ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mumbai Indians: ಮೂವರು ತಾತ್ಕಾಲಿಕ ಬದಲಿ ಆಟಗಾರರನ್ನು ಆಯ್ಕೆ ಮಾಡಿದ ಮುಂಬೈ

ಮೆಗಾ ಹರಾಜಿನಲ್ಲಿ ಮಾರಾಟವಾಗದ ಇಂಗ್ಲೆಂಡ್ ವಿಕೆಟ್ ಕೀಪರ್-ಬ್ಯಾಟರ್ ಬೈರ್‌ಸ್ಟೋವ್ 5.25 ಕೋಟಿ ರೂ.ಗೆ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಇಂಗ್ಲೆಂಡ್‌ನವರೇ ಆದ ವೇಗದ ಬೌಲರ್ ರಿಚರ್ಡ್ ಗ್ಲೀಸನ್ 1 ಕೋಟಿ ರೂ, ಚರಿತ್ ಅಸಲಂಕಾ 75 ಲಕ್ಷ ಮೀಸಲು ಬೆಲೆಯಲ್ಲಿ ತಂಡ ಸೇರಲಿದ್ದಾರೆ.

ಮೂವರು ತಾತ್ಕಾಲಿಕ ಬದಲಿ ಆಟಗಾರರನ್ನು ಆಯ್ಕೆ ಮಾಡಿದ ಮುಂಬೈ

Profile Abhilash BC May 20, 2025 2:41 PM

ಮುಂಬಯಿ: ಪ್ಲೇ-ಆಫ್‌ಗೆ ಪ್ರವೇಶಿಸಲು ಎದುರು ನೋಡುತ್ತಿರುವ 5 ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌(Mumbai Indians) ತಂಡ ವಿಲ್‌ ಜಾಕ್ಸ್‌(Will Jacks), ರಯಾನ್ ರಿಕಲ್ಟನ್(Ryan Rickelton) ಮತ್ತು ಕಾರ್ಬಿನ್ ಬಾಷ್(Corbin Bosch) ಸ್ಥಾನಕ್ಕೆ ತಾತ್ಕಾಲಿಕ ಬದಲಿ ಆಟಗಾರರಾಗಿ ಜಾನಿ ಬೈರ್‌ಸ್ಟೋವ್, ರಿಚರ್ಡ್ ಗ್ಲೀಸನ್ ಮತ್ತು ಚರಿತ್ ಅಸಲಂಕಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಮುಂಬೈ ಇನ್ನೂ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿಲ್ಲ. ಹೀಹಾಗಿ ಬದಲಿ ಆಟಗಾರರು ಮುಂಬೈ ಪ್ಲೇ ಆಫ್‌ ಪ್ರವೇಶಿಸಿದರೆ ಮಾತ್ರ ಲಭ್ಯವಿರುತ್ತಾರೆ.

ಮೆಗಾ ಹರಾಜಿನಲ್ಲಿ ಮಾರಾಟವಾಗದ ಇಂಗ್ಲೆಂಡ್ ವಿಕೆಟ್ ಕೀಪರ್-ಬ್ಯಾಟರ್ ಬೈರ್‌ಸ್ಟೋವ್ 5.25 ಕೋಟಿ ರೂ.ಗೆ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಇಂಗ್ಲೆಂಡ್‌ನವರೇ ಆದ ವೇಗದ ಬೌಲರ್ ರಿಚರ್ಡ್ ಗ್ಲೀಸನ್ 1 ಕೋಟಿ ರೂ, ಚರಿತ್ ಅಸಲಂಕಾ 75 ಲಕ್ಷ ಮೀಸಲು ಬೆಲೆಯಲ್ಲಿ ತಂಡ ಸೇರಲಿದ್ದಾರೆ.

ಜೈಪುರದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ತಂಡದ ಕೊನೆಯ ಲೀಗ್ ಪಂದ್ಯದ ನಂತರ ವಿಲ್‌ ಜಾಕ್ಸ್‌, ರಯಾನ್ ರಿಕಲ್ಟನ್ ಮತ್ತು ಕಾರ್ಬಿನ್ ಬಾಷ್ ತಮ್ಮ ರಾಷ್ಟ್ರೀಯ ತಂಡದ ಕರ್ತವ್ಯಗಳಿಗಾಗಿ ತೆರಳಲಿದ್ದಾರೆ. ಬುಧವಾರ ನಡೆಯುವ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡ ಗೆಲುವು ಸಾಧಿಸಿದರೆ ಅಧಿಕೃತವಾಗಿ ಪ್ಲೇ ಆಫ್‌ಗೆ ಪ್ರವೇಶ ಪಡೆಯಲಿದೆ.



ಇದನ್ನೂ ಓದಿ IPL 2025 Exit: ಪ್ಲೇ ಆಫ್‌ನಿಂದ 5 ತಂಡ ಔಟ್‌; ಉಳಿದ ಒಂದು ಸ್ಥಾನಕ್ಕೆ 2 ತಂಡಗಳ ಮಧ್ಯೆ ಫೈಟ್‌

ಸದ್ಯ ಮುಂಬೈ ಇಂಡಿಯನ್ಸ್‌ 12 ಪಂದ್ಯಗಳನ್ನಾಡಿದ್ದು, 7ರಲ್ಲಿ ಗೆದ್ದು 14 ಅಂಕ ಗಳಿಸಿದೆ. ನಾಳಿನ ಪಂದ್ಯದಲ್ಲಿ ಮುಂಬೈ ಸೋತರೆ, ಪಂಜಾಬ್‌ ವಿರುದ್ಧದ ಅಂತಿಮ ಪಂದ್ಯದಲ್ಲಿ ಮುಂಬೈ ಗೆಲ್ಲಬೇಕು ಜತೆಗೆ ಡೆಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ಸೋಲಬೇಕು. ಆಗ ಮಾತ್ರ ತಂಡಕ್ಕೆ ಪ್ಲೇ ಆಫ್‌ ಪ್ರವೇಶ ಪಡೆಯಬಹುದು.