ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Wildfire: ಇಸ್ರೇಲ್‌ನಲ್ಲಿ ಭಾರೀ ಕಾಡ್ಗಿಚ್ಚು; ಜನ ಜೀವನ ಅಸ್ತವ್ಯಸ್ತ

ಭಾರಿ ಕಾಡ್ಗಿಚ್ಚಿನಿಂದ (Wildfire) ಸುಮಾರು 13 ಮಂದಿ ಗಾಯಗೊಂಡಿರುವ ಘಟನೆ ಜೆರುಸಲೆಮ್ (Jerusalem) ಹೊರವಲಯದಲ್ಲಿ ನಡೆದಿದೆ. ಕಾಡ್ಗಿಚ್ಚಿನಿಂದ ಆವರಿಸಿದ್ದ ಬೆಂಕಿಯನ್ನು ನಂದಿಸಲು ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಇಸ್ರೇಲ್ (Israel) ಅಧಿಕಾರಿಗಳು ಮನವಿ ಮಾಡಿದ್ದರಿಂದ ಕೇವಲ 24 ಗಂಟೆಗಳಲ್ಲಿ ಸಾವಿರಾರು ನಿವಾಸಿಗಳನ್ನು ಸ್ಥಳಾಂತರಿಸಲಾಯಿತು.

ಇಸ್ರೇಲ್‌ನಲ್ಲಿ ಭಾರೀ ಕಾಡ್ಗಿಚ್ಚು; ಜನ ಜೀವನ ಅಸ್ತವ್ಯಸ್ತ

ಜೆರುಸಲೇಂ: ಭಾರಿ ಕಾಡ್ಗಿಚ್ಚಿನಿಂದ (Wildfire) ಸುಮಾರು 13 ಮಂದಿ ಗಾಯಗೊಂಡಿರುವ ಘಟನೆ ಜೆರುಸಲೇಂ (Jerusalem) ಹೊರವಲಯದಲ್ಲಿ ನಡೆದಿದೆ. ಕಾಡ್ಗಿಚ್ಚಿನಿಂದ ಆವರಿಸಿದ್ದ ಬೆಂಕಿಯನ್ನು ನಂದಿಸಲು ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಇಸ್ರೇಲ್ (Israel) ಅಧಿಕಾರಿಗಳು ಮನವಿ ಮಾಡಿದ್ದರಿಂದ ಕೇವಲ 24 ಗಂಟೆಗಳಲ್ಲಿ ಸಾವಿರಾರು ನಿವಾಸಿಗಳನ್ನು ಸ್ಥಳಾಂತರಿಸಲಾಯಿತು. ಮೃತ ಸೈನಿಕರ ಸ್ಮಾರಕ ದಿನವಾದ (Israel's Memorial Day) ಏಪ್ರಿಲ್ 29ರಂದು ಇಸ್ರೇಲ್‌ನಲ್ಲಿ ಈ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಜೆರುಸಲೆಮ್‌ನಿಂದ ಟೆಲ್ ಅವೀವ್‌ಗೆ ಹೋಗುವ ಮುಖ್ಯ ಮಾರ್ಗ 1ರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದರಲ್ಲಿ ಉರಿಯುತ್ತಿರುವ ಬೆಂಕಿಯ ಜ್ವಾಲೆ, ಸುತ್ತಮುತ್ತಲಿನ ಬೆಟ್ಟಗಳ ತುದಿಗಳಲ್ಲಿ ಆವರಿಸಿರುವ ದಟ್ಟವಾದ ಹೊಗೆಯನ್ನು ಕಾಣಬಹುದು.

ಜೆರುಸಲೇಂನಿಂದ ಟೆಲ್ ಅವೀವ್‌ಗೆ ಹೋಗುವ ಮುಖ್ಯ ಮಾರ್ಗ 1ರಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು 160 ಕ್ಕೂ ಹೆಚ್ಚು ರಕ್ಷಣಾ ಮತ್ತು ಅಗ್ನಿಶಾಮಕ ತಂಡಗಳುಕಾರ್ಯಾಚರಣೆ ನಡೆಸಿದವು. ಹಲವು ವಿಮಾನ ಮತ್ತು ಹೆಲಿಕಾಪ್ಟರ್‌ಗಳು ಕೂಡ ಬೆಂಕಿಯನ್ನು ನಿಯಂತ್ರಿಸಲು ಕಾರ್ಯಚರಣೆ ನಡೆಸಿದವು. ದೇಶದ ಮಿಲಿಟರಿ ಪಡೆ ರಕ್ಷಣಾ ಕಾರ್ಯಾಚರಣೆಗಳಿಗೆ ಸಹಾಯ ಮಾಡಿವೆ. ಹವಾಮಾನ ಪರಿಸ್ಥಿತಿಗಳು ಮತ್ತು ಬಲವಾದ ಗಾಳಿಯಿಂದಾಗಿ ಇವರು ತೀವ್ರ ತೊಂದರೆಯನ್ನು ಅನುಭವಿಸಿದರು.

ಇಸ್ರೇಲಿ ಅಗ್ನಿಶಾಮಕ ದಳವು ಬುಧವಾರ ಸಂಜೆ ನೀಡಿರುವ ಹೇಳಿಕೆಯಲ್ಲಿ ಇದು ಇಸ್ರೇಲ್‌ನಲ್ಲಿ ಈವರೆಗೆ ಕಾಣಿಸಿಕೊಂಡಿರುವ ಅತಿದೊಡ್ಡ ಬೆಂಕಿ ಎಂದು ಕರೆದಿದೆ. ಬೆಂಕಿ ಅವರಿಸಿಕೊಳ್ಳುತ್ತಿರುವುದರಿಂದ ಬೆಂಕಿ ಹೊತ್ತಿಕೊಂಡಿರುವ ಪ್ರದೇಶಗಳಲ್ಲಿ ರಾಷ್ಟ್ರೀಯ ಉದ್ಯಾನಗಳು ಮತ್ತು ಕಾಡುಗಳಿಗೆ ಜನರನ್ನು ನಿಷೇಧಿಸಲಾಗಿದೆ. ಬೆಂಕಿ ಹೊತ್ತಿಕೊಂಡ ಮಾರ್ಗ 1 ಸೇರಿದಂತೆ ಅನೇಕ ರಸ್ತೆಗಳನ್ನು ಮುಚ್ಚಲಾಗಿದೆ.

aa

ಈ ಕುರಿತು ಪ್ರತಿಕ್ರಿಯಿಸಿರುವ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಯ ಜೆರುಸಲೆಮ್ ಜಿಲ್ಲೆಯ ಕಮಾಂಡರ್ ಶ್ಮುಲಿಕ್ ಫ್ರೀಡ್‌ಮನ್, ಜೆರುಸಲೆಮ್ ಬೆಟ್ಟಗಳಲ್ಲಿನ ಬೆಂಕಿ ಈ ದೇಶದಲ್ಲಿ ಇದುವರೆಗೆ ಸಂಭವಿಸಿದ ಅತಿದೊಡ್ಡ ಬೆಂಕಿಯಾಗಿದೆ. ಇಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ಹೆಚ್ಚು ಬಹಳ ಸಮಯದವರೆಗೆ ಮುಂದುವರಿಯುವ ಸಾಧ್ಯತೆ ಇಲ್ಲ. ಯಾಕೆಂದರೆ ಪ್ರತಿಕೂಲ ಹವಾಮಾನದಿಂದ ಅದರ ಮೇಲೆ ನಿಯಂತ್ರಣ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಇಸ್ರೇಲ್ ವಾಯುಪಡೆಯು 18,000 ಲೀಟರ್‌ಗಳಷ್ಟು ಅಗ್ನಿಶಾಮಕ ಸಾಮಗ್ರಿಗಳನ್ನು ಹಿಡಿದಿಟ್ಟುಕೊಳ್ಳಬಲ್ಲ ಸಿ130ಜೆ ಸೂಪರ್ ಹರ್ಕ್ಯುಲಸ್ ಹೆವಿ ಟ್ರಾನ್ಸ್‌ಪೋರ್ಟ್ ಪ್ಲೇನ್‌ಗಳನ್ನು ಕಾರ್ಯಾಚರಣೆಯಲ್ಲಿ ನಿಯೋಜಿಸಿದೆ. ಈವರೆಗೆ ಸುಮಾರು 3,000 ಎಕರೆ ಭೂಮಿ ಬೆಂಕಿಯಲ್ಲಿ ಸುಟ್ಟುಹೋಗಿದೆ.

ಇದನ್ನೂ ಓದಿ: IPL 2025: ಐಪಿಎಲ್‌ ಟೂರ್ನಿಯಿಂದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಔಟ್‌, ಪಂಜಾಬ್‌ ಕಿಂಗ್ಸ್‌ಗೆ ಭಾರಿ ಹಿನ್ನಡೆ!

ಸ್ವಾತಂತ್ರ್ಯ ದಿನಾಚರಣೆ ರದ್ದು

ಜೆರುಸಲೇಂನಲ್ಲಿ ನಡೆಯಬೇಕಿದ್ದ ಪ್ರಮುಖ ರಾಜ್ಯ ಕಾರ್ಯಕ್ರಮ ಸೇರಿದಂತೆ ಇಸ್ರೇಲ್‌ನಲ್ಲಿ ನಿಗದಿಯಾಗಿದ್ದ ಸ್ವಾತಂತ್ರ್ಯ ದಿನಾಚರಣೆಯನ್ನು ಬುಧವಾರ ಕಾಡ್ಗಿಚ್ಚಿನ ಕಾರಣದಿಂದಾಗಿ ರದ್ದುಗೊಳಿಸಲಾಯಿತು. ಕಾಡು ಬೆಂಕಿ ಜೆರುಸಲೆಮ್ ತಲುಪಬಹುದು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಸಿದ್ದಾರೆ. ಪಶ್ಚಿಮ ಗಾಳಿಯು ಜೆರುಸಲೆಮ್ ಹೊರವಲಯದ ಕಡೆಗೆ ಬೆಂಕಿಯನ್ನು ಸುಲಭವಾಗಿ ತಳ್ಳಬಹುದು. ಇದು ನಗರದೊಳಗೂ ಬರಬಹುದು ಎಂದು ಅವರು ತಿಳಿಸಿದ್ದಾರೆ.

ಕಾಡ್ಗಿಚ್ಚಿನ ವಿರುದ್ಧ ಹೋರಾಡಲು ಸಹಾಯ ಮಾಡುವಂತೆ ಇಸ್ರೇಲ್ ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಮನವಿ ಮಾಡಿದ್ದು, ಉಕ್ರೇನ್ ವಿಮಾನವನ್ನು ಕಳುಹಿಸುವುದಾಗಿ ಹೇಳಿದೆ.ಸ್ಪೇನ್, ಫ್ರಾನ್ಸ್, ರೊಮೇನಿಯಾ, ಕ್ರೊಯೇಷಿಯಾ ಮತ್ತು ಇಟಲಿ ಕೂಡ ವಿಮಾನಗಳನ್ನು ಕಳುಹಿಸುವುದಾಗಿ ತಿಳಿಸಿವೆ ಎನ್ನಲಾಗಿದೆ.