾಕಲಾಗುತ್ತದೆ. ನೀವು ಯಾರೊಬ್ಬರ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದಾಗ, ನೀವು ಯಾವುದೇ ಕರುಣೆಯನ್ನು ತೋರಿಸುವುದಿಲ್ಲ. ನೀವು 14, 12 ಅಥವಾ 20 ಆದರೂ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ," ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.