ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vikram Misri: ಪಾಕಿಸ್ತಾನ ಯಾವುದೇ ಅಣ್ವಸ್ತ್ರ ದಾಳಿಗೆ ಸಜ್ಜಾಗಿರಲಿಲ್ಲ; ವಿದೇಶಾಂಗ ಕಾರ್ಯದರ್ಶಿ ಮಾಹಿತಿ

Vikram Misri: ಭಾರತ-ಪಾಕಿಸ್ತಾನ ನಡುವಿ ಸಂಘರ್ಷದ ಸಂದರ್ಭದಲ್ಲಿ ಇಸ್ಲಾಮಾಬಾದ್‌ನಿಂದ ಯಾವುದೇ 'ಪರಮಾಣು ಸಂಕೇತ' ಇರಲಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಗೆ ಸೋಮವಾರ ಸಂಜೆ ತಿಳಿಸಿದ್ದಾರೆ. ಸಂಘರ್ಷವು "ಸಾಂಪ್ರದಾಯಿಕ"ವಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು. ಪಾಕಿಸ್ತಾನವು ಚೀನಾ ನಿರ್ಮಿತ HQ-9 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಬಳಸಿದ್ದರೂ, "ನಾವು ಅವರ ವಾಯುನೆಲೆಗಳನ್ನು ತೀವ್ರವಾಗಿ ಗುರಿಯಾಗಿಸಿದ್ದೇವೆ," ಎಂದು ಮಿಸ್ರಿ ಒತ್ತಿ ಹೇಳಿದರು. ರಾಷ್ಟ್ರೀಯ ಭದ್ರತೆಯ ಕಾರಣಗಳಿಂದ ಭಾರತದ ಯುದ್ಧ ವಿಮಾನಗಳ ಧ್ವಂಸದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಪರಮಾಣು ದಾಳಿ ಬಗ್ಗೆ ಪಾಕಿಸ್ತಾನ ಯೋಚಿಸಿರಲಿಲ್ಲ...!

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ

Profile Sushmitha Jain May 20, 2025 12:01 PM

ನವದೆಹಲಿ: ಈ ತಿಂಗಳ ಆರಂಭದಲ್ಲಿ ನಡೆದ ಭಾರತ-ಪಾಕಿಸ್ತಾನ (Pakistan) ನಡುವಿ ಸಂಘರ್ಷದ ಸಂದರ್ಭದಲ್ಲಿ ಇಸ್ಲಾಮಾಬಾದ್‌ನಿಂದ (Islamabad) ಯಾವುದೇ 'ಪರಮಾಣು ಸಂಕೇತ' ಇರಲಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ (Foreign Secretary) ವಿಕ್ರಮ್ ಮಿಸ್ರಿ (Vikram Misri ) ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸ್ಥಾಯಿ ಸಮಿತಿಗೆ ಸೋಮವಾರ ಸಂಜೆ ತಿಳಿಸಿದ್ದಾರೆ. ಸಂಘರ್ಷವು "ಸಾಂಪ್ರದಾಯಿಕ"ವಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು. ಪಾಕಿಸ್ತಾನವು ಚೀನಾ ನಿರ್ಮಿತ HQ-9 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಬಳಸಿದ್ದರೂ, "ನಾವು ಅವರ ವಾಯುನೆಲೆಗಳನ್ನು ತೀವ್ರವಾಗಿ ಗುರಿಯಾಗಿಸಿದ್ದೇವೆ," ಎಂದು ಮಿಸ್ರಿ ಒತ್ತಿ ಹೇಳಿದರು. ರಾಷ್ಟ್ರೀಯ ಭದ್ರತೆಯ ಕಾರಣಗಳಿಂದ ಭಾರತದ ಯುದ್ಧ ವಿಮಾನಗಳ ಧ್ವಂಸದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಪಾಕಿಸ್ತಾನವು ಐದು ಭಾರತೀಯ ಯುದ್ಧ ವಿಮಾನಗಳನ್ನು ಧ್ವಂಸಗೊಳಿಸಿತು ಎಂದು ವರದಿಯಾಗಿತ್ತು.

ಸಂಘರ್ಷದ ವೇಳೆ ಪರಮಾಣು ಸೌಲಭ್ಯಗಳು ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ಗುರಿಯಾಗಬಹುದೆಂಬ ಕಳವಳ ವ್ಯಕ್ತವಾಗಿತ್ತು. ಪಾಕಿಸ್ತಾನವು ಭಾರತವನ್ನು ಆಕ್ರಮಣಕಾರಿಯೆಂದು ಚಿತ್ರಿಸಲು ಮತ್ತು ಭಾರತೀಯ ಸೇನೆಯನ್ನು ಒತ್ತಡಕ್ಕೆ ಸಿಲುಕಿಸಲು ಈ ಕಳವಳಗಳನ್ನು ಬಳಸಿಕೊಂಡಿತು. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ "ಪರಮಾಣು ಬೆದರಿಕೆಗೆ ಭಾರತ ಬಗ್ಗುವುದಿಲ್ಲ" ಎಂದು ಸ್ಪಷ್ಟವಾಗಿ ತಿರಸ್ಕರಿಸಿದರು. "ಯಾವುದೇ ಭಯೋತ್ಪಾದಕ ಆಶ್ರಯ ಕೇಂದ್ರವನ್ನು ನಿಖರವಾಗಿ ಮತ್ತು ನಿರ್ಣಾಯಕವಾಗಿ ಧ್ವಂಸಗೊಳಿಸಲಾಗುವುದು" ಎಂದು ಘೋಷಿಸಿದರು. ಭಾರತೀಯ ವಾಯುಸೇನೆಯು ಪಾಕಿಸ್ತಾನದ ಕಿರಾನಾ ಬೆಟ್ಟಗಳನ್ನು, ಅಲ್ಲಿ ಪಾಕ್‌ನ ಪರಮಾಣು ಕೇಂದ್ರವಿದೆ ಎಂದು ವರದಿಯಾಗಿರುವ ಸ್ಥಳವನ್ನು ಗುರಿಯಾಗಿಸಿತು ಎಂಬ ವದಂತಿಗಳನ್ನು ತಿರಸ್ಕರಿಸಿತು. ವಾಯುಸೇನೆಯ ಮಾರ್ಷಲ್ ಎ.ಕೆ.ಭಾರ್ತಿ, "ಕಿರಾನಾ ಬೆಟ್ಟಗಳ ಬಗ್ಗೆ ನನಗೆ ತಿಳಿದಿರಲಿಲ್ಲ, ಧನ್ಯವಾದ" ಎಂದು ತಮಾಷೆಯಾಗಿ ಹೇಳಿದ್ದರು.

ಕದನ ವಿರಾಮದಲ್ಲಿ ಅಮೆರಿಕದ ಪಾತ್ರವಿಲ್ಲ

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರ್‌ನಲ್ಲಿ ಅಮೆರಿಕಾದ ಯಾವುದೇ ಪಾತ್ರ ಇರಲಿಲ್ಲ ಎಂದು ಮಿಸ್ರಿ ಸ್ಪಷ್ಟಪಡಿಸಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ-ಪಾಕ್ 'ಪರಮಾಣು ಯುದ್ಧ' ತಡೆದಿದ್ದೇವೆ ಮತ್ತು ಕಾಶ್ಮೀರ ಸಮಸ್ಯೆಯನ್ನು 'ಪರಿಹರಿಸಿದ್ದೇವೆ' ಎಂಬ ಹೇಳಿಕೆಯನ್ನು ತಿರಸ್ಕರಿಸಿದರು. ಮೇ 10 ರಂದು ಭಾರತೀಯ ಸೇನೆಯ ನಿಖರ ದಾಳಿಗಳು ಪಾಕ್‌ನ ಲಾಹೋರ್‌ನ HQ-9 ವ್ಯವಸ್ಥೆ ಮತ್ತು ನೂರ್ ಖಾನ್ ವಾಯುನೆಲೆಯನ್ನು ಗುರಿಯಾಗಿಸಿದ ನಂತರ, ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಯ ಮಹಾನಿರ್ದೇಶಕರು ದೆಹಲಿಯ ಸಹವರ್ತಿಗೆ ಸಂಪರ್ಕಿಸಿ ಕದನ ವಿರಾಮಕ್ಕೆ ಮನವಿ ಮಾಡಿದ್ದರು ಎಂದು ಮಿಸ್ರಿ ತಿಳಿಸಿದರು. "ಯಾವುದೇ ಮೂರನೇ ವ್ಯಕ್ತಿಯ ಮಧ್ಯವರ್ತಿಯಾಗಿ ಇರಲಿಲ್ಲ" ಎಂದು ಅವರು ಒತ್ತಿ ಹೇಳಿದರು.

ಈ ಸುದ್ದಿಯನ್ನು ಓದಿ: Operation Sindoor: ಉಗ್ರ ಹಫೀಜ್ ಸಯೀದ್‌ನನ್ನು ನಮಗೆ ಒಪ್ಪಿಸಿ, ಪಾಕ್‌ಗೆ ಖಡಕ್‌ ಎಚ್ಚರಿಕೆ ಕೊಟ್ಟ ರಾಯಭಾರಿ ಅಧಿಕಾರಿ

ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಜೊತೆಗೆ ಸಂಘರ್ಷದ ಸಂದರ್ಭದಲ್ಲಿ ಸರ್ಕಾರದ ಮುಖವಾಗಿದ್ದ ಮಿಸ್ರಿ, ಟ್ರಂಪ್‌ನ 'ಶಾಂತಿ ಮಾತುಕತೆ' ಬಗೆಗಿನ ಪ್ರಶ್ನೆಗಳಿಗೂ ಉತ್ತರಿಸಿದರು. ಭಾರತೀಯ ಸೇನೆಯು ಪಾಕಿಸ್ತಾನವನ್ನು ಕಟ್ಟಿಹಾಕಿತ್ತು ಎಂದು ಯುದ್ಧ ತಜ್ಞರು ಒಪ್ಪಿಕೊಂಡಿದ್ದಾರೆ. ಆಪರೇಷನ್ ಸಿಂಧೂರ್‌ನ ಗುರಿಗಳು ಪೂರ್ಣಗೊಂಡಿದ್ದರಿಂದ ದೆಹಲಿ ಕದನ ವಿರಾಮಕ್ಕೆ ಒಪ್ಪಿತು ಎಂದು ಮಿಸ್ರಿ ತಿಳಿಸಿದರು.

ಟರ್ಕಿಯ ಸ್ಥಾನ

ಟರ್ಕಿ ಮತ್ತು ಅಜೆರ್ಬೈಜಾನ್‌ನ ಪಾಕಿಸ್ತಾನಕ್ಕೆ ಬೆಂಬಲ ನೀಡಿವೆ. ಟಕಿಯು ಪಾಕ್‌ಗೆ ಸೈನಿಕ ಸಹಾಯವನ್ನೂ ಕಳುಹಿಸಿದೆ ಎಂಬ ವರದಿಗಳಿವೆ. ಆದರೆ, ಈ 'ಮೂವರು ಸಹೋದರ' ರಾಷ್ಟ್ರಗಳು ಭಾರತದ ವಿರುದ್ಧ ಒಕ್ಕೂಟವಾಗಿಲ್ಲ ಎಂದು ಮಿಸ್ರಿ ಸ್ಪಷ್ಟಪಡಿಸಿದರು.

ಆಪರೇಷನ್ ಸಿಂದೂರ್

ಈ ಕಾರ್ಯಾಚರಣೆಯ ಮೂಲಕ ಪಾಕ್‌ನ ನಾಲ್ಕು ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಐದು ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಲಾಯಿತು. ಇದರಲ್ಲಿ 2019ರ ಪುಲ್ವಾಮಾ ಮತ್ತು 2016ರ ಉರಿ ದಾಳಿಗಳ ಹಿಂದೆ ಇದ್ದ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾಗೆ ಸೇರಿದ ಶಿಬಿರಗಳನ್ನೂ ನಾಶ ಮಾಡಲಾಗಿದೆ. ಪಹಲ್ಗಾಮ್ ದಾಳಿಯನ್ನು ಲಷ್ಕರ್‌ನ ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ ನಡೆಸಿತ್ತು. ಆಪರೇಷನ್ ಸಿಂದೂರ್ ಭಯೋತ್ಪಾದನೆ ವಿರುದ್ಧದ ಹೊಸ ತಂತ್ರವನ್ನು ಸೂಚಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.