ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishabh Pant: ಪಂತ್‌ ಬ್ಯಾಟಿಂಗ್‌ ವೈಫಲ್ಯ ಕಂಡು ಗ್ಯಾಲರಿಯಿಂದ ಹೊರನಡೆದ ಗೋಯೆಂಕಾ

ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ಪಂತ್‌ ಆಡಿದ 11 ಇನಿಂಗ್ಸ್‌ಗಲ್ಲಿ ಕಲೆಹಾಕಿದ್ದು ಕೇವಲ 128 ರನ್‌ ಮಾತ್ರ. ಬ್ಯಾಟಿಂಗ್‌ ಮಾತ್ರವಲ್ಲದೆ ಕೀಪಿಂಗ್‌ನಲ್ಲಿಯೂ ಪಂತ್‌ ಅವರದ್ದು ಈ ಬಾರಿ ಸಾಧಾರಣ ಪ್ರದರ್ಶನ. ಹಲವು ಸ್ಟಂಪಿಂಗ್‌ ಮತ್ತು ಕ್ಯಾಚ್‌ಗಳನ್ನು ಕೈಚೆಲ್ಲಿದ ನಿದರ್ಶನಗಳು ಇವೆ.

ಪಂತ್‌ ಬ್ಯಾಟಿಂಗ್‌ ವೈಫಲ್ಯ ಕಂಡು ಗ್ಯಾಲರಿಯಿಂದ ಹೊರನಡೆದ ಗೋಯೆಂಕಾ

Profile Abhilash BC May 20, 2025 9:13 AM

ಲಕ್ನೋ: ಕಳೆದ ಮೆಗಾ ಹಾರಾಜಿನಲ್ಲಿ ದಾಖಲೆಯ 27 ಕೋಟಿ ರೂ. ಪಡೆದು ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ತಂಡದ ಪಾಲಾಗಿದ್ದ ರಿಷಭ್ ಪಂತ್‌(Rishabh Pant) ತಮ್ಮ ಹರಾಜು ಮೊತ್ತಕ್ಕಿಂತ ಸತತ ಬ್ಯಾಟಿಂಗ್‌ ವೈಫಲ್ಯದ ಮೂಲಕವೇ ಹೆಚ್ಚು ಸುದ್ದಿಯಾಗಿದ್ದಾರೆ. ಆಡಿದ ಎಲ್ಲ ಪಂದ್ಯಗಳಲ್ಲಿಯೂ ನಿರೀಕ್ಷಿತ ಬ್ಯಾಟಿಂಗ್‌ ನಡೆಸಲು ವಿಫಲರಾಗಿದ್ದಾರೆ. ಸೋಮವಾರದ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿಯೂ ಒಂದಂಕಿಗೆ ವಿಕೆಟ್‌ ಕಳೆದುಕೊಂಡರು ನಿರಾಸೆ ಮೂಡಿಸಿದರು. ಪಂತ್‌ ಅವರ ಈ ಕಳಪೆ ಬ್ಯಾಟಿಂಗ್‌ ಕಂಡು ತಂಡದ ಮಾಲೀಕ ಸಂಜೀವ್ ಗೋಯೆಂಕಾ(Sanjiv Goenka) ಕುಪಿತರಾಗಿ ಪಂದ್ಯ ವೀಕ್ಷಿಸುವುದನ್ನು ಬಿಟ್ಟು ಸ್ಟ್ಯಾಂಡ್‌ನಿಂದ ತೆರಳಿದರು. ಈ ವಿಡಿಯೊ ಇದೀಗ ವೈರಲ್‌ ಆಗಿದೆ.

ಹಾಲಿ ಆವೃತ್ತಿಯಲ್ಲಿ ಪಂತ್‌ ಆಡಿದ 11 ಇನಿಂಗ್ಸ್‌ಗಲ್ಲಿ ಕಲೆಹಾಕಿದ್ದು ಕೇವಲ 128 ರನ್‌ ಮಾತ್ರ. ಬ್ಯಾಟಿಂಗ್‌ ಮಾತ್ರವಲ್ಲದೆ ಕೀಪಿಂಗ್‌ನಲ್ಲಿಯೂ ಪಂತ್‌ ಅವರದ್ದು ಈ ಬಾರಿ ಸಾಧಾರಣ ಪ್ರದರ್ಶನ. ಹಲವು ಸ್ಟಂಪಿಂಗ್‌ ಮತ್ತು ಕ್ಯಾಚ್‌ಗಳನ್ನು ಕೈಚೆಲ್ಲಿದ ನಿದರ್ಶನಗಳು ಇವೆ.



ಪಂತ್‌ ಅವರನ್ನು ಕೆಲ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಕೂಡ ಮಾಡಲಾರಂಭಿಸಿದ್ದಾರೆ. 27 ಕೋಟಿ ಬೆಲೆಗೆ ಕನಿಷ್ಠ ಪಂದ್ಯವೊಂದರಲ್ಲಿ 27 ರನ್ ಬಾರಿಸಿ ಎಂದು ಕಾಲೆಳೆದಿದ್ದಾರೆ. ಇನ್ನುಳಿದ ಎರಡು ಪಂದ್ಯಗಳು ಲಕ್ನೋ ಪಾಲಿಗೆ ಔಪಚಾರಿಕ ಪಂದ್ಯವಾದರೂ ಪಂತ್‌ಗೆ ಇದು ಪ್ರತಿಷ್ಠೆಯ ಪಂದ್ಯವಾಗಿದೆ. ಈ ಪಂದ್ಯದಲ್ಲಾದರೂ ತಮ್ಮ ಬ್ಯಾಟಿಂಗ್‌ ಸಾಮರ್ಥ್ಯ ತೋರುವ ಅನಿವಾರ್ಯ ಅವರ ಮುಂದಿದೆ.

ಇದನ್ನೂ ಓದಿ IPL 2025: ಲಸಿತ್ ಮಾಲಿಂಗ ದಾಖಲೆ ಮುರಿದ ಹರ್ಷಲ್‌ ಪಟೇಲ್‌

ಏಕಾನ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಆರಂಭಿಕ ಬ್ಯಾಟರ್‌ಗಳಾದ ಮಿಚೆಲ್‌ ಮಾರ್ಷ್‌ ಮತ್ತು ಐಡೆನ್‌ ಮಾರ್ಕ್ರಮ್‌ ಅರ್ಧಶತಕದ ನೆರವಿನಿಂದ 7 ವಿಕೆಟ್‌ಗೆ 205 ರನ್‌ ಮೊತ್ತ ಪೇರಿಸಿತು. ಜವಾಬಿತ್ತ ಸನ್‌ರೈಸರ್ಸ್‌ ಹೈದರಾಬಾದ್‌ ದಿಟ್ಟ ರೀತಿಯ ಬ್ಯಾಟಿಂಗ್‌ ಮೂಲಕ 18.2 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 206 ರನ್‌ ಬಾರಿಸಿ ಗೆಲುವು ಸಾಧಿಸಿ ಲಕ್ನೋ ತಂಡವನ್ನು ಪ್ಲೇಆಫ್‌ರೇಸ್‌ನಿಂದ ಹೊರದಬ್ಬಿತು.