ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮದುವೆಯ ದಿರಿಸಿನಲ್ಲೇ ಧರಿಸಿ ಮ್ಯಾರಥಾನ್ ಓಡಿದ ಮಹಿಳೆ; ಇದರ ಹಿಂದಿದೆ ಮನಮಿಡಿಯುವ ಕಥೆ!

ಲಂಡನ್ ಮ್ಯಾರಥಾನ್‍ನಲ್ಲಿ ಲಾರಾ ಕೋಲ್ಮನ್-ಡೇ ಎಂಬ ಯುಕೆ ಮಹಿಳೆ ರಕ್ತ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ ಪತಿಯ ನೆನೆಪಿಗಾಗಿ ಮದುವೆಯ ಡ್ರೆಸ್ ಧರಿಸಿ 26 ಮೈಲಿ ಓಟವನ್ನು ಪೂರ್ಣಗೊಳಿಸಿದ್ದಾಳೆ. ಇವಳ ಉದ್ದೇಶ ಪತಿಗೆ ಗೌರವ ನೀಡುವುದು ಮಾತ್ರವಲ್ಲ ಆ ಮೂಲಕ ರಕ್ತ ಕ್ಯಾನ್ಸರ್ ಸಂಶೋಧನಾ ಚಾರಿಟಿಗಾಗಿ ಹಣವನ್ನು ಸಂಗ್ರಹಿಸುವುದು ಕೂಡ ಆಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಮದ್ವೆ ಡ್ರೆಸ್‌ನಲ್ಲೇ ಮ್ಯಾರಥಾನ್‌ ಓಡಿದ ಮಹಿಳೆ!

Profile pavithra May 1, 2025 7:53 PM

ಲಂಡನ್‌: ಲಂಡನ್ ಮ್ಯಾರಥಾನ್‍ನಲ್ಲಿ ಲಾರಾ ಕೋಲ್ಮನ್-ಡೇ ಎಂಬ ಯುಕೆ ಮಹಿಳೆ ತನ್ನ ದಿವಂಗತ ಪತಿಯ ನೆನಪಿಗಾಗಿ ಮದುವೆಯ ಡ್ರೆಸ್ ಧರಿಸಿ 26 ಮೈಲಿ ಓಟವನ್ನು ಪೂರ್ಣಗೊಳಿಸಿದ ಹೃದಯಸ್ಪರ್ಶಿ ಘಟನೆ ನಡೆದಿದೆ. ಲಾರಾ ತನ್ನ ಪತಿಗೆ ಗೌರವ ಸಲ್ಲಿಸಲು 12 ತಿಂಗಳಲ್ಲಿ 13 ಮ್ಯಾರಥಾನ್‍ಗಳಲ್ಲಿ ಓಡುವ ಸವಾಲನ್ನು ಸ್ವೀಕರಿಸಿದ್ದಾಳೆ. ಹಾಗಾಗಿ ಅವರ ವಿವಾಹ ವಾರ್ಷಿಕೋತ್ಸವದಂದು, ಲಾರಾ ತನ್ನ ಪತಿಯ ನೆನಪಿಗಾಗಿ ಕೊನೆಯ ಮೂರು ಮೈಲಿಗಳವರೆಗೆ ಮದುವೆಯ ಡ್ರೆಸ್ ಧರಿಸಿ ಓಡಲು ನಿರ್ಧರಿಸಿದ್ದಾಳೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಎಲ್ಲರ ಗಮನ ಸೆಳೆದಿದೆ.

ವರದಿ ಪ್ರಕಾರ, ಲಾರಾಳ ಪತಿ ರಕ್ತ ಕ್ಯಾನ್ಸರ್‌ನಿಂದ ಸಾವನಪ್ಪಿದ್ದನು ಎಂಬುದಾಗಿ ತಿಳಿದುಬಂದಿದೆ. ಪತಿಗೆ ಗೌರವ ಸಲ್ಲಿಸಲು ಮಾತ್ರವಲ್ಲದೇ ರಕ್ತ ಕ್ಯಾನ್ಸರ್ ಸಂಶೋಧನಾ ಚಾರಿಟಿಗಾಗಿ ಹಣವನ್ನು ಸಂಗ್ರಹಿಸಲು ಕೋಲ್ಮನ್-ಡೇ ತನ್ನ ವಿವಾಹ ವಾರ್ಷಿಕೋತ್ಸವದಂದು ಮ್ಯಾರಥಾನ್‍ನ ಕೊನೆಯ ಮೂರು ಮೈಲಿಗಳವರೆಗೆ ತನ್ನ ಮದುವೆಯ ಡ್ರೆಸ್‍ ಅನ್ನು ಧರಿಸಿ ಓಡಲು ನಿರ್ಧರಿಸಿದ್ದಳು ಎನ್ನಲಾಗಿದೆ. ಕೋಲ್ಮನ್-ಡೇ ಮ್ಯಾರಥಾನ್‍ನ 23 ಮೈಲಿ ಓಡುವ ಮೊದಲು ಸ್ವಲ್ಪ ಹೊತ್ತು ನಿಂತು ತನ್ನ ಮದುವೆಯ ದಿನದಂದು ಧರಿಸಿದ್ದ ಡ್ರೆಸ್‍ ಅನ್ನು ಧರಿಸಿ ನಂತರ ಫೈನಲ್‍ ಲೈನ್ ಅನ್ನು ದಾಟಿದ್ದಾಳೆ. ಈ ಡ್ರೆಸ್‍ನಲ್ಲಿ ಓಡುವುದು ತುಂಬಾ ಕಷ್ಟಕರವಾಗಿದ್ದರೂ, ಅವಳು ತನ್ನ ಪತಿಯ ಮೇಲಿನ ಪ್ರೀತಿಗಾಗಿ ಇದನ್ನು ಪೂರ್ಣಗೊಳಿಸಿದ್ದಾಳಂತೆ.

ವಿಡಿಯೊ ಇಲ್ಲಿದೆ ನೋಡಿ...

ರಕ್ತ ಮತ್ತು ಮೂಳೆ ಮಜ್ಜೆಯ ಮೇಲೆ ಪರಿಣಾಮ ಬೀರುವ ಅಪರೂಪದ ಲ್ಯುಕೇಮಿಯಾದ ಕಸಿ ನಂತರ ಆಕೆಯ ಪತಿ ಕ್ಸಾಂಡರ್ ಕಳೆದ ವರ್ಷ ನಿಧನನಾದನಂತೆ. ಅವನನ್ನು ಗೌರವಿಸಲು ಮತ್ತು ರಕ್ತದ ಕ್ಯಾನ್ಸರ್ ಮತ್ತು ಸ್ಟೆಮ್ ಸೆಲ್ ರಿಸರ್ಚ್ ಚಾರಿಟಿಗಾಗಿ 12 ತಿಂಗಳಲ್ಲಿ 13 ರೇಸ್‍ಗಳನ್ನು ಓಡಿದ್ದಾಳೆ.

ಮ್ಯಾರಥಾನ್ ಸಮಯದಲ್ಲಿ, ಅವಳು ತನ್ನ ದುಃಖದ ನೆನಪುಗಳೊಂದಿಗೆ ಓಡಲಿಲ್ಲ, ಬದಲಾಗಿ ಅವಳು ಒಂದು ದೊಡ್ಡ ಉದ್ದೇಶವನ್ನು ಈಡೇರಿಸಲು ಓಡಿದ್ದಾಳೆ. ಹೀಗಾಗಿ, ಲಂಡನ್ ಮ್ಯಾರಥಾನ್‍ನಲ್ಲಿ ನಡೆದ ಈ ವಿಶೇಷ ಘಟನೆಯು ಒಬ್ಬ ವ್ಯಕ್ತಿಯು ತನ್ನ ವೈಯಕ್ತಿಕ ದುಃಖವನ್ನು ಹೇಗೆ ಸಮಾಜದ ಒಳಿತಿಗಾಗಿ ಬದಲಾಯಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಅಂಗಡಿ ಮಾಲೀಕನ ಕಣ್ಣಿಗೆ ಖಾರದ ಪುಡಿ ಎರಚಿ ರಾಬರಿ! ಶಾಕಿಂಗ್‌ ವಿಡಿಯೊ ಇಲ್ಲಿದೆ

2022 ರಲ್ಲಿ, 51 ವರ್ಷದ ಲೂಯಿಸ್ ಬರ್ನಡೆಟ್ ಬುಚರ್ ಲಂಡನ್ ಮ್ಯಾರಥಾನ್‍ಗಾಗಿ ತರಬೇತಿ ಪಡೆಯುತ್ತಿದ್ದಾಗ ಅವಳಿಗೆ ಲೋಬ್ಯುಲರ್ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಆದರೆ ಅದು ಅವಳ ಉತ್ಸಾಹವನ್ನು ಕುಗ್ಗಿಸಲಿಲ್ಲ. ಮಾಸ್ಟೆಕ್ಟಮಿಯ ಆರು ವಾರಗಳ ನಂತರ ಮತ್ತು ರೇಡಿಯೋಥೆರಪಿ ಪಡೆದ ಮೂರು ದಿನಗಳ ನಂತರ, ಅವಳು ಮ್ಯಾರಥಾನ್ ಓಡಿದ್ದಾಳೆ. ಆದರೆ ಈಗ ಅವಳು ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದೇ ಹೋರಾಟಗಳನ್ನು ಎದುರಿಸುವ ಜನರನ್ನು ಸಬಲೀಕರಣಗೊಳಿಸಲು ಟಾಪ್ಲೆಸ್ ಆಗಿ ಓಡುತ್ತಾಳೆ.