ಚೆನ್ನೈ ಹೊರದಬ್ಬಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ನೆಗೆದ ಪಂಜಾಬ್
ಪಂಜಾಬ್ ಗೆಲುವಿನಿಂದ ಮುಂಬೈ ತಂಡ ಒಂದು ಸ್ಥಾನ ಕುಸಿತ ಕಂಡು ಮೂರನೇ ಸ್ಥಾನಕ್ಕೆ ಜಾರಿದೆ. 3ನೇ ಸ್ಥಾನಿಯಾಗಿದ್ದ ಗುಜರಾತ್ ಟೈಟಾನ್ಸ್ 4ನೇ ಸ್ಥಾನ ಪಡೆದಿದೆ. ಉಳಿದಂತೆ ಡೆಲ್ಲಿ ಕ್ಯಾಪಿಟಲ್ಸ್ 5 ಮತ್ತು ಲಕ್ನೋ ಸೂಪರ್ ಜೈಂಟ್ಸ್ 6ನೇ ಸ್ಥಾನದಲ್ಲಿದೆ. ಆರೆಂಜ್ ಕ್ಯಾಪ್ ಸಾಯಿ ಸುದರ್ಶನ್ ಬಳಿ ಇದ್ದರೆ ಪರ್ಪಲ್ ಕ್ಯಾಪ್ ಜೋಶ್ ಹ್ಯಾಜಲ್‌ವುಡ್ ಬಳಿ ಇದೆ.

ಚೆನ್ನೈ: ಬುಧವಾರ ನಡೆದಿದ್ದ ಐಪಿಎಲ್(IPL 2025) ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಚನ್ನೈ ಸೂಪರ್ ಕಿಂಗ್ಸ್ ತಂಡವನ್ನು 4 ವಿಕೆಟ್ ಅಂತರದಿಂದ ಮಣಿಸಿದ ಪಂಜಾಬ್ ಕಿಂಗ್ಸ್(CSK vs PBKS) ಅಂಕಪಟ್ಟಿಯಲ್ಲಿ(IPL 2025 Points Table ) ಭಾರೀ ಪ್ರಗತಿ ಸಾಧಿಸಿದೆ. 5ನೇ ಸ್ಥಾನದಿಂದ ದ್ವಿತೀಯ ಸ್ಥಾನಕ್ಕೇರಿದೆ. ಸೋಲು ಕಂಡ ಚೆನ್ನೈ ತಂಡ ಹಾಲಿ ಆವೃತ್ತಿಯಿಂದ ಹೊರಬಿದ್ದ ಮೊದಲ ತಂಡ ಎಂಬ ಅವಮಾನಕ್ಕೆ ಸಿಲುಕಿತು. ಅಗ್ರಸ್ಥಾನದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.
ಪಂಜಾಬ್ ಗೆಲುವಿನಿಂದ ಮುಂಬೈ ತಂಡ ಒಂದು ಸ್ಥಾನ ಕುಸಿತ ಕಂಡು ಮೂರನೇ ಸ್ಥಾನಕ್ಕೆ ಜಾರಿದೆ. 3ನೇ ಸ್ಥಾನಿಯಾಗಿದ್ದ ಗುಜರಾತ್ ಟೈಟಾನ್ಸ್ 4ನೇ ಸ್ಥಾನ ಪಡೆದಿದೆ. ಉಳಿದಂತೆ ಡೆಲ್ಲಿ ಕ್ಯಾಪಿಟಲ್ಸ್ 5 ಮತ್ತು ಲಕ್ನೋ ಸೂಪರ್ ಜೈಂಟ್ಸ್ 6ನೇ ಸ್ಥಾನದಲ್ಲಿದೆ. ಆರೆಂಜ್ ಕ್ಯಾಪ್ ಸಾಯಿ ಸುದರ್ಶನ್ ಬಳಿ ಇದ್ದರೆ ಪರ್ಪಲ್ ಕ್ಯಾಪ್ ಜೋಶ್ ಹ್ಯಾಜಲ್‌ವುಡ್ ಬಳಿ ಇದೆ.
ಇಂದು ನಡೆಯುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಸೆಣಸಾಟ ನಡೆಸಲಿದೆ. ರಾಜಸ್ಥಾನ್ ಸೋತರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ. ಹೀಗಾಗಿ ರಿಯಾನ್ ಪರಾಗ್ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಮುಂಬೈ ಗೆದ್ದರೆ ಅಗ್ರಸ್ಥಾನಕ್ಕೇರಲಿದೆ.
ಅಂಕಪಟ್ಟಿ ಹೀಗಿದೆ
IPL 2025 POINTS TABLE. 📈
— Monish (@Monish09cric) May 1, 2025
- RCB with 14 Points.
- PBKS with 13 Points.
- CSK eliminated.#RohitSharma #ViratKohli #KLRahul #IPL2025 #MSDhoni #RCB #CSK #MI #DC #SRH pic.twitter.com/w5ZWQ1osRz