ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

New Pope: ಕ್ಯಾಥೋಲಿಕ್ ಚರ್ಚ್ ಗೆ ಆಯ್ಕೆಯಾದ ಮೊದಲ ಅಮೆರಿಕನ್ ಪೋಪ್ ರಾಬರ್ಟ್ ಪ್ರೇವೋಸ್ಟ್

ಪೋಪ್ ಫ್ರಾನ್ಸಿಸ್‌ ಅವರ ನಿಧನದ ಬಳಿಕ ತೆರವಾಗಿದ್ದ ವಿಶ್ವದ ಅತ್ಯುನ್ನತ ಸ್ಥಾನಕ್ಕೆ ರಾಬರ್ಟ್ ಪ್ರೇವೋಸ್ಟ್ (Cardinal Robert Prevost) ಅವರನ್ನು ಆಯ್ಕೆ ಮಾಡಲಾಗಿದೆ. ಕ್ಯಾಥೋಲಿಕ್ ಚರ್ಚ್ ನ 2,000 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಅಮೆರಿಕನ್ ಪೋಪ್ ರಾಬರ್ಟ್ ಪ್ರೇವೋಸ್ಟ್ ಆಯ್ಕೆಯಾಗಿದ್ದಾರೆ. ಈವರೆಗೆ ಕ್ಯಾಥೋಲಿಕ್ ಚರ್ಚ್ ಅಧಿಕಾರ ಪಡೆದ ಪೋಪ್‌ಗಳಲ್ಲಿ ಇಟಲಿಯನ್ನರೇ ಹೆಚ್ಚು.

ಕ್ಯಾಥೋಲಿಕ್ ಚರ್ಚ್ ಅಧಿಕಾರ ಪಡೆದ ಪೋಪ್ ಗಳಲ್ಲಿ ಇಟಲಿಯನ್ನರೇ ಹೆಚ್ಚು

ವ್ಯಾಟಿಕನ್‌ ಸಿಟಿ: ಪೋಪ್ ಫ್ರಾನ್ಸಿಸ್‌ (Pope Francis) ನಿಧನದ ಬಳಿಕ ಮುಂದಿನ ಪೋಪ್ ಯಾರಾಗುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿತ್ತು. ಆದರೆ ಇದೀಗ ಈ ಎಲ್ಲ ನಿರೀಕ್ಷೆಗಳಿಗೆ ತೆರೆ ಬಿದ್ದಿದೆ. ಕ್ಯಾಥೋಲಿಕ್ ಚರ್ಚ್ (Catholic Church Popes) ನ 2,000 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಅಮೆರಿಕನ್ ಪೋಪ್ (American Pop) ಕಾರ್ಡಿನಲ್ ರಾಬರ್ಟ್ ಪ್ರೆವೋಸ್ಟ್ ( Cardinal Robert Prevost) ಅವರನ್ನು ಅಯ್ಜೆ ಮಾಡಲಾಗಿದೆ. ಅತೀ ಹೆಚ್ಚು ಪೋಪ್ ಗಳನ್ನು ಹೊಂದಿರುವ ದಾಖಲೆ ಇಟಲಿಯದ್ದು. ಕ್ಯಾಥೋಲಿಕ್ ಚರ್ಚ್ ಗೆ ಆಯ್ಕೆಯಾದ ಪೋಪ್ ಗಳಲ್ಲಿ 190ಕ್ಕೂ ಹೆಚ್ಚು ಪೋಪ್‌ಗಳು ಇಟಾಲಿಯನ್ ಆಗಿದ್ದರು.

ಚಿಕಾಗೋದಲ್ಲಿ ಜನಿಸಿರುವ ರಾಬರ್ಟ್ ಪ್ರೆವೋಸ್ಟ್ ಅವರನ್ನು ಪೋಪ್ ಲಿಯೋ ೧೪ ಆಗಿ ನೇಮಕ ಮಾಡಿರುವುದು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಸಂಭ್ರಮವನ್ನು ಹೆಚ್ಚಿಸಿದೆ. ಅವರು ಮೊದಲ ಬಾರಿಗೆ ಸೇಂಟ್ ಪೀಟರ್ಸ್ ಬೆಸಿಲಿಕಾದ ಬಾಲ್ಕನಿಯಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಲು ಬಂದಾಗ ಸಾವಿರಾರು ಮಂದಿ ಕುತೂಹಲದಿಂದ ಚೌಕದಲ್ಲಿ ನಿಂತು ನೋಡುತ್ತಿದ್ದರು. ಎಲ್ಲರ ಕಣ್ಣುಗಳು ಹೊಸದಾಗಿ ಆಯ್ಕೆಯಾದ ಪೋಪ್ ಮೇಲೆ ನೆಟ್ಟಿತ್ತು.

ನೆರೆದಿದ್ದ ಜನರಲ್ಲಿ ಅನೇಕರು ಅವರ ಬಗ್ಗೆ ಎಂದಿಗೂ ಕೇಳಿರಲಿಲ್ಲ. ಹೀಗಾಗಿ ಎಲ್ಲರೂ ಕುತೂಹಲ, ಗೊಂದಲದಿಂದ ಅವರ ಬಗ್ಗೆ ಒಬ್ಬರು ಇನ್ನೊಬ್ಬರ ಬಳಿ ವಿಚಾರಿಸತೊಡಗಿದರು. ಕೆಲವರು ಹೆಚ್ಚು ನಿಖರ ಮಾಹಿತಿಗಾಗಿ ತಮ್ಮ ಫೋನ್‌ಗಳಲ್ಲಿ ಜಾಲಾಡತೊಡಗಿದರು.

ಬಿಳಿ ಕೂದಲಿನ ತಲೆ ಮೇಲೆ ಸಣ್ಣ ಟೋಪಿ ಮತ್ತು ದಂತದ ಕ್ಯಾಸಕ್ ಹೊಂದಿರುವ ಫ್ಯೂಷಿಯಾ ರೇಷ್ಮೆ ಕೇಪ್ ನೊಂದಿದೆ 69 ವರ್ಷದ ಆಗಸ್ಟಿನಿಯನ್ ಬಾಲ್ಕನಿಯಲ್ಲಿ ಕಾಣಿಸಿಕೊಂಡಾಗ ಒಂದು ಕ್ಷಣ ಎಲ್ಲರೂ ಮೌನವಾದರು. ಯಾರು ಈ ಅಮೆರಿಕನ್ ಎಂದು ಪ್ರಶ್ನಿಸತೊಡಗಿದರು.

robert1

ನೂತನ ಪೋಪ್ ಲಿಯೋ ಜನರನ್ನು ಉದ್ದೇಶಿಸಿ ಮಾತನಾಡತೊಡಗಿದರು. ಈ ವೇಳೆ ಅವರು ಪರಸ್ಪರರ ಸಂಬಂಧಗಳನ್ನು ಬಲಪಡಿಸುವುದು, ಎಲ್ಲರೂ ಒಟ್ಟಿಗೆ ಮುನ್ನಡೆಯುವುದು, ಮಿಷನರಿ ಚರ್ಚ್‌ನ ಭಾಗವಾಗಿರುವುದು, ದೇವರ ಕೆಲಸವನ್ನುಶಾಂತಿ, ವಿನಮ್ರ ಮತ್ತು ಹೆಚ್ಚು ಪರಿಶ್ರಮದಿಂದ ಮಾಡುವುದರ ಕುರಿತು ಮಾತನಾಡಿದರು.

ಮೊದಲು ಇಟಾಲಿಯನ್ ಬಳಿಕ ಸ್ಪ್ಯಾನಿಷ್ ಭಾಷೆಯಲ್ಲಿಯೂ ಅವರು ಮಾತನಾಡಿದರು. ಅವರು ಹಲವು ವರ್ಷಗಳ ಕಾಲ ಪೆರುವಿನಲ್ಲಿ ಮಿಷನರಿಯಾಗಿದ್ದಾಗ ಈ ಭಾಷೆಗಳನ್ನು ಕಲಿತಿದ್ದರು. ನೂತನ ಪೋಪ್ ಲಿಯೋ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿದ ಫಿಲಡೆಲ್ಫಿಯಾದ ಕ್ಯಾಥಿ ಹೆವಿಟ್, ಇವರು ಇಡೀ ಜಗತ್ತನ್ನು ಪ್ರತಿನಿಧಿಸಲು ಅಮೆರಿಕದಿಂದ ಬಂದವರು ಎಂದು ಕೇಳಿ ಸಂತೋಷವಾಗಿದೆ. ಇದು ಸಂಪೂರ್ಣ ಆಶ್ಚರ್ಯ ಮತ್ತು ಅದ್ಭುತ.. ನನ್ನಲ್ಲಿ ಪದಗಳಿಲ್ಲ, ಇದು ಅದ್ಭುತವಾಗಿದೆ ಎಂದು ತಮ್ಮ ಹದಿಹರೆಯದ ಮಗನ ಜೊತೆಗೆ ಸಣ್ಣ ಅಮೆರಿಕನ್ ಧ್ವಜವನ್ನು ಬೀಸುತ್ತಾ ಹೇಳಿದರು.

ವಿಶ್ವದ 1.4 ಬಿಲಿಯನ್ ಕ್ಯಾಥೊಲಿಕರ ನಾಯಕರಾಗಿ ಅಮೆರಿಕನ್ ಕಾರ್ಡಿನಲ್ ಆಯ್ಕೆಯಾಗಿರುವುದು ಇದೇ ಮೊದಲು. 20ನೇ ಶತಮಾನದ ಆರಂಭದಿಂದಲೂ ಪೋಪ್ ಹುದ್ದೆಯನ್ನು ಹೆಚ್ಚಾಗಿ ಯುರೋಪಿಯನ್ ನಾಯಕತ್ವದಿಂದ ಅದರಲ್ಲೂ ವಿಶೇಷವಾಗಿ ಇಟಾಲಿಯನ್ ನಾಯಕತ್ವದಿಂದ ಆಯ್ಕೆ ಮಾಡಲಾಗುತ್ತಿತ್ತು. 1978ರ ಬಳಿಕ ಬೇರೆ ದೇಶದವರನ್ನು ಆಯ್ಕೆ ಮಾಡಿ ಈ ಸಂಪ್ರದಾಯವನ್ನು ಮುರಿಯಲಾಗಿದೆ. .

ಇದನ್ನೂ ಓದಿ: Robert Francis Prevost: ನೂತನ ಪೋಪ್ ಆಗಿ ರಾಬರ್ಟ್ ಪ್ರೇವೋಸ್ಟ್ ಆಯ್ಕೆ

1900 ರಿಂದ ಈವರೆಗೆ ಸಂಪೂರ್ಣವಾಗಿ ಅಥವಾ ಭಾಗಶಃ ಸೇವೆ ಸಲ್ಲಿಸಿದ 11 ಪೋಪ್‌ಗಳಿದ್ದಾರೆ. ಅವರಲ್ಲಿ 8 ಮಂದಿ ಇಟಾಲಿಯನ್ನರು.

ಕ್ಯಾಥೋಲಿಕ್ ಚರ್ಚ್ ನ ಮುಖ್ಯಸ್ಥರಾಗಿ 1878 ರಿಂದ 1903ರವರೆಗೆ ಇಟಲಿಯ ಲಿಯೋ XIII, 1903 ರಿಂದ 1914ರವರೆಗೆ ಇಟಲಿಯ ಪಿಯಸ್ X , 1914 ರಿಂದ 1922ರವರೆಗೆ ಇಟಲಿಯ ಬೆನೆಡಿಕ್ಟ್ XV, 1922 ರಿಂದ 1939ರಿಂದ ಇಟಲಿಯ ಪಿಯಸ್ XI,1939 ರಿಂದ 1958ರಿಂದ ಇಟಲಿಯ ಪಿಯಸ್ XII, 1958 ರಿಂದ 1963ರವರೆಗೆ ಇಟಲಿಯ ಜಾನ್ XXIII, 1963 ರಿಂದ 1978ರವರೆಗೆ ಇಟಲಿಯ ಪಾಲ್ VI , 1978 ರಿಂದ 1978ರವರೆಗೆ ಇಟಲಿಯ ಜಾನ್ ಪಾಲ್ I, 1978 ರಿಂದ 2005ರವರೆಗೆ ಪೋಲೆಂಡ್ ನ ಜಾನ್ ಪಾಲ್ II, 2005 ರಿಂದ 2013ರವರೆಗೆ ಜರ್ಮನ್ ನ ಬೆನೆಡಿಕ್ಟ್ XVI, 2013 ರಿಂದ 2025 ಅರ್ಜೆಂಟೀನಾದ ಫ್ರಾನ್ಸಿಸ್, 2025ರ ಮೇ 9ರಂದು ಲಿಯೋ XIV ಆಯ್ಕೆಯಾಗಿದ್ದಾರೆ. ಇಲ್ಲಿ 190ಕ್ಕೂ ಹೆಚ್ಚು ಪೋಪ್‌ಗಳು ಇಟಾಲಿಯನ್ ಆಗಿದ್ದು, 20ನೇ ಶತಮಾನದವರೆಗೆ ಇಲ್ಲಿ ರೋಮನ್ ಪೋಪ್‌ಗಳು ಅಧಿಕಾರ ವಹಿಸಿಕೊಂಡಿದ್ದರು.