RR vs MI: ಮುಂಬೈ ವಿರುದ್ಧವೂ ಬ್ಯಾಟಿಂಗ್ ವೈಭವ ತೋರುವರೇ ಸೂರ್ಯವಂಶಿ?
ಜಸ್‌ಪ್ರೀತ್ ಬುಮ್ರಾ ಆಗಮನದ ಬಳಿಕ ಸತತವಾಗಿ ಗೆಲುವಿನ ನಾಗಾಲೋಟ ಮುಂದುವರಿಸಿರುವ ಮುಂಬೈ ತಂಡ ಅತ್ಯಂತ ಬಲಿಷ್ಠವಾಗಿದೆ. ರೋಹಿತ್ ಶರ್ಮ ಮತ್ತು ಸೂರ್ಯಕುಮಾರ್ ಬ್ಯಾಟಿಂಗ್ ಲಯಕ್ಕೆ ಮರಳಿರುವುದು ತಂಡದ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಸದ್ಯ ಮೂರನೇ ಸ್ಥಾನದಲ್ಲಿರುವ ಮುಂಬೈ ಇಂದು ಗೆದ್ದರೆ ಅಗ್ರಸ್ಥಾನಕ್ಕೇರಲಿದೆ.


ಜೈಪುರ: ಇಂದು(ಗುರುವಾರ) ನಡೆಯುವ ಐಪಿಎಲ್(IPL 2025) ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್(RR vs MI) ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದೆ. ಕಳೆದ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿ ಮಿಂಚಿದ್ದ 14 ವರ್ಷದ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ(vaibhav suryavanshi) ಈ ಪಂದ್ಯ ಹೈಲೆಟ್ಸ್ ಆಗಿದ್ದಾರೆ. ಅಂತಾರಾಷ್ಟ್ರೀಯ ಬೌಲರ್‌ಗಳಿಗೆ ಬೆವರಿಳಿಸಿದ ಸೂರ್ಯವಂಶಿ ಅವರು ಅಗ್ರ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್ ಅವರನ್ನು ಹೇಗೆ ನಿಭಾಯಿಸುವರು ಎನ್ನುವುದು ಪಂದ್ಯದ ಕುತೂಹಲ ಮೂಡಿದೆ.
ಸೋತರೆ ಔಟ್
ಆಡಿದ 10 ಪಂದ್ಯಗಳಲ್ಲಿ ಕೇವಲ 3 ಪಂದ್ಯ ಗೆದ್ದು 6 ಅಂಕ ಹೊಂದಿರುವ ರಾಜಸ್ಥಾನ್ ರಾಯಲ್ಸ್‌ಗೆ ಪ್ಲೇ ಆಫ್ ಪ್ರವೇಶದ ಕ್ಷೀಣ ಅವಕಾಶವೊಂದು ಇನ್ನೂ ಜೀವಂತವಾಗಿರುವ ಕಾರಣ ಮುಂಬೈ ವಿರುದ್ಧ ಗೆಲುವು ಅತ್ಯಗತ್ಯ. ಸೋತರೆ 2ನೇ ತಂಡವಾಗಿ ಈ ಬಾರಿಯ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಲಲಿದೆ. ಚೆನ್ನೈ ಈಗಾಗಲೇ ಹೊರಬಿದ್ದಿದೆ. ಸಂಜು ಸ್ಯಾಮ್ಸನ್ ತಂಡಕ್ಕೆ ಮರಳುವ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. ಹೀಗಾಗಿ ಈ ಪಂದ್ಯದಲ್ಲೂ ರಿಯಾನ್ ಪರಾಗ್ ತಂಡ ಮುನ್ನಡೆಸಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ವಿಂಡೀಸ್‌ನ ಹೆಟ್‌ಮೇರ್ ಮತ್ತು ಜುರೇಲ್, ನಿತೇಶ್ ರಾಣಾ ಸಿಡಿದು ನಿಂತರೆ ತಂಡದ ಬ್ಯಾಟಿಂಗ್ ವಿಭಾಗ ಬಲಗೊಳ್ಳಲಿದೆ. ಬೌಲಿಂಗ್‌ನಲ್ಲಿ ಜೋಫ್ರ ಆರ್ಚರ್ ಮತ್ತು ಸಂದೀಪ್ ಶರ್ಮ ತಮ್ಮ ಎಸೆತಗಳಿಗೆ ಸಾಣೆ ಹಿಡಿಯಬೇಕಿದೆ.
ಮುಂಬೈ ಬಲಿಷ್ಠ
ಜಸ್‌ಪ್ರೀತ್ ಬುಮ್ರಾ ಆಗಮನದ ಬಳಿಕ ಸತತವಾಗಿ ಗೆಲುವಿನ ನಾಗಾಲೋಟ ಮುಂದುವರಿಸಿರುವ ಮುಂಬೈ ತಂಡ ಅತ್ಯಂತ ಬಲಿಷ್ಠವಾಗಿದೆ. ರೋಹಿತ್ ಶರ್ಮ ಮತ್ತು ಸೂರ್ಯಕುಮಾರ್ ಬ್ಯಾಟಿಂಗ್ ಲಯಕ್ಕೆ ಮರಳಿರುವುದು ತಂಡದ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಸದ್ಯ ಮೂರನೇ ಸ್ಥಾನದಲ್ಲಿರುವ ಮುಂಬೈ ಇಂದು ಗೆದ್ದರೆ ಅಗ್ರಸ್ಥಾನಕ್ಕೇರಲಿದೆ.
ಇದನ್ನೂ ಓದಿ IPL 2025: ಚೆನ್ನೈ ಮಣಿಸಿ ಮುಂಬೈ ತಂಡದ ದಾಖಲೆ ಸರಿಗಟ್ಟಿದ ಪಂಜಾಬ್
ಸಂಭಾವ್ಯ ತಂಡಗಳು
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ನಿತೀಶ್ ರಾಣಾ, ರಿಯಾನ್ ಪರಾಗ್ (ನಾಯಕ), ಧ್ರುವ್ ಜುರೆಲ್ (ವಿ.ಕೀ), ಶಿಮ್ರಾನ್ ಹೆಟ್ಮಾಯೆರ್, ವಾನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಸಂದೀಪ್ ಶರ್ಮಾ, ಯಧುವೀರ್ ಸಿಂಗ್ ಚರಕ್.
ಮುಂಬೈ ಇಂಡಿಯನ್ಸ್: ರಯಾನ್ ರಿಕೆಲ್ಟನ್ (ವಿ.ಕೀ), ವಿಲ್ ಜ್ಯಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಕಾರ್ಬಿನ್ ಬಾಷ್, ದೀಪಕ್ ಚಹರ್, ಟ್ರೆಂಟ್ ಬೌಲ್ಟ್, ಮಿಚೆಲ್ ಸ್ಯಾಂಟ್ನರ್, ಜಸ್‌ಪ್ರೀತ್ ಬುಮ್ರಾ