Virat Kohli: ಅನುಷ್ಕಾ ಶರ್ಮಾಗೆ ಜನ್ಮದಿನ ಸಂಭ್ರಮ: ಪ್ರೀತಿಯ ಮಡದಿಗೆ ಕೊಹ್ಲಿ ಸ್ಪೆಶಲ್ ವಿಶ್!
Anushka Sharma Birthday: ಇಂದು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ 37 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಪತಿ, ಕ್ರಿಕೆಟಿಗ ವಿರಾಟ್ ಕೊಹ್ಲಿ ಹುಟ್ಟುಹಬ್ಬದ ಶುಭಾಶಯ ದೊಂದಿಗೆ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಡು ವೈರಲ್ ಆಗಿದ್ದು ಅಭಿಮಾನಿಗಳು ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಮಾಡಿದ್ದಾರೆ

Virat Kohli's shre post


ಬಾಲಿವುಡ್ ನಟಿ ಅನುಷ್ಕಾ ಶರ್ಮಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಪಾರ ಅಭಿ ಮಾನಿಗಳಿಂದ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿವೆ.ಇದೀಗ ಪತ್ನಿ ಅನುಷ್ಕಾ ಫೋಟೋ ಹಂಚಿಕೊಂಡಿರುವ ಕೊಹ್ಲಿ, ಪತ್ನಿಗೆ ಪ್ರೀತಿಯಿಂದ ಬರ್ತ್ಡೇ ವಿಶ್ ಮಾಡಿದ್ದಾರೆ. .

ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಅನುಷ್ಕಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.ನನ್ನ ಆತ್ಮೀಯ ಸ್ನೇಹಿತೆ ನನ್ನ ಜೀವನ ಸಂಗಾತಿ, ನನ್ನ ಸುರಕ್ಷಿತ ಸ್ಥಳ, ನನ್ನ ಆತ್ಮೀಯೆ, ನನ್ನ ಎಲ್ಲದಕ್ಕೂನೀವು ಮಾರ್ಗದರ್ಶಕ ಬೆಳಕು. ನಾನು ಪ್ರತಿದಿನ ನಿಮ್ಮನ್ನು ಹೆಚ್ಚು ಪ್ರೀತಿಸುತ್ತೇನೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದಿದ್ದಾರೆ.

ಫೋಟೊದಲ್ಲಿ ವಿರಾಟ್ ಅನುಷ್ಕಾ ಅವರ ತೋಳುಗಳನ್ನು ಹಿಡಿದುಕೊಂಡು ಅಪ್ಪಿಕೊಳ್ಳುತ್ತಿರುವ ದೃಶ್ಯವಿದೆ. ಇಬ್ಬರೂ ಬಿಳಿ ಬಣ್ಣದ ಡ್ರೆಸ್ ಧರಿಸಿದ್ದು ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಡು ವೈರಲ್ ಆಗಿದ್ದು ಅಭಿಮಾನಿಗಳು ಸಿಕ್ಕಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಮಾಡಿದ್ದಾರೆ.

ಅಭಿಮಾನಿಗಳು ದಂಪತಿಗಳ ಮೇಲೆ ಪ್ರೀತಿಯ ಸಂದೇಶಗಳ ಸುರಿಮಳೆ ಗೈದಿದ್ದಾರೆ. ನೆಟ್ಟಿಗರೊಬ್ಬರು ನಿಜವಾದ ಪುರುಷ ಯಾವಾಗಲೂ ತನ್ನ ನೆಚ್ಚಿನ ಮಹಿಳೆಗೆ ಒಳ್ಳೆಯ ಸಂದೇಶವನ್ನೇ ಪೋಸ್ಟ್ ಮಾಡುತ್ತಾನೆ ಎಂದು ಬರೆದಿದ್ದಾರೆ. ಮತ್ತೊ ಬ್ಬರು ಅತ್ಯಂತ ಸುಂದರ ಜೋಡಿ ಎಂದಿಗೂ ಹೀಗೆ ಇರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಈ ಜೋಡಿ ಬಾಲಿವುಡ್ ಹಾಗೂ ಕ್ರಿಕೆಟ್ ಲೋಕದಲ್ಲಿರುವ ಟಾಪ್ ಕ್ಯೂಟ್ ಜೋಡಿಗಳಲ್ಲಿ ಒಂದಾಗಿದ್ದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಡಿಸೆಂಬರ್ 11, 2017 ರಂದು ವಿವಾಹ ವಾದರು. ಈ ಮುದ್ದಾದ ಜೋಡಿಗೆ ವಮಿಕಾ ಮತ್ತು ಅಕಾಯ್ ಎಂಬ ಇಬ್ಬರು ಮಕ್ಕಳಿದ್ದಾರೆ.

ವಿರಾಟ್ ಮತ್ತು ಅನುಷ್ಕಾ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಇಬ್ಬರೂ ಅಪಾರ ಸಂಖ್ಯೆಯ ಅಭಿಮಾನಿ ಗಳನ್ನು ಹೊಂದಿದ್ದಾರೆ. ರಬ್ ನೇ ಬನಾ ದಿ ಜೋಡಿ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಅನುಷ್ಕಾ ಶರ್ಮಾ ಮೊದಲ ಸಿನಿಮಾ ದಲ್ಲೇ ದೊಡ್ಡ ಸಕ್ಸಸ್ ಕಂಡರು. 2018ರಲ್ಲಿ ರಿಲೀಸ್ ಆದ ‘ಜೀರೋ’ ಚಿತ್ರವೇ ಅನುಷ್ಕಾ ಕೊನೆ ಸಿನಿಮಾ ಆಗಿದ್ದು ಇದಾದ ಬಳಿಕ ನಟಿ ಸಿನಿಮಾ ಮಾಡಲೇ ಇಲ್ಲ. ಅನುಷ್ಕಾ ಮತ್ತೆ ನಟನೆಗೆ ಮರಳಬೇಕು ಎಂಬುದು ಅನೇಕ ಅಭಿಮಾನಿಗಳ ಕೋರಿಕೆಯಾಗಿದ್ದು ನಟಿ ಮಕ್ಕಳ ಆರೈಕೆಯಲ್ಲಿ ಬ್ಯುಸಿ ಇದ್ದಾರೆ.