ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jyotiraditya Scindia: ಬುಡಕಟ್ಟು ಜನರೊಂದಿಗೆ ಹೆಜ್ಜೆ ಹಾಕಿದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ

ಮಧ್ಯ ಪ್ರದೇಶದ ಅಶೋಕನಗರ ಜಿಲ್ಲೆಯ ಪ್ರವಾಸದಲ್ಲಿದ್ದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕಾಲಿ ಟೋರ್ ಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ ಬುಡಕಟ್ಟ ಜನಾಂಗದ ಸಾಂಪ್ರದಾಯಿಕ ನೃತ್ಯ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಮನಸ್ಸನ್ನು ಗೆದ್ದಿದೆ.

ಸಿಕ್ಕಾಪಟ್ಟೆ ವೈರಲ್‌ ಆಯ್ತು ಜೋತಿರಾದಿತ್ಯ ಸಿಂಧಿಯಾ ಡ್ಯಾನ್ಸ್‌

Profile pavithra May 20, 2025 3:42 PM

ಭೋಪಾಲ್: ಯಾವಾಗಲೂ ಜನರ ಜೊತೆಗೆ ಆತ್ಮೀಯವಾಗಿ ನಡೆದುಕೊಳ್ಳುವ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಇತ್ತೀಚೆಗೆ ಅಶೋಕನಗರದಲ್ಲಿ ಬುಡಕಟ್ಟು ಜನಾಂಗದವರೊಂದಿಗೆ ಸಾಂಪ್ರದಾಯಿಕ 'ಸಹಾರ' ಕಾರ್ಯಕ್ರಮದಲ್ಲಿ ನೃತ್ಯ ಮಾಡಿದ್ದಾರೆ. ಅಶೋಕನಗರ ಜಿಲ್ಲೆಯ ಪ್ರವಾಸದಲ್ಲಿದ್ದ ಸಚಿವರು ಕಾಲಿ ಟೋರ್ ಗ್ರಾಮಕ್ಕೂ ಭೇಟಿ ನೀಡಿದ್ದರು. ಅಲ್ಲಿ ಅವರು ಸ್ಥಳೀಯ ಸಾಂಪ್ರದಾಯಿಕ ಸಹಾರ ನೃತ್ಯದಲ್ಲಿ ಭಾಗಿಯಾಗಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆ ಮೂಲಕ ಮಧ್ಯ ಪ್ರದೇಶದ ಸಂಸ್ಕೃತಿಯೊಂದಿಗೆ ತಮ್ಮ ಹೃದಯಸ್ಪರ್ಶಿ ಸಂಪರ್ಕವನ್ನು ಪ್ರದರ್ಶಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಚಾಂದೇರಿಯಲ್ಲಿ ನಡೆದ ಅಧಿಕೃತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸಚಿವರು ಕಾಲಿ ಟೋರ್ ಎಂಬ ಬುಡಕಟ್ಟು ಗ್ರಾಮದಲ್ಲಿ ನಡೆಯುವ ಗ್ರಾಮ ಚೌಪಲ್‌ಗೆ (ಗ್ರಾಮ ಸಭೆ) ಭೇಟಿ ನೀಡಿದ್ದರು. ಸ್ಥಳೀಯ ಬುಡಕಟ್ಟು ಸಮುದಾಯವು ಅತಿಥಿಗಳನ್ನು ಸ್ವಾಗತಿಸಲು ನಡೆಸುವ ಸಾಂಪ್ರದಾಯಿಕ ಆಚರಣೆಯಾದ 'ಸಹಾರಾ' ನೃತ್ಯದ ಮೂಲಕ ಸಿಂಧಿಯಾ ಅವರನ್ನು ಸಾಂಪ್ರದಾಯಿಕವಾಗಿ ಬರ ಮಾಡಿಕೊಂಡಿತು. ಇದನ್ನು ನೋಡಿ ಖುಷಿಯಾಗಿ ಜ್ಯೋತಿರಾದಿತ್ಯ ಸಿಂಧಿಯಾ ಸೊಂಟ ಹಾಗೂ ಭುಜಕ್ಕೆ ಕೆಂಪು ದುಪಟ್ಟಾ ಸುತ್ತಿಕೊಂಡು, ಒಂದು ಕೈಯಲ್ಲಿ ನವಿಲು ಗರಿ ಮತ್ತು ಇನ್ನೊಂದು ಕೈಯಲ್ಲಿ ಮರದ ಕೋಲನ್ನು ಹಿಡಿದು ನೃತ್ಯ ಮಾಡಿದರು. ಬುಡಕಟ್ಟು ಜನರ ಜತೆಗೂಡಿ, ಅವರು ಸುಮಾರು ಐದು ನಿಮಿಷಗಳ ಕಾಲ ಜಾನಪದ ಗೀತೆಗಳ ಲಯಕ್ಕೆ ಅನುಗುಣವಾಗಿ ನೃತ್ಯ ಮಾಡಿದರು. ಸಚಿವರ ಈ ನಡೆ ಗ್ರಾಮಸ್ಥರಿಗೆ ಸಂತಸ ತರಿಸಿದೆ.

ವಿಡಿಯೊ ಇಲ್ಲಿದೆ ನೋಡಿ...



'ಸಹಾರಾ' ನೃತ್ಯವು ಈ ಪ್ರದೇಶದ ಬುಡಕಟ್ಟು ಸಮುದಾಯಗಳಲ್ಲಿ ಆಳವಾದ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ ಮತ್ತು ಸಾಂಪ್ರದಾಯಿಕವಾಗಿ ಅತಿಥಿಗಳನ್ನು ಗೌರವಿಸಲು ಪ್ರದರ್ಶಿಸಲಾಗುತ್ತದೆ. ಸಿಂಧಿಯಾ ಅವರ ಸಕ್ರಿಯ ಪಾಲ್ಗೊಳ್ಳುವಿಕೆಯು ಬುಡಕಟ್ಟು ಪರಂಪರೆಯ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಸುದ್ದಿಯನ್ನೂ ಓದಿ:Viral Video: ಮೇಜಿನ ಮೇಲೆ ಕುಳಿತವರಿಗೆ ಪ್ರಸಾದ ಬಡಿಸಿದ ಪುರಿ ದೇವಾಲಯದ ಅರ್ಚಕ; ವಿಡಿಯೊ ವೈರಲ್

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸಾರ್ವಜನಿಕ ಸ್ಥಳಗಳಲ್ಲಿ ಜನರ ಜತೆ ಸೇರಿ ನೃತ್ಯ ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ಅವರು ಚುನಾವಣೆಯ ಸಂದರ್ಭದಲ್ಲಿ ಗುಣ-ಶಿವಪುರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಾಗ ಬಿಜೆಪಿಯ ಪ್ರಚಾರ ಹಾಡಿಗೆ ನೃತ್ಯ ಮಾಡಿದ್ದರು. ವೇದಿಕೆಯ ಮೇಲೆ ಅವರು ನೃತ್ಯ ಮಾಡುವುದನ್ನು ನೋಡಿ, ಅವರ ಬೆಂಬಲಿಗರು ಸಹ ಅವರೊಂದಿಗೆ ಹೆಜ್ಜೆ ಹಾಕಿದ್ದರು.