IPL 2025: ಐಪಿಎಲ್‌ನಿಂದ ಎಲ್‌ಎಸ್‌ಜಿ ತಂಡ ನಿರ್ಗಮನ; ಮೌನ ಮುರಿದ ಗೋಯೆಂಕಾ
ಈ ಪಂದ್ಯದಲ್ಲಿ ಅಭಿಷೇಕ್ ಶರ್ಮ(Abhishek Sharma) ಮತ್ತು ದಿಗ್ವೇಶ್ ರಾಠಿ ನಡುವೆ ಭಾರೀ ವಾಗ್ಯುದ್ಧ(Abhishek vs Digvesh Fight) ನಡೆಯಿತು. ಅಭಿಷೇಕ್‌ರ ವಿಕೆಟ್ ಕಿತ್ತ ರಾಠಿ(Digvesh Singh Rathi), ನೋಟ್‌ಬುಕ್ ಸಂಭ್ರಮಾಚರಣೆ ನಡೆಸಿದ್ದಲ್ಲದೇ ಕೈ ಸನ್ನೆ ಮೂಲಕ ಮೈದಾನದಿಂದ ಹೊರಹೋಗುವಂತೆ ಸೂಚಿಸಿದರು. ಇದು ಅಭಿಷೇಕ್ ಕೋಪಕ್ಕೆ ಕಾರಣವಾಯಿತು. ಬಳಿಕ ಇಬ್ಬರ ಜಗಳಕ್ಕಿಳಿದರು. ಅಂಪೈರ್‌ಗಳು, ಸಹ ಆಟಗಾರರು ಇಬ್ಬರನ್ನೂ ಸಮಾಧಾನಪಡಿಸಿದ್ದರು.


ಲಕ್ನೋ: 18ನೇ ಆವೃತ್ತಿ ಐಪಿಎಲ್‌ನಲ್ಲಿ(IPL 2025) ಪ್ಲೇ-ಆಫ್ ರೇಸ್‌ನಿಂದ ಲಕ್ನೋ ಸೂಪರ್ ಜೈಂಟ್ಸ್ ಅಧಿಕೃತವಾಗಿ ಹೊರಬಿದ್ದ ಬೆನ್ನಲ್ಲೇ ತಂಡದ ಮಾಲಕ ಸಂಜೀವ್ ಗೋಯೆಂಕಾ(Sanjiv Goenka) ಅವರು ಟ್ವೀಟ್ ಮಾಡುವ ಮೂಲಕ ಮೌನ ಮುರಿದ್ದಿದ್ದಾರೆ. ಸೋಮವಾರ ನಡೆದಿದ್ದ ನಿರ್ಣಾಯಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್(SRH vs LSG) ವಿರುದ್ಧ 6 ವಿಕೆಟ್‌ನಿಂದ ಸೋತ ರಿಷಭ್ ಪಂತ್(Rishabh Pant) ನಾಯಕತ್ವದ ಲಕ್ನೋ ತಂಡದ ನಾಕೌಟ್ ಕನಸು ನುಚ್ಚುನೂರಾಗಿತ್ತು.
ನಾಯಕ ರಿಷಭ್ ಪಂತ್ ಮತ್ತು ಆಟಗಾರರೊಂದಿಗಿನ ಕುತೂಹಲಕಾರಿ ಫೋಟೊವನ್ನು ಪೋಸ್ಟ್ ಮಾಡಿರುವ ಗೋಯೆಂಕಾ, "ದ್ವಿತೀಯಾರ್ಧವು ಸವಾಲಿನದ್ದಾಗಿತ್ತು, ಆದರೆ ಮನಗಾಣಲು ಬಹಳಷ್ಟು ಇದೆ. ಉತ್ಸಾಹ, ಪ್ರಯತ್ನ ಮತ್ತು ಶ್ರೇಷ್ಠತೆಯ ಕ್ಷಣಗಳು ನಮಗೆ ಬಹಳಷ್ಟು ಸಹಾಯ ಮಾಡುತ್ತವೆ. ಎರಡು ಪಂದ್ಯಗಳು ಉಳಿದಿವೆ. ಹೆಮ್ಮೆಯಿಂದ ಆಡೋಣ ಮತ್ತು ಬಲವಾಗಿ ಮುಗಿಸೋಣ" ಎಂದು ಬರೆದಿದ್ದಾರೆ.
It’s been a challenging second half of the season, but there’s much to take heart in. The spirit, the effort, and the moments of excellence give us a lot to build on. Two games remain. Let’s play with pride and finish strong. #LSGvsSRH pic.twitter.com/gFzyddlnMn
— Dr. Sanjiv Goenka (@DrSanjivGoenka) May 20, 2025
ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಪಂತ್ ಅವರ ಈ ಕಳಪೆ ಬ್ಯಾಟಿಂಗ್ ಕಂಡು ಸಂಜೀವ್ ಗೋಯೆಂಕಾ ಕುಪಿತರಾಗಿ ಪಂದ್ಯ ವೀಕ್ಷಿಸುವುದನ್ನು ಬಿಟ್ಟು ಸ್ಟ್ಯಾಂಡ್‌ನಿಂದ ತೆರಳಿದ ಘಟನೆಯೂ ನಡೆದಿತ್ತು. ಕಳೆದ ಮೆಗಾ ಹಾರಾಜಿನಲ್ಲಿ ದಾಖಲೆಯ 27 ಕೋಟಿ ರೂ. ಪಡೆದ ಪಂತ್ ಈ ಮೊತ್ತಕ್ಕೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಆಡಿದ 11 ಇನಿಂಗ್ಸ್‌ಗಲ್ಲಿ ಕಲೆಹಾಕಿದ್ದು ಕೇವಲ 128 ರನ್ ಮಾತ್ರ.
ಇದನ್ನೂ ಓದಿ IPL 2025 Exit: ಪ್ಲೇ ಆಫ್‌ನಿಂದ 5 ತಂಡ ಔಟ್; ಉಳಿದ ಒಂದು ಸ್ಥಾನಕ್ಕೆ 2 ತಂಡಗಳ ಮಧ್ಯೆ ಫೈಟ್
ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರಂಭಿಕ ಬ್ಯಾಟರ್‌ಗಳಾದ ಮಿಚೆಲ್ ಮಾರ್ಷ್ ಮತ್ತು ಐಡೆನ್ ಮಾರ್ಕ್ರಮ್ ಅರ್ಧಶತಕದ ನೆರವಿನಿಂದ 7 ವಿಕೆಟ್‌ಗೆ 205 ರನ್ ಮೊತ್ತ ಪೇರಿಸಿತು. ಜವಾಬಿತ್ತ ಸನ್‌ರೈಸರ್ಸ್ ಹೈದರಾಬಾದ್ ದಿಟ್ಟ ರೀತಿಯ ಬ್ಯಾಟಿಂಗ್ ಮೂಲಕ 18.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್ ಬಾರಿಸಿ ಗೆಲುವು ಸಾಧಿಸಿ ಲಕ್ನೋ ತಂಡವನ್ನು ಪ್ಲೇಆಫ್‌ರೇಸ್‌ನಿಂದ ಹೊರದಬ್ಬಿತು.