ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kheda Tragedy: ಭಾರೀ ದುರಂತ- ಒಂದೇ ಕುಟುಂಬದ ಆರು ಮಂದಿ ನೀರುಪಾಲು

ಒಂದೇ ಕುಟುಂಬದ ಆರು ಮಂದಿ ನದಿಯಲ್ಲಿ ಮುಳುಗಿ(Kheda Tragedy) ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ ಗುಜರಾತ್‌ನ (Gujarat) ಖೇಡಾ ಜಿಲ್ಲೆಯಲ್ಲಿ ನಡೆದಿದೆ. ಮೃತರಲ್ಲಿ ಹೆಚ್ಚಿನವರು ಹದಿಹರೆಯದ ಸೋದರ ಸಂಬಂಧಿಗಳಾಗಿದ್ದಾರೆ. ಕನಿಜ್ ಗ್ರಾಮದ ಮೆಶ್ವೋ ನದಿಯಲ್ಲಿ (Meshwo river) ಸ್ನಾನ ಮಾಡಲು ಹೋಗಿರುವಾಗ ಈ ಘಟನೆ ನಡೆದಿದೆ.

ಒಂದೇ ಕುಟುಂಬದ ಆರು ಮಂದಿ ನೀರುಪಾಲು

ಖೇಡಾ: ಒಂದೇ ಕುಟುಂಬದ ಆರು ಮಂದಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ ಗುಜರಾತ್‌ನ (Gujarat) ಖೇಡಾ (Kheda) ಜಿಲ್ಲೆಯಲ್ಲಿ ನಡೆದಿದೆ. ಮೃತರಲ್ಲಿ ಹೆಚ್ಚಿನವರು ಹದಿಹರೆಯದ ಸೋದರಸಂಬಂಧಿಗಳಾಗಿದ್ದಾರೆ. ಕನಿಜ್ ಗ್ರಾಮದ ಮೆಶ್ವೋ ನದಿಯಲ್ಲಿ (Meshwo river) ಸ್ನಾನ ಮಾಡಲು ಹೋಗಿರುವಾಗ ಈ ಘಟನೆ ನಡೆದಿದೆ. ಮೃತರು 14ರಿಂದ 21 ವರ್ಷ ವಯಸ್ಸಿನವರಾಗಿದ್ದು, ಆರು ಜನರಲ್ಲಿ ನಾಲ್ವರು ಮಹಿಳೆಯರು ಸೇರಿದ್ದರು. ಆರು ಜನರ ಮೃತ ದೇಹಗಳನ್ನು ನದಿಯಿಂದ ಹೊರತೆಗಯಲಾಗಿದೆ ಎಂದು ಖೇಡಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಗಾಧಿಯಾ ತಿಳಿಸಿದ್ದಾರೆ.

ಖೇಡಾ ಜಿಲ್ಲೆಯ ಮಹೆಮ್‌ದವಾಡ ತಾಲೂಕಿನ ಕನಿಜ್ ಬಳಿಯ ಮೆಶ್ವಾ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಒಂದೇ ಕುಟುಂಬದ ಆರು ಮಂದಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಆರು ಜನರಲ್ಲಿ ಇಬ್ಬರು ಕನಿಜ್ ಗ್ರಾಮದ ನಿವಾಸಿಗಳು ಮತ್ತು ನಾಲ್ವರು ಅಹಮದಾಬಾದ್‌ನಿಂದ ಬಂದಿದ್ದರು. ಮೃತರೆಲ್ಲರು ಸೋದರ ಸಂಬಂಧಿಗಳಾಗಿದ್ದಾರೆ.

ಇದನ್ನೂ ಓದಿ: Viral Video: ಬಾಲ್ಯದಲ್ಲಿ ಆಡಿ ಬೆಳೆದ ಮನೆಯನ್ನು ಕಂಡು ಬಿಕ್ಕಿ ಬಿಕ್ಕಿ ಅತ್ತ ವಿದೇಶಿಗ! ಭಾವನಾತ್ಮಕ ವಿಡಿಯೊ ಇಲ್ಲಿದೆ

ಅಹಮದಾಬಾದ್‌ನ ನರೋಡಾದ ನಾಲ್ವರು ಸೋದರಸಂಬಂಧಿಗಳು ಬುಧವಾರವೇ ಇಲ್ಲಿ ತಮ್ಮ ಸಂಬಂಧಿಗಳ ಮನೆಗೆ ಬಂದಿದ್ದರು ಎನ್ನಲಾಗಿದೆ. ಮೃತರಲ್ಲಿ ಕನಿಜ್‌ನ ಭೂಮಿಕಾ, ಜಿನಾಲ್, ದಿವ್ಯಾ, ಫಲ್ಗುಣಿ, ಮಯೂರ್ ಮತ್ತು ಧ್ರುವ್ ಸೇರಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಮೆಹಮದಾಬಾದ್ ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯ ಪ್ರಾರಂಭಿಸಿದರೂ ಯಾರನ್ನೂ ಬದುಕಿಸಲು ಸಾಧ್ಯವಾಗಲಿಲ್ಲ.

ಆರು ಜನರ ಗುಂಪು ಒಟ್ಟಿಗೆ ನದಿಗೆ ಇಳಿದಿದ್ದರು. ಆದರೆ ನದಿಯಲ್ಲಿ ಬಂದ ಬಲವಾದ ಪ್ರವಾಹದಲ್ಲಿ ಕೆಲವರು ಕೊಚ್ಚಿ ಹೋಗಿದ್ದು, ಸಹಾಯಕ್ಕಾಗಿ ಕೂಗಲು ಪ್ರಾರಂಭಿಸಿದರು. ಸ್ಥಳೀಯರು ತಕ್ಷಣ ಸ್ಥಳಕ್ಕೆ ಬಂದರೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೆಹಮದಾಬಾದ್ ಶಾಸಕ ಅರ್ಜುನ್‌ಸಿನ್ಹ್ ಚೌಹಾಣ್, ಎಸ್‌ಪಿ ರಾಜೇಶ್ ಘಾಡಿಯಾ ಮತ್ತು ಜಿಲ್ಲಾಧಿಕಾರಿ ಅಮಿತ್ ಪ್ರಕಾಶ್ ಸೇರಿದಂತೆ ಸ್ಥಳೀಯ ಅಧಿಕಾರಿಗಳು ರಕ್ಷಣಾ ಕಾರ್ಯದ ವೇಳೆ ಉಪಸ್ಥಿತರಿದ್ದರು.