Preity Zinta: ಬಿಜೆಪಿ ಸೇರ್ತಾರಾ ಬಾಲಿವುಡ್ ಬೆಡಗಿ ಪ್ರೀತಿ ಜಿಂಟಾ?
ಸೋಮವಾರ ಬಿಜೆಪಿಗೆ ಸೇರುತ್ತಿದ್ದೀರಾ? ಎಂಬ ಅಭಿಮಾನಿಯ ಪ್ರಶ್ನೆಗೆ ಪ್ರೀತಿ ಜಿಂಟಾ ಪ್ರತಿಕ್ರಿಯಿಸಿದ್ದರು. “ಸಾಮಾಜಿಕ ಜಾಲತಾಣಗಳಲ್ಲಿ ಜನರ ಸಮಸ್ಯೆ ಏನು ಎಂದರೆ, ಎಲ್ಲರೂ ಇತ್ತೀಚೆಗೆ ತೀರ್ಪುಗಾರರಾಗಿದ್ದಾರೆ. ನಾನು ಹಿಂದೆಯೂ ಹೇಳಿದಂತೆ, ದೇವಾಲಯಕ್ಕೆ ಅಥವಾ ಮಹಾಕುಂಭಕ್ಕೆ ಹೋಗುವುದು, ನಾನು ಯಾರೆಂಬುದರ ಬಗ್ಗೆ ಹೆಮ್ಮೆ ಪಡುವುದು ಎಂದರೆ ನಾನು ರಾಜಕೀಯಕ್ಕೆ ಸೇರುತ್ತಿದ್ದೇನೆ ಅಥವಾ ಬಿಜೆಪಿಗೆ ಸೇರುತ್ತಿದ್ದೇನೆ ಎಂದಲ್ಲ ಅಂತಾ ಹೇಳಿದ್ದರು. ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.


ಮುಂಬೈ: ಬಾಲಿವುಡ್ ನಟಿ (Bollywood Actress) ಪ್ರೀತಿ ಜಿಂಟಾ (Preity Zinta) ಅವರನ್ನು ಇತ್ತೀಚೆಗೆ ಒಬ್ಬ ಅಭಿಮಾನಿ, ಬಿಜೆಪಿಗೆ (BJP) ಸೇರುತ್ತೀರಾ ಎಂದು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರೀತಿ ಜಿಂಟಾ, ತನಗೆ ರಾಜಕೀಯ ಸೇರುವ ಯಾವುದೇ ಪ್ಲ್ಯಾನ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಹಾಕುಂಭಕ್ಕೆ (Maha Kumbh) ಭೇಟಿ ನೀಡುವುದು ಅಥವಾ ತನ್ನ ಗುರುತಿನ ಬಗ್ಗೆ ಹೆಮ್ಮೆ ಪಡುವುದನ್ನು ರಾಜಕೀಯಕ್ಕೆ ಸೇರುವ ಅಥವಾ ಬಿಜೆಪಿಗೆ ಸೇರುವ ಸಂಕೇತವೆಂದು ತಪ್ಪಾಗಿ ಅರ್ಥೈಸಬಾರದು ಎಂದು ಕಿಡಿಕಾರಿದ್ದರು. ಆದರೆ, ಈಗ ತಮ್ಮ ‘ತೀಕ್ಷ್ಣ’ ಪ್ರತಿಕ್ರಿಯೆಗಾಗಿ ಅಭಿಮಾನಿಗೆ ಕ್ಷಮೆಯಾಚಿಸಿದ್ದಾರೆ. ತಮ್ಮ ಪ್ರತಿಯೊಂದು ಆಯ್ಕೆಯನ್ನೂ ರಾಜಕೀಯ ದೃಷ್ಟಿಕೋನದಿಂದ ನೋಡುತ್ತಿರುವುದರಿಮದ ಬೇಸತ್ತಿದ್ದೇನೆ ಎಂದು ನಟಿ ಪ್ರೀತಿ ಜಿಂಟಾ ಬೇಸರ ವ್ಯಕ್ತಪಡಿಸಿದ್ದಾರೆ.
ತಮ್ಮ ಇತ್ತೀಚಿನ ಟ್ವೀಟ್‌ನಲ್ಲಿ, ಪ್ರೀತಿ ಅಭಿಮಾನಿಗೆ ಕ್ಷಮೆಯಾಚಿಸಿ ಬರೆದಿದ್ದಾರೆ, “ನನ್ನ ಪ್ರತಿಕ್ರಿಯೆ ತೀಕ್ಷ್ಣವಾಗಿತ್ತೆಂದು ಕ್ಷಮೆ ಕೋರುತ್ತೇನೆ! ಈ ಪ್ರಶ್ನೆಯಿಂದ ನನಗೆ PTSD ಉಂಟಾಗಿದೆ. ತಾಯಿಯಾದ ನಂತರ ಮತ್ತು ವಿದೇಶದಲ್ಲಿ ವಾಸಿಸುತ್ತಿರುವಾಗ, ನನ್ನ ಮಕ್ಕಳು ತಾವು ಅರ್ಧ ಭಾರತೀಯರು ಎಂಬುದನ್ನು ಮರೆಯದಂತೆ ಎಚ್ಚರಿಸಲು ಬಯಸುತ್ತೇನೆ. ನನ್ನ ಪತಿ ವಿದೇಶದವರಾದರೂ, ನಾವು ನಮ್ಮ ಮಕ್ಕಳನ್ನು ಹಿಂದೂಗಳಾಗಿ ಬೆಳೆಸುತ್ತಿದ್ದೇವೆ. ದುರದೃಷ್ಟವಶಾತ್, ನಾನು ನಿರಂತರ ಟೀಕೆಗೆ ಒಳಗಾಗುತ್ತಿದ್ದೇನೆ. ನನ್ನ ಆಯ್ಕೆಗಳನ್ನು ರಾಜಕೀಯಗೊಳಿಸುವ ಮೂಲಕ ಸರಳ ಸಂತೋಷವನ್ನು ಕಸಿದುಕೊಳ್ಳಲಾಗುತ್ತಿದೆ. ನಾನು ಯಾರು ಎಂಬುದನ್ನು ಮತ್ತು ನನ್ನ ಮಕ್ಕಳಿಗೆ ಅವರ ಮೂಲ ಮತ್ತು ಧರ್ಮದ ಬಗ್ಗೆ ಕಲಿಸುವ ಹೆಮ್ಮೆಯ ಬಗ್ಗೆ ನಿರಂತರವಾಗಿ ಉತ್ತರಿಸಬೇಕಾಗುತ್ತದೆ. ಆದದ್ದಾಯಿತು ಮುಂದೇ ಸಾಗೋಣ” ಎಂದು ವಿವರಿಸಿದ್ದಾರೆ.
ಸೋಮವಾರ ಬಿಜೆಪಿಗೆ ಸೇರುತ್ತಿದ್ದೀರಾ? ಎಂಬ ಅಭಿಮಾನಿಯ ಪ್ರಶ್ನೆಗೆ ಪ್ರೀತಿ ಜಿಂಟಾ ಪ್ರತಿಕ್ರಿಯಿಸಿದ್ದರು. “ಸಾಮಾಜಿಕ ಜಾಲತಾಣಗಳಲ್ಲಿ ಜನರ ಸಮಸ್ಯೆ ಏನು ಎಂದರೆ, ಎಲ್ಲರೂ ಇತ್ತೀಚೆಗೆ ತೀರ್ಪುಗಾರರಾಗಿದ್ದಾರೆ. ನಾನು ಹಿಂದೆಯೂ ಹೇಳಿದಂತೆ, ದೇವಾಲಯಕ್ಕೆ ಅಥವಾ ಮಹಾಕುಂಭಕ್ಕೆ ಹೋಗುವುದು, ನಾನು ಯಾರೆಂಬುದರ ಬಗ್ಗೆ ಹೆಮ್ಮೆ ಪಡುವುದು ಎಂದರೆ ನಾನು ರಾಜಕೀಯಕ್ಕೆ ಸೇರುತ್ತಿದ್ದೇನೆ ಅಥವಾ ಬಿಜೆಪಿಗೆ ಸೇರುತ್ತಿದ್ದೇನೆ ಎಂದಲ್ಲ. ಭಾರತದ ಹೊರಗೆ ವಾಸಿಸುವುದರಿಂದ ನನ್ನ ದೇಶದ ನಿಜವಾದ ಮೌಲ್ಯವನ್ನು ಅರಿತಿದ್ದೇನೆ ಮತ್ತು ಬೇರೆಯವರಂತೆ ನಾನು ಈಗ ಭಾರತ ಮತ್ತು ಭಾರತೀಯತೆಯನ್ನು ಇನ್ನಷ್ಟು ಪ್ರಶಂಸಿಸುತ್ತೇನೆ” ಎಂದು ಅವರು ಬರೆದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಾಮಾಜಿಕ ಜಾಲತಾಣ ಬಳಕೆದಾರ, ತಾನು ಕೇವಲ ಕುತೂಹಲದಿಂದ ಪ್ರಶ್ನೆ ಕೇಳಿದ್ದೇನೆ, ತೀರ್ಪುಗಾರನಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು. “ಆದರೆ ನಿಮ್ಮ ಉತ್ತರ ನನ್ನ ಪ್ರಶ್ನೆಯಿಂದ ನೀವು ಕೆರಳಿದಂತೆ ತೋರಿತು” ಎಂದು ಅಭಿಮಾನಿ ಬರೆದಿದ್ದರು. ಈಗ ಪ್ರೀತಿ ತಮ್ಮ ತೀಕ್ಷ್ಣ ಪ್ರತಿಕ್ರಿಯೆಗಾಗಿ ಕ್ಷಮೆಯಾಚಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Paresh Rawal: ನಟ ಅಕ್ಷಯ್ ಗೆಳೆಯನಲ್ಲ ಎಂದ ಬಾಲಿವುಡ್ ಹಿರಿಯ ನಟ ಪರೇಶ್ ರಾವಲ್; ಕಾರಣ ಏನು?
ಪ್ರೀತಿ ಜಿಂಟಾ 2016ರಲ್ಲಿ ಜೀನ್ ಗುಡ್‌ಎನಫ್ ಅವರನ್ನು ವಿವಾಹವಾದರು. ಈ ದಂಪತಿ 2021ರ ನವೆಂಬರ್ 11ರಂದು ಸರೋಗಸಿ ಮೂಲಕ ಅವಳಿ ಮಕ್ಕಳಾದ ಗಿಯಾ ಮತ್ತು ಜೈ ಎಂಬವರ ತಂದೆ-ತಾಯಿಯಾಗಿದ್ದಾರೆ. ಪ್ರೀತಿಜಿಂಟಾ 7 ವರ್ಷಗಳ ಬ್ರೇಕ್‌ನ ನಂತರ ಬಿಗ್ ಸ್ಕ್ರೀನ್‌ಗೆ ಮರಳಲು ಸಿದ್ಧರಾಗಿದ್ದಾರೆ. ಅವರು ರಾಜಕುಮಾರ ಸಂತೋಷಿ ಅವರ ‘ಲಾಹೋರ್ 1947’ ಚಿತ್ರದಲ್ಲಿ ಸನ್ನಿ ಡಿಯೋಲ್ ಜೊತೆಗೆ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಶಬಾನಾ ಆಜ್ಮಿ ಮತ್ತು ಅಲಿ ಫಜಲ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಆಮಿರ್ ಖಾನ್ ನಿರ್ಮಿಸಿದ್ದಾರೆ.