ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

KSRTC: ವೇತನ ಪರಿಷ್ಕರಣೆ ಸಮಿತಿ ಮೂಲಕ ನಿರ್ಧಾರ : ಕೆಎಸ್ಆರ್ಟಿಸಿ ನಿಗಮ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್

ವೇತನ ಪರಿಷ್ಕರಣೆ ಸಮಿತಿ ಮೂಲಕ ನಿರ್ಧಾರ: ಎಸ್.ಆರ್.ಶ್ರೀನಿವಾಸ್

ಗುಬ್ಬಿ ತಾಲೂಕಿನ ಅಡಗೂರು, ಧೂಳನಹಳ್ಳಿ ಪಾಳ್ಯ, ಕಕ್ಕೆನಹಳ್ಳಿ, ಕೊಪ್ಪ , ಸುರಿಗೇನಹಳ್ಳಿ, ತೊಂಗನಹಳ್ಳಿ, ಸಿಂಗೊನಳ್ಳಿ ಗ್ರಾಮಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಅವರು, ಒಂದು ವಿಚಾರವಾಗಿ ಸರ್ಕಾರ ಮತ್ತು ನೌಕರರ ನಡುವೆ ಕೆಲವೊಂದು ಗೊಂದಲಗಳಿವೆ. ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಬಗೆಹರಿಸ ಲಿದ್ದಾರೆ

ಫೆ.28, ಮಾ.1ರಂದು ಶ್ರೀ ವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ: ಶ್ರೀ ಬಸವ ರಮಾನಂದ ಸ್ವಾಮೀಜಿ

ಫೆ.28, ಮಾ.1ರಂದು ಶ್ರೀ ವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ

ಜಾತ್ರಾ ಮಹೋತ್ಸವ ಅಂಗವಾಗಿ ಇದೇ ತಿಂಗಳ 21 ರಿಂದ ಸಿದ್ದಯೋಗಾನಂದ ಶ್ರೀ ಕಪ್ ಹೆಸರಿ ನಲ್ಲಿ ಕ್ರಿಕೆಟ್, ಓಟದ ಸ್ಪರ್ಧೆ, ಗುಂಡು ಎಸೆತ, ವಾಲಿಬಾಲ್, ಕಬಡ್ಡಿ, ಮಡಿಕೆ ಒಡೆಯುವ ಸ್ಪರ್ಧೆ, ವಚನ ಕಂಠ ಪಾಠ, ವೇಷಭೂಷಣ ಸ್ಪರ್ಧೆ ಹೀಗೆ ಅನೇಕ ಗ್ರಾಮೀಣ ಆಟಗಳ ಸೊಗಡು ಅಲ್ಲಿ ಪ್ರದರ್ಶನ ಆಗಲಿದೆ

Chikkaballapur News: ನಡೆ ನುಡಿಗೆ ಸಾಮ್ಯತೆ ಸಾಧಿಸಿದವರು ಶರಣರು: ಜಿಲ್ಲಾಧಿಕಾರಿ ಜಿ.ಪ್ರಭು

ನಡೆ ನುಡಿಗೆ ಸಾಮ್ಯತೆ ಸಾಧಿಸಿದವರು ಶರಣರು: ಜಿಲ್ಲಾಧಿಕಾರಿ ಜಿ.ಪ್ರಭು

12ನೇ ಶತಮಾನ ಪರಿವರ್ತನೆಯ ಕಾಲ. ಒಂದು ಸಮಾಜ ಪ್ರಗತಿ ಹೊಂದುವುದು ಜ್ಞಾನದ ಮೂಲಕ ಮಾತ್ರ ಎಂದು ಜ್ಞಾನವನ್ನು ಜನರಿಗೆ ಬಿತ್ತರಿಸುವ ಕೆಲಸವನ್ನು ಮಾಚಯ್ಯ ಅವರು ಮಾಡಿದರು. ಅಂದಿನ ವಚನಕಾರರು ಸಾರಿದ ಸಮಾನತೆ, ಸಹೋದರತೆ, ಲಿಂಗ ಸಾಮಾನತೆ, ಜಾತ್ಯತೀತತೆ ಇನ್ನು ಮುಂತಾದ ತತ್ವಗಳನ್ನು ನಮ್ಮ ಇಂದಿನ ಸಂವಿಧಾನದಲ್ಲಿ ಅಳವಡಿಸಿ ಕೊಂಡಿರುವುದನ್ನು ನಾವು ಗಮನಿಸಬಹುದು

Dr.M.C.Sudhakar: ಫೆ.23ರಂದು ಚಿಕ್ಕಬಳ್ಳಾಪುರದಲ್ಲಿ ಬೃಹತ್ ಸಾರ್ವಜನಿಕ ಸಭೆ: ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್

ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ರದ್ದುಗೊಳಿಸದಂತೆ ಆಗ್ರಹಿಸಿ

ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮೂರು ಜಿಲ್ಲೆಗಳನ್ನು ಒಳಗೊಂಡ ಬೃಹತ್ ಸಾರ್ವಜನಿಕ ಸಭೆಯಾಗಿದೆ.ಮೂರು ಜಿಲ್ಲೆಗಳ ಎಲ್ಲ ತಾಲ್ಲೂಕುಗಳಿಂದ ಕಾಂಗ್ರೆಸ್ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸುತ್ತಾರೆ. ಕೇಂದ್ರ ಸರ್ಕಾರವು ಇಡೀ ದೇಶದಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಹೊಸದಾಗಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸು ತ್ತಿದೆ.

ಅಂಗನವಾಡಿಗಳು ಪೂರ್ಣ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿ ನಡೆಯಬೇಕು: ಜಿಲ್ಲಾಧಿಕಾರಿ ಜಿ.ಪ್ರಭು

ಅಂಗನವಾಡಿಗಳು ಪರಿಣಾಮಕಾರಿಯಾಗಿ ನಡೆಯಬೇಕು

ಜಿಲ್ಲೆಯಲ್ಲಿರುವ  2014 ಅಂಗನವಾಡಿಗಳು ಸಹ ಪೂರ್ಣ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಆದ್ದರಿಂದ ನಗರಾಡಳಿತ ಪ್ರದೇಶದಲ್ಲಿ ಹಾಗೂ ಗ್ರಾಮಾಂತರ ಪ್ರದೇಶ ದಲ್ಲಿ ಯಾವ ಯಾವ ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆಯೋ ಅದರ ಮಾಹಿತಿಯನ್ನು ನಿಖರವಾಗಿ ಒಂದೆರಡು ದಿನಗಳಲ್ಲಿ ಮಂಡಿಸಬೇಕು

Transport workers strike: ವೇತನ ಪರಿಷ್ಕರಣೆ ನಡುವೆಯೂ ನಾಳೆ ʼಬೆಂಗಳೂರು ಚಲೋʼ ಸಾರಿಗೆ ಮುಷ್ಕರ ಫಿಕ್ಸ್‌

ನಾಳೆ ʼಬೆಂಗಳೂರು ಚಲೋʼ ಸಾರಿಗೆ ನೌಕರರ ಮುಷ್ಕರ ಫಿಕ್ಸ್‌

ಸಾರಿಗೆ ನೌಕರರ ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ ವೇತನ ಪರಿಷ್ಕರಣೆಗೆ ಒಪ್ಪಿಗೆ ನೀಡಿದೆ. ಅಲ್ಲದೇ 26 ತಿಂಗಳ ಹಿಂಬಾಕಿ ಬಿಡುಗಡೆಗೆ ಒಪ್ಪಿಗೆ ಸೂಚಿಸಿದೆ. ಆದರೆ, 38 ತಿಂಗಳ ಹಿಂಬಾಕಿ ಬಿಡುಗಡೆ ಮಾಡಲೇಬೇಕು ಎಂದು ಸಾರಿಗೆ ನೌಕರರು ಪಟ್ಟು ಹಿಡಿದ್ದಿದ್ದು, ಗುರುವಾರ ಸಾರಿಗೆ ಮುಷ್ಕರ ಮಾಡಿಯೇ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

₹5.65 ಲಕ್ಷ ಆರಂಭಿಕ ಬೆಲೆಯಲ್ಲಿ ಹೊಚ್ಚ ಹೊಸ ನಿಸ್ಸಾನ್ ಗ್ರಾವೈಟ್ ಬಿಡುಗಡೆ ಭಾರತದಲ್ಲಿ ನಿಸ್ಸಾನ್‌ ನ ಹೊಸ ಪ್ರಯಾಣ ಆರಂಭ

ಭಾರತದಲ್ಲಿ ನಿಸ್ಸಾನ್‌ ನ ಹೊಸ ಪ್ರಯಾಣ ಆರಂಭ

ಭಾರತದಿಂದ ಪ್ರೇರಿತ, ಭಾರತದಲ್ಲೇ ನಿರ್ಮಿತ ಮತ್ತು ಭಾರತೀಯರಿಗಾಗಿ ಸಿದ್ಧಪಡಿಸಿದ" ಈ ಗ್ರಾವೈಟ್ ಎಂಪಿವಿ, ನಿಸ್ಸಾನ್ ಮೋಟಾರ್ ಇಂಡಿಯಾದ ವಿನೂತನ ಉತ್ಪನ್ನ ಸರಣಿಯ ಮೊದಲ ಉತ್ಪನ್ನವಾಗಿದ್ದು, ಇದು ಭಾರತೀಯ ಮಾರುಕಟ್ಟೆಯ ಬಗ್ಗೆ ಕಂಪನಿಗಿರುವ ಬದ್ಧತೆಯನ್ನು ಸಾರುತ್ತದೆ ಮತ್ತು ಸಂಸ್ಥೆಯು ದೇಶದಲ್ಲಿ ಹೊಂದಿರುವ ಬಲವಾದ ಅಸ್ತಿತ್ವ ವನ್ನು ತೋರಿಸುತ್ತದೆ

Gauribidanur News: ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ದಲಿತರ ಕುಂದುಕೊರತೆ ಸಭೆ

ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ದಲಿತರ ಕುಂದುಕೊರತೆ ಸಭೆ

ತಾಲ್ಲೂಕಿನಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಅಂಬೇಡ್ಕರ್ ಪುತ್ತಳಿ ನಿರ್ಮಿಸಬೇಕೆಂದು ದಲಿತ ಸಂಘಟನೆಗಳಿಂದ ನಿರಂತರವಾಗಿ ಹೋರಾಟ ಮಾಡಲಾಗುತ್ತಿದೆ, ಬರುವ ಏಪ್ರಿಲ್ 14 ರೊಳಗೆ ಪುತ್ತಳಿ ನಿರ್ಮಿಸದೆ ಹೋದರೆ, ಅಂದು ಕಪ್ಪುಪಟ್ಟಿ ಪ್ರದರ್ಶಿಸಲಾಗುವುದು ಹಾಗೂ ಕಾನೂನು ಚೌಕಟ್ಟಿನಲ್ಲಿ ನಾವೇ ಪುತ್ತಳಿ ನಿರ್ಮಿಸಿ, ಅನಾವರಣ ಗೊಳಿಸುತ್ತೇವೆ ಎಂದು ವಕೀಲ ಬಿ.ಕೆ.ನರಸಿಂಹ ಮೂರ್ತಿ ಎಚ್ಚರಿಕೆ ನೀಡಿದರು.

ಅಲ್ಪಸಂಖ್ಯಾತ ಸಮುದಾಯದ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳಿ

3 ಕಿಲೋಮೀಟರ್ ಒಳಗೆ ನಿವೇಶನ ಒದಗಿಸುವಂತೆ ಮನವಿ

ಮೌಲಾನಾ ಅಬು ಕಲಾಂ ಆಜಾದ್ ಶಾಲೆಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ನಗರ ವ್ಯಾಪ್ತಿಯ 3 ಕಿಲೋಮೀಟರ್ ಒಳಗೆ ನಿವೇಶನ ಒದಗಿಸು ವಂತೆ ಮನವಿ ಮಾಡಲಾಗಿದೆ ಎಂದರು. ಈ ಸಂಬಂಧ ಸ್ಥಳಾವಕಾಶಕ್ಕಾಗಿ ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಅವರಿಗೂ ವಿನಂತಿಸಲಾಗಿದೆ

ಸಾರಿಗೆ ನೌಕರರಿಗೆ ಗುಡ್‌ ನ್ಯೂಸ್‌; ವೇತನ ಪರಿಷ್ಕರಣೆ, 26 ತಿಂಗಳ ಹಿಂಬಾಕಿ ಬಿಡುಗಡೆಗೆ ರಾಜ್ಯ ಸರ್ಕಾರ ಒಪ್ಪಿಗೆ

ಸಾರಿಗೆ ನೌಕರ ವೇತನ ಪರಿಷ್ಕರಣೆಗೆ ರಾಜ್ಯ ಸರ್ಕಾರ ಒಪ್ಪಿಗೆ

Karnataka Transport workers strike: ಸಾರಿಗೆ ನೌಕರರ ಸಂಘಟನೆಗಳೊಂದಿಗೆ ಚರ್ಚಿಸಿರುವ ರಾಜ್ಯ ಸರ್ಕಾರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದೆ. 2025ರ ಏಪ್ರಿಲ್‌ನಿಂದ ವೇತನ ಪರಿಷ್ಕರಣೆ ಮಾಡಲು ಹಾಗೂ 38 ತಿಂಗಳ ಪೈಕಿ 26 ತಿಂಗಳ ಹಿಂಬಾಕಿ 1239.47 ಕೋಟಿ ರೂ. ಬಿಡುಗಡೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ತಾನು ಸತ್ತರೆ ಒಂಟಿಯಾಗ್ತಾಳೆ ಎಂದು ಪತ್ನಿಯನ್ನೇ ಕೊಲೆಗೈದ ಇಸ್ರೋ ನಿವೃತ್ತ ಉದ್ಯೋಗಿ!

ತಾನು ಸತ್ತರೆ ಒಂಟಿಯಾಗ್ತಾಳೆ ಎಂದು ಪತ್ನಿಯನ್ನೇ ಕೊಲೆಗೈದ!

Bengaluru Murder Case: ಬೆಂಗಳೂರು ಹೊರವಲಯದ ಆವಲಹಳ್ಳಿ ಅಪಾರ್ಟ್‌ನಲ್ಲಿ ಕೊಲೆ ನಡೆದಿದೆ. ಅನಾರೋಗ್ಯ ಸಮಸ್ಯೆಯಿಂದ ವೃದ್ಧ ವ್ಯಕ್ತಿಯೊಬ್ಬ, ತಾನು ಆತ್ಮಹತ್ಯೆ ಮಾಡಿಕೊಂಡರೆ ಪತ್ನಿ ಒಂಟಿಯಾಗುತ್ತಾಳೆ ಎಂಧು ಆಕೆಯನ್ನು ಕೊಲೆ ಮಾಡಿದ್ದು, ನಂತರ ಆತ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಲೋಗೋ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ!

ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಲೋಗೋ ಬಿಡುಗಡೆ

2026ರ ಸಿಎಂ ಕಪ್‌ ಷಟಲ್‌ ಬ್ಯಾಡ್ಮಿಂಟನ್‌ ಟೂರ್ನಿಯ ಅಧಿಕೃತ ಲೋಗೋವನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಅನಾವರಣಗೊಳಿಸಿದರು. ಬುಧವಾರ ಸಿಎಂ ನಿವಾಸ ಕಾವೇರಿಯಲ್ಲಿ ಸಿಎಂ ಕಪ್‌ 2026ರ ಲೋಗೋ ಬಿಡುಗಡೆ ಮಾಡಿದ ಬಳಿಕ ಸಿಎಂ ಸಿದ್ದು ಟೂರ್ನಿಗೆ ಶುಭ ಕೋರಿದರು.

Vishwavani Impact: ನಾಗರಹೊಳೆ, ಬಂಡೀಪುರದಲ್ಲಿ ಸಫಾರಿ ಪುನರಾರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್‌ ಸಿಗ್ನಲ್‌

ನಾಗರಹೊಳೆ, ಬಂಡೀಪುರದಲ್ಲಿ ಸಫಾರಿ ಪುನರಾರಂಭಕ್ಕೆ ಗ್ರೀನ್‌ ಸಿಗ್ನಲ್‌

Safari in Bandipur and Nagarahole: ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ ಮರು ಆರಂಭಕ್ಕೆ ಒತ್ತಾಯಿಸಿ ರಾಜ್ಯ ಸರ್ಕಾರದ ಗಮನ ಸೆಳೆಯಲು ವಿಶ್ವವಾಣಿ ಪತ್ರಿಕೆಯಲ್ಲಿ ವಿಶೇಷ ವರದಿಗಳು ಪ್ರಕಟವಾಗಿದ್ದವು. ಇದರಿಂದ ಅರಣ್ಯ ಇಲಾಖೆ ಎಚ್ಚೆತ್ತಿದ್ದು, ಕೊನೆಗೂ ಸಫಾರಿಗೆ ಅನುಮತಿ ನೀಡಿದೆ.

ಭಾರತೀಯ ನೌಕಾಪಡೆಯ ಸೂಕ್ಷ್ಮ ಮಾಹಿತಿ ಸೋರಿಕೆ: ಅಲಿಫ್ ಇಸ್ಲಾಂನನ್ನು ಇಡುಕ್ಕಿಯಲ್ಲಿ ಬಂಧಿಸಿದ ಉಡುಪಿ ಪೊಲೀಸರು

ನೌಕಾಪಡೆಯ ಸೂಕ್ಷ್ಮ ಮಾಹಿತಿ ಹಂಚಿಕೊಂಡ ವ್ಯಕ್ತಿಯ ಬಂಧನ

Indian Navy information leak case: ಉಡುಪಿ ಪೊಲೀಸರು ಭಾರತೀಯ ನೌಕಾಪಡೆಯ ಸೂಕ್ಷ್ಮ ಮಾಹಿತಿಯ ಸೋರಿಕೆ ಆರೋಪ ಸಂಬಂಧ ನಾಲ್ಕನೇ ಶಂಕಿತನನ್ನು ಬಂಧಿಸಿದ್ದಾರೆ. ವಶಪಡಿಸಿಕೊಂಡ ಡಿಜಿಟಲ್ ಸಾಕ್ಷ್ಯಗಳು ಹಾಗೂ ಹಣಕಾಸು ವ್ಯವಹಾರಗಳ ಪರಿಶೀಲನೆ ಮುಂದುವರಿದಿದ್ದು, ತನಿಖೆಯನ್ನು ಚುರುಕುಗೊಳಿಸಲಾಗಿದೆ.

ಬೆಳಗಾವಿಯಲ್ಲಿ ಲಾರಿ-ಬೈಕ್ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರ ಸಾವು

ಬೆಳಗಾವಿಯಲ್ಲಿ ಲಾರಿ-ಬೈಕ್ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರ ಸಾವು

Belagavi accident: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಭೀಕರ ಅಪಘಾತ ನಡೆದಿದೆ. ಜಮಖಂಡಿ-ಮೀರಜ್‌ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಲಾರಿ ಮತ್ತು ಬೈಕ್‌ ಮುಖಾಮುಖಿ ಡಿಕ್ಕಿಯಾಗಿ, ಮೂವರು ಮೃತಪಟ್ಟಿದ್ದಾರೆ. ಹಾರುಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಸ ವಿಲೇವಾರಿಗೆ ಅಡ್ಡಿಪಡಿಸಿದ್ರೆ ಮನೆ ಮುಂದೆ ಸುರಿಯುತ್ತೇವೆ: ಬಿಜೆಪಿ ಶಾಸಕರಿಗೆ ಡಿ.ಕೆ. ಶಿವಕುಮಾರ್‌ ಎಚ್ಚರಿಕೆ

ಕಸ ವಿಲೇವಾರಿಗೆ ಅಡ್ಡಿಪಡಿಸಿದ್ರೆ ಮನೆ ಮುಂದೆ ಸುರಿಯುತ್ತೇವೆ: ಡಿಕೆಶಿ

DK Shivakumar: ಈಗ ಹೊಸದಾಗಿ ಎರಡು ಜಾಗಗಳನ್ನು ಖರೀದಿ ಮಾಡಲಾಗಿದೆ. ಅಲ್ಲಿ ಕಸ ವಿಲೇವಾರಿಗೆ ಕಾನೂನಿನ ಪ್ರಕಾರ ಟೆಂಡರ್‌ ಕರೆಯಲಾಗಿದೆ. ಒಂದಷ್ಟು ಕಾನೂನಾತ್ಮಕ ವಿಚಾರಗಳನ್ನು ಬಗೆಹರಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅವಹೇಳನಕಾರಿ ವಿಡಿಯೊ; ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಯೂಟ್ಯೂಬರ್ ಸಂತೋಷ್ ಪೊಲೀಸ್ ವಶಕ್ಕೆ

ಧರ್ಮಸ್ಥಳ ಕ್ಷೇತ್ರದ ವಿರುದ್ಧ ಸುಳ್ಳು ಸುದ್ದಿ ಹರಡುತ್ತಿದ್ದ ಸಂತೋಷ್ ಬಂಧನ

ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ‘ಸಂಚಾರಿ ಸ್ಟುಡಿಯೋ’ ಯೂಟ್ಯೂಬರ್ ಸಂತೋಷ್ ಕಡಬ ಅವರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅವಹೇಳನಕಾರಿ ವಿಡಿಯೊಗಳನ್ನು ಪ್ರಸಾರ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರಿಗೆ 30 ದಿನಗಳ ಜೈಲು ಶಿಕ್ಷೆ ವಿಧಿಸಿದೆ. ಫೆಬ್ರವರಿ 18ರಂದು ಅವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಜೈಲಿಗೆ ಕಳುಹಿಸುವ ಕ್ರಮ ಕೈಗೊಳ್ಳಲಾಗಿದೆ.

ಅಸ್ಸಾಂ 'ಶೂಟಿಂಗ್' ವಿಡಿಯೊ ವಿವಾದ: ದ್ವೇಷ ಪ್ರಚೋದನೆ ಆರೋಪದಡಿ ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ FIR

ವಿವಾದಿತ ‘ಶೂಟಿಂಗ್’ ವಿಡಿಯೊ; ಇಬ್ಬರ ವಿರುದ್ಧ ಪ್ರಕರಣ ದಾಖಲು

ಅಸ್ಸಾಂನಲ್ಲಿ ನಡೆದ ‘ಶೂಟಿಂಗ್’ ವಿಡಿಯೊ ಸಂಬಂಧ ವಿವಾದ ಉಂಟಾಗಿದ್ದು, ಅದನ್ನು ಶೇರ್‌ ಮಾಡಿ ದ್ವೇಷ ಪ್ರಚೋದನೆಗೆ ಕಾರಣವಾದ ಆರೋಪದಡಿ ಕರ್ನಾಟಕದಲ್ಲಿ ಇಬ್ಬರ ವಿರುದ್ಧ ಪೊಲೀಸರು FIR ದಾಖಲಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ. ಫೆಬ್ರವರಿ 12ರಂದು ಉದ್ಯಮಿ ರಂಜಿತ್ ಕುಮಾರ್ ಆರ್. ನೀಡಿದ ದೂರಿನ ಮೇರೆಗೆ ಬೆಂಗಳೂರಿನಲ್ಲಿ ಈ ಪ್ರಕರಣ ದಾಖಲಾಗಿದೆ.

ಉಡುಪಿಯಲ್ಲಿ ಪಾದಚಾರಿಗೆ ಡಿಕ್ಕಿ ಹೊಡೆದು ಮೈಮೇಲೆ ಹರಿದ ಕ್ರೇನ್; ಬೆಚ್ಚಿಬೀಳಿಸುವ ವಿಡಿಯೊ ಇಲ್ಲಿದೆ

ಪೆರಂಪಳ್ಳಿಯಲ್ಲಿ ಪಾದಚಾರಿಗೆ ಕ್ರೇನ್ ಡಿಕ್ಕಿ

ಉಡುಪಿ ಜಿಲ್ಲೆಯ ಪೆರಂಪಳ್ಳಿಯಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕ್ರೇನ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿರುವ ಘಟನೆ ಇತ್ತೀಚೆಗೆ ನಡೆದಿದೆ. ಇದರ ಭಯಾನಕ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಎದುರು ಬರುತ್ತಿದ್ದ ಕಾರಿಗೆ ಕ್ರೇನ್ ಚಾಲಕ ದಾರಿ ಬಿಟ್ಟು ಕೊಡುವಾಗ ಈ ಅಪಘಾತ ಸಂಭವಿಸಿದೆ.

SSC GD Constable Exam 2026: ಎಸ್‌ಎಸ್‌ಸಿ ಜಿಡಿ ಕಾನ್‌ಸ್ಟೆಬಲ್‌ ಹುದ್ದೆಗಳ ನೇಮಕಾತಿ ಪರೀಕ್ಷೆ ಮುಂದೂಡಿಕೆ

ಎಸ್‌ಎಸ್‌ಸಿ ಜಿಡಿ ಕಾನ್‌ಸ್ಟೆಬಲ್‌ ಹುದ್ದೆಗಳ ನೇಮಕಾತಿ ಪರೀಕ್ಷೆ ಮುಂದೂಡಿಕೆ

ಬಿಎಸ್ಎಫ್, ಸಿಐಎಸ್ಎಫ್ ಸೇರಿ ವಿವಿಧ ಭದ್ರತಾ ಪಡೆಗಳಲ್ಲಿ ಒಟ್ಟು 25,487 ಕಾನ್‌ಸ್ಟೆಬಲ್‌ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಇದರಲ್ಲಿ 23,467 ಹುದ್ದೆಗಳು ಪುರುಷರಿಗೆ ಹಾಗೂ ಮಹಿಳೆಯರಿಗೆ 2020 ಹುದ್ದೆ ಮೀಸಲಿವೆ. ಪರೀಕ್ಷೆಯ ಹೊಸ ದಿನಾಂಕವನ್ನು ಶೀಘ್ರದಲ್ಲೇ ಎಸ್‌ಎಸ್‌ಸಿ ಪ್ರಕಟಿಸಲಿದೆ.

Aadhaar Seva Center Recruitment 2026: ಎಸ್‌ಎಎಸ್‌ಎಲ್‌ಸಿ ಪಾಸಾಗಿದ್ದರೆ ಸಾಕು ಆಧಾರ್‌ ಸೂಪರ್‌ವೈಸರ್‌ ಹುದ್ದೆಗಳಿಗೆ ಅಪ್ಲೈ ಮಾಡಿ; ಅರ್ಜಿ ಶುಲ್ಕ ಇಲ್ಲ

ಆಧಾರ್‌ ಸೂಪರ್‌ವೈಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

Job Guide: ಕಾಮನ್‌ ಸರ್ವಿಸ್‌ ಸೆಂಟರ್‌ ದೇಶಾದ್ಯಂತ ಖಾಲಿ ಇರುವ 253 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಆಧಾರ್‌ ಸೂಪರ್‌ವೈಸರ್‌/ಆಪರೇಟರ್‌ ಹುದ್ದೆ ಇದಾಗಿದ್ದು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿದ್ದರೆ ಅಪ್ಲೈ ಮಾಡಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮಾರ್ಚ್‌ 10.

ಮಂಗಳಮುಖಿ ಜತೆ ಪ್ರೀತಿಯಲ್ಲಿದ್ದ ಯುವಕ; ಬಾಡಿಗೆ ಮನೆಯಲ್ಲಿ ಇಬ್ಬರೂ ಅನುಮಾನಾಸ್ಪದ ಸಾವು

ಬಾಡಿಗೆ ಮನೆಯಲ್ಲಿ ಮಂಗಳಮುಖಿ ಮತ್ತು ಯುವಕ ಅನುಮಾನಾಸ್ಪದ ಸಾವು

Ballari News: ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮಲ್ಪನಗುಡಿ ಗ್ರಾಮದ ಯುವಕನೊಬ್ಬ, ಬಳ್ಳಾರಿ ತಾಲೂಕಿನ ಚಾಗನೂರ ಗ್ರಾಮದ ಮಂಗಳಮುಖಿಯನ್ನು ಪ್ರೀತಿಸುತ್ತಿದ್ದ. ಹಲವು ವರ್ಷಗಳಿಂದ ಒಟ್ಟಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ, ಇದೀಗ ಇಬ್ಬರೂ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ರಸ್ತೆ ಅಪಘಾತಕ್ಕೀಡಾಗಿ ಗಂಭೀರ ಸ್ಥಿತಿ: ವ್ಯಕ್ತಿಯ ಪ್ರಾಣ ಉಳಿಸಿದ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆ

ಹೊಟ್ಟೆಯ ಶಸ್ತ್ರಚಿಕಿತ್ಸೆ ಯಶಸ್ವಿ: ಉಳಿಯಿತು ವ್ಯಕ್ತಿಯ ಪ್ರಾಣ

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ತುರ್ತು ಚಿಕಿತ್ಸಾ ತಂಡವು ತಕ್ಷಣವೇ ಪುನಶ್ಚೇತನ ಪ್ರಕ್ರಿಯೆಯನ್ನು ಪ್ರಾರಂಭಿಸಿತು ಮತ್ತು ಆಸ್ಪತ್ರೆಯ 'ಟ್ರಾಮಾ ರೆಸ್ಪಾನ್ಸ್ ಪ್ರೋಟೋಕಾಲ್' ಅನ್ನು ಬಳಸಿಕೊಂಡಿತು. ಹೆಚ್ಚಿನ ತಪಾಸಣೆಯ ನಂತರ, ಅಪಘಾತದ ತೀವ್ರ ಹೊಡೆತ ದಿಂದಾಗಿ ರೋಗಿಯ ಸ್ಪ್ಲೀನ್ ತೀವ್ರವಾಗಿ ಹಾನಿಗೊಳಗಾಗಿರುವುದು ಮತ್ತು ಹೊಟ್ಟೆಯೊಳಗೆ ಅನಿಯಂತ್ರಿತ ರಕ್ತಸ್ರಾವವಾಗುತ್ತಿರುವುದು ಪತ್ತೆಯಾಯಿತು.

ಜಾವಾ 42, ನಿಯೋ-ಕ್ಲಾಸಿಕ್ ಡಿಸ್ರಪ್ಟರ್, ಈಗ ಐವರಿಯಲ್ಲಿದೆ

ಜಾವಾ 42, ನಿಯೋ-ಕ್ಲಾಸಿಕ್ ಡಿಸ್ರಪ್ಟರ್, ಈಗ ಐವರಿಯಲ್ಲಿದೆ

ಪ್ರತ್ಯೇಕತೆಯನ್ನು ಗೌರವಿಸುವ ಯುವಕರಿಗೆ ಹೇಳಿಕೆಯಾಗಿರುವ ಜಾವಾ 42, 2018 ರಲ್ಲಿ ಏಕವರ್ಣದ ಕ್ಲಾಸಿಕ್ ವಿಭಾಗವನ್ನು ಅದರ ವಿನ್ಯಾಸ-ಮೊದಲ ಸಿಲೂಯೆಟ್ ಮತ್ತು ಐಕಾನಿಕ್ ಪ್ಯಾಸ್ಟಲ್ ಛಾಯೆಗಳೊಂದಿಗೆ ಅಡ್ಡಿಪಡಿಸಿತು. 42 ರ ಬಣ್ಣದ ಪ್ಯಾಲೆಟ್ ಮತ್ತು ಸ್ಪೋರ್ಟಿ ನಿಲುವು ಟ್ಯಾಂಕ್ ಅಡಿಯಲ್ಲಿ ಗಂಭೀರ ಕಾರ್ಯಕ್ಷಮತೆಯ ಎಂಜಿನಿಯರಿಂಗ್‌ನಿಂದ ಬೆಂಬಲಿತ ವಾದ ಅಧಿಕೃತ ರೆಟ್ರೊ-ಕೂಲ್ ಅನ್ನು ಮರು ವ್ಯಾಖ್ಯಾನಿಸಿತು

Loading...