ಸಮ ಸಮಾಜದ ಆಶಯ ಹೊಂದಿದ್ದ ಬಸವಣ್ಣ-ಡಾ.ಕೋಡಿರಂಗಪ್ಪ
ಕಾಯಕವೇ ಕೈಲಾಸ ಎಂಬ ತತ್ವವನ್ನು ಸಾರಿದ ಬಸವಣ್ಣನವರು ಎಲ್ಲರೂ ಕಾಯಕವನ್ನು ಮಾಡುವು ದರ ಮೂಲಕ ಸ್ವಾವಲಂಬಿ ಜೀವನವನ್ನು ನಡಿಸಬೇಕೆಂದು ಸಾರಿ ಹೇಳಿದರು. ಅಷ್ಟೇ ಅಲ್ಲದೆ ಸಮಾಜ ದಲ್ಲಿ ಇದ್ದಂತಹ ಮೂಡನಂಬಿಕೆ,ಕಂದಾಚಾರ, ಅನಾಚಾರಗಳನ್ನು ಖಂಡಿಸಿ ಸಮಾಜ ಸುಧಾರಣೆಗೆ ಅವಿರತ ಪ್ರಯತ್ನಿಸಿದರು. ಅಂತರ್ಜಾತಿಯ ವಿವಾಹಗಳನ್ನು ಮಾಡುವುದರ ಮೂಲಕ ಸಮಾಜದಲ್ಲಿ ಕ್ರಾಂತಿಕಾರಕ ಹೆಜ್ಜೆಯನಿಡಿಸಿದರು


ಚಿಕ್ಕಬಳ್ಳಾಪುರ: ಸಮ ಸಮಾಜದ ಆಶಯ ಹೊಂದಿದ್ದ ಬಸವಣ್ಣ 12ನೇ ಶತಮಾನದ ನೈಜ ಸುಧಾರಕರಾಗಿದ್ದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಕೋಡಿರಂಗಪ್ಪ ತಿಳಿಸಿದರು. ನಗರದ ನಂದಿ ರಂಗಮಂದಿರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ಬಸವಣ್ಣನವರ ಜಯಂತಿಯಲ್ಲಿ ಮಾತನಾಡಿದರು.
12ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣಕ್ಕಾಗಿ ಎಲ್ಲರನ್ನು ಒಳಗೊಂಡ ಅನುಭವ ಮಂಟಪವನ್ನು ಸ್ಥಾಪಿಸಿ ಆ ಮೂಲಕ ಸಮಾಜದಲ್ಲಿ ಎಲ್ಲಾ ಜಾತಿಯ ಜನಾಂಗದವರು ಒಂದೇ ಎಂಬ ಕ್ರಾಂತಿಕಾರಕ ಬದಲಾವಣೆಯನ್ನು ತರಲು ಶ್ರಮಿಸಿದರೆಂದು ತಿಳಿಸಿದರು.
ಕಾಯಕವೇ ಕೈಲಾಸ ಎಂಬ ತತ್ವವನ್ನು ಸಾರಿದ ಬಸವಣ್ಣನವರು ಎಲ್ಲರೂ ಕಾಯಕವನ್ನು ಮಾಡುವುದರ ಮೂಲಕ ಸ್ವಾವಲಂಬಿ ಜೀವನವನ್ನು ನಡಿಸಬೇಕೆಂದು ಸಾರಿ ಹೇಳಿದರು. ಅಷ್ಟೇ ಅಲ್ಲದೆ ಸಮಾಜದಲ್ಲಿ ಇದ್ದಂತಹ ಮೂಡನಂಬಿಕೆ,ಕಂದಾಚಾರ, ಅನಾಚಾರಗಳನ್ನು ಖಂಡಿಸಿ ಸಮಾಜ ಸುಧಾರಣೆಗೆ ಅವಿರತ ಪ್ರಯತ್ನಿಸಿದರು. ಅಂತರ್ಜಾತಿಯ ವಿವಾಹಗಳನ್ನು ಮಾಡುವುದರ ಮೂಲಕ ಸಮಾಜದಲ್ಲಿ ಕ್ರಾಂತಿಕಾರಕ ಹೆಜ್ಜೆಯನಿಡಿಸಿದರು.12ನೇ ಶತಮಾನದಲ್ಲಿ ರಚನೆಯಾಗಿರು ವಂತಹ ಅನೇಕ ವಚನಗಳು ಇಂದಿಗೂ ಸರ್ವಕಾಲಿಕವಾಗಿದ್ದು ಎಲ್ಲರೂ ಅವನ್ನು ಅನುಸರಿಸಿದರೆ ಉತ್ತಮ ಸಮಾಜದ ನಿರ್ಮಾಣಕ್ಕೆ ಕಾರಣವಾಗಬಹುದು ಎಂದು ತಿಳಿಸಿದರು.
ಇದನ್ನೂ ಓದಿ: Chikkaballapur News: ಡಾ.ಬಿ.ಆರ್.ಅಂಬೇಡ್ಕರ್ ಭಾರತ ಮಾತೆ ನೀಡಿರುವ ಅದ್ಭುತ ಚೈತನ್ಯ : ಸಂದೀಪ್‌ಬಿ ರೆಡ್ಡಿ ಬಣ್ಣನೆ
ಕೋಶಾಧ್ಯಕ್ಷರಾದ ಚೆನ್ನಮಲ್ಲಿಕಾರ್ಜುನಯ್ಯ ಮಾತನಾಡುತ್ತಾ 12ನೇ ಶತಮಾನವು ಸಮಾಜದಲ್ಲಿ ಕ್ರಾಂತಿಯನ್ನು ಉಂಟು ಮಾಡಿತ್ತು. ಅಂಬೇಡ್ಕರ್ ರಚಿಸಿರುವ ಸಂವಿಧಾನಕ್ಕೆ ಆಗಿನ ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಚರ್ಚೆಗಳು ಸ್ಪೂರ್ತಿಯಾಗಿದ್ದವೆಂದೂ ಅನೇಕ ಜಾತಿ ಜನಾಂಗದ ಶರಣರು ಕಾಯಕಕ್ಕೆ ಮಹತ್ವವನ್ನು ನೀಡಿ ತಮ್ಮದೇಯಾದ ಅನುಭವಗಳ ಮೂಲಕ ವಚನಗಳನ್ನು ರಚಿಸಿದ್ದಾರೆಂದು ತಿಳಿಸಿದರು.
ಅಮೃತ್ ಕುಮಾರ್ ಮಾತನಾಡುತ್ತಾ ಕನ್ನಡ ನಾಡಿನಲ್ಲಿ ಸಾಮಾಜಿಕ ಬದಲಾವಣೆಗಾಗಿ, ಪ್ರತಿ ಯೊಬ್ಬ ವ್ಯಕ್ತಿಯ ಮಾನವ ಘನತೆ ಹಾಗೂ ಇಡೀ ಮನುಕುಲದ ಶ್ರೇಯಸ್ಸಿಗಾಗಿ 12ನೇ ಶತಮಾನ ದಲ್ಲಿಯೇ ವಿಶಿಷ್ಟ ಹೋರಾಟ ನಡೆಸಿರುವ, ನಿರ್ಲಕ್ಷಿತ ಹಾಗೂ ನೊಂದ ಜನತೆಗೆ ದಾರಿ ಬೆಳಕಾಗಿ ನಿಂತ ಶ್ರೀ ಬಸವೇಶ್ವರರು ಹಾಗೂ ಅವರ ಎಲ್ಲಾ ಶಿವಶರಣರಿಗೆ ಕನ್ನಡ ನಾಡು ಋಣಿಯಾಗಿದೆ,
ಅನಕ್ಷರತೆ ಅಜ್ಞಾನ ತಾರತಮ್ಯ ಮತ್ತು ಶೋಷಣೆಯಿಂದಲೇ ತುಂಬಿದ್ದ ಸಮಾಜವನ್ನು ಸಮ ಸಮಾಜವನ್ನಾಗಿ ಸೃಷ್ಟಿಸಲು ಬಸವಣ್ಣನವರು ದೊಡ್ಡ ಸಾಮಾಜಿಕ ಪರಿವರ್ತನೆಗೆ ಕಾರಣರಾಗಿ ದ್ದಾರೆ.
ಜನತೆಗೆ ಅಕ್ಷರ ಕಲಿಸಿ ಆಲೋಚನೆ ಬೆಳೆಸಿ ಅವರಲ್ಲಿ ಅಭಿವ್ಯಕ್ತಿಯನ್ನು ಚಾಲನೆಗೊಳಿಸಿ,ಸ್ವಾತಂತ್ರ್ಯ ,ಸಮಾನತೆ, ಕಾಯಕ ಮತ್ತು ಸೇವಾ ಗುಣಗಳನ್ನು ಸಾಹಿತ್ಯದ ಮೂಲಕ ಪ್ರಚರಪಡಿಸಿ ನವ ಸಮಾಜ ನಿರ್ಮಾಣಕ್ಕೆ ನಾಂದಿಯಾಗಿರುವ ಬಸವಣ್ಣನವರನ್ನು ಇಡೀ ಜಗತ್ತು ಸ್ಮರಿಸಿ ಗೌರವಿಸುತ್ತಿದೆಂದು ತಿಳಿಸಿದರು.
ಪ್ರಮೀಳಾ ಅವರು ಬಸವಣ್ಣನವರ ಅನೇಕ ವಚನಗಳನ್ನು ವಾಚಿಸಿ ಅವುಗಳ ಸಾರಾಂಶವನ್ನು ಮಹತ್ವವನ್ನು ವಿವರಿಸಿದರು.
ಪಾ.ಮು. ಚಲಪತಿಗೌಡರವರು ಬಸವಣ್ಣನವರ ವಚನಗಳನ್ನು ಹಾಡುವುದರ ಮೂಲಕ ನುಡಿನಮನವನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷರಾದ ಯಲವಹಳ್ಳಿ ಸೊಣ್ಣೇಗೌಡ, ಕೆ ಎಂ ರೆಡ್ಡಪ್ಪ, ಮಂಚನಬಲೆ ಶ್ರೀನಿವಾಸ್, ನರಸಿಂಹ ಇನ್ನು ಮುಂತಾದವರು ಉಪಸ್ಥಿತರಿದ್ದರು.