Beeraganahalli lakshminarayana Column: ಓ ಮೈ ಗಾರ್ಡ್; ತಿರುಗುವ ತನಕ 'ಚಕ್ರ'
ಒಬ್ಬ ಮಗಳು ಗೈನೋಕಾಲಜಿಸ್ಟ್ ಮತ್ತೊಬ್ಬಳು ಪೀಡಿಯಾಟ್ರಿಷಿಯನ್. ಇಬ್ಬರೂ ಲಂಡನ್ ಕ್ವೀನ್ಸ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಳಿಯಂದಿರು ಕೂಡ ಒಬ್ರು ಡಾಕ್ಟರ್, ಮತ್ತೊಬ್ರು ಇಂಜಿನಿ ಯರ್. ಅಲ್ಲಿನದ್ದೇ ಪೌರತ್ವ ಪಡೆದು ಅಲ್ಲಿಯೇ ಸೆಟಲ್ ಆಗಿದ್ದಾರೆ. ಆದ್ರೂ ಕೂಡ ಈ ರಿಟೈರ್ಡ್ ಮಿಲಿಟರಿ ಆಫೀಸರ್ ಸೆಕ್ಯೂರಿಟಿ ಕೆಲಸ ಮಾಡ್ತಿದ್ದಾರೆ ಅಂದ್ರೆ ಗ್ರೇಟ್. ಅವರ ಕಥೆ ತಿಳಿದು ಕೊಳ್ಳುವ ಕೌತುಕತೆ ನಿಮಗೆ ಇದ್ರೆ ಮುಂದೆ ಓದುತ್ತಾ ಹೋಗಿ.


ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
16 ವರ್ಷಗಳ ಕಾಲ ಆರ್ಮಿ ಆಫೀಸರ್ ಆಗಿ ಜಮ್ಮು-ಕಾಶ್ಮೀರದಲ್ಲಿರೋ ಪಾಕಿಸ್ತಾನ್ ಬಾರ್ಡರ್ನಲ್ಲಿ ದೇಶಸೇವೆ ಸಲ್ಲಿಸಿರೋ 68 ವರ್ಷದ ಈ ಹಿರಿಜೀವ, ಮುದ್ದಾದ ಮೊಮ್ಮಕ್ಕಳು, ಫಾರಿನ್ನಲ್ಲಿ ಸೆಟಲ್ ಆಗಿರೋ ಮಕ್ಕಳ ಜೊತೆ ವೃದ್ದಾಪ್ಯ ಕಳೆಯಬೇಕಿತ್ತು. ಇಳಿವಯಸ್ಸಿನಲ್ಲೂ ಕಾಯಕವೇ ಕೈಲಾಸ ಅನ್ನೋ ಈ ಕಾಯಕಜೀವ, ದಿನಕ್ಕೆ 12 ಗಂಟೆಗಳ ಕಾಲ ಖುಷ್ ಖುಷಿಯಿಂದ ಸೆಕ್ಯೂರಿಟಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇದಲ್ಲವೇ ಜೀವನೋತ್ಸಾಹ.. ಇದಲ್ಲವೇ ಹಂಗಿಲ್ಲದ ಬದುಕು.. ಇದಲ್ಲವೇ ಸ್ಫೂರ್ತಿ..?!
ಒಬ್ಬ ಮಗಳು ಗೈನೋಕಾಲಜಿಸ್ಟ್ ಮತ್ತೊಬ್ಬಳು ಪೀಡಿಯಾಟ್ರಿಷಿಯನ್. ಇಬ್ಬರೂ ಲಂಡನ್ ಕ್ವೀನ್ಸ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಳಿಯಂದಿರು ಕೂಡ ಒಬ್ರು ಡಾಕ್ಟರ್, ಮತ್ತೊಬ್ರು ಇಂಜಿನಿಯರ್. ಅಲ್ಲಿನದ್ದೇ ಪೌರತ್ವ ಪಡೆದು ಅಲ್ಲಿಯೇ ಸೆಟಲ್ ಆಗಿದ್ದಾರೆ. ಆದ್ರೂ ಕೂಡ ಈ ರಿಟೈರ್ಡ್ ಮಿಲಿಟರಿ ಆಫೀಸರ್ ಸೆಕ್ಯೂರಿಟಿ ಕೆಲಸ ಮಾಡ್ತಿದ್ದಾರೆ ಅಂದ್ರೆ ಗ್ರೇಟ್. ಅವರ ಕಥೆ ತಿಳಿದು ಕೊಳ್ಳುವ ಕೌತುಕತೆ ನಿಮಗೆ ಇದ್ರೆ ಮುಂದೆ ಓದುತ್ತಾ ಹೋಗಿ.
ಈ ವ್ಯಕ್ತಿಯ ಹೆಸರು ಮುನುಕುಟ್ಲ ಶ್ರೀನಿವಾಸ್ ಚಕ್ರವರ್ತಿ. ತುಂಬಾ ಶಿಸ್ತಿನ ವ್ಯಕ್ತಿ. ಅದ್ಭುತವಾಗಿ ಬರೆಯುತ್ತಾರೆ. ಅತ್ಯದ್ಭುತವಾಗಿ ಇಂಗ್ಲಿಷ್ ಮಾತಾಡ್ತಾರೆ. ಲ್ಯಾಪ್ಟಾಪ್ ಇಟ್ಕೊಂಡು ಆಗಾಗ ಸಿನಿಮಾ ಕೂಡ ನೋಡ್ತಿರ್ತಾರೆ. ಅವರ ಹಾವ, ಭಾವ, ನಡೆ, ನುಡಿ ಎಲ್ಲವೂ ಅವರ ಮೇಲೆ ಗೌರವ ಹೆಚ್ಚಿಸುತ್ತೆ. ಅದೇ ಕಾರಣಕ್ಕಾಗಿ ಅವರ ಹಿನ್ನೆಲೆ ತಿಳಿದುಕೊಳ್ಳುವ ಕುತೂಹಲ ನನಗೆ ಹೆಚ್ಚಾಯ್ತು. ಮಾತಾಡಿ ಸೋಕೆ ಶುರು ಮಾಡಿದೆ..
ಇದನ್ನೂ ಓದಿ: Lokesh Kayarga Column: ದಾಳಿ, ನಮ್ಮ ಬೆಡ್ ರೂಮ್‌ನಲ್ಲೂ ಆಗಬಹುದು !
ಆಂಧ್ರದ ಈಸ್ಟ್ ಗೋದಾವರಿಯ ಕಾಕಿನಾಡ ಟೌನ್ನಲ್ಲಿ ಆಗಸ್ಟ್ 13, 1958ರಲ್ಲಿ ಜನಿಸಿದ ಚಕ್ರವರ್ತಿ ಯ ತಂದೆ-ತಾಯಿ ಕೂಡ ಸುಶಿಕ್ಷಿತರು. ಆ ಕಾಲದಲ್ಲೇ MSW ಮಾಡಿ ಡೆಪ್ಯೂಟಿ ಕಲೆಕ್ಟರ್ ಆಗಿದ್ರಂತೆ ತಂದೆ ಕೃಷ್ಣ ಮೋಹನ್ ಸೇನ್. ಇನ್ನು ತಾಯಿ ಪದ್ಮಿನಿ ಸೇನ್ ರೂರಲ್ ಡೆವೆಲಪ್ಮೆಂಟ್ ಆಫೀಸರ್. ಇವರ ಕಿರಿ ಮಗನೇ ಈ ಚಕ್ರವರ್ತಿ ಹಾಗೂ ಹಿರಿ ಮಗಳು ಶಾರದಾ ಲಕ್ಷ್ಮೀ. ಕಾಕಿನಾಡದ ಜವಹಾ ರ್ಲಾಲ್ ನೆಹರೂ ಟೆಕ್ನಾಲಜಿ ಯೂನಿವರ್ಸಿಟಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆಯುವ ಚಕ್ರವರ್ತಿ, ಆಂಧ್ರ ಯೂನಿವರ್ಸಿಟಿಯಿಂದ ಬಿ.ಕಾಂ ಪದವಿ ಕೂಡ ಪಡೆದುಕೊಳ್ತಾರೆ. ದುಬೈನಲ್ಲಿ ಅಪ್ರೆಂಟಿಶಿಪ್ಗಾಗಿ ದುಬೈಗೆ ತೆರಳುವ ಚಕ್ರವರ್ತಿ, ಅಲ್ಲಿನ ನ್ಯಾಷನಲ್ ಸಿಮೆಂಟ್ ಕಂಪೆನಿ ಯಲ್ಲಿ ಸುಮಾರು ಒಂದೂವರೆ ವರ್ಷ ಕೆಲಸ ಮಾಡ್ತಾರೆ.
1983ರಲ್ಲಿ ದೇಶಸೇವೆ ಸಲ್ಲಿಸೋಕೆ ಅಂತ ಆರ್ಮಿಗೆ ಜಾಯಿನ್ ಆಗುವ ಚಕ್ರವರ್ತಿ, 1999ರ ವರೆಗೆ 16 ವರ್ಷಗಳ ಕಾಲ ಆರ್ಮಿಯ EMI ಡಿಪಾರ್ಟ್ಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಾರೆ. ಆಟೋಮೋಷನ್ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ನಮ್ಮ ಭಾರತೀಯ ಸೈನಿಕರು ಬಾರ್ಡರ್ಗಳಲ್ಲಿ ಬಳಸುವ ಗನ್ಸ್, ಪಿಸ್ತೂಲ್ ಗಳು ಕೆಟ್ಟಾಗ, ಅವುಗಳನ್ನ ಸರ್ವೀಸ್ ಮಾಡಿ, ಮತ್ತೆ ಬಳಕೆಗೆ ಯೋಗ್ಯವಾಗುವಂತೆ ಸಿದ್ದಗೊಳಿಸಿ, ಕ್ವಾಲಿಟಿ ಚೆಕ್ ಮಾಡಿ ಕೊಡುವ ಕಾರ್ಯ ಅದಾಗಿರುತ್ತೆ. ತಮ್ಮ 16 ವರ್ಷಗಳ ಆರ್ಮಿ ಕೆಲಸದಲ್ಲಿ ಮೊದಲ ಆರು ತಿಂಗಳು ನೇಪಾಳದಲ್ಲಿ ನಂತರದ ಹದಿನೈದೂವರೆ ವರ್ಷಗಳ ಸೇವೆ ಯನ್ನ ಜಮ್ಮು-ಕಾಶ್ಮೀರದಲ್ಲಿರೋ ಪಾಕ್ ಬಾರ್ಡರ್ನಲ್ಲೇ ಕಳೆಯುತ್ತಾರೆ.
ದುಬೈನಲ್ಲಿದ್ದಾಗಲೇ ಸೋದರತ್ತೆ ಮಗಳು ರೇಣುಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಕ್ರವರ್ತಿ, ನಂತರದ ದಿನಗಳಲ್ಲಿ ಆಕೆಯನ್ನ ಕೂಡ ಚೆನ್ನಾಗಿ ಓದಿಸುತ್ತಾರೆ. ಪಬ್ಲಿಕ್ ಅಡ್ಮಿನಿ ಸ್ಟ್ರೇಷನ್ನಲ್ಲಿ ಎಂ.ಎ ಜೊತೆಗೆ MEd ಕೂಡ ಮಾಡಿಸ್ತಾರೆ. ಚಿಲ್ಡ್ರನ್ ಎಜುಕೇಷನ್ನಲ್ಲಿ ಡಿಪ್ಲೋಮಾ ಕೂಡ ಮಾಡಿದ ರೇಣುಕಾ ಅವರು, ಡೆಲ್ಲಿಯ ಪ್ರತಿಷ್ಠಿತ ಆರ್ಕೆ ಪಬ್ಲಿಕ್ ಸ್ಕೂಲ್ನಲ್ಲಿ ವೃತ್ತಿ ಶುರು ಮಾಡ್ತಾರೆ. ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದ ಚಕ್ರವರ್ತಿ ಪತ್ನಿ ರೇಣುಕಾ ಚಿಕಿತ್ಸೆ ಫಲಕಾರಿ ಆಗದೆ ಕೊನೆಯುಸಿರೆಳೆಯುತ್ತಾರೆ.
ಅದೇ ಹಠಕ್ಕೆ ತನ್ನ ಇಬ್ಬರೂ ಹೆಣ್ಣು ಮಕ್ಕಳನ್ನ ರಷ್ಯಾದ ವೋಲ್ಗೋಗ್ರಾಡ್ ಯೂನಿವರ್ಸಿಟಿಯಲ್ಲಿ MBBS ಮಾಡಿಸ್ತಾರೆ ಚಕ್ರವರ್ತಿ. ಅದೇ ಸಮಯದಲ್ಲಿ ಆರ್ಮಿಯಿಂದ ನಿವೃತ್ತಿ ಹೊಂದುವ ಚಕ್ರವರ್ತಿ, ಡೆಲ್ಲಿಯ L & T ಕಂಪೆನಿಯಲ್ಲಿ ಅಗ್ರಿಕಲ್ಚರ್ ಡಿವಿಷನ್ನಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ 15 ವರ್ಷಗಳ ಕಾಲ ಇಡೀ ಇಂಡಿಯಾ ಸುತ್ತುತ್ತಾರೆ. ಮಕ್ಕಳು ಕೂಡ ಪೂನಾದಲ್ಲಿ ಹೌಸ್ ಸರ್ಜನ್ಗಳಾಗಿ ಕೆಲಸ ಮಾಡಿ, ಲಂಡನ್ನಲ್ಲಿ ಸ್ಪೆಷಲೈಸೇಷನ್ಗಳನ್ನ ಮಾಡಿಕೊಂಡು ಕ್ವೀನ್ಸ್ ಆಸ್ಪತ್ರೆ ಯಲ್ಲಿ ಗೈನೋಕಾಲಜಿಸ್ಟ್ ಹಾಗೂ ಪೀಡಿಯಾಟ್ರಿಷಿಯನ್ಗಳಾಗಿ ವೃತ್ತಿ ಆರಂಭಿಸುತ್ತಾರೆ.
ಹಿರಿಯ ಮಗಳು ಕೀರ್ತಿ ಸೇನ್ ವೈದ್ಯರೊಬ್ಬರನ್ನು ಮದ್ವೆ ಆಗಿ ಎರಡು ಮಕ್ಕಳ ತಾಯಿ ಆಗ್ತಾರೆ. ಕಿರಿಯ ಮಗಳು ಕಾವ್ಯ ಸ್ಪಂದನ ಇಂಜಿನಿಯರ್ನ ಕಲ್ಯಾಣವಾಗಿ ಒಂದು ಮಗುವಿಗೆ ತಾಯಿ ಆಗಿದ್ದಾರೆ. ಚಕ್ರವರ್ತಿಯ ಇಬ್ಬರೂ ಮಕ್ಕಳು ಲಂಡನ್ನಲ್ಲೇ ಯುಕೆ ಪೌರತ್ವ ಪಡೆದು ಅಲ್ಲೇ ಸೆಟಲ್ ಆಗಿದ್ದಾರೆ. ಇನ್ನು ಚಕ್ರವರ್ತಿಯ ಅಕ್ಕ ಶಾರದಾ ಲಕ್ಷ್ಮೀ ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ನಿವೃತ್ತಿ ಪಡೆದಿದ್ದಾರೆ.
ಚಕ್ರವರ್ತಿಗೆ ಕಾಕಿನಾಡದಲ್ಲೊಂದು ಮನೆಯಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಒಂದು ಸ್ವಂತ ಮನೆಯಿದೆ. ಆದ್ರೀಗ ಹೆಂಡ್ತಿ, ಮಕ್ಕಳು ಯಾರೂ ಜೊತೆಗಿರದ ಕಾರಣ, ಬೆಂಗಳೂರಿನ ಮನೆಯನ್ನ ಅಕ್ಕನಿಗೇ ಬಿಟ್ಟುಕೊಟ್ಟಿದ್ದಾರೆ ಚಕ್ರವರ್ತಿ. ಲಂಡನ್ನಲ್ಲಿರೋ ಮಕ್ಕಳು, ಅಳಿಯಂದಿರು ಮೊಮ್ಮಕ್ಕಳು ಸಮೇತ ಐದು ವರ್ಷಕ್ಕೊಮ್ಮೆ ಇಂಡಿಯಾಗೆ ಬರ್ತಾರಂತೆ. ಮೂರು ತಿಂಗಳ ಕಾಲ ಇಲ್ಲಿ ಉಳಿದುಕೊಳ್ಳುವ ಅವರ ಜೊತೆ ಕಾಕಿನಾಡ, ಬೆಂಗಳೂರು ಸೇರಿದಂತೆ ತಿರುಪತಿ, ಶಿರಡಿ, ಕೇದರನಾಥ, ಧರ್ಮಸ್ಥಳ ಅಂತ ಟೆಂಪಲ್ ರನ್ ಮಾಡ್ತಾರಂತೆ.
ಇಷ್ಟೆಲ್ಲಾ ಇದ್ದುಕೊಂಡು ಚಕ್ರವರ್ತಿ ಪಿಜಿ ಅಥ್ವಾ ಸಣ್ಣದೊಂದು ರೂಮ್ನಲ್ಲಿ ಇದ್ದಾರಾ ಅಂದ್ರೆ ನೋ. ಮಲ್ಲೇಶ್ವರಂನಲ್ಲಿ ತನ್ನ ಆತ್ಮೀಯ ಗೆಳೆಯನೊಬ್ಬನ ಬಂಗಲೆಯಲ್ಲಿ ಉಳಿದುಕೊಂಡಿದ್ದಾರೆ. ಚಕ್ರವರ್ತಿ ಸ್ನೇಹಿತ ಲಂಡನ್ನಲ್ಲಿ ನೆಲೆಸಿರೋದ್ರಿಂದ ಆತನ ಬಂಗಲೆಯನ್ನ ಬಾಡಿಗೆಗೆ ಕೊಡದೆ, ಚಕ್ರವರ್ತಿಗೆ ಉಳಿದುಕೊಳ್ಳಲು ನೀಡಿರುವುದು ಇವರ ಮೇಲಿನ ಪ್ರೀತಿ ಹಾಗೂ ನಂಬಿಕೆಯನ್ನ ಎತ್ತಿ ತೋರಿಸುತ್ತದೆ. ಅಂದಹಾಗೆ ಕಳೆದ ಒಂದೂವರೆ ವರ್ಷದಿಂದ ಸೆಕ್ಯೂರಿಟಿ ಗಾರ್ಡ್ ಆಗಿ ಏಜೆನ್ಸಿ ಯೊಂದಕ್ಕೆ ಕೆಲಸ ಮಾಡ್ತಿರೋ ಚಕ್ರವರ್ತಿಗೆ ಬ್ಯಾಂಕ್ ಬ್ಯಾಲೆನ್ಸ್ ಕೂಡ ಜೋರಾಗಿಯೇ ಇದೆ. ಅದರಿಂದ ಬರುವ ಬಡ್ಡಿಯಲ್ಲಿ ಆತನ ಜೀವನ ಸರಾಗವಾಗಿ ನಡೆದುಹೋಗುತ್ತದೆ. ಆದರೂ ಕೂಡ ಆತ ಕೈ ಕಟ್ಟಿ ಮನೆಯಲ್ಲಿ ಕೂರುತ್ತಿಲ್ಲ. ಪ್ರತೀ ದಿನ 12 ಗಂಟೆಗಳ ಕಾಲ ಸೆಕ್ಯೂರಿಟಿ ಕೆಲಸ ಮಾಡ್ತಿ ದ್ದಾರೆ. ತಿಂಗಳಪೂರ ದುಡಿದರೂ 15 ಸಾವಿರ ಸಂಬಳ. ತನಗೆ ಸಂಬಳಕ್ಕಿಂತ ಹೆಚ್ಚಾಗಿ ಕೈ ಕಾಲು ಗಟ್ಟಿ ಇರೋ ತನಕ ಕೈಕಟ್ಟಿ ಕೂರಬಾರದು ಅನ್ನೋ ಮನೋಭಾವ ಇದೆಯಲ್ಲ ಅದು ನಿಜಕ್ಕೂ ಗ್ರೇಟ್ ಅನಿಸಿದೆ.
ಇಂದು ವಿಶ್ವ ಕಾರ್ಮಿಕರ ದಿನ. ಕಾಯಕವೇ ಕೈಲಾಸ ಅನ್ನೋ ಗಾದೆ ಮಾತು ಇಂತಹ ಕಾಯಕಜೀವ ಗಳಿಂದಲೇ ಇನ್ನೂ ಚಾಲ್ತಿಯಲ್ಲಿದೆ. ಡಿಗ್ರಿ, ಮಾಸ್ಟರ್ ಡಿಗ್ರಿಗಳನ್ನ ಪಡೆದು, ನಾನು ನಿರುದ್ಯೋಗಿ, ನನಗೆ ಯಾರೂ ಕೆಲಸ ಕೊಡ್ತಿಲ್ಲ ಅಂತ ಅದೆಷ್ಟೋ ಮಂದಿ ಪೋಷಕರ ಹಂಗಲ್ಲಿ ಬದುಕ್ತಿರ್ತಾರೆ. ಅಂತಹವರಿಗೆ ಈ ಚಕ್ರವರ್ತಿ ಸ್ಫೂರ್ತಿ ಆಗಬಲ್ಲರು. ಇಂತಹ ಅಪರೂಪದ ವ್ಯಕ್ತಿ ಹಾಗೂ ವ್ಯಕ್ತಿತ್ವಕ್ಕೆ ಒಂದು ಹ್ಯಾಟ್ಸಾಫ್ ಹೇಳಲೇಬೇಕು ಅಲ್ಲವೇ..?