The Great Eastern: ಭಾರತದ ಅತ್ಯಂತ ಹಳೆಯ ಹೊಟೇಲ್ ಎಲ್ಲಿ, ಹೇಗಿದೆ ಗೊತ್ತೆ?
ಭಾರತದ ಅತ್ಯಂತ ಹಳೆಯ ಹೊಟೇಲ್ ಇಂದಿಗೂ ಕಾರ್ಯನಿರ್ವಹಿಸುತ್ತಿದೆ. 1840ರ ದಶಕದಿಂದ ಗ್ರಾಹಕರನ್ನು ಸೆಳೆಯುತ್ತಿರುವ ಈ ಹೊಟೇಲ್ ಕೊಲ್ಕತ್ತದಲ್ಲಿದೆ. ದಿ ಗ್ರೇಟ್ ಈಸ್ಟರ್ನ್ ಹೆಸರಿನಿಂದ ಗುರುತಿಸಲ್ಪಡುವ ಈ ಹೊಟೇಲ್ ಅನ್ನು 1840ರಲ್ಲಿ ಡೇವಿಡ್ ವಿಲ್ಸನ್ ಆರಂಭಿಸಿದರು. ಐಷಾರಾಮಿ ಹೊಟೇಲ್ ಇದಾಗಿದ್ದು, ಭಾರತೀಯ ಶೈಲಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತ ಈ ಹೊಟೇಲ್ ಇಂದಿಗೂ ತನ್ನ ವೈಭವವನ್ನು ಉಳಿಸಿಕೊಂಡಿದೆ.



ದಿ ಗ್ರೇಟ್ ಈಸ್ಟರ್ನ್ ಭಾರತದ ಅತ್ಯಂತ ಹಳೆಯ ಹೊಟೇಲ್ ಆಗಿದೆ. ಇದನ್ನು 1840ರಲ್ಲಿ ಡೇವಿಡ್ ವಿಲ್ಸನ್ ಆರಂಭಿಸಿದ್ದು, ಇಂದಿಗೂ ಕೋಲ್ಕತಾದಲ್ಲಿ ಕಾರ್ಯನಿರ್ವಹಿಸುತ್ತಿದೆ. ದಿ ಗ್ರೇಟ್ ಈಸ್ಟರ್ನ್ ಹೊಟೇಲ್ ಎಂಬ ಹೆಸರಿನಿಂದ ತೆರೆಯಲಾದ ಈ ಹೊಟೇಲ್ ಈಗ ಲಲಿತ್ ಗ್ರೇಟ್ ಈಸ್ಟರ್ನ್ ಕೋಲ್ಕತಾ ಎಂದು ಗುರುತಿಸಲ್ಪಡುತ್ತಿದೆ.

ಕೋಲ್ಕತ್ತಾದಲ್ಲಿ ಡೇವಿಡ್ ವಿಲ್ಸನ್ ಸ್ಥಾಪಿಸಿರುವ ಭಾರತದ ಅತ್ಯಂತ ಹಳೆಯ ಐಷಾರಾಮಿ ದಿ ಗ್ರೇಟ್ ಈಸ್ಟರ್ನ್ ಹೊಟೇಲ್ ಭಾರತೀಯ ಶೈಲಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಖಾಸಗಿ ಈಜುಕೊಳ, ಉತ್ತಮ ಪಾಕಶೈಲಿ, ಸೊಗಸಾದ ಕೊಠಡಿಗಳು ಇಂದು 5 ಸ್ಟಾರ್ ಅಥವಾ 7 ಸ್ಟಾರ್ ಹೊಟೇಲ್ಗಳಲ್ಲಿ ಸಿಗುತ್ತಿದೆ. ಆದರೆ ಇದೇ ರೀತಿಯ ಸೌಲಭ್ಯಗಳು ದಿ ಗ್ರೇಟ್ ಈಸ್ಟರ್ನ್ ಹೊಟೇಲ್ 1840ರಿಂದಲೇ ದೊರೆಯುತ್ತಿದೆ.

5 ಸ್ಟಾರ್ ಅಥವಾ 7 ಸ್ಟಾರ್ ಮಾದರಿಯ ದಿ ಗ್ರೇಟ್ ಈಸ್ಟರ್ನ್ ಹೊಟೇಲ್ ದೇಶದಲ್ಲೇ ಮೊದಲು ತೆರೆಯಲ್ಪಟ್ಟಿರುವ ಐಷಾರಾಮಿ ಹೊಟೇಲ್ ಆಗಿದೆ. ಈಗ ದಿ ಲಲಿತ್ ಗ್ರೇಟ್ ಈಸ್ಟರ್ನ್ ಕೋಲ್ಕತಾ ಎಂದು ಕರೆಯಲ್ಪಡುವ ಈ ಹೊಟೇಲ್ ಭಾರತೀಯ ಆತಿಥ್ಯದ ಇತಿಹಾಸದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ.

1840ರಲ್ಲಿ ತೆರೆಯಲ್ಪಟ್ಟ ದಿ ಗ್ರೇಟ್ ಈಸ್ಟರ್ನ್ ಹೊಟೇಲ್ ಭಾರತದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಅತ್ಯಂತ ಹಳೆಯ ಹೊಟೇಲ್ ಎಂದು ಗುರುತಿಸಲ್ಪಟ್ಟಿದೆ. ಇದನ್ನು ಬ್ರಿಟಿಷ್ ಯುಗದ ರತ್ನ ಎಂದು ಕರೆಯಲಾಗುತ್ತದೆ. ಈ ಹೊಟೇಲ್ ಅನ್ನು ಕೋಲ್ಕತ್ತಾದ ಓಲ್ಡ್ ಕೋರ್ಟ್ ಹೌಸ್ ಸ್ಟ್ರೀಟ್ನಲ್ಲಿ ಬಿಟ್ರಿಷ್ ಡೇವಿಡ್ ವಿಲ್ಸನ್ ಸ್ಥಾಪಿಸಿದರು.

ಸ್ಥಾಪನೆಯ ಆರಂಭದಲ್ಲಿ ಇದನ್ನು ಆಕ್ಲೆಂಡ್ ಹೊಟೇಲ್ ಎಂದು ಹೆಸರಿಸಲಾಯಿತು. ಯಾಕೆಂದರೆ ಆಗಿನ ಗವರ್ನರ್ ಜನರಲ್ ಜಾರ್ಜ್ ಈಡನ್ ಆಕ್ಲೆಂಡ್ನ 1ನೇ ಅರ್ಲ್ ಅವರ ಗೌರವಾರ್ಥವಾಗಿ ಇದನ್ನು ವಿಲ್ಸನ್ ಸ್ಥಾಪಿಸಿದರು. ಬೇಕರಿ ಮತ್ತು ಮಿಠಾಯಿ ವ್ಯವಹಾರದಲ್ಲಿ ಯಶಸ್ವಿಯಾದ ವಿಲ್ಸನ್ ಅವರ ಬಳಿಕ ಹೊಟೇಲ್ ಉದ್ಯಮವನ್ನು ಪ್ರಾರಂಭಿಸಿದ್ದರು.

ಹೊಟೇಲ್ ಸ್ಥಾಪನೆಗೆ ಪಕ್ಕದ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡ ವಿಲ್ಸನ್ ಪ್ರಾರಂಭದಲ್ಲಿ 100 ಕೊಠಡಿಗಳು ಮತ್ತು ನೆಲ ಮಹಡಿಯಲ್ಲಿ ಒಂದು ಡಿಪಾರ್ಟ್ಮೆಂಟ್ ಸ್ಟೋರ್ ಹೊಂದಿರುವ ಹೊಟೇಲ್ ಅನ್ನು ಪ್ರಾರಂಭಿಸಿದರು. ಆ ಕಾಲದಲ್ಲಿ ಇದು ದೇಶದ ಅತ್ಯಂತ ದೊಡ್ಡ ಹೊಟೇಲ್ ಎಂದು ಗುರುತಿಸಲ್ಪಟ್ಟಿತು.

ಸ್ಥಾಪನೆಯಾದ ವೇಳೆ ಆರಂಭದಲ್ಲಿ ಈ ಹೊಟೇಲ್ ಕೋಲ್ಕತ್ತಾ ಈಸ್ಟ್ ಇಂಡಿಯಾ ಕಂಪನಿಯ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ಬ್ರಿಟಿಷ್ ಅಧಿಕಾರಿಗಳು, ವ್ಯಾಪಾರಿಗಳು ಮತ್ತು ಶ್ರೀಮಂತ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯವನ್ನು ನೀಡಿ ಅವರ ಬೇಡಿಕೆಯ ತಾಣವಯಿತು. 1860ರ ದಶಕದಲ್ಲಿ ಅಭಿವೃದ್ಧಿ ಹೊಂದಿದ ಹೊಟೇಲ್ ಗೆ 1915ರಲ್ಲಿ ದಿ ಗ್ರೇಟ್ ಈಸ್ಟರ್ನ್ ಹೊಟೇಲ್ ಎಂದು ಮರುನಾಮಕರಣ ಮಾಡಲಾಯಿತು.

ವಿಕ್ಟೋರಿಯನ್ ಮತ್ತು ಎಡ್ವರ್ಡಿಯನ್ ಶೈಲಿಯ ಮಿಶ್ರಣವಿರುವ ಹೊಟೇಲ್ನ ವಾಸ್ತು ಶೈಲಿ ಯುರೋಪಿಯನ್ ಅರಮನೆಗಳ ಭವ್ಯತೆಯನ್ನುಪ್ರದರ್ಶಿಸುತ್ತದೆ. ಇಲ್ಲಿ ಆರಂಭದಿಂದಲೂ ಇಂಗ್ಲಿಷ್ ಮಾತನಾಡುವ ಸಿಬ್ಬಂದಿ ಇದ್ದಾರೆ. ಜತೆಗೆ ಆಮದು ಮಾಡಿದ ಪೀಠೋಪಕರಣಗಳನ್ನು ಇದು ಒಳಗೊಂಡಿದೆ.

ಇಲ್ಲಿ ಅತಿಥಿಗಳಿಗೆ ವಸಾಹತುಶಾಹಿ ಭಾರತದಲ್ಲಿದ್ದ ಅಧಿಕೃತ ಬ್ರಿಟಿಷ್ ಐಷಾರಾಮಿ ಅನುಭವವನ್ನು ಇಂದಿಗೂ ನೀಡುತ್ತದೆ. 1883ರಲ್ಲಿ ದಿ ಗ್ರೇಟ್ ಈಸ್ಟರ್ನ್ ವಿದ್ಯುದ್ದೀಕರಿಸಲ್ಪಟ್ಟ ಭಾರತದ ಮೊದಲ ಹೊಟೇಲ್ ಆಗಿ ಗುರುತಿಸಿಕೊಂಡಿತು. ಆಧುನಿಕತೆಯತ್ತ ಹೆಜ್ಜೆ ಇಟ್ಟ ಇದು ಅದರ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಯಿತು.

1947ರಲ್ಲಿ ಭಾರತ ಸ್ವಾತಂತ್ರ್ಯದ ಬಳಿಕ ನಂತರ ಬ್ರಿಟಿಷ್ ಪ್ರೋತ್ಸಾಹ ಕಡಿಮೆಯಾಯಿತು. ಹೆಚ್ಚುತ್ತಿರುವ ಸ್ಪರ್ಧೆಯೊಂದಿಗೆ ಹೊಟೇಲ್ ತನ್ನ ವೈಭವವನ್ನು ಕಳೆದುಕೊಳ್ಳತೊಡಗಿತು. 1970ರ ದಶಕದಲ್ಲಿ, ಇದನ್ನು ಪಶ್ಚಿಮ ಬಂಗಾಳ ಸರ್ಕಾರವು ಸ್ವಾಧೀನಪಡಿಸಿಕೊಂಡಿತು. ಆದರೆ ಅದರ ಹಳೆಯ ಸೌಲಭ್ಯಗಳು ಮತ್ತು ಹೊಟೇಲ್ನ ದುರುಪಯೋಗದಿಂದಾಗಿ 2005ರ ವೇಳೆಗೆ ಸಂಪೂರ್ಣ ದುಸ್ಥಿತಿಯನ್ನು ತಲುಪಿತು.

ಇದರ ಸಂರಕ್ಷಣೆಗೆ ಸಾಕಷ್ಟು ಹೋರಾಟಗಳು ನಡೆಯುತ್ತಿದೆ. ಕೋಲ್ಕತ್ತಾದ ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪದ ಪರಂಪರೆಯಲ್ಲಿ ಗುರುತಿಸಲ್ಪಡುವ ಗ್ರೇಟ್ ಈಸ್ಟರ್ನ್ ಹೊಟೇಲ್ ಹಲವಾರು ಪ್ರಮುಖ ವ್ಯಕ್ತಿಗಳಿಗೆ ಆತಿಥ್ಯ ನೀಡಿದೆ. ಇದನ್ನು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಸ್ಪೆನ್ಸ್ ಹೊಟೇಲ್ ಅನ್ನು ಭಾರತದ ಮೊದಲ ಆಧುನಿಕ ಹೊಟೇಲ್ ಎಂದು ಉಲ್ಲೇಖಿಸಿದರೂ ಅದು ಅಸ್ತಿತ್ವದಲ್ಲಿಲ್ಲ.

ದಿ ಗ್ರೇಟ್ ಈಸ್ಟರ್ನ್ ಮಾತ್ರ ಕಾಲಕ್ಕೆ ತಕ್ಕಂತೆ ಬದಲಾಗುತ್ತ ಇಂದಿಗೂ ತನ್ನ ವೈಭವವನ್ನು ಉಳಿಸಿಕೊಂಡಿದೆ. ಇದು ಭಾರತೀಯ ಆತಿಥ್ಯ ಪರಂಪರೆಯ ಅಪರೂಪದ ಮತ್ತು ಶಾಶ್ವತ ಸಂಕೇತವಾಗಿ ಗರುರುತಿಸಿಕೊಂಡಿದೆ. ಐತಿಹಾಸಿಕ ರಚನೆ ಮತ್ತು ಆಧುನಿಕ ಐಷಾರಾಮಿ ಮಿಶ್ರಣದೊಂದಿಗೆ ದಿ ಲಲಿತ್ ಗ್ರೇಟ್ ಈಸ್ಟರ್ನ್ ಕೋಲ್ಕತ್ತಾಕ್ಕೆ ಬರುವ ಅತಿಥಿಗಳಿಗೆ ವಿಶೇಷ ಅನುಭವವನ್ನು ನೀಡುತ್ತಿದೆ. ಇಲ್ಲಿ ಪುರಾತನ ಕಥೆಗಳನ್ನು ಕೇಳುತ್ತ ಸಮಕಾಲೀನ ಸೊಬಗನ್ನು ಕಣ್ತುಂಬಿಕೊಳ್ಳಬಹುದು.