ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

ದೆವ್ವ ಹಿಡಿದಿದೆ ಎಂದು ಪತ್ನಿಯನ್ನು ಕಟ್ಟಿಗೆಯಿಂದ ಹೊಡೆದು ಕೊಂದ ಪಾಪಿ ಪತಿ!

ದೆವ್ವ ಹಿಡಿದಿದೆ ಎಂದು ಪತ್ನಿಯನ್ನು ಕಟ್ಟಿಗೆಯಿಂದ ಹೊಡೆದು ಕೊಂದ ಪಾಪಿ ಪತಿ!

ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮುರುಮ್ ಗ್ರಾಮದಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ವೆಂಕಟೇಶ್ವರ ನಗರದ ಮಹಿಳೆ ಮೇಲೆ ಗಂಡ ಹಲ್ಲೆ ಮಾಡಿ ಕೊಂದಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಆಳಂದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ, ಮಹಾರಾಷ್ಟ್ರದ ಮುರುಮ್ ಠಾಣೆ ಪೊಲೀಸರಿಗೆ ವರ್ಗಾಯಿಸಲಾಗಿದೆ.

ಉತ್ಥಾನ ಕಥಾಸ್ಪರ್ಧೆ 2025ರ ಫಲಿತಾಂಶ ಪ್ರಕಟ; ಬೆಂಗಳೂರಿನ ಡಾ. ಶೈಲೇಶ್ ಕುಮಾರ್ ಪ್ರಥಮ

ಉತ್ಥಾನ ಕಥಾಸ್ಪರ್ಧೆ 2025ರಲ್ಲಿ ಬೆಂಗಳೂರಿನ ಡಾ. ಶೈಲೇಶ್ ಕುಮಾರ್ ಪ್ರಥಮ

Utthana Katha Sparde 2025 Results: ಉತ್ಥಾನ ಕಥಾಸ್ಪರ್ಧೆಯಲ್ಲಿ ಮೊದಲನೆ ಬಹುಮಾನವನ್ನು ಡಾ. ಶೈಲೇಶ್ ಕುಮಾರ್ ಅವರ ‘ಒತ್ತುವರಿ’ ಎಂಬ ಕಥೆ ಪಡೆದಿದೆ. ಎರಡನೆಯ ಬಹುಮಾನವನ್ನು ರಾಧಿಕಾ ವಿ. ಗುಜ್ಜರ್ ಅವರ ‘ಮಂಥ’ ಕಥೆ ಪಡೆದಿದ್ದು, ಮೂರನೆಯ ಬಹುಮಾನವನ್ನು ರೋಹಿತ್ ಚಕ್ರತೀರ್ಥ ಅವರ ‘ಪ್ಲುಟೋ’ ಕಥೆ ಪಡೆದಿದೆ.

ಇಂಡಿಯನ್ ಬ್ಯಾಂಕ್​ನಲ್ಲಿ 400 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಕೊನೆಯ ದಿನಾಂಕ ಯಾವಾಗ?

Indian Bank Recruitment 2025: ಬಿಒಐ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ

ನೀವು ಯಾವುದೇ ವಿಷಯದಲ್ಲಿ ಡಿಗ್ರಿ ಪಾಸ್ ಆಗಿ, ಬ್ಯಾಂಕಿಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿದ್ದರೆ ಇಂಡಿಯನ್ ಬ್ಯಾಂಕ್ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಅಪ್ರೆಂಟಿಸ್ ಹುದ್ದೆಗಳಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಈ ಹುದ್ದೆ ಕುರಿತಾದ ಹೆಚ್ಚಿನ ಮಾಹಿತಿ ಇದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 10 2025, ಆಗಿದೆ.

ಡಿ. 29, 30ರಂದು ತುಮಕೂರಿನಲ್ಲಿ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ

ಡಿ. 29, 30ರಂದು ತುಮಕೂರಿನಲ್ಲಿ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

Tumkur Kannada sahitya sammelana: 17ನೇ ತುಮಕೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಡಾ.ಕರೀಗೌಡ ಬೀಚನಹಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ಶುಭ ಕಲ್ಯಾಣ್ ತಿಳಿಸಿದ್ದಾರೆ.

ಬುಲ್ಡೋಜರ್ ಸಂಸ್ಕೃತಿ ನಮ್ಮಲ್ಲಿ ಇಲ್ಲ; ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಡಿ.ಕೆ.ಶಿವಕುಮಾರ್‌ ತಿರುಗೇಟು

ಬುಲ್ಡೋಜರ್ ಸಂಸ್ಕೃತಿ ನಮ್ಮಲ್ಲಿ ಇಲ್ಲ; ಕೇರಳ ಸಿಎಂಗೆ ಡಿಕೆಶಿ ತಿರುಗೇಟು

DK Shivakumar: ಕೇರಳ ಸಿಎಂ ಪಿಣರಾಯಿ ವಿಜಯನ್‌ ರಂತಹ ಹಿರಿಯ ನಾಯಕರು ಸತ್ಯಾಸತ್ಯತೆ ಅರಿಯದೇ ಮಾತನಾಡಿರುವುದು ದುರಾದೃಷ್ಟಕರ. ಬುಲ್ಡೋಜರ್ ಸಂಸ್ಕೃತಿ ನಮ್ಮಲ್ಲಿ ಇಲ್ಲ. ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಜಮೀನನ್ನು ರಕ್ಷಣೆ ಮಾಡಿಕೊಳ್ಳಲಾಗಿದೆ. ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಿಗದಿಯಾಗಿರುವ ಜಾಗವನ್ನು ಒತ್ತುವರಿ ಮಾಡಿಕೊಳ್ಳಲು ಬಿಡುವುದಿಲ್ಲ. ಈ ಬಗ್ಗೆ ನಮ್ಮ ಪಕ್ಷ ಹಾಗೂ ಕೇರಳದ ನಾಯಕರಿಗೆ ವರದಿ ರವಾನೆ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Halemane Shivananjappa: ತುಮುಲ್ ಮಾಜಿ ಅಧ್ಯಕ್ಷ ಹಳೇಮನೆ ಶಿವನಂಜಪ್ಪ ನಿಧನ

ತುಮುಲ್ ಮಾಜಿ ಅಧ್ಯಕ್ಷ ಹಳೇಮನೆ ಶಿವನಂಜಪ್ಪ ನಿಧನ

ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ (ತುಮುಲ್) ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಸಹಕಾರಿ ಮುಖಂಡ ಹಳೇಮನೆ ಶಿವನಂಜಪ್ಪ (79) ಅವರು ಶನಿವಾರ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಅಯೋಧ್ಯೆ ರಾಮಮಂದಿರ ವಿದ್ಯುದೀಕರಣಗೊಳಿಸಿದ ರಾಜೇಶ್‌ ಶೆಟ್ಟರಿಗೆ ಪುತ್ತಿಗೆ ಮಠದಿಂದ ಪ್ರಶಸ್ತಿ

ರಾಮಮಂದಿರ ವಿದ್ಯುದೀಕರಣಗೊಳಿಸಿದ ರಾಜೇಶ್‌ ಶೆಟ್ಟರಿಗೆ ಪ್ರಶಸ್ತಿ

Rajesh Shetty: ಬೆಂಗಳೂರಿನ ಶಂಕರ್‌ ಎಲೆಕ್ಟ್ರಿಕಲ್ಸ್‌ ಸಂಸ್ಥೆಯ ಸ್ಥಾಪಕ ರಾಜೇಶ್‌ ಶೆಟ್ಟಿ ಅವರಿಗೆ ಉಡುಪಿಯ ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಶ್ರೀಕೃಷ್ಣಾನುಗ್ರಹ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಪ್ರಶಸ್ತಿ ನೀಡಿದ್ದಾರೆ.

Bengaluru News: ಜಯನಗರ ಆಸ್ಪತ್ರೆಯಲ್ಲಿ ಭಾರಿ ನಿರ್ಲಕ್ಷ್ಯ, O+ ಗುಂಪಿನ ರೋಗಿಗೆ A+ ರಕ್ತ ನೀಡಿ ಎಡವಟ್ಟು

ಜಯನಗರ ಆಸ್ಪತ್ರೆಯಲ್ಲಿ O+ ಗುಂಪಿನ ರೋಗಿಗೆ A+ ರಕ್ತ ನೀಡಿ ಎಡವಟ್ಟು

ಪುನೀತ್ ಸೂರ್ಯ ಎಂಬ ರೋಗಿ ರಕ್ತಹೀನತೆ ಚಿಕಿತ್ಸೆ ಪಡೆಯಲು ಜಯನಗರ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದರು. ಅವರು ಓ ಪಾಸಿಟಿವ್ (O+) ರಕ್ತದ ಗುಂಪಿನವರಾಗಿದ್ದು, ಲ್ಯಾಬ್ ಟೆಕ್ನಿಷಿಯನ್ ನಿರ್ಲಕ್ಷ್ಯದಿಂದಾಗಿ ತಪ್ಪಾಗಿ ಎ ಪಾಸಿಟಿವ್ (A+) ರಕ್ತ ನೀಡಲಾಗಿದ್ದು, ಪುನೀತ್ ಸ್ಥಿತಿ ಗಂಭೀರವಾಗಿತ್ತು. ಐಸಿಯುವಿನಲ್ಲಿ ಮುಂದುವರಿದ ಚಿಕಿತ್ಸೆಯಿಂದ ಇದೀಗ ಅವರ ಆರೋಗ್ಯ ಸ್ಥಿತಿ ಕ್ರಮೇಣ ಸುಧಾರಿಸುತ್ತಿದೆ

ಮಸಾಜ್‌ ಪಾರ್ಲರ್‌ ಕೆಲಸ ಬಿಡಲ್ಲ ಎಂದಿದ್ದಕ್ಕೆ ಪತ್ನಿಯ ಕತ್ತು ಸೀಳಿ ಕೊಲೆಗೈದ 3ನೇ ಗಂಡ!

ಬೆಂಗಳೂರಿನಲ್ಲಿ ಪತ್ನಿಯ ಕತ್ತು ಸೀಳಿ ಕೊಲೆಗೈದ ಮೂರನೇ ಗಂಡ!

Bengaluru Murder Case: ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಗ್ರಹಾರ ಲೇಔಟ್‌ನಲ್ಲಿ ಪ್ರಕರಣ ನಡೆದಿದೆ. ಕೊಲೆ ಮಾಡಿದ ಬಳಿಕ ಆರೋಪಿಯು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.

Saritha Gnanananda: ಯಂಡಮೂರಿ ಕೃತಿಗಳ ಅನುವಾದಕಿ, ಕನ್ನಡ ಲೇಖಕಿ ಸರಿತಾ ಜ್ಞಾನಾನಂದ ನಿಧನ

ಯಂಡಮೂರಿ ಕೃತಿಗಳ ಅನುವಾದಕಿ, ಕನ್ನಡ ಲೇಖಕಿ ಸರಿತಾ ಜ್ಞಾನಾನಂದ ನಿಧನ

ಯಂಡಮೂರಿ ವೀರೇಂದ್ರನಾಥ್, ಸೂರ‍್ಯದೇವರ ರಾಮಮೋಹನರಾವ್, ಡಾ. ಕೊಂಡೂರು ವೀರರಾಘವಾಚಾರ್ಯಲು, ಬಲಿವಾಡ ಕಾಂತರಾವ್, ಮಲ್ಲಾದಿ ವೆಂಕಟ ಕೃಷ್ಣಮೂರ್ತಿ, ಡಾ. ಸಮರಂ ಮುಂತಾದ ತೆಲುಗು ಲೇಖಕರು, ತಮಿಳಿನ ಶಿವ ಶಂಕರಿ, ನಾರಾಯಣದತ್ತ ಶ್ರೀಮಾಲಿಯವರ ಹಿಂದಿ, ರಾಮ ಮೊಹಮದ್ ಡಿಸೌಜರವರ ಉರ್ದು ಮತ್ತು ಮರಾಠಿ ಭಾಷೆಗಳಿಂದ ಸುಮಾರು 50ಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡಕ್ಕೆ ಸರಿತಾ ಜ್ಞಾನಾನಂದ ಅವರು ಅನುವಾದಿಸಿದ್ದಾರೆ.

Mysuru Blast Case: ಮೈಸೂರು ಸ್ಪೋಟ; ಹೂವಿನ ವ್ಯಾಪಾರಿ ಮಂಜುಳಾ ಸಾವಿನ ಸುದ್ದಿ ಕೇಳಿ ಅಣ್ಣನೂ ಸಾವು

ಮೈಸೂರು ಸ್ಪೋಟ; ಹೂವಿನ ವ್ಯಾಪಾರಿ ಮಂಜುಳಾ ಸಾವಿನ ಸುದ್ದಿ ಕೇಳಿ ಅಣ್ಣನೂ ಸಾವು

ಹೀಲಿಯಂ ಸಿಲಿಂಡರ್ ಸ್ಫೋಟದಿಂದ ಮಂಜುಳ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಆಸ್ಪತ್ರೆಯಲ್ಲಿ ಮಂಜುಳಾ ಸಾವನ್ನಪ್ಪಿದ್ದಾರೆ. ತಂಗಿ ಮಂಜುಳಾ ಸಾವಿನ ಸುದ್ದಿ ಕೇಳಿ ನಂಜನಗೂಡು ತಾಲೂಕಿನ ಚಾಮಲಾಪುರದ ನಿವಾಸಿ ಪರಮೇಶ್ವರ್ ಸಾವನ್ನಪ್ಪಿದ್ದಾರೆ. ಪರಮೇಶ್ವರ್ ಮೊದಲೇ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಗೊತ್ತಾಗಿದೆ.

ಬೆಂಗಳೂರನ್ನು ರಾಷ್ಟ್ರ ರಾಜಧಾನಿ ಮಾಡಿ: ದಿಲ್ಲಿ ಯುವತಿ ಆಗ್ರಹ

ಬೆಂಗಳೂರನ್ನು ರಾಷ್ಟ್ರ ರಾಜಧಾನಿ ಮಾಡಿ: ದಿಲ್ಲಿ ಯುವತಿ ಆಗ್ರಹ

viral video: ಸುರಕ್ಷತೆ ಕುರಿತು ಪ್ರಸ್ತಾವಿಸಿರುವ ಮಖಿಜಾ, ‘ರಾತ್ರಿ ಸಹ ಮಹಿಳೆಯರಿಗೆ ಬೆಂಗಳೂರು ಹೆಚ್ಚು ಸುರಕ್ಷಿತವಾಗಿದೆ. ಸ್ನೇಹಿತರನ್ನು ಭೇಟಿಯಾಗಿ, ರಾತ್ರಿ 10 ಗಂಟೆಗೆ ಒಬ್ಬಳೇ ಮನೆಗೆ ಹೋಗುವಾಗಲೂ ಹಿತಕರ ಅನುಭವವಾಯಿತು. ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಕಾಳಜಿಯ ವಿಷಯವಾಗಿಲ್ಲ. ಬೆಂಗಳೂರಿಗೆ ಆದ್ಯತೆ ಕೊಡಲು ಇದೂ ಒಂದು ಮುಖ್ಯ ಕಾರಣ’ ಎಂದಿದ್ದಾರೆ.

Aadhar Cards: 10 ವರ್ಷ ಹಳೆಯ ಆಧಾರ್ ಕಾರ್ಡ್ ಹೊಂದಿರುವವರು ಗಮನಿಸಿ, ಜನವರಿ 1ರಿಂದ ಈ ನಿಯಮಗಳು ಜಾರಿ

10 ವರ್ಷ ಹಳೆಯ ಆಧಾರ್ ಕಾರ್ಡ್ ಹೊಂದಿರುವವರು ಹೊಸ ನಿಯಮ ಗಮನಿಸಿ!

ನೀವು 10 ವರ್ಷಗಳಿಗಿಂತ ಹಳೆಯದಾದ ನಿಮ್ಮ ಆಧಾರ್ ಕಾರ್ಡ್‌ಗಳನ್ನು ನವೀಕರಿಸದಿದ್ದರೆ, ಅಂದರೆ ಹತ್ತು ವರ್ಷಗಳ ಹಿಂದೆ ಸಕ್ರಿಯಗೊಳಿಸಲಾದವುಗಳನ್ನು ನವೀಕರಿಸುವುದು ಈಗ ಕಡ್ಡಾಯವಾಗಿದೆ. ಹೆಸರು, ಜನ್ಮ ದಿನಾಂಕ, ವಿಳಾಸದಂತಹ ಮಾಹಿತಿಯನ್ನು ನವೀಕರಿಸುವುದು ನಿಮ್ಮ ಆಧಾರ್ ಅನ್ನು ಸಕ್ರಿಯವಾಗಿರಿಸಲಿದೆ. ಯುಐಡಿಎಐ ಈಗಾಗಲೇ ಡಿಸೆಂಬರ್ 1, 2025 ರಿಂದ ಆಧಾರ್‌ನ ಹೊಸ ವಿನ್ಯಾಸವನ್ನು ಘೋಷಿಸಿದೆ.

Drunk and Drive: ಕುಡಿದು ಬೆಂಗಳೂರಿನಿಂದ ಗೋವಾಗೆ ಬಸ್‌ ಚಲಾಯಿಸುತ್ತಿದ್ದ ಸೀಬರ್ಡ್‌ ಬಸ್‌ ಚಾಲಕ! ಪೊಲೀಸ್‌ ತಪಾಸಣೆ ವೇಳೆ ಪತ್ತೆ

ಕುಡಿದು ಬೆಂಗಳೂರು- ಗೋವಾ ಬಸ್‌ ಚಲಾಯಿಸುತ್ತಿದ್ದ ಸೀಬರ್ಡ್‌ ಬಸ್‌ ಚಾಲಕ!

Chitradurga Bus Accident: ಮದ್ಯಪಾನ ಮಾಡಿ ಬಸ್​ ಚಲಾಯಿಸುತ್ತಿದ್ದ ಸೀ ಬರ್ಡ್ ಚಾಲಕ ಪೊಲೀಸರ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ. ಉಪ್ಪಾರಪೇಟೆ ಸಂಚಾರಿ ಪೊಲೀಸರ ತಪಾಸಣೆ ವೇಳೆ ಚಾಲಕ ಸಿಕ್ಕಿಬಿದ್ದಿದ್ದು, ಆಲ್ಕೋಮೀಟರ್ ತಪಾಸಣೆ ವೇಳೆ ಕುಡಿದಿರೋದು ಬಯಲಾಗಿದೆ. ಕೂಡಲೇ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊನೆಗೆ ಬೇರೊಬ್ಬ ಡ್ರೈವರ್ ಕರೆಸಿ ಬಸ್​ ತೆಗೆದುಕೊಂಡು ಹೋಗುವಂತೆ ಪೊಲೀಸರು ತಿಳಿಸಿದರು. ಗೋವಾಗೆ ತೆರಳುತ್ತಿದ್ದ ಈ ಬಸ್​​ನಲ್ಲಿ ಸುಮಾರು 30 ಪ್ರಯಾಣಿಕರಿದ್ದರು.

Harassment: ಬೆಂಗಳೂರಿನ ರಸ್ತೆಯಲ್ಲಿ ಬೈಕ್‌ ಚಲಾಯಿಸುತ್ತಿದ್ದ ಯುವತಿಗೆ ಪುಂಡರಿಂದ ಕಿರುಕುಳ

ಬೆಂಗಳೂರಿನಲ್ಲಿ ಬೈಕ್‌ ಚಲಾಯಿಸುತ್ತಿದ್ದ ಯುವತಿಗೆ ಪುಂಡರಿಂದ ಕಿರುಕುಳ

ಒಂದೇ ಬೈಕ್‌ನಲ್ಲಿ ತ್ರಿಬಲ್ ರೈಡ್ ಮಾಡುತ್ತಿದ್ದ​​, ಹೆಲ್ಮೆಟ್​ ಕೂಡ ಧರಿಸಿರದ, ಅಡ್ಡಾದಿಡ್ಡಿ ಬೈಕ್‌ ಚಲಾಯಿಸುತ್ತಿದ್ದ ಯುವಕರು, ಸ್ಕೂಟಿಯಲ್ಲಿ ಹೋಗ್ತಿದ್ದ ಯುವತಿಯ ಬೆನ್ನು ಬಿದ್ದಿದ್ದಾರೆ. ಈ ವೇಳೆ ಯುವತಿಯನ್ನು ಫಾಲೋ ಮಾಡಿದ ಪುಂಡರು, ಬೈಕನ್ನು ಅಡ್ಡಾದಿಡ್ಡಿ ಓಡಿಸಿ ಯುವತಿಗೆ ಟಾರ್ಚರ್​ ಕೊಟ್ಟಿದ್ದಾರೆ. ಡಿಸೆಂಬರ್​ 25 ರಾತ್ರಿ 12 ಗಂಟೆ ಸುಮಾರಿಗೆ ಬಿಟಿಎಂ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ.

Karnakata Weather: ರಾಜ್ಯದಲ್ಲಿ ಮತ್ತಷ್ಟು ಚಳಿ, ಕನಿಷ್ಠ ತಾಪಮಾನ ದಾಖಲು, 19 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ರಾಜ್ಯದಲ್ಲಿ ಮತ್ತಷ್ಟು ಚಳಿ, ಕನಿಷ್ಠ ತಾಪಮಾನ, 19 ಜಿಲ್ಲೆಗಳಲ್ಲಿ ಮಳೆ ಸಂಭವ

Karnakata Weather forecast: ರಾಜ್ಯದ ಒಳನಾಡಿನ ಹಲವು ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 4-6 ಡಿಗ್ರಿ ಸೆಲ್ಸಿಯಸ್‌ವರೆಗೆ ಕಡಿಮೆಯಾಗಿದೆ. ವಿಜಯಪುರದಲ್ಲಿ 9.5 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ (cold) ದಾಖಲಾಗಿದೆ. ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಡಿಸೆಂಬರ್‌ 31 ಹಾಗೂ ಜನವರಿ 1ರಂದು ಮಳೆಯಾಗಲಿದೆ. ಚಿಕ್ಕಮಗಳೂರು, ಹಾಸನದಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ.

Chitradurga Bus Accident: ಬಸ್‌ಗಳ ರಾತ್ರಿ ಪ್ರಯಾಣಕ್ಕೆ ವಿರಾಮ: ಕೇಂದ್ರಕ್ಕೆ ಪತ್ರ ಬರೆಯಲು ರಾಜ್ಯ ಚಿಂತನೆ

ರಾತ್ರಿ ಬಸ್‌ ಯಾನಕ್ಕೆ ಬ್ರೇಕ್: ಕೇಂದ್ರಕ್ಕೆ ಪತ್ರ ಕಳಿಸಲು ರಾಜ್ಯ ಚಿಂತನೆ

ಇತ್ತೀಚಿನ ದಿನಗಳಲ್ಲಿ ರಾತ್ರಿ ಸಮಯದಲ್ಲಿ ಅಪಘಾತಗಳು ಹೆಚ್ಚಾಗಿ ನಡೆಯುತ್ತಿವೆ. ಇದಕ್ಕೆ ಪ್ರಮುಖ ಕಾರಣ ಚಾಲಕರು ನಿದ್ರೆ ಮಂಪರಿನಲ್ಲಿ ವಾಹನ ಚಾಲನೆ ಮಾಡುತ್ತಿರೋದು. ಹೀಗಾಗಿ ರಾತ್ರಿ ಸಮಯ ಸಂಚಾರ ಮಾಡೋರು ಸಂಜೆಯೇ ನಿದ್ದೆ ಮಾಡಿ ಎದ್ದರೇ ಒಳ್ಳೆಯದು. ಈ ನಿದ್ದೆ ಮಂಪರಿನಿಂದ ಆಗೋ ಅನಾಹುತ ತಪ್ಪಿಸಲು ಚಾಲಕರು ಕೆಲಸಮಯ ವಾಹನಗಳನ್ನ ನಿಲ್ಲಿಸಿ ವಿಶ್ರಾಂತಿ ಮಾಡಬೇಕು ಎಂದು ಸಚಿವರು ಹೇಳಿದ್ದಾರೆ.

Self Harming: ನವವಿವಾಹಿತೆ ಸಾವಿನ ಹಿಂದೆಯೇ ಪತಿ ಕೂಡ ಆತ್ಮಹತ್ಯೆ, ಪತಿಯ ತಾಯಿಯಿಂದಲೂ ಸಾಯಲು ಯತ್ನ

ನವವಿವಾಹಿತೆ ಸಾವಿನ ಹಿಂದೆಯೇ ಪತಿಯೂ ಆತ್ಮಹತ್ಯೆ, ತಾಯಿಯೂ ಸಾಯಲು ಯತ್ನ

ಕಳೆದ ಅಕ್ಟೋಬರ್ 29ರಂದು ಗಾನ್ವಿ ಮತ್ತು ಸೂರಜ್ ಮದುವೆಯಾಗಿತ್ತು. ಪ್ಯಾಲೆಸ್‌ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ಮಾಡಿಕೊಂಡಿದ್ದರು. ಕಳೆದ ಹತ್ತು ದಿನಗಳ ಹಿಂದೆ ಶ್ರೀಲಂಕಾಗೆ ಹನಿಮೂನ್‌ಗೆಂದು ಹೋಗಿದ್ದರು. ಅರ್ಧಕ್ಕೆ ವಾಪಸ್ಸಾಗಿ ಬಳಿಕ ಗಾನವಿ ನೇಣಿಗೆ ಶರಣಾಗಿದ್ದರು. ಇದೀಗ ನಾಗಪುರದ ತನ್ನ ಮನೆಯಲ್ಲಿ ಪತಿ ಸೂರಜ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.

Artificial Intelligence: ಇಂದಿನಿಂದ ನಾಗಾರ್ಜುನ ಕಾಲೇಜಿನಲ್ಲಿ ಎಐ ಶೃಂಗಸಭೆ : ಎಸ್.ಎಸ್. ಅಯ್ಯಂಗಾರ್‌ರಿAದ ಉದ್ಘಾಟನೆ

ಇಂದಿನಿಂದ ನಾಗಾರ್ಜುನ ಕಾಲೇಜಿನಲ್ಲಿ ಎಐ ಶೃಂಗಸಭೆ

ದೆಹಲಿಯಲ್ಲಿ ನಡೆಯ ಲಿರುವ ರಾಷ್ಟ್ರೀಯ ಮಟ್ಟದ ಎಐ ಶೃಂಗ ಸಭೆ ಭಾಗವಾಗಿ ನಾಗಾರ್ಜುನ ಇಂಜನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಒಂದು ದಿನದ  ಪ್ರಾದೇ ಶಿಕ ಎ.ಐ ಪೂರ್ವ ಶೃಂಗಸಭೆ ಆಯೋಜಿಸಲಾಗಿದ್ದು ಮಿಯಾಮಿ ಸಂಸ್ಥೆಯ ಪ್ರಾಧ್ಯಾಪಕ ಎಸ್.ಎಸ್. ಅಯ್ಯಂಗಾರ್ ಉದ್ಘಾಟಿಸಲಿದ್ದಾರೆ

JDS: ಪ್ರತಿ ವಿಧಾಸಭಾ ಕ್ಷೇತ್ರದಲ್ಲಿ 15 ಸಾವಿರ ಡಿಜಿಟಲ್ ಮೆಂಬರ್‌ಶಿಪ್ ಜೆಡಿಎಸ್ ಗುರಿ : ಚಂದನ್ ಗೌಡ

ಸಾಮಾಜಿಕ ಜಾಲತಾಣಗಳ ಮೂಲಕ ಪಕ್ಷ ಬಲವರ್ಧನೆಗೆ ಮುಂದಾದ JDS

2026ಕ್ಕೆ ಕಾರ್ಯಕರ್ತರ ಚುನಾವಣೆ ನಡೆಯಲಿದ್ದು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಅಧಿಕಾರ ಸ್ಥಾನದಲ್ಲಿ ಕೂರಿಸುವ ಜವಾಬ್ದಾರಿಯನ್ನು ಪಕ್ಷದ ವರಿಷ್ಠರು ನಮಗೆ ನೀಡಿದ್ದಾರೆ. ಈ ದೆಸೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಡಿಜಿಟಲ್ ಮೆಂಬರ್ಶಿಪ್ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಪಕ್ಷ ಸಂಘಟನೆಯನ್ನು ಮಾಡ ಲಾಗುತ್ತಿದೆ

ದುರುದ್ದೇಶದಿಂದ ಮೂಲ ನಿವಾಸಿಗಳಿಗೆ ಸೌಲಭ್ಯಗಳಿಂದ ವಂಚನೆ : ಅಂಕಾಲಮೊಡಗು ಭಾಸ್ಕರ್

ಅಂಕಾಲಮೊಡಗು ಪಂಚಾಯಿತಿಯಲ್ಲಿ ಬೇನಾಮಿ ಹೆಸರಿಗೆ ಸರಕಾರಿ ಸೌಲತ್ತು

ನಮ್ಮ ಪಂಚಾಯಿತಿಯಲ್ಲಿ ಜಲಜೀವನ ಮಿಷನ್ ಮತ್ತು ಎಂ.ಜಿ.ನರೇಗಾ , ಪಂಚಾಯತ್‌ ರಾಜ್, ಗ್ರಾಮೀಣ ಅನುದಾನಗಳ ಅಕ್ರಮ ದುರುಪಯೋಗವಾಗಿದೆ. ಈ ಬಗ್ಗೆ ಮಾಹಿತಿ ಕೋರಿ RTI ಮೂಲಕ ಅರ್ಜಿ ಸಲ್ಲಿಸಿದರೆ ನಾವು ಕೇಳಿರುವ ಮಾಹಿತಿ ಬಿಟ್ಟು ಬೇರೆಯದೇ ಮಾಹಿತಿ ನೀಡುವ ಮೂಲಕ ಅಧಿಕಾರಿಗಳು ಅಕ್ರಮ ನಡೆಸುವವರ ಪರ ವಹಿಸಿರುವುದು ಸ್ಪಷ್ಟವಾಗಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ ಸ್ವತಂತ್ರ ಸ್ಪರ್ಧೆ, ಬಿಜೆಪಿ ಜತೆ ಮೈತ್ರಿ ಇಲ್ಲ: ಎಚ್‌.ಡಿ ದೇವೇಗೌಡ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ ಸ್ವತಂತ್ರ ಸ್ಪರ್ಧೆ: ದೇವೇಗೌಡ

Karnataka local body elections: ಲೋಕಸಭೆ ಚುನಾವಣೆಯಲ್ಲಿ ಉತ್ತಮ ಮೈತ್ರಿ ಆಗಿದೆ. ಅದು ವಿಧಾನಸಭೆ ಚುನಾವಣೆಯಲ್ಲಿ ಕೂಡ ಮುಂದುವರಿಯುತ್ತದೆ. ಆದರೆ ಪಕ್ಷ ಕಟ್ಟುವ ದೃಷ್ಟಿಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಹಳ ಮುಖ್ಯ. ಜೆಡಿಎಸ್‌ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಮೈಸೂರಿನಲ್ಲಿ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣ; ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ 3ಕ್ಕೆ ಏರಿಕೆ

Mysuru Helium cylinder blast: ಗುರುವಾರ ರಾತ್ರಿ ಮೈಸೂರು ಅರಮನೆ ಮುಂದೆ ಬಲೂನ್‌ಗೆ ಗಾಳಿ ತುಂಬುವ ಹೀಲಿಯಂ ಗ್ಯಾಸ್​​ ಸಿಲಿಂಡರ್​ ಸ್ಫೋಟವಾಗಿ ವ್ಯಾಪಾರಿ ಮೃತಪಟ್ಟಿದ್ದ. ಈ ವೇಳೆ ಗಾಯಗೊಂಡಿದ್ದ ಐವರಲ್ಲಿ ಇಬ್ಬರು ಶುಕ್ರವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

Pralhad Joshi: ರಾಹುಲ್, ಸಿಎಂಗೆ ವಾಸ್ತವ ಒಪ್ಪಿಕೊಳ್ಳುವ ನೈಜತೆಯಿಲ್ಲ: ಪ್ರಲ್ಹಾದ್‌ ಜೋಶಿ ತಿರುಗೇಟು

ರಾಹುಲ್, ಸಿಎಂಗೆ ವಾಸ್ತವ ಒಪ್ಪಿಕೊಳ್ಳುವ ನೈಜತೆಯಿಲ್ಲ: ಜೋಶಿ

ಕಾಂಗ್ರೆಸ್ ನಟಿಸುವುದನ್ನು ನಿಲ್ಲಿಸಿ, ವಾಸ್ತವವನ್ನು ಒಪ್ಪಿಕೊಳ್ಳಬೇಕು. ಭಾರತದ ಉತ್ಪಾದನಾ ಬೆಳವಣಿಗೆ ಪ್ರಧಾನಿ ಮೋದಿಯವರ ಕಲ್ಪನೆಯಂತೆ ʼಮೇಕ್ ಇನ್ ಇಂಡಿಯಾ' ದ ಫಲಿತಾಂಶವೇ ಆಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪ್ರತಿಪಾದಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Loading...