ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karimani Serial: 'ಕರಿಮಣಿ' ಸೀರಿಯಲ್‌ನಲ್ಲಿ ಹೊಸ ಟ್ವಿಸ್ಟ್: ಬ್ಲಾಕ್ ರೋಜ್ ಬಗ್ಗೆ ಸಾಹಿತ್ಯಾಗೆ ಗೊತ್ತಾಗುವ ಸಮಯ ಬಂದೇ ಬಿಡ್ತು

ʼಕರಿಮಣಿʼ ಧಾರಾವಾಹಿಯ ನಾಯಕ-ನಾಯಕಿಯಾಗಿ ಕರ್ಣ ಮತ್ತು ಸಾಹಿತ್ಯಾ ಜೋಡಿ ಜನರ ಮನಸ್ಸನ್ನು‌ ಗೆಲ್ಲುತ್ತಿದೆ. ಈ ಧಾರಾವಾಹಿಯಲ್ಲಿ ಬ್ಲ್ಯಾಕ್ ರೋಜ್ ಎನ್ನುವ ಪಾತ್ರ ವೀಕ್ಷಕರಿಗೆ ಅತ್ಯಂತ ಕುತೂಹಲ ಹುಟ್ಟಿಸಿದೆ. ಈ ನೆಗೆಟಿವ್ ಪಾತ್ರ ಸಾದಾ ನಾಯಕ ಕರ್ಣನ ಹಿಂದೆ ಬಿದ್ದಿರುತ್ತೆ. ಆತನನ್ನು ನಾಶ ಮಾಡಲೇಬೇಕು ಅಂತ ಹಠ ಹಿಡಿದಿರುವ ಈ 'ಬ್ಲ್ಯಾಕ್ ರೋಜ್' ಯಾರು? ಸಾಹಿತ್ಯಾಗೆ ಉತ್ತರ ಸಿಗುವ ಸಮಯ ಬಂದೇ ಬಿಟ್ಟಿದೆ.

ʼಕರಿಮಣಿ' ಸೀರಿಯಲ್‌ನಲ್ಲಿ ಬ್ಲಾಕ್ ರೋಜ್ ಪಾತ್ರದ ಬಗ್ಗೆ ಹೊಸ ಟ್ವಿಸ್ಟ್

Karimani' serial

Profile Pushpa Kumari May 20, 2025 3:36 PM

ಬೆಂಗಳೂರು: ಕಲರ್ಸ್ ಕನ್ನಡದ ಜನಪ್ರಿಯ ಸೀರಿಯಲ್‌ಗಳಲ್ಲಿ ಒಂದು 'ಕರಿಮಣಿʼ (Karimani Serial) ಈ ಧಾರಾವಾಹಿಯ ನಾಯಕ-ನಾಯಕಿಯಾಗಿ ಕರ್ಣ ಮತ್ತು ಸಾಹಿತ್ಯಾ ಜೋಡಿ ವೀಕ್ಷಕರ ಮನಸ್ಸನ್ನು‌ ಗೆಲ್ಲುತ್ತಿದೆ. ಈ ಧಾರಾವಾಹಿಯ 'ಬ್ಲ್ಯಾಕ್ ರೋಜ್' ಎನ್ನುವ ಪಾತ್ರ ವೀಕ್ಷಕರಿಗೆ ಅತ್ಯಂತ ಕುತೂಹಲ ಹುಟ್ಟಿಸಿದೆ. ಈ ನೆಗೆಟಿವ್ ಪಾತ್ರ ಸಾದಾ ನಾಯಕ ಕರ್ಣನ ಹಿಂದೆ ಬಿದ್ದಿರುತ್ತೆ. ಆತನನ್ನು ನಾಶ ಮಾಡಲೇಬೇಕು ಅಂತ ಹಠ ಹಿಡಿದಿರುವ ಈ 'ಬ್ಲ್ಯಾಕ್ ರೋಜ್' ಯಾರು? ಎನ್ನುವುದೇ ಕುತೂಹಲ ಕೆರಳಿಸಿದೆ.

ಕುಟುಂಬದ ಸದಸ್ಯರೆಲ್ಲ ಮೆಚ್ಚಿ ನೋಡುವ ಈ ಧಾರಾವಾಹಿಯಲ್ಲಿ 'ಬ್ಲಾಕ್ ರೋಜ್' ಯಾರು ಎನ್ನುವುದನ್ನು ಈಗಾಗಲೇ ಪ್ರೇಕ್ಷಕರಿಗೆ ರಿವೀಲ್ ಮಾಡಲಾಗಿದೆ. ಕರ್ಣನ ತಾಯಿ ಅರುಂಧತಿಯೇ 'ಬ್ಲಾಕ್ ರೋಜ್' ಎನ್ನುವ ರಹಸ್ಯ ನೋಡುಗರಿಗೇನೋ ಗೊತ್ತಾಯ್ತು. ಆದರೆ ಸಾಹಿತ್ಯಾಗೆ ಮಾತ್ರ ಇದರ ಸುಳಿವಿರೋದಿಲ್ಲ. ಇಂಥ ಸಂಧರ್ಭದಲ್ಲಿ ಸದ್ಯದಲ್ಲಿಯೇ ಸಾಹಿತ್ಯಾಗೂ ಕೂಡಾ ತನ್ನ ಕುಟುಂಬದ ಸದಸ್ಯರಲ್ಲಿ ಇರುವ ಒಬ್ಬರೇ 'ಬ್ಲಾಕ್ ರೋಜ್' ಎನ್ನುವ ಸತ್ಯ ಗೊತ್ತಾಗಲಿದೆ. ಇದರಿಂದ ಕರ್ಣ ಮತ್ತು ಸಾಹಿತ್ಯಾ ಜೀವನದಲ್ಲಿ, ಸಂಬಂಧಗಳಲ್ಲಿ ಏನೆಲ್ಲ ಬದಲಾವಣೆಗಳು ಆಗಲಿವೆ ಎನ್ನುವುದು ಬಗ್ಗೆ ಕುತೂಹಲ ಮೂಡಿದೆ.

ಕರ್ಣನ ನಾಶಕ್ಕಾಗಿ ಬ್ಲ್ಯಾಕ್ ರೋಸ್ ಹಲವು ಪ್ರಯತ್ನಗಳನ್ನು ಮಾಡಿದ್ದಾಳೆ. ತನ್ನ ಬೆನ್ನ ಹಿಂದೆ ಬಿದ್ದಿರುವ ಈ ವ್ಯಕ್ತಿ ಯಾರು ಎಂದು ಕರ್ಣ ಕೂಡ ಹುಡುಕಿದ್ದಾನೆ. ಈ ಪಾತ್ರದಿಂದ ಸಾಹಿತ್ಯ ಸಹ ಕಷ್ಟ ಎದುರಿಸಿದ್ದಾಳೆ. ʼಕರಿಮಣಿ' ಸೀರಿಯಲ್ ಈಗಾಗಲೇ ನೋಡುಗರ ಮನ ಗೆದ್ದಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ವಾರದ ಏಳೂ ದಿವಸ ಸಂಜೆ 6 ಗಂಟೆಗೆ 'ಕರಿಮಣಿ' ಪ್ರಸಾರವಾಗುತ್ತಿದೆ.