ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಭಾಗ್ಯ ತೋಡಿದ ಹಳ್ಳಕ್ಕೆ ಸುಲಭವಾಗಿ ಬಿದ್ದ ತಾಂಡವ್ ಗೆಳತಿ: ಮುಂದಿದೆ ಮಾರಿಹಬ್ಬ

ಮೊದಲಿಗೆ ಆ ಹುಡುಗಿಯನ್ನು ಕುಸುಮಾ ದಿಟ್ಟಿಸಿ ನೋಡಿದ್ದಾಳೆ. ಇದನ್ನ ಗಮನಿಸಿದ ಆಕೆ, ನೀವ್ಯಾಕೆ ನನ್ನ ಹಾಗೆ ನೋಡಿದ್ರಿ.. ನಿಮ್ಮ ಮಾತು ಯಾಕೋ ಒಂತರಾ ಇದೆಯಲ್ಲ.. ನೀವು ಮಾಡೆಲಿಂಗ್ಗೆ ಅಂತ ನನ್ನ ಸುಳ್ಳು ಹೇಳಿ ಕರೆಸಿದ್ದೀರಿ ಅನಿಸ್ತಿದೆ ಎಂದು ಹೇಳಿದ್ದಾಳೆ. ಆಗ ಭಾಗ್ಯ ನಗುತ್ತಾ, ಅಬ್ಬಬ್ಬಾ ಕೊನೆಗೂ ಗೊತ್ತಾಯಿಲ್ಲ.. ಇಷ್ಟೊಂದು ಬೇಕಾಯ್ತಾ ಗೊತ್ತಾಗೋಕೆ ಎಂದು ಹೇಳಿದ್ದಾಳೆ.

ಭಾಗ್ಯ ತೋಡಿದ ಹಳ್ಳಕ್ಕೆ ಸುಲಭವಾಗಿ ಬಿದ್ದ ತಾಂಡವ್ ಗೆಳತಿ

Bhagya Lakshmi Serial

Profile Vinay Bhat May 20, 2025 1:38 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಭಾಗ್ಯ ಮನೆಗೆ ಮತ್ತೊಮ್ಮೆ ಕಂಟಕ ತರಲು ಸಂಚು ರೂಪಿಸಿದ್ದ ತಾಂಡವ್​ಗೆ ಈ ಬಾರಿ ಕೂಡ ದೊಡ್ಡ ಹಿನ್ನಡೆಯಾಗಿದೆ. ಪ್ರತಿ ಬಾರಿ ತಾಂಡವ್​ಗೆ ಎಚ್ಚರಿಕೆ ಕೊಟ್ಟು ಸುಮ್ಮನಾಗುತ್ತಿದ್ದ ಭಾಗ್ಯ ಈ ಬಾರಿ ದೊಡ್ಡದೆನೊ ಮಾಡುವುದು ಖಚಿತ ಎನ್ನುತ್ತಿದ್ದಾರೆ ವೀಕ್ಷಕರು. ಸದ್ಯ ಪೂಜಾ-ಕಿಶನ್ ಮದುವೆಯನ್ನು ಹಾಳು ಮಾಡಲು ಹೊರಟಿರುವವರು ಯಾರೆಂದು ಭಾಗ್ಯ ಕಂಡುಹಿಡಿದಿದ್ದಾಳೆ. ಇದಕ್ಕಾಗಿ ಮಾಸ್ಟರ್ ಪ್ಲ್ಯಾನ್ ರೂಪಿಸಿ ಹುಡುಗಿಯನ್ನು ಖೆಡ್ಡಾಕ್ಕೆ ಬೀಳಿಸಿದ್ದಾಳೆ.

ಪೂಜಾಳನ್ನು ಮದುವೆ ಆಗುವ ಹುಡುಗ ಕಿಶನ್​ನ ನಡತೆ ಸರಿಯಿಲ್ಲ ಎಂದು ಸುನಂದಾಗೆ ತೋರಿಸಲು ತಾಂಡವ್, ಹುಡುಗಿಯೊಬ್ಬಳನ್ನು ಛೂ ಬಿಟ್ಟಿರುತ್ತಾನೆ. ಆ ಹುಡುಗಿ ಕಿಶನ್‌ ಬಳಿ ಡ್ರಾಪ್‌ ಕೇಳುವ ನೆಪದಲ್ಲಿ ಆತನ ಬೈಕ್‌ ಏರುತ್ತಾಳೆ. ಬೈಕ್ ಏರಿದ ಬಳಿಕ ಆ ಹುಡುಗಿ ಕಿಶನ್‌ನನ್ನು ಅಪ್ಪಿಕೊಂಡಿದ್ದಾಳೆ. ಇದೆಲ್ಲ ತಾಂಡವ್ ಪ್ಲ್ಯಾನ್. ಇದು ಕಿಶನ್​ಗೆ ಇರಿಸು-ಮುರಿಸು ಉಂಟು ಮಾಡುತ್ತದೆ. ಈ ಘಟನೆಯನ್ನು ಭಾಗ್ಯ-ಕುಸುಮಾ ಕೂಡ ನೋಡುತ್ತಾರೆ. ಮೊದಲಿಗೆ ಕಿಶನ್‌ ಇಂಥ ಕೆಲಸ ಮಾಡ್ತಿದ್ದಾನಾ ಎಂದು ಅನಿಸಿದರೂ, ಅದಾದ ಮೇಲೆ ಅದೇ ಹುಡುಗಿಗೆ ಕಿಶನ್‌ ಬೈಕ್ ನಿಲ್ಲಿಸಿ ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದಾನೆ.

ಕಿಶನ್​ನ ಈ ನಡವಳಿಕೆಯಿಂದ ಭಾಗ್ಯ ಹಾಗೂ ಕುಸುಮಾಗೆ ಗೌರವ ಮತ್ತಷ್ಟು ಹೆಚ್ಚಾಗಿದೆ. ಮತ್ತೊಂದೆಡೆ ಸುನಂದ ಮನೆಗೆ ಬಂದು ಕಿಶನ್ ನಡವಳಿಕೆ ಸರಿಯಿಲ್ಲ.. ಈ ಮದುವೆ ನಡೆಯಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಆದರೆ, ಆ ಹುಡುಗಿಯನ್ನು ಯಾರೋ ಬೇಕೆಂದು ಪ್ಲ್ಯಾನ್ ಮಾಡಿ ಕಳುಹಿಸಿದ್ದು ಎಂದು ಭಾಗ್ಯಾ ಹಾಗೂ ಕಿಶನ್​ಗೆ ಅನುಮಾನ ಮೂಡುತ್ತದೆ. ಹೀಗಾಗಿ ಇದರ ಹಿಂದಿರುವ ಮಾಸ್ಟರ್ ಮೈಂಡ್ ಯಾರೆಂದು ತಿಳಿಯಲು ಇವರಿಬ್ಬರು ಮುಂದಾಗುತ್ತಾರೆ. ಕಿಶನ್‌ ಜೊತೆ ಬೈಕ್​ನಲ್ಲಿ ಕೂತಾಗ ಆ ಹುಡುಗಿ ಆತನ ಜಾಕೆಟ್‌ನಲ್ಲಿ ತನ್ನ ವಿಸಿಟಿಂಗ್‌ ಕಾರ್ಡ್‌ ಇಟ್ಟಿರುತ್ತಾಳೆ. ಆ ನಂಬರ್‌ ಅನ್ನು ಕಿಶನ್ ಭಾಗ್ಯಾಗೆ ನೀಡಿದ್ದಾನೆ.

ಆ ಹುಡುಗಿಗೆ ಫೋನ್‌ ಮಾಡಿದ ಭಾಗ್ಯ, ಮಾಡೆಲಿಂಗ್‌ ಏಜೆನ್ಸಿಯಿಂದ ಕರೆ ಮಾಡ್ತಿದ್ದೇವೆ ಎಂದು ಸುಳ್ಳು ಹೇಳಿ ಮಾತನಾಡಿದ್ದಾಳೆ. ಎಲ್ಲವನ್ನು ಫೋನ್‌ನಲ್ಲಿ ಮಾತನಾಡುವುದು ಬೇಡ, ಲೊಕೇಷನ್ ಕಳುಹಿಸುತ್ತೇನೆ, ಅಲ್ಲಿಗೆ ಬನ್ನಿ ಎಲ್ಲ ಡಿಟೇಲ್ಸ್‌ ಕೊಡ್ತಿನಿ ಎಂದಿದ್ದಾಳೆ. ಭಾಗ್ಯಾಳ ಮಾತನ್ನ ನಂಬಿ ಆ ಹುಡುಗಿ ಲೊಕೇಷನ್​ಗೆ ಬಂದಿದ್ದಾಳೆ. ಅಲ್ಲಿಗೆ ಭಾಗ್ಯ ಹಾಗೂ ಕುಸುಮಾ ಕೂಡ ಬಂದಿದ್ದು, ಆ ಹುಡುಗಿಯ ಬೆಂಡೆತ್ತಿದ್ದಾರೆ.



ಮೊದಲಿಗೆ ಆ ಹುಡುಗಿಯನ್ನು ಕುಸುಮಾ ದಿಟ್ಟಿಸಿ ನೋಡಿದ್ದಾಳೆ. ಇದನ್ನ ಗಮನಿಸಿದ ಆಕೆ, ನೀವ್ಯಾಕೆ ನನ್ನ ಹಾಗೆ ನೋಡಿದ್ರಿ.. ನಿಮ್ಮ ಮಾತು ಯಾಕೋ ಒಂತರಾ ಇದೆಯಲ್ಲ.. ನೀವು ಮಾಡೆಲಿಂಗ್​ಗೆ ಅಂತ ನನ್ನ ಸುಳ್ಳು ಹೇಳಿ ಕರೆಸಿದ್ದೀರಿ ಅನಿಸ್ತಿದೆ ಎಂದು ಹೇಳಿದ್ದಾಳೆ. ಆಗ ಭಾಗ್ಯ ನಗುತ್ತಾ, ಅಬ್ಬಬ್ಬಾ ಕೊನೆಗೂ ಗೊತ್ತಾಯಿಲ್ಲ.. ಇಷ್ಟೊಂದು ಬೇಕಾಯ್ತಾ ಗೊತ್ತಾಗೋಕೆ ಎಂದು ಹೇಳಿದ್ದಾಳೆ. ಅತ್ತ ಕುಸುಮಾ, ನಾನು ನಿನ್ನನ್ನ ಸುಳ್ಳು ಹೇಳಿ ಕರಿಸಿದ್ದು ಅಂತ ನೋಡಿದಾಗಲೇ ಗೊತ್ತಾಗಬೇಕಿತ್ತು.. ಆದ್ರೆ ನಿನ್ಗೆ ಈವಾಗ ಗೊತ್ತಾಗಿದೆ ಅಲ್ವಾ, ಅದೇ ಆಶ್ಚರ್ಯ ಎಂದು ಹೇಳಿದ್ದಾರೆ.

ಸದ್ಯ ಭಾಗ್ಯ-ಕುಸುಮಾ ಕೈಗೆ ಈ ಹುಡುಗಿ ಸರಿಯಾಗಿ ಸಿಕ್ಕಾಕಿಕೊಂಡಿದ್ದಾಳೆ. ಇವರ ಕೈಯಿಂದ ನಿಜಾಂಶ ಬಾಯಿಬಿಡುಸುವುದು ಖಚಿತ. ಈಕೆ ಇದೆಲ್ಲ ತಾಂಡವ್ ಪ್ಲ್ಯಾನ್ ಅಂತ ಹೇಳೋದೂ ಖಚಿತ. ಆದರೆ, ಪ್ರತಿ ಬಾರಿ ತಾಂಡವ್ ತಪ್ಪು ಮಾಡಿದಾಗ ಮಾತಿನಲ್ಲಿ ಮಾತ್ರ ಚಾಟಿ ಬೀಸುತ್ತಿದ್ದ ಭಾಗ್ಯ ಈ ಬಾರಿ ಏನು ಮಾಡುತ್ತಾಳೆ ಎಂಬುದು ಕುತೂಹಲ ಕೆರಳಿಸಿದೆ.

Mokshitha Pai: ಬ್ಲ್ಯಾಕ್ ಬ್ಯೂಟಿ ಮೋಕ್ಷಿ: ಕಪ್ಪು ಬಣ್ಣದ ಸೀರೆಯಲ್ಲಿ ಬಿಗ್ ಬಾಸ್ ಸುಂದರಿ