IPL 2025: ಬಡ ಕುಟುಂಬದಿಂದ ಬಂದು ಐಪಿಎಲ್ನಲ್ಲಿ ಮಿಂಚುತ್ತಿರುವ ದಿಗ್ವೇಶ್ ರಾಥಿ!
ಲಖನೌ ಸೂಪರ್ ಜಯಂಟ್ಸ್ ತಂಡದ ಸ್ಪಿನ್ನರ್ ದಿಗ್ವೇಶ್ ರಾಥಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಹೊಸ ತಾರೆಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಅವರು ತಮ್ಮ ಶಿಸ್ತಿನ ಬೌಲಿಂಗ್ ಮತ್ತು ಅವರ ವಿಶಿಷ್ಟ ನೋಟ್ಬುಕ್ ಆಚರಣೆಯಿಂದ ದೊಡ್ಡ ಸದ್ದು ಮಾಡಿದ್ದಾರೆ. ಇದರಿಂದ ಅವರು ಎಲ್ಲರ ಗಮನ ಸೆಳೆದರೂ ಇದಕ್ಕಾಗಿ ಅವರಿಗೆ ಬಿಸಿಸಿಐ ಶಿಕ್ಷೆಯನ್ನು ನೀಡಿದೆ ಹಾಗೂ ಡಿಮೆರಿಟ್ ಅಂಕವನ್ನು ಕೂಡ ನೀಡಿದೆ. ಇವರು ಐಪಿಎಲ್ಗೂ ಬರುವ ಮುನ್ನ ಹೇಗಿದ್ದರು ಎಂಬ ಬಗ್ಗೆ ಆಸಕ್ತದಾಯಕ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.



ದಿಗ್ವೇಶ್ ರಾಥಿ ಕ್ರಿಕೆಟ್ ಪಯಣ
2025ರ ಐಪಿಎಲ್ ಟೂರ್ನಿಯಲ್ಲಿ ತಮ್ಮ ವಿಶಿಷ್ಠ ಬೌಲಿಂಗ್ ಮೂಲಕ ಮಿಂಚುತ್ತಿರುವ ದಿಗ್ವೇಶ್ ರಾಥಿ ಈ ಪಯಣ ದೃಢನಿಶ್ಚಯ ಮತ್ತು ಧೈರ್ಯದಿಂದ ಕೂಡಿದೆ. ಸನ್ನಿ, ತಮ್ಮ ಸಹೋದ ದಿಗ್ವೇಶ್ ರಾಥಿ ಅವರ ಕ್ರಿಕೆಟ್ ಪಯಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಆಸಕ್ತದಾಯ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಗಾಡ್ ಫಾದರ್ ಇಲ್ಲದೆ ಹಾಗೂ ಹಣಬಲವಿಲ್ಲದೆ ದಿಗ್ವೇಶ್ ಕ್ರಿಕೆಟ್ನಲ್ಲಿ ಬೆಳೆದಿದ್ದಾರೆಂದು ಅವರು ಹೇಳಿದ್ದಾರೆ.

ದಿಗ್ವೇಶ್ ರಾಥಿಗೆ ಗಾಡ್ ಫಾದರ್ ಇಲ್ಲ
"ದಿಗ್ವೇಶ್ಗೆ ಗಾಡ್ಫಾದರ್ ಇರಲಿಲ್ಲ, ನಮಗೆ ಹಣ ಅಥವಾ ಯಾವುದೇ ಪ್ರಭಾವ ಇರಲಿಲ್ಲ. ಹಣಕಾಸಿನ ಸಮಸ್ಯೆಯಿಂದ ನಮ್ಮನ್ನು ದೆಹಲಿಯಿಂದ ನಿರ್ಗಮಿಸುವಂತೆ ಸಲಹೆ ಬಂದಿತ್ತು. ಆದರೆ ನಾವು ಏಕೆ ಓಡಿ ಹೋಗಬೇಕು?," ಎಂದು ಮಂಡೋಲಿ ಜೈಲು ಸಂಕೀರ್ಣದಲ್ಲಿ ಪೊಲೀಸ್ ಕಾನ್ಸ್ಟೆಬಲ್ ಆಗಿ ಕೆಲಸ ಮಾಡುತ್ತಿರುವ ದಿಗ್ವೇಶ್ ರಾಥಿ ಸಹೋದರ ಸನ್ನಿ ಬಹಿರಂಗಪಡಿಸಿದ್ದಾರೆ.

ಬೌಲರ್ ಆಗಿ ಪರಿವರ್ತನೆಯಾಗಿದ್ದ ದಿಗ್ವೇಶ್
ದಿಗ್ವೇಶ್ ರಾಥಿ ಅವರನ್ನು ಲಖನೌ ಸೂಪರ್ ಜಯಂಟ್ಸ್ ತಂಡ 30 ಲಕ್ಷ ರೂ. ಗಳಿಗೆ ಮೆಗಾ ಹರಾಜಿನಲ್ಲಿ ಖರೀದಿಸಿತ್ತು. ಅವರು ಬ್ಯಾಟ್ಸ್ಮನ್ ಆಗಿ ಕ್ರಿಕೆಟ್ ಆರಂಭಿಸಿದ್ದರು. ಆದರೆ ನೆಟ್ಸ್ನಲ್ಲಿ ಅಭ್ಯಾಸದ ಕೊರತೆಯಿಂದಾಗಿ ಬೌಲರ್ ಆಗಬೇಕಾಯಿತು. ವೆಸ್ಟ್ ಇಂಡೀಸ್ ಕ್ರಿಕೆಟಿಗ ಸುನೀಲ್ ನರೇನ್ ಅವರ ಅಭಿಮಾನಿಯಾಗಿರುವ ದಿಗ್ವೇಶ್, ತಮ್ಮ ಬೌಲಿಂಗ್ ಶೈಲಿಯನ್ನು ಅವರನ್ನೇ ಮಾದರಿಯಾಗಿಟ್ಟುಕೊಂಡಿದ್ದಾರೆ.

ದಿಗ್ವೇಶ್ಗೆ ಬೌಲ್ ಮಾಡಲು ಬೌಲರ್ಗಳಿಗೆ ಆಸಕ್ತಿ ಇರಲಿಲ್ಲ
"ದಿಗ್ವೇಶ್ ರಾಥಿ ಬ್ಯಾಟ್ಸ್ಮನ್ ಆಗಿದ್ದಾಗ ಅವರಿಗೆ ಬೌಲ್ ಮಾಡಲು ಯಾವುದೇ ಬೌಲರ್ ಆಸಕ್ತಿ ತೋರಿರಲಿಲ್ಲ. ಏಕೆಂದರೆ ದಿಗ್ವೇಶ್ ಹೆಸರು ಯಾರಿಗೂ ಗೊತ್ತಿರಲಿಲ್ಲ. ಆ ಬೌಲರ್ಗಳಿಗೆ ಒಳ್ಳೆಯ ಶಾಟ್ ಆಡಿದಾಗ, ಅವರಿಗೆ ಗರ್ವ ಭಂಗವಾಗುತ್ತಿತ್ತು. ಬೌಲರ್ಗಳು ಸ್ವಂತ ಬಾಲ್ಗಳನ್ನು ತರುತ್ತಿದ್ದರು. ಹಾಗಾಗಿ ದಿಗ್ವೇಶ್ಗೆ ಬೌಲ್ ಮಾಡಿ ಚೆಂಡನ್ನು ಹಾಳು ಮಾಡಿಕೊಳ್ಳಲು ಅವರಿಗೆ ಇಷ್ಟವಿರಲಿಲ್ಲ," ಎಂದು ಸನ್ನಿ ಹೇಳಿಕೊಂಡಿದ್ದಾರೆ.

ನಾನೇ ಬೌಲ್ ಮಾಡುತ್ತಿದ್ದೆ: ಸನ್ನಿ
"ದಿಗ್ವೇಶ್ಗೆ ಯಾರೂ ಕೂಡ ನೆಟ್ಸ್ನಲ್ಲಿ ಬೌಲ್ ಮಾಡಲು ಆಸಕ್ತಿ ತೋರುತ್ತಿರಲಿಲ್ಲ. ಈ ಕಾರಣದಿಂದ ನಾನೇ ನನ್ನ ಸಹೋದರಿಗೆ ಗಂಟೆ ಗಂಟ್ಟಲೇ ಬೌಲ್ ಮಾಡುತ್ತಿದ್ದೆ. ಕೇವಲ ಒಬ್ಬೇ ಒಬ್ಬ ಬೌಲರ್ ಅನ್ನು ಎದುರಿಸುವುದು ಬ್ಯಾಟ್ಸ್ಮನ್ಗೆ ವರ್ಕ್ಔಟ್ ಆಗುವುದಿಲ್ಲ," ಎಂದು ಇಂಡಿಯನ್ ಎಕ್ಸ್ಪ್ರೆಸ್ಗೆ ದಿಗ್ವೇಶ್ ರಾಥಿ ಸಹೋದರ ಹೇಳಿದ್ದಾರೆ.

ಡೆಲ್ಲಿ ಪ್ರೀಮಿಯರ್ ಲೀಗ್ನಲ್ಲಿ 14 ವಿಕೆಟ್
ದಿಗ್ವೇಶ್ ಭಾರತೀಯ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ವಿಜಯ್ ದಹಿಯಾ ಅವರ ಗಮನ ಸೆಳೆದಿದ್ದರು. ಅವರು ತಮ್ಮ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಹೇಳಿದ್ದರು. ಜಇದರ ನಡುವೆ ಡೆಲ್ಲಿ ಪ್ರೀಮಿಯರ್ ಲೀಗ್ನಲ್ಲಿ ದೊಡ್ಡ ಅವಕಾಶ ಸಿಕ್ಕಿತ್ತು. ಅಲ್ಲಿ ಅವರು ಸೌಥ್ ದೆಹಲಿ ಸೂಪರ್ಸ್ಟಾರ್ಸ್ ಪರ 14 ವಿಕೆಟ್ಗಳನ್ನು ಕಬಳಿಸಿದ್ದರು.