Ishaan Khatter: ಫೋಟೋ ಶೂಟ್ ನಲ್ಲಿ ಹ್ಯಾಂಡ್ಸಮ್ ಆಗಿ ಮಿಂಚಿದ ಇಶಾನ್ ಖಟ್ಟರ್
ಬಾಲಿವುಡ್ ನಟ ಇಶಾನ್ ಖಟ್ಟರ್ 'ಧಡಕ್; ಸಿನಿಮಾ ಮೂಲಕ ಭರ್ಜರಿ ಗೆಲುವು ಗಳಿಸಿದ್ದರು. ಇಶಾನ್ ಖಟ್ಟರ್ 2005ರಲಲಿ ತೆರೆಕಂಡ ʼವಾಹ್ʼ ಸಿನಿಮಾದಲ್ಲಿ ಬಾಲ ನಟನಾಗಿ ವೃತ್ತಿ ಜೀವನ ಆರಂಭಿಸಿದ್ದರು. ನಂತರ ಹಲವು ಸಿನಿಮಾಗಳಲ್ಲಿ ನಟಿಸಿ ಫೇಮ್ ಗಿಟ್ಟಿಸಿಕೊಂಡಿದ್ದಾರೆ. ಸದ್ಯ 'ದಿ ರಾಯಲ್ಸ್' ವೆಬ್ ಸರಣಿ ಪ್ರಚಾರದಲ್ಲಿ ಬಿಜಿಯಾಗಿರುವ ನಟ ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಹೊಸ ಪೋಸ್ಟ್ ಹಂಚಿಕೊಂಡಿದ್ದಾರೆ

Ishaan Khatter’s Latest Photoshoot


ನಟ ಇಶಾನ್ ಖಟ್ಟರ್ ಹೊಸ ಫೋಟೋಶೂಟ್ನಲ್ಲಿ ಸಖತ್ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದಾರೆ. ಕ್ಯಾಂಡಿಡ್ ಫೋಟೊಗಳಿಗೆ ಪೋಸ್ ನೀಡಿದ್ದಾರೆ. ಚಿಪ್ಸ್ ತಿನ್ನುತ್ತಾ ರಿಲ್ಯಾಕ್ಸ್ ಆಗಿರುವ ಪೋಟೊ ಶೇರ್ ಮಾಡಿದ್ದಾರೆ. ಇಶಾನ್ ಖಟ್ಟರ್ ಡೆನಿಮ್ ಲುಕ್ನಲ್ಲಿ ಅತ್ಯಂತ ಕ್ಯಾರಿಸ್ಮಾಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಅದರ ಮೇಲೆ ವೈಟ್ ಬ್ಲೇಜರ್ ಧರಿಸಿ ಸ್ಟೈಲಿಶ್ ಲುಕ್ ನೀಡಿದ್ದಾರೆ. ಪೋಸ್ಟ್ನ ಕ್ಯಾಪ್ಷನ್ನಲ್ಲಿ, ಅಭಿಮಾನಿಗಳು ತಮ್ಮ ಬಹುನಿರೀಕ್ಷಿತ ʼದಿ ರಾಯಲ್ಸ್ʼ ವೆಬ್ ಸರಣಿ ಕಾರ್ಯಕ್ರಮವನ್ನು ವೀಕ್ಷಿಸಲು ತಿಳಿಸಿದ್ದಾರೆ.

ಮೇ 9ರಿಂದ ನೆಟ್ಫ್ಲಿಕ್ಸ್ ಮತ್ತು ಚಿಲ್ ವಿತ್ ದಿ ರಾಯಲ್ಸ್ ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ. ಈ ಪೋಸ್ಟ್ಗೆ ಸಹನಟಿ ಭೂಮಿ ಪೆಡ್ನೇಕರ್ ಕೂಡ ಕಮೆಂಟ್ ಮಾಡಿದ್ದಾರೆ. ಇಶಾನ್ ಖಟ್ಟರ್
ಚಿಪ್ಸ್ ತಿನ್ನುವುದರಲ್ಲಿ ಬ್ಯುಸಿ ಎಂದು ಬರೆದುಕೊಂಡಿದ್ದಾರೆ.

ನಟ ಇಶಾನ್ ಖಟ್ಟರ್ ಕ್ಯಾಮೆರಾ ಕಡೆಗೆ ಥ್ರಿಲ್ಲಿಂಗ್ ಲುಕ್ ನೀಡುತ್ತ ಮನಮೋಹಕ ಹುಸಿನಗೆ ಬೀರಿದ್ದಾರೆ. ಇಷಾನ್ ಖಟ್ಟರ್ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಯೊಬ್ಬರು ವಾಹ್ ಹ್ಯಾಂಡ್ಸಮ್ ಬಾಯ್ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ನಿಮ್ಮ ಸ್ಟನಿಂಗ್ ಲುಕ್ ಮತ್ತಷ್ಟು ಎನರ್ಜಿಟಿಕ್ ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಮೇ 9ರಂದು ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆಗಲಿರುವ 'ದಿ ರಾಯಲ್ಸ್'ನಲ್ಲಿ ಇಶಾನ್ ಖಟ್ಟರ್, ಭೂಮಿ ಪೇಡ್ನೇಕರ್, ಜೀನತ್ ಅಮನ್, ಸಾಕ್ಷಿ ತನ್ವರ್, ನೋರಾ ಫತೇಹಿ ಮತ್ತಿತರರು ನಟಿಸಿದ್ದಾರೆ. ಪ್ರಿಯಂಕಾ ಘೋಷ್ ಮತ್ತು ನುಪುರ್ ಅಸ್ಥಾನಾ ಅವರ ನಿರ್ದೇಶನದಲ್ಲಿ ಮತ್ತು ಪ್ರಿತಿಷ್ ನಂದಿ ಕಮ್ಯೂನಿಕೇಷನ್ಸ್ ಬ್ಯಾನರ್ನಡಿಯಲ್ಲಿ ನಿರ್ಮಾಣವಾದ ಈ ಶೋ ಟೀಸರ್ ಕಳೆದ ವರ್ಷ ಬಿಡುಗಡೆಯಾಗಿ ಗಮನ ಸೆಳೆದಿತ್ತು.

ಇಶಾನ್ ಖಟ್ಟರ್ ಈ ಸಿರೀಸ್ನಲ್ಲಿ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಖ್ಯಾತ ನಟರೊಂದಿಗೆ ಸ್ಕ್ರೀನ್ ಅನ್ನು ಹಂಚಿಕೊಳ್ಳುವುದು ಸ್ಫೂರ್ತಿದಾಯಕವಾಗಿದೆ ಎಂದಿದ್ದಾರೆ. ʼದಿ ರಾಯಲ್ಸ್' ಒಂದು ತಾಜಾ, ಆಧುನಿಕ ಯುಗದ ಕಥೆಯಾಗಿದೆ. ಇಲ್ಲಿ ಪ್ರೀತಿ, ಡ್ರಾಮ, ಹಾಸ್ಯ ಎಲ್ಲವೂ ಇದೆ ಎಂದು ಹೇಳಿಕೊಂಡಿದ್ದಾರೆ. ಇಶಾನ್ ಅವರು ʼಉಡ್ತಾ ಪಂಜಾಬ್ʼ ಮತ್ತು ಡ್ಯಾನಿಶ್ ರೆಂಜು ಚಲನಚಿತ್ರ ʼಹಾಫ್ ವಿಡೋʼನಲ್ಲಿ ಅಭಿಷೇಕ್ ಚೌಬೆ ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇನ್ನು ಮಜಿದ್ ಮಜಿದಿ ಅವರ ʼಬಿಯಾಂಡ್ ದಿ ಕ್ಲೌಡ್ಸ್ʼ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದರಲ್ಲಿ ಡ್ರಗ್ ಡೀಲರ್ ಆಗಿ ಅವರ ಅಭಿನಯಿಸಿದ್ದ ಅವರು ಅದಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಪಡೆದಿದ್ದರು.