Vijay Deverakonda: ಮತ್ತೋರ್ವ ನಟಿ ಜೊತೆ ವಿಜಯ್ ದೇವರಕೊಂಡ ಲಿಪ್ ಲಾಕ್! ವಿಡಿಯೊ ವೈರಲ್
ಇತ್ತೀಚೆಗೆ ಕಿಂಗ್ ಡಮ್ ಚಿತ್ರದ ಹೃದಯಂ ಲೋಪಲಾ ಎಂಬ ಹಾಡಿನ ಪ್ರೋಮೋವನ್ನು ಬಿಡುಗಡೆ ಮಾಡಲಾಗಿತ್ತು. ಈ ಹಾಡನ್ನು ಅನಿರುದ್ಧ್ ರವಿಚಂದರ್ ಮತ್ತು ಅನುಮಿತಾ ನಡೇಶನ್ ಹಾಡಿದ್ದು ಕೃಷ್ಣ ಕಾಂತ್ ಅರ್ಥಬದ್ಧ ಸಾಹಿತ್ಯ ರಚಿಸಿದ್ದಾರೆ. ಇದೇ ಹಾಡಿನ ಪ್ರಮೋಷನಲ್ ವಿಡಿಯೋವನ್ನು ನಟ ವಿಜಯ್ ದೇವರಕೊಂಡ ಅವರು ತಮ್ಮ ಇನ್ ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರೋಮೋದಲ್ಲಿ ವಿಜಯ್ ದೇವರಕೊಂಡ ಮತ್ತು ಭಾಗ್ಯಶ್ರೀ ಬೋರ್ಸೆ ಬೀಚ್‌ನಲ್ಲಿ ಕುಳಿತು ಒಬ್ಬರನ್ನೊಬ್ಬರು ನೋಡಿಕೊಂಡು ಬಳಿಕ ರೊಮ್ಯಾಂಟಿಕ್ ಆಗಿ ಕಿಸ್ ಮಾಡುವ ದೃಶ್ಯವಿದೆ.


ನವದೆಹಲಿ: ಟಾಲಿವುಡ್ ನಟ ವಿಜಯ ದೇವರಕೊಂಡ (Vijay Deverakonda) ಅಭಿನಯದ ಹೊಸ ಚಿತ್ರ ಕಿಂಗ್ ಡಮ್ ನ ಹೀರೋಯಿನ್ ಯಾರಾಗ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲಿತ್ತು. ಮಿಸ್ಟರ್ ಬಚ್ಚನ್ ಸಿನಿಮಾ ಖ್ಯಾತಿಯ ಭಾಗ್ಯಶ್ರೀ ಬೋರ್ಸೆ ಕಿಂಗ್ ಡಮ್ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗುವ ಮೂಲಕ ಎಲ್ಲ ಗೊಂದಲಕ್ಕೆ ತೆರೆ ಬಿದ್ದಿತ್ತು. ಇತ್ತೀಚೆಗಷ್ಟೇ ಈ ಪ್ರೋಮೋ ವನ್ನು ಬಿಡುಗಡೆ ಮಾಡಲಾಗಿದ್ದು ನಟ ವಿಜಯ ದೇವರ ಕೊಂಡ ಮತ್ತು ನಟಿ ಭಾಗ್ಯಶ್ರೀ ಬೀಚ್ ನಲ್ಲಿ ರೊಮ್ಯಾಂಟಿಕ್ ಆಗಿ ಕಿಸ್ ಮಾಡುವ ದೃಶ್ಯವನ್ನು ಪ್ರೋಮೊದಲ್ಲಿ ತೋರಿಸಲಾಗಿದೆ. ಇದು ಪ್ರೇಕ್ಷಕರ ಕುತೂಹಲ ಕೆರಳಿಸಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸುತ್ತಿದೆ. ಸದ್ಯ ಕಿಂಗ್ ಡಮ್ ಸಿನಿಮಾದ ಪ್ರಮೋಷನಲ್ ವಿಡಿಯೋವನ್ನು ನಟ ವಿಜಯ್ ದೇವರಕೊಂಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಶೇಷ ಕ್ಯಾಪ್ಶನ್ ನೀಡಿ ವಿಡಿಯೊ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಕಿಂಗ್ ಡಮ್ ಚಿತ್ರದ ಹೃದಯಂ ಲೋಪಲಾ ಎಂಬ ಹಾಡಿನ ಪ್ರೋಮೋವನ್ನು ಬಿಡುಗಡೆ ಮಾಡ ಲಾಗಿತ್ತು. ಈ ಹಾಡನ್ನು ಅನಿರುದ್ಧ್ ರವಿಚಂದರ್ ಮತ್ತು ಅನುಮಿತಾ ನಡೇಶನ್ ಹಾಡಿದ್ದು ಕೃಷ್ಣ ಕಾಂತ್ ಅರ್ಥಬದ್ಧ ಸಾಹಿತ್ಯ ರಚಿಸಿದ್ದಾರೆ. ಇದೇ ಹಾಡಿನ ಪ್ರಮೋಷನಲ್ ವಿಡಿಯೋವನ್ನು ನಟ ವಿಜಯ್ ದೇವರಕೊಂಡ ಅವರು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರೋಮೋದಲ್ಲಿ ವಿಜಯ್ ದೇವರಕೊಂಡ ಮತ್ತು ಭಾಗ್ಯಶ್ರೀ ಬೋರ್ಸೆ ಬೀಚ್‌ನಲ್ಲಿ ಕುಳಿತು ಒಬ್ಬರನ್ನೊಬ್ಬರು ನೋಡಿಕೊಂಡು ಬಳಿಕ ರೊಮ್ಯಾಂಟಿಕ್ ಆಗಿ ಕಿಸ್ ಮಾಡುವ ದೃಶ್ಯವಿದೆ. ನಟಿ ಭಾಗ್ಯಶ್ರೀ ಬೋರ್ಸೆ ಟ್ರೆಡಿಶನಲ್ ಲುಕ್ ನಲ್ಲಿ ಕ್ಯೂಟ್ ಆಗಿ ಕಾಣಿಸಿದ್ದಾರೆ. ಟ್ರಿಮ್ಮಿಂಗ್ ಹೇರ್ ಮತ್ತು ಬಿಯರ್ಡ್ ಲುಕ್ ನಿಂದ ನಟ ವಿಜಯ್ ದೇವರಕೊಂಡ ವಿಭಿನ್ನವಾಗಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಇದನ್ನು ಓದಿ: Kannada New Movie: ಹೊಸಕಥೆ ಆಧಾರಿತ ʼದಿʼ ಚಿತ್ರ ಮೇ 16ರಂದು ತೆರೆಗೆ
ಈ ಪ್ರೊಮೋ ವಿಡಿಯೊ ಜೊತೆಗೆ ವಿಶೇಷ ಕ್ಯಾಪ್ಶನ್ ನೀಡಿದ್ದಾರೆ. ದ್ರೋಹದ ನೆರಳಿನಲ್ಲಿ, ಬಂಧದ ಸೋಗಿನಲ್ಲಿ, ಉದ್ವಿಗ್ನ ಆಕರ್ಷಣೆ ಇದೆ ಎಂದು ಕ್ಯಾಪ್ಶನ್ ಬರೆದಿದ್ದಾರೆ. ಈ ಪ್ರೋಮೋ ಬಳಿಕ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಕುತೂಹಲ ಉಂಟು ಮಾಡುವಂತೆ ಮಾಡಿದೆ. ಯುದ್ಧ, ವಿನಾಶ, ದಮನಿತರ ಹೋರಾಟ, ಇತ್ಯಾದಿ ವಿಚಾರಗಳು ಈ ಸಿನಿಮಾದಲ್ಲಿ ಇದೆ. ಈ ಎಲ್ಲ ವಿಚಾರಗಳು ರಾಜ(ವಿಜಯ್ ದೇವರಕೊಂಡ) ಆಗಮನದೊಂದಿಗೆ ಎಲ್ಲವೂ ಬದಲಾಗುತ್ತದೆ, ನಾನು ಏನು ಬೇಕಾದರೂ ಮಾಡುತ್ತೇನೆ, ಅಗತ್ಯವಿದ್ದರೆ, ನಾನು ಎಲ್ಲವನ್ನೂ ಸುಡುತ್ತೇನೆ ಎಂಬ ಡೈಲಾಗ್ ಹೇಳುವ ಮೂಲಕ ಜನರ ಪರವಾಗಿ ನಿಲ್ಲುವ ವಿಭಿನ್ನವಾದ ಕಥಾ ಹಂದರ ಹೊಂದಿದ್ದ ಸಿನಿಮಾ ಇದಾಗಿದೆ.
ರೊಮ್ಯಾಂಟಿಕ್ ವಿಡಿಯೊ ಇಲ್ಲಿದೆ
ಲೈಗರ್’, ಫ್ಯಾಮಿಲಿ ಸ್ಟಾರ್, ಖುಷಿ ಸಿನಿಮಾಗಳು ನಟ ವಿಜಯ್ ದೇವರಕೊಂಡ ಅವರಿಗೆ ಅಂದುಕೊಂಡ ಮಟ್ಟಿಗೆ ಯಶಸ್ಸು ತಂದುಕೊಟ್ಟಿಲ್ಲ. ಹೀಗಾಗಿ ಕಿಂಗ್ ಡಮ್ ಸಿನಿಮಾಕ್ಕಾಗಿ ನಟ ವಿಜಯ್ ದೇವರಕೊಂಡ ವಿಶೇಷ ತಯಾರಿ ನಡೆಸಿದ್ದಾರೆ. ಕಿಂಗ್ ಡಮ್ ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗಿದ್ದು ಎಲ್ಲರೂ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಮಾರ್ಚ್ 28 ರಂದು ಕಿಂಗ್‌ಡಮ್ ಬಿಡುಗಡೆಯಾಗುವುದಾಗಿ ಘೋಷಿಸಲಾಗಿತ್ತು, ಆದರೆ ದಿನ ಮುಂದುಡಲಾಗಿ ಮೇ 30 ರಂದು ಬಿಡುಗಡೆ ಯಾಗಲಿದೆ. ಕಿಂಗ್ ಡಮ್ ಸಿನಿಮಾ ನಟ ವಿಜಯ್ ದೇವರಕೊಂಡ ಲೈಫ್ ನಲ್ಲಿ ಸಕ್ಸಸ್ ಜರ್ನಿ ತರುತ್ತಾ ಎಂದು ಕಾದು ನೋಡಬೇಕು.