ಭಾರತದಾದ್ಯಂತ ರಸ್ತೆ ಸುರಕ್ಷತೆ ಸಾಧಿಸುವ ತನ್ನ ದೀರ್ಘಕಾಲೀನ ಬದ್ಧತೆಯನ್ನು ಪುನರುಚ್ಛರಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್
ಟೊಯೋಟಾದ ರಸ್ತೆ ಸುರಕ್ಷತಾ ಯೋಜನೆಗಳಲ್ಲಿ ಟಿಎಸ್ಇಪಿ ಪ್ರಮುಖ ಕಾರ್ಯಕ್ರಮವಾಗಿದ್ದು, ಈ ಯೋಜನೆಯನ್ನು 2007ರಲ್ಲಿ ಆರಂಭಿಸಲಾಯಿತು. ಈ ಮೂಲಕ ಟೊಯೋಟಾ ಸಂಸ್ಥೆಯು ಸರ್ಕಾರಿ ಮತ್ತು ಖಾಸಗಿ ಶಾಲೆಗಳ 5ರಿಂದ 9ನೇ ತರಗತಿಯ ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮತ್ತು ವರ್ತನೆ ಬದಲಾವಣೆಗೆ ಉತ್ತೇಜನ ನೀಡುತ್ತದೆ.


ಬೆಂಗಳೂರು: ಸುರಕ್ಷಿತ ಮತ್ತು ಜವಾಬ್ದಾರಿಯುತ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸುವ ಗುರಿ ಹೊಂದಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಭಾರತದಾದ್ಯಂತ ತನ್ನ ವಿಶಿಷ್ಟ ಯೋಜನೆಗಳ ಮೂಲಕ ರಸ್ತೆ ಸುರಕ್ಷತೆ ಸಾಧಿಸುವ ತನ್ನ ದೀರ್ಘಕಾಲೀನ ಬದ್ಧತೆಯನ್ನು ಪುನರುಚ್ಛರಿಸಿದೆ. ಜಾಗೃತಿ, ಶಿಕ್ಷಣ ಮತ್ತು ಹೊಸತನವನ್ನು ಒಳಗೊಂಡ ಟಿಕೆಎಂನ ಸಮಗ್ರ ರಸ್ತೆ ಸುರಕ್ಷತಾ ಯೋಜನೆಗಳು ಭಾರತದ 10 ಲಕ್ಷಕ್ಕೂ ಹೆಚ್ಚು ಜನರ ಬದುಕಿನಲ್ಲಿ ಧನಾತ್ಮಕ ಪರಿಣಾಮ ಬೀರಿರುವುದು ಗಮನಾರ್ಹವಾಗಿದೆ.
ಟೊಯೋಟಾದ ರಸ್ತೆ ಸುರಕ್ಷತಾ ಯೋಜನೆಗಳಲ್ಲಿ ಟಿಎಸ್ಇಪಿ ಪ್ರಮುಖ ಕಾರ್ಯಕ್ರಮವಾಗಿದ್ದು, ಈ ಯೋಜನೆಯನ್ನು 2007ರಲ್ಲಿ ಆರಂಭಿಸಲಾಯಿತು. ಈ ಮೂಲಕ ಟೊಯೋಟಾ ಸಂಸ್ಥೆಯು ಸರ್ಕಾರಿ ಮತ್ತು ಖಾಸಗಿ ಶಾಲೆಗಳ 5ರಿಂದ 9ನೇ ತರಗತಿಯ ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮತ್ತು ವರ್ತನೆ ಬದಲಾವಣೆಗೆ ಉತ್ತೇಜನ ನೀಡುತ್ತದೆ. “ರಸ್ತೆ ಸುರಕ್ಷತೆ – ನನ್ನ ಹಕ್ಕು, ನನ್ನ ಜವಾಬ್ದಾರಿ” ಎಂಬ ಥೀಮ್ ಹೊಂದಿರುವ ಈ ಯೋಜನೆಯು ನಾಟಕ, ಪೋಸ್ಟರ್ ತಯಾರಿಕೆ, ರೋಡ್ ಸೇಫ್ಟಿ ಕ್ಲಬ್ ಗಳಂತಹ ಆಕರ್ಷಕ ವಿಧಾನಗಳ ಮೂಲಕ ಜಾಗೃತಿ ಮೂಡಿಸುತ್ತದೆ, ವರ್ತನೆ ಬದಲಾಯಿಸಿಕೊಳ್ಳಲು ಪ್ರೇರೇಪಿಸುತ್ತದೆ ಮತ್ತು ಅಬಿಯಾನಗಳನ್ನು ನಡೆಸುತ್ತದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಾ ಬಂದಿದೆ.
ಇದನ್ನೂ ಓದಿ: Bangalore To Mangalore Train: ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು; ಇಲ್ಲಿದೆ ವೇಳಾಪಟ್ಟಿ
ಇದುವರೆಗೆ, ಟಿಎಸ್ಇಪಿ ಯೋಜನೆ ಮೂಲಕ 9,29,288 ವಿದ್ಯಾರ್ಥಿಗಳನ್ನು ತಲುಪಲಾಗಿದ್ದು, 2023ರಿಂದ 140 ಶಾಲೆಗಳ 1643 ಶಿಕ್ಷಕರು ಈ ಯೋಜನೆಗೆ ಬೆಂಬಲ ನೀಡುತ್ತಿದ್ದಾರೆ. ಪ್ರಸ್ತುತ ಯೋಜನೆಯು ಮೂರು ವರ್ಷಗಳ ಮಾಡೆಲ್ ಅನ್ನು ಅನುಸರಿಸುತ್ತಿದ್ದು, ಈ ಯೋಜನೆಯ ಹಂತ ಗಳು ಈ ಕೆಳಗಿನಂತಿವೆ:
- ಹಂತ 1: ಆರ್ಥಿಕ ವರ್ಷ 2023-24ರಲ್ಲಿ ಬೆಂಗಳೂರಿನಲ್ಲಿ ಆರಂಭ, ಆರ್ಥಿಕ ವರ್ಷ 2025-26ರಲ್ಲಿ ಮುಕ್ತಾಯ.
- ಹಂತ 2: ಆರ್ಥಿಕ ವರ್ಷ 2024-25ರಲ್ಲಿ ಬೆಂಗಳೂರು, ದೆಹಲಿ ಮತ್ತು ಮುಂಬೈನಲ್ಲಿ ಯೋಜನೆ ಗಳು ಪ್ರಗತಿಯಲ್ಲಿವೆ.
ಈ ಯೋಜನೆಯು ಚೈಲ್ಡ್ ಟು ಕಮ್ಯುನಿಟಿ ಮಾದರಿಯನ್ನು ಅನುಸರಿಸುತ್ತಿದ್ದು, ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ರಸ್ತೆ ಸುರಕ್ಷತಾ ರಾಯಭಾರಿಯನ್ನಾಗಿ ಮಾಡುತ್ತದೆ, ಅವರು ತಮ್ಮ ಮನೆ, ನೆರೆಹೊರೆ ಮತ್ತು ಸ್ನೇಹಿತರಲ್ಲಿ ರಸ್ತೆ ಸುರಕ್ಷತಾ ಅಭ್ಯಾಸಗಳ ಕುರಿತು ಜಾಗೃತಿ ಮೂಡಿಸುತ್ತಾರೆ. ಈ ಮೂಲಕ ಸಮಾಜದಲ್ಲಿ ಜವಾಬ್ದಾರಿಯುತ ರಸ್ತೆ ಬಳಕೆಯ ಧೋರಣೆಯಲ್ಲಿ ಬದಲಾವಣೆ ಉಂಟು ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಬೆಂಗಳೂರು, ಮುಂಬೈ ಮತ್ತು ದೆಹಲಿ ಯಲ್ಲಿ ವಾರ್ಷಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಶಿಕ್ಷಕರು ಮತ್ತು ಶಾಲೆಗಳ ನೆರವಿ ನಿಂದ ದೀರ್ಘಕಾಲೀನ ಪರಿಣಾಮ ಉಂಟು ಮಾಡಲು ಈ ಕಾರ್ಯಕ್ರಮವನ್ನು ಶಾಲಾ ಪಠ್ಯಕ್ರಮದ ಜೊತೆಗೆ ಸಂಯೋಜಿಸಲಾಗಿದೆ.
ಟಿಎಸ್ಇಪಿ ಜೊತೆಗೆ 7ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಟೊಯೋಟಾ ಹ್ಯಾಕಥಾನ್ ಕಾರ್ಯಕ್ರಮ ಆಯೋಜಿಸುತ್ತಿದ್ದು, ಇದೊಂದು ಯುವಜನರಿಂದ ನಡೆಸಲ್ಪಡುವ ಸೃಜನಶೀಲ ವೇದಿಕೆಯಾಗಿದೆ. ಇಲ್ಲಿ ರಸ್ತೆ ಸುರಕ್ಷತೆಯ ಸಮಸ್ಯೆಗಳನ್ನು ಪರಿಹರಿಸಲು ಸೃಜನಶೀಲ ಐಡಿಯಾ ಹುಟ್ಟು ಹಾಕಲು ಈ ವಿದ್ಯಾರ್ಥಿಗಳನ್ನು ಉತ್ತೇಜಿಸಲಾಗುತ್ತದೆ. ಈ ಯೋಜನೆಯು ಈಗಾಗಲೇ 77,200 ವಿದ್ಯಾರ್ಥಿಗಳನ್ನು ತಲುಪಿದ್ದು, ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ನಡೆಯುತ್ತದೆ. ಈ ಕಾರ್ಯಕ್ರಮದ ಮೂಲಕ ಶಾಲಾ ವಲಯ ಸುರಕ್ಷತೆ, ಐಓಟಿ ಸಂಯೋಜನೆ, ಒಳಗೊಳ್ಳುವಿಕೆಯ ಮೂಲಸೌಕರ್ಯ ವ್ಯವಸ್ಥೆ ಮತ್ತು ಟ್ರಾಫಿಕ್ ನಿರ್ವಹಣೆಯಂತಹ ವಿಚಾರಗಳ ಮೇಲೆ 350ಕ್ಕೂ ಹೆಚ್ಚು ವಿಶಿಷ್ಟ ಐಡಿಯಾಗಳನ್ನು ಪರಿಕಲ್ಪನೆ ಮಾಡಲಾಗಿದೆ. ವಿದ್ಯಾರ್ಥಿಗಳು ಐಡಿಯಾದಿಂದ ಇನ್‌ಕ್ಯುಬೇಶನ್ ವರೆಗಿನ ಐದು ಹಂತಗಳ ಪಯಣ ಮಾಡುತ್ತಾರೆ ಮತ್ತು ತಜ್ಞರ ಮಾರ್ಗದರ್ಶನ ದೊಂದಿಗೆ ಕಾರ್ಯಗತಗೊಳಿಸಬಹುದಾದ ಮಾದರಿಗಳನ್ನು ಅಭಿವೃದ್ಧಿಪಡಿಸುತ್ತಾರೆ. ಈ ಕಾರ್ಯ ಕ್ರಮವು ವಿದ್ಯಾರ್ಥಿಗಳನ್ನು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವವರಾಗಿ ಮಾತ್ರವಲ್ಲ, ಅವರನ್ನು ಸಮಾಜದ ವರ್ತನೆ ಮತ್ತು ನೀತಿ ಚಿಂತನೆಯನ್ನು ಪ್ರಭಾವಿಸುವ “ಬದಲಾವಣೆಯ ಏಜೆಂಟ್”ಗಳಾಗಿ ಸಜ್ಜುಗೊಳಿಸುತ್ತದೆ.
ಟಿಕೆಎಂ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮದ ಭಾಗವಾಗಿ ವಿವಿಧ ಪ್ರದೇಶಗಳಲ್ಲಿ ಏಳು ಟ್ರಾಫಿಕ್ ಪಾರ್ಕ್ ಗಳನ್ನು ಸ್ಥಾಪಿಸಿದ್ದು, ಅಲ್ಲಿ ಶಾಲಾ ಮಕ್ಕಳು ರಸ್ತೆ ಸುರಕ್ಷತಾ ನಿಯಮಗಳನ್ನು ಮತ್ತು ಪಾದಾಚಾರಿ ವರ್ತನೆಯನ್ನು ಪ್ರಾಯೋಗಿಕವಾಗಿ ಕಲಿಯಲು ಅವಶ್ಯವಿರುವ ಮೂಲಭೂತ ಸೌಕರ್ಯವನ್ನು ಸ್ಥಾಪಿಸಲಾಗಿದೆ.
ವಿಶೇಷವಾಗಿ ಮಿಜೋರಾಂನಲ್ಲಿ ವಾಣಿಜ್ಯ ವಾಹನ ಚಾಲಕರಿಗಾಗಿ ಟಿಕೆಎಂ ಸ್ಥಳೀಯ ವೈದ್ಯಕೀಯ ಸಂಸ್ಥೆಗಳು ಮತ್ತು ಆಡಳಿತ ಇಲಾಖೆ ಜೊತೆಗಿನ ಸಹಭಾಗಿತ್ವದಲ್ಲಿ ರಸ್ತೆ ಸುರಕ್ಷತಾ ಮತ್ತು ಆರೋಗ್ಯ ತಪಾಸಣಾ ಕಾರ್ಯಕ್ರಮ ಆಯೋಜಿಸಿದ್ದು, ಅದರಿಂದ 800 ಮಂದಿ ಚಾಲಕರು ಜಾಗೃತಿ ಮತ್ತು ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದಿದ್ದಾರೆ. ಈ ಕಾರ್ಯಕ್ರಮವು ರಸ್ತೆ ಶಿಸ್ತು, ವಾಹನ ನಿರ್ವಹಣೆ ಮತ್ತು ಮಾನಸಿಕ ಯೋಗಕ್ಷೇಮದ ಕುರಿತು ಮಾಹಿತಿ ಮತ್ತು ಅರಿವು ಮೂಡಿಸಿತು. ಒಟ್ಟಾರೆಯಾಗಿ, ಈ ಯೋಜನೆಯು ಇದುವರೆಗೆ 7,822 ಜನರಿಗೆ ಪ್ರಯೋಜನವನ್ನು ನೀಡಿದೆ.
ಮಿಜೋರಾಂನಲ್ಲಿ 34 ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ (ಎ ಎನ್ ಪಿ ಆರ್) ವ್ಯವಸ್ಥೆ ಗಳು ಮತ್ತು 20 ಸಿಸಿ ಟಿವಿ ಕ್ಯಾಮೆರಾಗಳನ್ನು ಪ್ರಮುಖ ಜಂಕ್ಷನ್ ಗಳಲ್ಲಿ ಸ್ಥಾಪಿಸಲಾಗಿದ್ದು, ರಸ್ತೆ ನಿಯಮ ಉಲ್ಲಂಘನೆಗಳನ್ನು ಕಡಿಮೆ ಮಾಡಿ, ನಿಯಮ ಪಾಲನೆಯನ್ನು ಉತ್ತೇಜಿಸಿದೆ. ಈ ಕ್ರಮಗಳು 4 ಲಕ್ಷಕ್ಕೂ ಹೆಚ್ಚು ರಸ್ತೆ ಬಳಕೆದಾರರಿಗೆ ಪ್ರಯೋಜನವನ್ನು ನೀಡಿವೆ.
ಈ ಕುರಿತು ಮಾತನಾಡಿರುವ ಟಿಕೆಎಂನ ಕಾರ್ಪೊರೇಟ್ ಅಫೇರ್ಸ್ ಮತ್ತು ಗವರ್ನೆನ್ಸ್ ವಿಭಾಗದ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಮತ್ತು ಕಂಟ್ರಿ ಹೆಡ್ ವಿಕ್ರಮ್ ಗುಲಾಟಿ ಅವರು, “ರಸ್ತೆ ಸುರಕ್ಷತೆ ಯು ನಮ್ಮ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಜವಾಬ್ದಾರಿಯುತ ಸಾರಿಗೆ ವ್ಯವಸ್ಥೆ ಒದಗಿಸುವ ಉದ್ದೇಶದಲ್ಲಿ ಕೇಂದ್ರ ಸ್ಥಾನದಲ್ಲಿದೆ. ಶಿಕ್ಷಣ ಕಾರ್ಯಕ್ರಮಗಳು, ಉದ್ದೇಶಪೂರ್ವಕ ಸಂಶೋಧನೆ ಮತ್ತು ಸಮಾಜದ ಸಹಕಾರದ ಮೂಲಕ, ಶಾಲಾ ಮಕ್ಕಳಿಂದ, ಯುವ ಸಂಶೋಧಕ ರಿಂದ ಹಿಡಿದು ಚಾಲಕರವರೆಗೆ ವಿವಿಧ ರೀತಿಯ ರಸ್ತೆ ಬಳಕೆದಾರರ ಸಮೂಹದಲ್ಲಿ ರಸ್ತೆ ಸುರಕ್ಷತಾ ಸಂಸ್ಕೃತಿಯನ್ನು ಬೆಳೆಸಲು ನಾವು ಶ್ರಮಿಸುತ್ತಿದ್ದೇವೆ. ನಮ್ಮ ಸಮಗ್ರ ವಿಧಾನವು ದೀರ್ಘಕಾಲೀನ ವರ್ತನೆಯ ಬದಲಾವಣೆಯನ್ನು ಉಂಟುಮಾಡುವಂತೆ ವಿನ್ಯಾಸಗೊಂಡಿದೆ. ಭಾರತದಲ್ಲಿ ಶೂನ್ಯ ರಸ್ತೆ ಅಪಘಾತಗಳನ್ನು ಸಾಧಿಸುವ ಗುರಿಯ ಕಡೆಗೆ ನಾವು ಒಂದೊಂದು ಹೆಜ್ಜೆ ಇಟ್ಟು ಮುಂದೆ ಸಾಗುತ್ತಿದ್ದೇವೆ” ಎಂದು ಹೇಳಿದರು.
ಟೊಯೋಟಾದ ರಸ್ತೆ ಸುರಕ್ಷತಾ ಕಾರ್ಯಕ್ರಮಗಳು ಜನರು, ವಾಹನಗಳು ಮತ್ತು ಟ್ರಾಫಿಕ್ ವ್ಯವಸ್ಥೆ ಎಂಬ ಮೂರು ಆಧಾರಸ್ತಂಭಗಳನ್ನು ಆಧರಿಸಿವೆ. 1960ರ ದಶಕದಿಂದಲೂ ಈ ಕಾರ್ಯಕ್ರಮಗಳು ನಡೆಯುತ್ತಾ ಬಂದಿದೆ. ದೀರ್ಘಕಾಲೀನ ಪರಿಣಾಮ ಬೀರುವುದರ ಮೇಲೆ ಮತ್ತು ಸಹಯೋಗದ ಕ್ರಮದ ಮೇಲೆ ಗಮನ ಕೇಂದ್ರೀಕರಿಸಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಭಾರತದ ಪ್ರತೀ ರಸ್ತೆ ಬಳಕೆದಾರರಿಗೆ ಸುರಕ್ಷಿತ, ಸ್ಮಾರ್ಟ್ ಆದ ಮತ್ತು ಜವಾಬ್ದಾರಿಯುತ ಸಾರಿಗೆ ವ್ಯವಸ್ಥೆ ಯನ್ನು ನಿರ್ಮಿಸಲು ಬದ್ಧವಾಗಿದೆ.