2026ರ ಐಪಿಎಲ್‌ಗೆ ಸಿಎಸ್‌ಕೆಯಿಂದ ರಿಲೀಸ್ ಆಗಬಲ್ಲ ಇಬ್ಬರು ಸ್ಟಾರ್‌ಗಳನ್ನು ಹೆಸರಿಸಿದ ಬಾಂಗರ್!
ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರ್ ಅಶ್ವಿನ್ ಹಾಗೂ ಮತೀಶ ಪತಿರಣ ಅವರನ್ನು 2026ರ ಐಪಿಎಲ್ ನಿಮಿತ್ತ ಉಳಿಸಿಕೊಳ್ಳುವುದು ಅನುಮಾನ ಎಂದು ಭಾರತ ತಂಡದ ಮಾಜಿ ಆಲ್‌ರೌಂಡರ್ ಸಂಜಯ್ ಬಾಂಗರ್ ಭವಿಷ್ಯ ನುಡಿದಿದ್ದಾರೆ.

ಆರ್ ಅಶ್ವಿನ್, ಪತಿರಣ ಬಗ್ಗೆ ಬಾಂಗರ್ ಹೇಳಿಕೆ.

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin) ಹಾಗೂ ವೇಗದ ಬೌಲರ್ ಮತೀಶ ಪತಿರಣ (Matheesha Pathirana) ಅವರನ್ನು ಮುಂದಿನ ಆವೃತ್ತಿಯ ನಿಮಿತ್ತ ಉಳಿಸಿಕೊಳ್ಳುವುದು ಅನುಮಾನ ಎಂದು ಭಾರತದ ಮಾಜಿ ಆಲ್‌ರೌಂಡರ್ ಸಂಜಯ್ ಬಾಂಗರ್ ಭವಿಷ್ಯ ನುಡಿದಿದ್ದಾರೆ. ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆ ಈ ಆವೃತ್ತಿಯಲ್ಲಿ ಅತ್ಯಂತ ಹೀನಾಯ ಪ್ರದರ್ಶನವನ್ನು ತೋರಿದೆ. ಇಲ್ಲಿಯವರೆಗಹೂ ಆಡಿದ 10 ಪಂದ್ಯಗಳಲ್ಲಿ 8ರಲ್ಲಿ ಸೋಲು ಅನುಭವಿಸಿ ಪ್ಲೇಆಫ್ಸ್ ರೇಸ್‌ನಿಂದ ಅಧಿಕೃತವಾಗಿ ಹೊರ ಬಿದ್ದಿದೆ.
ಆರ್ ಅಶ್ವಿನ್ ಅವರನ್ನು 2025ರ ಐಪಿಎಲ್ ಮೆಗಾ ಹರಾಜಿನಲ್ಲಿ 10 ಕೋಟಿ ರೂ. ಗಳಿಗೆ ಚೆನ್ನೈ ಫ್ರಾಂಚೈಸಿ ಖರೀದಿಸಿತ್ತು. ಆದರೆ, ಅಶ್ವಿನ್ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಇಲ್ಲಿಯ ತನಕ ಆಡಿದ ಏಳು ಪಂದ್ಯಗಳಲ್ಲಿ ಪಡೆದಿದ್ದು ಕೇವಲ 5 ವಿಕೆಟ್‌ಗಳು ಮಾತ್ರ. ಅಲ್ಲದೆ ಕೆಲವು ಪಂದ್ಯಗಳಲ್ಲಿ ಅವರನ್ನು ಬೆಂಚ್ ಕಾಯಿಸಲಾಗಿತ್ತು.
ಸ್ಟಾರ್ ಸ್ಪೋರ್ಟ್ಸ್ ಸಂಭಾಷಣೆಯಲ್ಲಿ ಮಾತನಾಡಿದ ಸಂಜಯ್ ಬಾಂಗರ್, ಅತಿ ಹೆಚ್ಚು ಬೆಲೆ ಇರುವ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ಆರ್ ಅಶ್ವಿನ್ ಅವರನ್ನು ಮುಂದಿನ ಆವೃತ್ತಿ ನಿಮಿತ್ತ ಉಳಿಸಿಕೊಳ್ಳುವುದು ಅನುಮಾನ ಹಾಗೂ ಶ್ರೀಲಂಕಾದ ಯುವ ವೇಗಿ ಮತೀಶ ಪತಿರಣ ಅವರನ್ನು ರಿಲೀಸ್ ಮಾಡಬಹುದು ಎಂದು ಅವರು ಭವಿಷ್ಯ ನೀಡಬಹುದು.
IPL 2025: ʻಲಂಡನ್‌ನಲ್ಲಿ ಸರ್ಜರಿ ಮಾಡಿಸಿಕೊಂಡೆʼ-ಆರ್‌ಸಿಬಿಗೆ ಧನ್ಯವಾದ ತಿಳಿಸಿದ ಸುಯಶ್ ಶರ್ಮಾ!
"ಆರ್ ಅಶ್ವಿನ್ ಅವರ ಮೂಲಕ ಹೆಚ್ಚಿನ ಮೊತ್ತ ಲಾಕ್ ಆಗಿದೆ. ಹಾಗಾಗಿ ಅವರನ್ನು ಉಳಿಸಿಕೊಳ್ಳುವುದು ಅಥವಾ ಬಿಡುಗಡೆಗೊಳಿಸುವುದು ಇಲ್ಲಿ ದೊಡ್ಡ ಪ್ರಶ್ನೆಯಾಗಿದೆ. ಅವರು ತಮ್ಮ ಮೊತ್ತವನ್ನು ಹೆಚ್ಚಿಸಿಕೊಳ್ಳಬೇಕೆಂದು ಬಯಸಿದರೆ, ಆರ್ ಅಶ್ವಿನ್ ಅವರನ್ನು ರಿಲೀಸ್ ಮಾಡಬಹುದು. ಅಲ್ಲದೆ ಆರ್ ಅಶ್ವಿನ್ ಜತೆಗೆ ಮತೀಶ ಪತಿರಣ ಅವರನ್ನು ಕೂಡ ಬಿಡುಗಡೆಗೊಳಿಸಿ, ಇವರ ಸ್ಥಾನಕ್ಕೆ ಪರ್ಯಾಯ ಆಟಗಾರರನ್ನು ಹುಡುಕಬಹುದು," ಎಂದು ಆರ್‌ಸಿಬಿ ಮಾಜಿ ಬ್ಯಾಟಿಂಗ್ ಕೋಚ್ ತಿಳಿಸಿದ್ದಾರೆ.
2025ರ ಐಪಿಎಲ್‌ನಿಂದ ಸಿಎಸ್‌ಕೆ ಔಟ್
ಬುಧವಾರ ತವರು ಅಂಗಣ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ 4 ವಿಕೆಟ್‌ಗಳ ಸೋಲಿನ ಬಳಿಕ ಚೆನ್ನೈ ಸೂಪರ್ ಕಿಂಗ್ಸ್, ಈ ಟೂರ್ನಿಯಲ್ಲಿ ಎಂಟನೇ ಸೋಲು ಅನುಭವಿಸುವ ಮೂಲಕ ಪ್ಲೇಆಫ್ಸ್ ರೇಸ್ ನಿಂದ ಅಧಿಕೃತವಾಗಿ ಹೊರ ಬಿದ್ದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಸಿಎಸ್‌ಕೆ, 190 ರನ್‌ಗಳಿಗೆ ಆಲ್‌ಔಟ್ ಆಯಿತು. ಸಿಎಸ್‌ಕೆ ಪರ ಸ್ಯಾಮ್ ಕರನ್ 47 ಎಸೆತಗಳಲ್ಲಿ 88 ರನ್‌ಗಳನ್ನು ಬಾರಿಸಿದ್ದರು.
IPL 2025: ಐಪಿಎಲ್ ಟೂರ್ನಿಯಿಂದ ಗ್ಲೆನ್ ಮ್ಯಾಕ್ಸ್‌ವೆಲ್ ಔಟ್, ಪಂಜಾಬ್ ಕಿಂಗ್ಸ್‌ಗೆ ಭಾರಿ ಹಿನ್ನಡೆ!
ಬಳಿಕ ಗುರಿ ಹಿಂಬಾಲಿಸಿದ ಪಂಜಾಬ್ ಕಿಂಗ್ಸ್ ತಂಡ, ಪ್ರಭ್ ಸಿಮ್ರಾನ್ ಸಿಂಗ್ ಹಾಗೂ ಶ್ರೇಯಸ್ ಅಯ್ಯರ್ ಸ್ಪೋಟಕ ಅರ್ಧಶತಕಗಳ ಬಲದಿಂದ ಕೊನೆಯ ಓವರ್‌ನಲ್ಲಿ 4 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತ್ತು. 72 ರನ್ ಸಿಡಿಸಿ ಪಂಜಾಬ್ ಗೆಲುವಿಗೆ ನೆರವು ನೀಡಿದ ನಾಯಕ ಶ್ರೇಯಸ್ ಅಯ್ಯರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.