ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs CSK: ನಾಳಿನ ಆರ್‌ಸಿಬಿ-ಚೆನ್ನೈ ಪಂದ್ಯಕ್ಕೆ ಭಾರೀ ಮಳೆ ಸಾಧ್ಯತೆ!

ಬೆಂಗಳೂರಿನಲ್ಲಿ ಗುರುವಾರ ಭಾರೀ ಮಳೆಯಾಗಿತ್ತು. ಈಗಾಗಲೇ ಹವಾಮಾನ ಇಲಾಖೆ ಮುಂದಿನ ಮೂರು ದಿನಗಳ ಕಾಲ ಮಳೆ ಎಚ್ಚರಿಕೆ ನೀಡಿದೆ. ಹೀಗಾಗಿ ಶನಿವಾರದ ಪಂದ್ಯಕ್ಕೆ ಮಳೆ ಕಾಟ ತಪ್ಪಿದ್ದಲ್ಲ. ಹವಾಮಾನ ವರದಿ ಪ್ರಕಾರ ಪಂದ್ಯದ ಆರಂಭದ ಸಮಯದಲ್ಲಿ ಶೇ.60 ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ನಾಳಿನ ಆರ್‌ಸಿಬಿ-ಚೆನ್ನೈ ಪಂದ್ಯಕ್ಕೆ ಭಾರೀ ಮಳೆ ಸಾಧ್ಯತೆ!

Profile Abhilash BC May 2, 2025 3:24 PM

ಬೆಂಗಳೂರು: ಶನಿವಾರ ಚಿನ್ನಸ್ವಾಮಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಬದ್ಧ ಎದುರಾಳಿಗಳಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಲಿದೆ ಎಂದು ಹೇಳಲಾಗಿದೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಪಂದ್ಯ ರದ್ದಾದರೂ ಯಾವುದೇ ನಷ್ಟ ಸಂಭವಿಸದು. ಆದರೆ ಆರ್‌ಸಿಬಿಯ ಪ್ಲೇ ಆಫ್‌ ಲೆಕ್ಕಾಚಾರಕ್ಕೆ ಕೊಂಚ ಹಿನ್ನಡೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಗುರುವಾರ ಭಾರೀ ಮಳೆಯಾಗಿತ್ತು. ಈಗಾಗಲೇ ಹವಾಮಾನ ಇಲಾಖೆ ಮುಂದಿನ ಮೂರು ದಿನಗಳ ಕಾಲ ಮಳೆ ಎಚ್ಚರಿಕೆ ನೀಡಿದೆ. ಹೀಗಾಗಿ ಶನಿವಾರದ ಪಂದ್ಯಕ್ಕೆ ಮಳೆ ಕಾಟ ತಪ್ಪಿದ್ದಲ್ಲ. ಹವಾಮಾನ ವರದಿ ಪ್ರಕಾರ ಪಂದ್ಯದ ಆರಂಭದ ಸಮಯದಲ್ಲಿ ಶೇ.60 ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ರಾತ್ರಿ 8 ರಿಂದ ರಾತ್ರಿ 11 ರವರೆಗೆ ಶೇ. 75ರಷ್ಟು ಗುಡುಗು ಸಹಿತ ಭಾರೀ ಮಳೆ ಮಳೆಯಾಗುವ ಸಾಧ್ಯತೆ ಎಂದು ತಿಳಿಸಿದೆ.

ಪಂದ್ಯ ರದ್ದಾದರೆ ಏನು ಗತಿ?

ಐಪಿಎಲ್‌ ಲೀಗ್‌ ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇರದ ಕಾರಣ ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗಿತ್ತದೆ. ಆರ್‌ಸಿಬಿ ಸದ್ಯ 10 ಪಂದ್ಯಗಳಲ್ಲಿ 7 ಗೆಲುವು ಸಾಧಿಸಿ 14 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಇನ್ನೊಂದು ಗೆಲುವು ಸಾಧಿಸಿದರೆ ಪ್ಲೇ ಆಓ ಸ್ಥಾನ ಖಚಿತಗೊಳ್ಳಲಿದೆ. ಪಂದ್ಯ ರದ್ದಾದರೆ ಒಂದು ಅಂಕ ಲಭಿಸಲಿದೆ. ಪ್ಲೇ ಆಫ್‌ ಪ್ರವೇಶಿಸಲು ಈ ಅಂಕ ಸಾಕಾಗಿದ್ದರೂ ಅಗ್ರ ಎರಡು ಸ್ಥಾನಗಳನ್ನು ವಶಪಡಿಸಿಕೊಳ್ಳುವಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ.



ಸಂಭಾವ್ಯ ತಂಡಗಳು

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: ವಿರಾಟ್‌ ಕೊಹ್ಲಿ, ಫಿಲ್‌ ಸಾಲ್ಟ್‌/ ಜಾಕೋಬ್‌ ಬೆಥೆಲ್, ರಜತ್‌ ಪಾಟಿದಾರ್‌‌ (ನಾಯಕ), ಜಿತೇಶ್‌ ಶರ್ಮಾ (ವಿ.ಕೀ), ಟಿಮ್‌ ಡೇವಿಡ್‌, ಕೃಣಾಲ್‌ ಪಾಂಡ್ಯ, ರೊಮ್ಯಾರಿಯೊ ಶೆಫರ್ಡ್‌, ಭುವನೇಶ್ವರ್‌ ಕುಮಾರ್‌, ಸುಯಶ್‌ ಶರ್ಮಾ, ಜಾಶ್‌ ಹೇಝಲ್‌ವುಡ್‌, ಯಶ್‌ ದಯಾಳ್‌

ಇದನ್ನೂ ಓದಿ IPL 2025: ರಾಜಸ್ಥಾನ್‌ ವಿರುದ್ದ 48 ರನ್‌ ಗಳಿಸಿ ವಿಶೇಷ ದಾಖಲೆ ಬರೆದ ಸೂರ್ಯಕುಮಾರ್‌ ಯಾದವ್‌!

ಚೆನ್ನೈ ಸೂಪರ್‌ ಕಿಂಗ್ಸ್‌: ಶೇಖ್‌ ರಶೀದ್‌, ಆಯುಷ್‌ ಮ್ಹಾತ್ರೆ, ಸ್ಯಾಮ್‌ ಕರನ್‌, ರವೀಂದ್ರ ಜಡೇಜಾ, ಡೆವಾಲ್ಡ್‌ ಬ್ರೆವಿಸ್‌, ಶಿವಂ ದುಬೆ, ದೀಪಕ್‌ ಹೂಡ, ಎಂಎಸ್‌ ಧೋನಿ (ನಾಯಕ, ವಿ.ಕೀ), ನೂರ್‌ ಅಹ್ಮದ್‌, ಖಲೀಲ್‌ ಅಹ್ಮದ್‌, ಮತೀಶ ಪತಿರಾಣ.