ತಡಿಯಂಡಮೋಳ್ನಲ್ಲಿ ಡ್ರೋನ್ಗೂ ಸಿಗದಾಕೆ ಮಲೆಕುಡಿಯರಿಗೆ ಸಿಕ್ಕಿದಳು!
ದಟ್ಟ ಮಂಜು ಮತ್ತು ಮಳೆಯ ನಡುವೆಯೂ ಕಾರ್ಯಾಚರಣೆ ತಂಡಗಳು ಹಗಲಿರುಳು ಶ್ರಮಿಸಿದ್ದವು. ಕೊನೆಗೂ ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಮತ್ತು ಅರಣ್ಯದ ಹಾದಿಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಕುಡಿಯ ಜನಾಂಗದ ಯುವಕರು ಅರಣ್ಯದ ಆಳ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಶರಣ್ಯ ಪತ್ತೆಯಾಗಿದ್ದಾರೆ.