ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepika&Ranveer: ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಡಿನ್ನರ್‌ ಡೇಟ್‌ಗೆ ಸ್ಪೆಶಲ್‌ ಗೆಸ್ಟ್‌ ಆಗಮನ! ಯಾರಿವರು? ಈ ಫೋಟೋ ನೋಡಿ

ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇನ್‌ಸ್ಟಾ ಗ್ರಾಮ್‌ನ ಆಡಮ್ ಮೊಸ್ಸೆರಿ ಜೊತೆ ಡಿನ್ನರ್ ಗೆ ತೆರಳಿದ್ದಾರೆ.‌ ಮುಂಬೈನ ರೆಸ್ಟೋರೆಂಟ್ ವೊಂದಕ್ಕೆ ಭೇಟಿ ನೀಡಿರುವ ಈ ಜೋಡಿಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ..

ಇನ್‌ಸ್ಟಾಗ್ರಾಮ್ ಮುಖ್ಯಸ್ಥ ಜೊತೆ ಬಾಲಿವುಡ್ ಸ್ಟಾರ್‌ ಜೋಡಿ ಡಿನ್ನರ್!

Profile Pushpa Kumari May 1, 2025 7:16 PM

ಮುಂಬೈ: ರಣವೀರ್ (Ranveer Singh) ಮತ್ತು ದೀಪಿಕಾ (Deepika Padukone) ಬಾಲಿವುಡ್‌ನ ಜನಪ್ರಿಯ ಜೋಡಿಯಾಗಿದ್ದಾರೆ. ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ನಾಲ್ಕು ವರ್ಷಗಳ ಡೇಟಿಂಗ್ ಮಾಡಿ ನಂತರ 2018 ರಲ್ಲಿ ವಿವಾಹವಾದರು. ಇಬ್ಬರೂ ಬಾಲಿವುಡ್ ಕ್ಯೂಟ್ ಕಪಲ್ ಗಳಲ್ಲಿ ಒಂದಾಗಿದ್ದು ಈ ಜೋಡಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ನಟಿ ದೀಪಿಕಾ ಪಡುಕೋಣೆ ತಾಯಿಯಾದ ಬಳಿಕ ಚಿತ್ರರಂಗದಿಂದ ಬ್ರೇಕ್ ತೆಗೆದು‌ ಕೊಂಡಿದ್ದಾರೆ‌. ಸದ್ಯ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಲು ಸಿದ್ಧವಾಗಿದ್ದು ನಟ ಶಾರುಖ್ ಖಾನ್ ಜೊತೆ ಕಿಂಗ್’ ಸಿನಿಮಾದಲ್ಲಿ ನಟಿಸಲಿ ದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ನಡುವೆ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇನ್‌ಸ್ಟಾ ಗ್ರಾಮ್‌ನ ಆಡಮ್ ಮೊಸ್ಸೆರಿ (Adam Mosseri) ಜೊತೆ ಡಿನ್ನರ್ ಗೆ ತೆರಳಿದ್ದಾರೆ.‌ ಮುಂಬೈನ ರೆಸ್ಟೋರೆಂಟ್ ವೊಂದಕ್ಕೆ ಭೇಟಿ ನೀಡಿರುವ ಈ ಜೋಡಿಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮುಂಬೈ ರೆಸ್ಟೊರೆಂಟ್‌ವೊಂದಕ್ಕೆ ಡಿನ್ನರ್ ಡೇಟ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರೊಂದಿಗೆ ವಿಶೇಷ ಅತಿಥಿ, ಇನ್‌ಸ್ಟಾಗ್ರಾಮ್ ಮುಖ್ಯಸ್ಥ ಆಡಮ್ ಮೊಸ್ಸೆರಿ ಕೂಡ ಜೊತೆಯಾಗಿದ್ದರು. ಆಡಮ್ ಮೊಸ್ಸೆರಿ ಈ ಜೋಡಿಯೊಂದಿಗೆ ಸೆಲ್ಫಿ ಹಂಚಿಕೊಂಡು "ನಾನು ಇಂದು ಸಂಜೆ ಬಾಂಬೆಯಲ್ಲಿ ದೀಪಿಕಾ ಮತ್ತು ರಣವೀರ್ ಎಂಬ ಅದ್ಭುತ ಮತ್ತು ಆಕರ್ಷಕ‌ ಜೋಡಿಯನ್ನು ಭೇಟಿಯಾಗಿ ರುಚಿಕರ ಆಹಾರವನ್ನು ಆಸ್ವಾದಿಸಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿ: Deepika Padukone: ಹಲವು ಬಾರಿ ಭಾರತದಿಂದ ಆಸ್ಕರ್‌ ಪ್ರಶಸ್ತಿ ಕಸಿಯಲಾಗಿದೆ; ದೀಪಿಕಾ ಪಡುಕೋಣೆ ಹೀಗೆ ಹೇಳಿದ್ಯಾಕೆ?

ದೀಪಿಕಾ ಪಡುಕೋಣೆ ಈ ಪೋಸ್ಟ್ ಗೆ ಪ್ರತಿಕ್ರಿಯಿಸಿ, papasbombay ರೆಸ್ಟೊರೆಂಟ್ ನಲ್ಲಿ ನಡೆದದ್ದು ಅಲ್ಲೇ ಉಳಿಯುತ್ತದೆ ಎಂದು ಹಾಸ್ಯತ್ಮ ಕ ಇಮೋಜಿ ಕಳುಹಿಸಿ ಪ್ರತಿಕ್ರಿಯೆ ನೀಡಿದ್ದಾರೆ. ರಣವೀರ್ ಸಿಂಗ್ ಒಳ್ಳೆಯ ಸಮಯ ಎಂದು ಹೃದಯದ ಇಮೊಜಿ ಕಳುಹಿಸಿ ಕಮೆಂಟ್ ಮಾಡಿದ್ದಾರೆ. ದೀಪಿಕಾ ಈ ಡಿನ್ನರ್ ನಲ್ಲಿ ಬೀಚ್ ಕಲರ್ ಬ್ಲೇಜರ್ ಧರಿಸಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದರು. ರಣವೀರ್ ಸಿಂಗ್ ಬಿಳಿ ಶರ್ಟ್ ಮೇಲೆ ಕಪ್ಪು ಬ್ಲೇಜರ್ ಧರಿಸಿದ್ದರು.

ಆಡಮ್ ಮೊಸ್ಸೆರಿ ರೆಸ್ಟೋರೆಂಟ್ ನಿಂದ ಹೊರಡುವ ಮೊದಲು ಈ ಜೋಡಿಯ ಕೈಹಿಡಿದು ಫೋಟೋ ತೆಗೆಸಿ ಕೊಂಡರು. ರಣವೀರ್- ದೀಪಿಕಾ ಕೈ ಹಿಡಿದುಕೊಂಡು ರೆಸ್ಟೊ ರೆಂಟ್ ನಿಂದ ನಿರ್ಗಮಿಸಿದರು. ಕಳೆದ ಸೆಪ್ಟೆಂಬರ್‌ನಲ್ಲಿ ದೀಪಿಕಾ ಹೆಣ್ಣು ಮಗುವಿಗೆ ನಟಿ ಜನ್ಮ ನೀಡಿದ್ದು ಈ ಹಿನ್ನೆಲೆ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದರು. ಸದ್ಯ ದೀಪಿಕಾ ಶಾರುಖ್ ಖಾನ್ ಕಿಂಗ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಸುದ್ದಿಯಾಗಿದೆ. ರಣವೀರ್ ಆದಿತ್ಯ ಧಾರ್ ಅವರ ಮುಂದಿನ ಮತ್ತು ಫರ್ಹಾನ್ ಅಖ್ತರ್ ಅವರ ಡಾನ್ 3 ನಲ್ಲಿ ಕಾಣಿಸಿ ಕೊಳ್ಳಲಿದ್ದಾರೆ..