Sweden Shooting: ಸ್ವೀಡನ್‌ನಲ್ಲಿ ಭೀಕರ ಶೂಟ್‌ಔಟ್; 3 ಮಂದಿ ಬಲಿ?
Mass Firing: ಸ್ವೀಡನ್ ರಾಜಧಾನಿ ಸ್ಟಾಕ್‌ಹೋಮ್‌ನ 60 ಕಿ.ಮೀ. ದೂರದಲ್ಲಿರುವ ಉಪ್ಸಲಾದಲ್ಲಿ ಮಂಗಳವಾರ (ಏ. 29) ಗುಂಡಿನ ದಾಳಿ ನಡೆದಿದ್ದು, ಮೂವರು ಮೃತಪಟ್ಟು ಹಲವು ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.


ಸ್ಟಾಕ್‌ಹೋಮ್: ಸ್ವೀಡನ್ ರಾಜಧಾನಿ ಸ್ಟಾಕ್‌ಹೋಮ್‌ನ 60 ಕಿ.ಮೀ. ದೂರದಲ್ಲಿರುವ ಉಪ್ಸಲಾದಲ್ಲಿ ಮಂಗಳವಾರ (ಏ. 29) ಗುಂಡಿನ ದಾಳಿ ನಡೆದಿದ್ದು, ಮೂವರು ಮೃತಪಟ್ಟು ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ (Mass Firing). ಸ್ಥಳೀಯ ಮಾಧ್ಯಮಗಳು ಮತ್ತು ಸ್ವೀಡಿಷ್ ಪೊಲೀಸರ ಪ್ರಕಾರ, ಈ ದಾಳಿಯು ಪಟ್ಟಣದ ಮಧ್ಯ ಭಾಗದಲ್ಲಿ ನಡೆದಿದೆ (Sweden Shooting). ಘಟನೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ವರದಿಯೊಂದು ವಿವರಿಸಿದೆ.
ʼʼಉಪ್ಸಾಲಾದಲ್ಲಿ ದ್ವಿಚಕ್ರದಲ್ಲಿ ಬಂದ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿದ ಬಗ್ಗೆ ಪೊಲೀಸರಿಗೆ ದೂರು ಬಂದ ಹಿನ್ನೆಲೆಯಲ್ಲಿ ಅವರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆʼʼ ಎಂದು ಮೂಲಗಳು ತಿಳಿಸಿವೆ. ಈ ಘಟನೆಯಿಂದ ದೇಶಾದ್ಯಂತ ಭಯದ ವಾತಾವರಣ ಮೂಡಿದ್ದು, ತನಿಖೆ ನಡೆಯುತ್ತಿದೆ. ಸ್ವೀಡಿಷ್ ಪಬ್ಲಿಕ್ ಟೆಲಿವಿಷನ್ (SVT) ಗುಂಡಿನ ದಾಳಿಯನ್ನು ದೃಢಪಡಿಸಿದ್ದು, ಶಂಕಿತ ಬಂದೂಕುಧಾರಿ ಸ್ಕೂಟರ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಿದೆ.
Sweden is at war with criminal gangs, but the only ones fighting are the gangs. Politicians have blinders on and pretend nothing is happening.
— Erik Moden (@moden_erik) April 29, 2025
BREAKING 3 DEAD SHOOTING Uppsala SWEDEN
Three people are dead following a shooting in Uppsala.The police have initiated a so-called… pic.twitter.com/qzMLjVOnVd
ಈ ಸುದ್ದಿಯನ್ನೂ ಓದಿ: Mysore Family Killed: ಅಮೆರಿಕದಲ್ಲಿ ಪತ್ನಿ ಪುತ್ರನನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮೈಸೂರು ಉದ್ಯಮಿ
ಕೆಲವು ದಿನಗಳ ಹಿಂದೆಯಷ್ಟೇ ಸ್ವೀಡನ್‌ನಲ್ಲಿ ಗುಂಡಿನ ದಾಳಿ ನಡೆದಿತ್ತು. ಫೆಬ್ರವರಿಯಲ್ಲಿ ಸ್ವೀಡನ್‌ನ ಒರೆಬ್ರೊದಲ್ಲಿರುವ ಶಾಲಾ ಕ್ಯಾಂಪಸ್‌ನಲ್ಲಿ ಗುಂಡಿನ ದಾಳಿ ನಡೆದು ಸುಮಾರು 10 ಜನರು ಸಾವನ್ನಪ್ಪಿದ್ದರು. ಈ ಘಟನೆ ಮರೆಯಾಗುವ ಮುನ್ನ ಅಂತಹದ್ದೇ ಮತ್ತೊಂಡು ಘಟನೆ ನಡೆದಿದೆ.
ಈ ಘಟನೆಯನ್ನು ಸ್ವೀಡನ್‌ನ ಇತಿಹಾಸದಲ್ಲಿಯೇ ಅತ್ಯಂತ ಭೀಕರ ಗುಂಡಿನ ದಾಳಿ ಎಂದು ಪ್ರಧಾನಿ ಉಲ್ಫ್ ಕ್ರಿಸ್ಟರ್‌ಸನ್ ಬಣ್ಣಿಸಿದ್ದರು. ಈ ದಾಳಿಯು ಸ್ಟಾಕ್‌ಹೋಮ್‌ನ 200 ಕಿ.ಮೀ. ದೂರದಲ್ಲಿರುವ ರಿಸ್‌ಬರ್ಗ್ಸ್‌ಕಾ ಶಾಲೆಯಲ್ಲಿ ನಡೆದಿತ್ತು. ದಾಳಿಕೋರ ಒಬ್ಬಂಟಿಯಾಗಿಯೇ ಕೃತ್ಯ ಎಸಗಿದ್ದಾನೆ ಎಂದು ಆ ಬಳಿಕ ಪೊಲೀಸರು ತಿಳಿಸಿದ್ದರು. ಘಟನೆಯಲ್ಲಿ ಅವನೂ ಹತನಾಗಿದ್ದ.