ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Terrorist attack: 1971ರ ಭಾರತ-ಪಾಕ್‌ ಯುದ್ಧದ ಸಂದರ್ಭದಲ್ಲಿ ತಾಜ್‌ಮಹಲನ್ನು ಹೇಗೆ ರಕ್ಷಣೆ ಮಾಡಲಾಗಿತ್ತು ಗೊತ್ತೆ?

ಪಹಲ್ಗಾಮ್‌ (Pahalgam) ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ (Terrorists Attack) ಬಳಿಕ ದೇಶದ ಪಾರಂಪರಿಕ ತಾಣಗಳಿಗೆ ಬಿಗಿ ಭದ್ರತೆಯನ್ನು ಒದಗಿಸಲಾಗುತ್ತಿದೆ. ದೆಹಲಿಯ ಕೆಂಪುಕೋಟೆ (redfort), ಜೈಸಲ್ಮೇರ್ ಕೋಟೆ (Jaisalmer Fort ) ಮತ್ತು ತಾಜ್ ಮಹಲ್ (Taj Mahal) ಸೇರಿದಂತೆ ವಿವಿಧ ವಿಶ್ವ ಪಾರಂಪರಿಕ ತಾಣಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ರೀತಿ ಮಾಡುತ್ತಿರುವುದು ಇದು ಮೊದಲೇನಲ್ಲ. 1971ರ ಭಾರತ- ಪಾಕಿಸ್ತಾನ ಯುದ್ಧದ ಸಮಯದಲ್ಲೂ ಇವುಗಳ ರಕ್ಷಣೆಗೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

1971ರ ಯುದ್ಧದ ಸಂದರ್ಭದಲ್ಲಿ ತಾಜ್‌ಮಹಲ್‌ಗೆ ರಕ್ಷಣೆ ಹೇಗಿತ್ತು ಗೊತ್ತಾ?

ಆಗ್ರಾ: ಕಾಶ್ಮೀರದ ಪಹಲ್ಗಾಮ್‌ (Pahalgam) ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ (Terrorists Attack) ಬಳಿಕ ದೇಶದ ಪಾರಂಪರಿಕ ತಾಣಗಳಿಗೆ ಬಿಗಿ ಭದ್ರತೆಯನ್ನು ಒದಗಿಸಲಾಗುತ್ತಿದೆ. ದೆಹಲಿಯ ಕೆಂಪುಕೋಟೆ (redfort), ಜೈಸಲ್ಮೇರ್ ಕೋಟೆ (Jaisalmer Fort ) ಮತ್ತು ತಾಜ್ ಮಹಲ್ (Taj Mahal) ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿರುವ ವಿಶ್ವ ಪಾರಂಪರಿಕ ತಾಣಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ರೀತಿ ಮಾಡುತ್ತಿರುವುದು ಇದು ಮೊದಲೇನಲ್ಲ. 1971ರ ಭಾರತ- ಪಾಕಿಸ್ತಾನ ಯುದ್ಧದ ಸಮಯದಲ್ಲೂ ಹೀಗೆ ಮಾಡಲಾಗಿತ್ತು. ಪಾರಂಪರಿಕ ತಾಣಗಳ ಮೇಲೆ ದಾಳಿಯಾಗುವುದನ್ನು ತಪ್ಪಿಸಲು ನಕಲಿ ರಚನೆಗಳು ಮಾಡಲಾಗುತ್ತದೆ, ಹಸಿರು ಹೊದಿಕೆಗಳನ್ನು ಹಾಕಲಾಗುತ್ತದೆ.

ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾರತೀಯ ನೌಕಾ ಪಡೆಯ ಅಧಿಕಾರಿ ಸೇರಿದಂತೆ 26 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದರು. ಈ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂದು ಹಲವಾರು ದಶಕಗಳಿಂದ ಭಾರತ ಆರೋಪಿಸುತ್ತಿದೆ. ಅಲ್ಲದೇ ಪ್ರತಿಬಾರಿಯೂ ಉಗ್ರರ ದಾಳಿ ನಡೆದಾಗ ನಿರ್ಣಾಯಕ ಕ್ರಮಗಳನ್ನು ಕೈಗೊಂಡು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುವ ಪ್ರಯತ್ನವನ್ನು ಮಾಡುತ್ತಿದೆ.

ಇದೀಗ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಪಾಕಿಸ್ತಾನಿಯರಿಗೆ ವೀಸಾ ರದ್ದು, ಸಿಂಧೂ ಜಲ ಒಪ್ಪಂದ ರದ್ದು, ಅಟ್ಟಾರಿ ಗಡಿ ಬಂದ್ ಸೇರಿದಂತೆ ಪಾಕಿಸ್ತಾನದ ವಿರುದ್ದ ಹಲವಾರು ಕ್ರಮಗಳನ್ನು ಭಾರತ ಸರ್ಕಾರ ಕೈಗೊಂಡ ಬಳಿಕ ಎರಡು ರಾಷ್ಟ್ರಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ.

jaisal

ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭಾರತದ ವಿಶ್ವ ಪಾರಂಪರಿಕ ತಾಣಗಳ ರಕ್ಷಣೆಗೂ ಕ್ರಮ ಕೈಗೊಳ್ಳಲಾಗುತ್ತಿದೆ. 1971ರಲ್ಲೂ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧದ ಸಮಯದಲ್ಲಿ ಭಾರತ ತನ್ನ ಪರಂಪರೆಯ ಸ್ಮಾರಕಗಳನ್ನು ರಕ್ಷಿಸಲು ಹಲವು ರೀತಿಯ ಕ್ರಮಗಳನ್ನು ಕೈಗೊಂಡಿತ್ತು.

ಇದನ್ನೂ ಓದಿ: Antonio Guterres: ಪಾಕ್‌ಗೆ ಯುದ್ಧ ಭೀತಿ; ವಿಶ್ವಸಂಸ್ಥೆ ಮುಖ್ಯಸ್ಥರಿಂದ ಎಸ್ ಜೈಶಂಕರ್, ಶೆಹಬಾಜ್ ಷರೀಫ್‌ಗೆ ಕರೆ

ಸಾಮಾನ್ಯವಾಗಿ ಯುದ್ಧದ ಸಮಯದಲ್ಲಿ ಜನರ ಮನೋಸ್ಥೈರ್ಯವನ್ನು ಕುಗ್ಗಿಸಲು ಶತ್ರು ರಾಷ್ಟ್ರವು ದೇಶದ ಸಾಂಸ್ಕೃತಿಕ ಹೆಗ್ಗುರುತುಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಇವುಗಳನ್ನು ಮರೆಮಾಚಲಾಗುತ್ತದೆ.

1971ರಲ್ಲಿ ಭಾರತ ಮತ್ತು ಪಾಕಿಸ್ತಾನದ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಸೈನ್ಯದ ವೈಮಾನಿಕ ದಾಳಿಯಿಂದ ತಾಜ್ ಮಹಲ್ ಅನ್ನು ರಕ್ಷಿಸಲು ಸುತ್ತಮುತ್ತಲಿನ ಹಸಿರಿನ ನಡುವೆ ಬಿಳಿ ಅಮೃತಶಿಲೆಯ ತಾಜ್ ಮಹಲ್ ಕಾಣಿಸದಂತೆ ಮಾಡಲು ಅದಕ್ಕೆ ಬೃಹತ್ ಹಸಿರು ಬಟ್ಟೆಯನ್ನು ಹೊದಿಸಲಾಗಿತ್ತು. ಸ್ಮಾರಕದ ಸುತ್ತಲಿನ ದೀಪಗಳನ್ನು ಆರಿಸಲಾಗಿತ್ತು. ರಾತ್ರಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.

ಅದೇ ರೀತಿ ಕೆಂಪು ಕೋಟೆ, ಕುತುಬ್ ಮಿನಾರ್ ಮತ್ತು ಜೈಸಲ್ಮೇರ್ ಕೋಟೆಗಳಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಕೆಲವು ಕಡೆಗಳಲ್ಲಿ ನಕಲಿ ಮಾದರಿಗಳನ್ನು ನಿರ್ಮಿಸಿ ಪುರಾತನ ರಚನೆಗೆ ರಕ್ಷಣೆ ನೀಡಲಾಯಿತು. ಈ ಬಾರಿಯೂ ಯುದ್ಧದ ಆತಂಕ ಹೆಚ್ಚಾದರೆ ಪಾರಂಪರಿಕ ತಾಣಗಳ ರಕ್ಷಣೆಗೆ ಇದೇ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.