Alcatraz Jail: ಸುತ್ತ ಶಾರ್ಕ್‌ಗಳೇ ಕಾವಲಿರುವ ಕುಖ್ಯಾತ ಅಲ್ಕಾಟ್ರಾಜ್ ಜೈಲಿನ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಇಂಟ್ರೆಸ್ಟಿಂಗ್ ಸಂಗತಿ
ಸದ್ಯ ಪ್ರವಾಸಿ ತಾಣವಾಗಿರುವ 1963ರಲ್ಲಿ ಮುಚ್ಚಲ್ಪಟ್ಟಿದ್ದ ಅಲ್ಕಾಟ್ರಾಜ್ ಜೈಲನ್ನು (Alcatraz Jail) ಮತ್ತೆ ತೆರೆದು ವಿಸ್ತರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ. ಈ ಜೈಲು ಒಂದು ಕಾಲದಲ್ಲಿ ಅಮೆರಿಕದ ಕುಖ್ಯಾತ ಖೈದಿಗಳನ್ನು ಹೊಂದಿದ್ದ ಜೈಲಾಗಿತ್ತು. ಇದನ್ನು ಈಗ ದುರಸ್ತಿಗೊಳಿಸಿ ಇಲ್ಲಿ ದೇಶದ ಅತ್ಯಂತ ನಿರ್ದಯ ಮತ್ತು ಹಿಂಸಾತ್ಮಕ ಅಪರಾಧಿಗಳನ್ನು ಇರಿಸುವುದಾಗಿ ಟ್ರಂಪ್ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಾದ ಟ್ರುತ್ ನಲ್ಲಿ ಬರೆದಿದ್ದಾರೆ.


ವಾಷಿಂಗ್ಟನ್: ವಿಶ್ವದ ಅತ್ಯಂತ ಅಪಾಯಕಾರಿ ಕೈದಿಗಳಿಗೆ (World's Most Dangerous Criminals) ಇಲ್ಲಿ ತಪ್ಪಿಸಿಕೊಳ್ಳಲು ಅವಕಾಶವೇ ಇಲ್ಲ. ಯಾಕೆಂದರೆ ಈ ಜೈಲಿನಲ್ಲಿದ್ದ ಕೈದಿಗಳಿಗೆ ಶಾರ್ಕ್ ಮೀನುಗಳೇ ಕಾವಲು ಕಾಯುತ್ತಿತ್ತು. ಇಂತಹ ಜೈಲು ಮೂರು ಬಾರಿ ಪ್ರವಾಹಕ್ಕೆ ಒಳಗಾಯಿತು. ಉಪ್ಪು ನೀರು, ಗಾಳಿಯಿಂದ ಗೋಡೆಗಳೆಲ್ಲ ಸವೆಯಲು ಆರಂಭವಾಗ ತೊಡಗಿತು. ಈ ಎಲ್ಲಾ ಕಾರಣದಿಂದ 1963ರಲ್ಲಿ ಈ ಜೈಲಿಗೆ ಬೀಗ ಜಡಿಯಲಾಯಿತು. ಹೀಗೆ ಮುಚ್ಚಲಾಗಿದ್ದ ಜೈಲನ್ನು (Alcatraz Jail) ಇದೀಗ ಮತ್ತೆ ತೆರೆಯಲು ಅಮೆರಿಕ ಅಧ್ಯಕ್ಷ ( US President ) ಡೊನಾಲ್ಡ್ ಟ್ರಂಪ್ (Donald Trump ) ಮುಂದಾಗಿದ್ದಾರೆ. ವಿಶ್ವದ ಅತ್ಯಂತ ಅಪಾಯಕಾರಿ ಅಪರಾಧಿಗಳನ್ನು ಹೊಂದಿದ್ದ ಕುಖ್ಯಾತ ಅಲ್ಕಾಟ್ರಾಜ್ ಜೈಲು ಇದೀಗ ಮತ್ತೆ ತೆರೆಯುವ ಸಿದ್ಧತೆ ನಡೆಯುತ್ತಿದೆ.
ಸದ್ಯ ಪ್ರವಾಸಿ ತಾಣವಾಗಿರುವ 1963ರಲ್ಲಿ ಮುಚ್ಚಲ್ಪಟ್ಟಿದ್ದ ಅಲ್ಕಾಟ್ರಾಜ್ ಜೈಲನ್ನು ಮತ್ತೆ ತೆರೆದು ವಿಸ್ತರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ. ಈ ಜೈಲು ಒಂದು ಕಾಲದಲ್ಲಿ ಅಮೆರಿಕದ ಕುಖ್ಯಾತ ಖೈದಿಗಳನ್ನು ಹೊಂದಿದ್ದ ಜೈಲಾಗಿತ್ತು. ಇದನ್ನು ಈಗ ದುರಸ್ತಿಗೊಳಿಸಿ ಇಲ್ಲಿ ದೇಶದ ಅತ್ಯಂತ ನಿರ್ದಯ ಮತ್ತು ಹಿಂಸಾತ್ಮಕ ಅಪರಾಧಿಗಳನ್ನು ಇರಿಸುವುದಾಗಿ ಟ್ರಂಪ್ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಾದ ಟ್ರುತ್ ನಲ್ಲಿ ಬರೆದಿದ್ದಾರೆ.
ಈ ಕುರಿತು ನ್ಯಾಯಾಂಗ ಇಲಾಖೆ, ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಮತ್ತು ಹೋಮ್‌ಲ್ಯಾಂಡ್ ಸೆಕ್ಯುರಿಟಿ, ಜೈಲುಗಳ ಬ್ಯೂರೋಗೆ ಅಲ್ಕಾಟ್ರಾಜ್ ಅನ್ನು ಮತ್ತೆ ತೆರೆದು ಅಭಿವೃದ್ಧಿ ನಡೆಸಿ ಬಳಸಲು ನಿರ್ದೇಶಿಸಿರುವುದಾಗಿ ತಿಳಿಸಿದ್ದಾರೆ.
ಅಲ್ಕಾಟ್ರಾಜ್ ಜೈಲಿನ ಇತಿಹಾಸ
ಒಂದು ಕಾಲದಲ್ಲಿ ಗರಿಷ್ಠ ಭದ್ರತಾ ಫೆಡರಲ್ ಜೈಲಾಗಿದ್ದ ಅಲ್ಕಾಟ್ರಾಜ್ ಜೈಲು ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋ ಕರಾವಳಿಯಲ್ಲಿದೆ. ಒಂದು ಕಾಲದಲ್ಲಿ ಕೋಟೆಯಾಗಿದ್ದ ಇದನ್ನು 1912ರಲ್ಲಿ ಯುಎಸ್ ಸೈನ್ಯದ ಮಿಲಿಟರಿ ಜೈಲಾಗಿ ಪರಿವರ್ತಿಸಲಾಯಿತು. ಅನಂತರ 1934ರಲ್ಲಿ ಕಟ್ಟಡಗಳನ್ನು ಆಧುನೀಕರಿಸಿ ಭದ್ರತೆಯನ್ನು ಹೆಚ್ಚಿಸಿ ಮಾದಕ ವಸ್ತುಗಳನ್ನು ಇರಿಸಲು ಫೆಡರಲ್ ಬ್ಯೂರೋ ಆಫ್ ಪ್ರಿಸನ್ಸ್ ಬಳಸಿಕೊಂಡಿತು.

ಹೇಗಿತ್ತು?
ಮೂರು ಅಂತಸ್ತಿನ ಸೆಲ್‌ಹೌಸ್ ಆಗಿದ್ದ ಅಲ್ಕಾಟ್ರಾಜ್ ಜೈಲು ಯುಎಸ್‌ನಲ್ಲಿ ಅತ್ಯಂತ ಸುರಕ್ಷಿತ ಜೈಲಾಗಿತ್ತು. ಯಾಕೆಂದರೆ ಇದು ಭೌಗೋಳಿಕವಾಗಿ ಯುಎಸ್ ನಿಂದ ಪ್ರತ್ಯೇಕವಾಗಿದ್ದು, ಸುತ್ತ ಸಮುದ್ರ ವ್ಯಾಪಿಸಿತ್ತು. ಇದರ ತಂಪಾದ ನೀರು, ಸಾಗರದಲ್ಲಿನ ಬಲವಾದ ಅಲೆಗಳು ಮತ್ತು ಅದರಲ್ಲಿದ್ದ ಶಾರ್ಕ್ ಮೀನುಗಳಿಂದಾಗಿ ಈ ಜೈಲಿನಿಂದ ಕೈದಿಗಳು ತಪ್ಪಿಸಿಕೊಳ್ಳವುದು ಅಸಾಧ್ಯವಾಗಿತ್ತು.
ಜೈಲಿನ ಮುಖ್ಯ ಕಟ್ಟಡವು ಮೂರು ಮಹಡಿಗಳನ್ನು ಹೊಂದಿತ್ತು. ನಾಲ್ಕು ಸೆಲ್ ಬ್ಲಾಕ್‌ಗಳು, ವಾರ್ಡನ್ ಕಚೇರಿ, ಸಂದರ್ಶಕರ ಕೊಠಡಿ, ಗ್ರಂಥಾಲಯ ಮತ್ತು ಕ್ಷೌರಿಕ ಅಂಗಡಿಯನ್ನು ಒಳಗೊಂಡಿತ್ತು. ಅತ್ಯಂತ ಅಪಾಯಕಾರಿ ಕೈದಿಗಳನ್ನು ಡಿ-ಬ್ಲಾಕ್‌ನಲ್ಲಿ ಇರಿಸಲಾಗುತ್ತಿತ್ತು. ಕೊನೆಯ ಆರು ಸೆಲ್‌ಗಳನ್ನು ದಿ ಹೋಲ್ ಎಂದು ಕರೆಯಲಾಗುತ್ತಿತ್ತು.
ಜೈಲಿನ ಕಾರಿಡಾರ್‌ಗಳಿಗೆ ಬ್ರಾಡ್‌ವೇ ಮತ್ತು ಮಿಚಿಗನ್ ಅವೆನ್ಯೂದಂತಹ ಪ್ರಸಿದ್ಧ ಯುಎಸ್ ಬೀದಿಗಳ ಹೆಸರನ್ನುಇಡಲಾಗಿತ್ತು. 1934ರಲ್ಲಿ ಜೈಲು ಕಟ್ಟಡವನ್ನು ನವೀಕರಿಸಿದಾಗ ಅದರ ಕಬ್ಬಿಣದ ಮೆಟ್ಟಿಲುಗಳು, ಕ್ಷೌರಿಕ ಅಂಗಡಿಯ ಬಳಿಯ ಸೆಲ್ ಹೌಸ್ ಬಾಗಿಲುಗಳು ಮತ್ತು ಮೂಲತಃ ಬಂದೂಕುಗಳನ್ನು ಹಿಡಿದಿಡಲು ಬಳಸಲಾಗುತ್ತಿದ್ದ ಗ್ರಾನೈಟ್ ಬ್ಲಾಕ್‌ಗಳಂತಹ ನಿರ್ಮಾಣ ಸಾಮಗ್ರಿಗಳನ್ನು ವಾರ್ಫ್‌ನ ಗೋಡೆಗಳನ್ನು ನಿರ್ಮಿಸಲು ಮರುಬಳಕೆ ಮಾಡಲಾಯಿತು. ಉಪ್ಪು ನೀರು, ಗಾಳಿಯಿಂದ ಜೈಲಿನ ಗೋಡೆಗಳು ಸವೆಯಲು ಪ್ರಾರಂಭವಾದ ಬಳಿಕ ಅವುಗಳನ್ನು ಬದಲಾಯಿಸುವ ಮೊದಲು ಗೋಡೆಗಳನ್ನು ಬಲಪಡಿಸಲು ಹಳೆಯ ಜೈಲು ಕಂಬಿಗಳನ್ನೂ ಬಳಸಲಾಯಿತು.

ಇದನ್ನೂ ಓದಿ: Viral Video: ಅತ್ಯಾಚಾರದ ಬೆದರಿಕೆಯೊಡ್ಡಿದವನಿಗೆ ಪೊಲೀಸರ ಮುಂದೆಯೇ ಹಿಗ್ಗಾಮುಗ್ಗಾ ಥಳಿಸಿದ ಯುವತಿ; ವಿಡಿಯೊ ವೈರಲ್!
ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾದ ಅಪರಾಧಿಗಳನ್ನು ಅಲ್ಕಾಟ್ರಾಜ್ ಜೈಲಿನಲ್ಲಿ ಇರಿಸಲಾಗುತ್ತಿತ್ತು. ಇಲ್ಲಿ ಇರಿಸಲಾದ ಕೈದಿಗಳಲ್ಲಿ ಸ್ಕಾರ್ಫೇಸ್ ಎಂದು ಕರೆಯಲ್ಪಡುವ ಅಲ್ಫೋನ್ಸ್ ಎಐ ಕಾಪೋನ್, ಕಳ್ಳಸಾಗಣೆ ಮತ್ತು ಅಪಹರಣದಲ್ಲಿ ಭಾಗಿಯಾಗಿದ್ದ ಜಾರ್ಜ್ ಮೆಷಿನ್ ಗನ್ ಕೆಲ್ಲಿ, 1909 ರಲ್ಲಿ ನರಹತ್ಯೆಯ ಅಪರಾಧಿ ಅಲ್ಕಾಟ್ರಾಜ್‌ನ ಬರ್ಡ್‌ಮ್ಯಾನ್ ಎಂದು ಕರೆಯಲ್ಪಡುವ ರಾಬರ್ಟ್ ಫ್ರಾಂಕ್ಲಿನ್ ಸ್ಟ್ರೌಡ್ ಸೇರಿದ್ದಾರೆ. ರಾಬರ್ಟ್ ಫ್ರಾಂಕ್ಲಿನ್ ಬಳಿಕ ಜೈಲು ಸಿಬ್ಬಂದಿಯನ್ನೇ ಕೊಂದಿದ್ದನು. ಇತರ ಅಪರಾಧಿಗಳಲ್ಲಿ ಆಲ್ವಿನ್ ಕ್ರೀಪಿ ಕಾರ್ಪಿಸ್, ಆರ್ಥರ್ ಡಾಕ್ ಬಾರ್ಕರ್, ಹೆನ್ರಿ ಯಂಗ್ ಮತ್ತು ಬಂಪಿ ಜಾನ್ಸನ್ ಸೇರಿದ್ದಾರೆ.
ಜೈಲಿನಲ್ಲಿ ಹೆಚ್ಚಿದ ನಿರ್ವಹಣಾ ವೆಚ್ಚದಿಂದಾಗಿ ಅಲ್ಕಾಟ್ರಾಜ್ ಜೈಲನ್ನು 1963ರಲ್ಲಿ ಮುಚ್ಚಲಾಯಿತು. ಬಳಿಕ ಯುಎಸ್ ಸರ್ಕಾರವು 1972ರಲ್ಲಿ ಈ ದ್ವೀಪವನ್ನು ರಾಷ್ಟ್ರೀಯ ಉದ್ಯಾನವನ ಸೇವೆಗೆ ಹಸ್ತಾಂತರಿಸಿತು. ಬಳಿಕ ಇದು ಗೋಲ್ಡನ್ ಗೇಟ್ ರಾಷ್ಟ್ರೀಯ ಮನರಂಜನಾ ಪ್ರದೇಶವಾಗಿ ಗುರುತಿಸಲ್ಪಟ್ಟಿತ್ತು.
ಜೈಲು ಕಟ್ಟಡಗಳನ್ನು ಸಂರಕ್ಷಿಸಿ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದ್ದು, ಸಂದರ್ಶಕರು ಇಲ್ಲಿನ ಜೈಲು ಕೋಣೆಗಳಲ್ಲಿ ಸುತ್ತಾಡಬಹುದಾಗಿತ್ತು. ಇಲ್ಲಿಂದ ತಪ್ಪಿಸಿಕೊಳ್ಳುವ ಮಾರ್ಗಗಳನ್ನು ನೋಡಬಹುದಿತ್ತು. ಆಡಿಯೋ ಮಾರ್ಗದರ್ಶಿಗಳು ಮತ್ತು ಮಾಹಿತಿ ಪ್ರದರ್ಶನಗಳಿಂದ ಮನರಂಜನೆಯನ್ನು ಪಡೆಯಬಹುದಿತ್ತು.