Chikkaballapur News: ಡಾ.ಬಿ.ಆರ್.ಅಂಬೇಡ್ಕರ್ ಭಾರತ ಮಾತೆ ನೀಡಿರುವ ಅದ್ಭುತ ಚೈತನ್ಯ : ಸಂದೀಪ್‌ಬಿ ರೆಡ್ಡಿ ಬಣ್ಣನೆ
ಅಂಬೇಡ್ಕರ್ ದಲಿತ ಕುಟುಂಬದಲ್ಲಿ ಹುಟ್ಟಿರಬಹುದು. ಭಾರತೀಯರು ಇಂದು ನೆಮ್ಮದಿಯಾಗಿ ಜೀವನ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಅವರು ಬರೆದಿರುವ ಗಟ್ಟಿಯಾದ ಸಂವಿಧಾನ ವಾಗಿದೆ. ವಿಶ್ವದ ಭೂಪಟದಲ್ಲಿ ಎಲ್ಲಿಯವರೆಗೆ ಭಾರತ ರಾರಾಜಿಸುತ್ತದೆಯೋ ಅಲ್ಲಿಯವರೆಗೆ ಅಂಬೇಡ್ಕರ್ ಬರೆದ ಸಂವಿಧಾನ ಇರಲಿದೆ,ನನ್ನ ಅಂಬೇಡ್ಕರ್ ಜೀವಂತವಾಗಿ ಇರಲಿದ್ದಾರೆ ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕಕರ್ ಭಾರತ ಮಾತೆ ದೇಶಕ್ಕೆ ನೀಡಿರುವ ಅದ್ಭುತ ಚೈತನ್ಯವಾಗಿದ್ದಾರೆ ಎಂದು ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್.ಬಿ.ರೆಡ್ಡಿ ತಿಳಿಸಿದರು.

ಚಿಕ್ಕಬಳ್ಳಾಪುರ : ಡಾ.ಬಿ.ಆರ್.ಅಂಬೇಡ್ಕಕರ್ ಭಾರತ ಮಾತೆ ದೇಶಕ್ಕೆ ನೀಡಿರುವ ಅದ್ಭುತ ಚೈತನ್ಯ ವಾಗಿದ್ದಾರೆ ಎಂದು ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್.ಬಿ.ರೆಡ್ಡಿ ತಿಳಿಸಿದರು. ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ನಡೆದ ಬಾಬಾಸಾಹೇಬ ಅಂಬೇಡ್ಕರ್ ಅವರ 134ನೇ ಜಯಂತಿಯ ಅಂಗವಾಗಿ ನೂತನವಾಗಿ ನಿರ್ಮಿಸಿರುವ ಅಂಬೇಡ್ಕರ್ ಭಾವಚಿತ್ರವಿರುವ ನೂತನ ನಾಮಫಲಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಬಾಲ್ಯದಿಂದಲೇ ಜಾತಿಯ ಕಾರಣ ಕ್ಕಾಗಿ ಅವಮಾನ ಸಂಕಟಗಳನ್ನು ಅನುಭವಿಸಿದರೂ ಓದನ್ನು ಯಜ್ಞದಂತೆ ಸ್ವೀಕರಿಸಿ, ವಿದ್ಯಾ ಸರಸ್ವತಿಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಕಾರಣ ಜ್ಞಾನ ಸೂರ್ಯರಾಗಿ ಬೆಳಗಿದ್ದಾರೆ.
ತಾವು ಬರೋಡ ಮಹಾರಾಜರ ನೆರವಿನಲ್ಲಿ ಉನ್ನತ ಶಿಕ್ಷಣವನ್ನು ದೇಶವಿದೇಶಗಳಲ್ಲಿ ಪಡೆಯು ವಂತೆ ಆಗಿದೆ. ಪರಿಣಾಮವಾಗಿ ವಿಶ್ವವೇ ಮೆಚ್ಚುವ ಪರಿಪೂರ್ಣ ಸಂವಿಧಾನವೆಂಬ ಭಗವದ್ಗೀತೆ ಯನ್ನು ಭಾರತದೇಶಕ್ಕೆ ನೀಡಿದ ಕೀರ್ತಿಗೆ ಅವರು ಪಾತ್ರವಾಗಿದ್ದಾರೆ ಎಂದರು.
ಅಂಬೇಡ್ಕರ್ ದಲಿತ ಕುಟುಂಬದಲ್ಲಿ ಹುಟ್ಟಿರಬಹುದು. ಭಾರತೀಯರು ಇಂದು ನೆಮ್ಮದಿಯಾಗಿ ಜೀವನ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಅವರು ಬರೆದಿರುವ ಗಟ್ಟಿಯಾದ ಸಂವಿಧಾನ ವಾಗಿದೆ. ವಿಶ್ವದ ಭೂಪಟದಲ್ಲಿ ಎಲ್ಲಿಯವರೆಗೆ ಭಾರತ ರಾರಾಜಿಸುತ್ತದೆಯೋ ಅಲ್ಲಿಯವರೆಗೆ ಅಂಬೇಡ್ಕರ್ ಬರೆದ ಸಂವಿಧಾನ ಇರಲಿದೆ, ನನ್ನ ಅಂಬೇಡ್ಕರ್ ಜೀವಂತವಾಗಿ ಇರಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Chikkaballapur News: ರೈತರ ಮೇಲೆ ಹಾರಿದೆ ಗುಂಡಿನ ದಾಳಿ
ಅಂಬೇಡ್ಕರ್ ದಲಿತ ಸಮುದಾಯದ ಏಳಿಗಾಗಿ ಸಂವಿಧಾನದಲ್ಲಿ ಏನೆಲ್ಲಾ ಕೊಟ್ಟಿದ್ದರೂ ಕೂಡ ಸ್ವಾತಂತ್ರö್ಯ ಬಂದು ೭೮ ವರ್ಷಗಳಲ್ಲಿ ದಲಿತರ ಸ್ಥಿತಿಗತಿಗಳಲ್ಲಿ ಆಮೂಲಾಗ್ರ ಬದಲಾವಣೆ ಕಂಡಿಲ್ಲ.ಇವತ್ತಿಗೂ ಹೆಚ್ಚಿನ ಭಾಗದ ದಲಿತರು ಬಡತನದಲ್ಲಿ ಬೇಯುತ್ತಿದ್ದಾರೆ.ಉಳ್ಳವರ ಮುಂದೆ ಕೈಕಟ್ಟಿ ನಿಲ್ಲುತ್ತಿದ್ದಾರೆ.ಇದನ್ನು ಬಿಟ್ಟು ಅಂಬೇಡ್ಕರ್ ಹೇಳಿದ ಹಾಗೆ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕು. ಪ್ರತಿಯೊಂದು ಮನೆಯಿಂದ ಒಬ್ಬೊಬ್ಬ ಅಂಬೇಡ್ಕರ್ ಮರುಹುಟ್ಟು ಪಡೆಯ ಬೇಕು. ಆಗ ಮಾತ್ರ ಇಂತಹ ಜಯಂತಿಗಳಿಗೆ ಅರ್ಥ ಬರಲಿದೆ ಎಂದು ಕರೆ ನೀಡಿದರು.
ಚಿಕ್ಕಬಳ್ಳಾ ಪುರ ವಿಧಾನ ಸಭಾ ಕ್ಷೇತ್ರದಲ್ಲಿರುವ ದಲಿತ ಸಮುದಾಯದ ಯಾರಿಗೇ ಆಗಲಿ ಓದಲು ಕಷ್ಟವಾಗುತ್ತಿದ್ದರೆ,ಗಂಭೀರ ಆರೋಗ್ಯ ಸಮಸ್ಯೆಯಿದ್ದರೆ,ಮದುವೆಗೆ ತೊಂದರೆ ಇದ್ದರೆ ಸದಾಕಾಲ ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ಬಾಗಿಲು ಸದಾ ತೆರೆದಿರುತ್ತದೆ. ಬಂದು ಅನುಕೂಲ ಪಡೆಯ ಬಹುದು ಎಂದು ಭರವಸೆ ನೀಡಿದರು.
ಉಧ್ಯಮಿ ಮುಷ್ಟೂರು ಶ್ರೀಧರ್ ಮಾತನಾಡಿ ಅಂಬೇಡ್ಕರ್ ಬದುಕು ಬರಹ ಅವರು ಸಾರಿದ ಸಂದೇಶ ಗಳು ನಮ್ಮ ಬದುಕಿಗೆ ದಾರಿದೀಪವಾಗಲಿ.ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು, ನೀವೆಲ್ಲಾ ಸಾಗೋಣ.ಅಂಬೇಡ್ಕರ್ ಸೇನೆಯ ಜತೆಗೆ ಸದಾ ನಾನು ಇರುತ್ತೇನೆ ಎಂದರು.
ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ ಬಾಬಾ ಸಾಹೇಬರ ಆಶಯಗಳನ್ನು ಯುವಜನತೆ ಅರಿತು ಅದರಂತೆ ನಡೆಯುವ ಕೆಲಸ ಮಾಡಬೇಕು.ಬಾಬಾ ಸಾಹೇಬರು ಜ್ಯೋತಿಬಾಪುಲೆ, ಸಾವಿತ್ರಿಬಾಯಿಪುಲೆ,ಬುದ್ಧ ಬಸವರಿಂದ ಪ್ರೇರಣೆಗೆ ಒಳಗಾಗಿ ಸರ್ವಜನಾಂಗಕ್ಕೂ ಒಪ್ಪುವ ಸಂವಿಧಾನವನ್ನು ನೀಡಿದ್ದಾರೆ.ಪೆರಿಯಾರ್,ಪ್ರೊ.ಬಿ.ಕೃಷ್ಣಪ್ಪ ಅವರ ಚರಿತ್ರೆ ಓದಬೇಕು.ಆಗ ಮಾತ್ರ ಭಾರತೀಯ ಸಮಾಜದ ಜಾತಿವಾದಿ ಮನಸ್ಸು ಅರ್ಥವಾಗಲಿದೆ ಎಂದರು.
ಕನ್ನಡ ಉಪನ್ಯಾಸಕ ಮುನಿರಾಜು ಎಂ ಅರಿಕೆರೆ ಮಾತನಾಡಿ ಬಾಬಾಸಾಹೇಬರನ್ನು ಅರಿಯಲು ಅದ್ಧೂರಿ ಆಚರಣೆಗಳು ಬೇಕು,ಆದರೆ ಇದೇ ಮಾರ್ಗವೇ ಅಂತಿಮವಲ್ಲ. ಬದಲಿಗೆ ಅವರು ಪಟ್ಟ ಕಷ್ಟ, ನೊಂದ ನೋವು, ಬರೆದ ಬರಹ, ಮಾಡಿರುವ ಉಪನ್ಯಾಸಗಳು, ಪಡೆದ ಪದವಿಗಳು ಪಠ್ಯ ರೂಪದಲ್ಲಿ ನಮಗೆ ನಮ್ಮದೇ ಭಾಷೆಯಲ್ಲಿ ದೊರೆಯುತ್ತಿವೆ.ಅವುಗಳನ್ನು ನಮ್ಮ ಕೇರಿಗೆ, ಕಾಲೋನಿ ಗಳಿಗೆ ಬಿಟ್ಟುಕೊಳ್ಳಬೇಕು. ಆ ಮೂಲಕ ಅವರು ಹಚ್ಚಿರುವ ಅರಿವಿನ ಹಣತೆಯನ್ನು ನಮ್ಮ ಎದೆಗಳಿಗೆ ಇಳಿಸಿಕೊಳ್ಳಬೇಕಿದೆ ಎಂದರು.
ಅAಬೇಡ್ಕರ್ ಜಯಂತಿ ಮಾಡಲು ಮುಂದೆ ಬರುವ ಯುವಕರು ಕಡ್ಡಾಯವಾಗಿ ಶಿಸ್ತನ್ನು ಪಾಲಿಸಬೇಕು.ಕುಡಿದು, ಡಿಜೆ ಹಾಕಿಕೊಂಡು, ಅಶ್ಲೀಲವಾಗಿ ನೃತ್ಯ ಮಾಡುವುದರಿಂದ,ಹಾರ ತುರಾಯಿ ಹಾಕಿ ಪಟಾಕಿ ಸಿಡಿಸುವುದರಿಂದ ಅಂಬೇಡ್ಕರ್ ಅರ್ಥವಾಗುವುದಿಲ್ಲ.ಇಂತಹ ಆಚರಣೆಗಳು ಕೇವಲ ಒಂದು ದಿನದಲ್ಲಿ ಹುಟ್ಟಿ ಅಂದೇ ಸತ್ತು ಹೋಗುತ್ತವೆ.ನಿಜವಾದ ಅಂಬೇಡ್ಕರ್ ಪ್ರೇಮಿಗಳು ಮಧ್ಯಪಾನ ಮಾಡುವುದಿಲ್ಲ, ಸುಳ್ಳು ಹೇಳದೆ, ಅನಾಚಾರ ಮಾಡದೆ, ನ್ಯಾಯ ಮಾರ್ಗದಲ್ಲಿ ಗಳಿಸಿದ ಹಣದಿಂದ ಜಯಂತಿ ಮಾಡಲು ಮುಂದಾಗುತ್ತಾರೆ. ಅಂಬೇಡ್ಕರ್ ಬರಹ ಭಾಷಣಗಳ ೧೮ ಸಂಪುಟಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೋಗಿ ಪಡೆದು ಅವು ಗಳನ್ನು ನಿಮ್ಮ ಮನೆಯ ಪೋಟೋ ಇಡುವ ಜಾಗದಲ್ಲಿಟ್ಟು ನಿತ್ಯವೂ ಅವುಗಳನ್ನು ಓದಿ. ಮುಂದಿನ ದಿನಗಳಲ್ಲಿ ಮುಷ್ಟೂರು ಗ್ರಾಮದ ಯುವಕರು ಹೀಗೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎನ್ನುತ್ತಾ ಮಾತು ಮುಗಿಸಿದರು.
ಕಾರ್ಯಕ್ರಮದಲ್ಲಿ ಮುಷ್ಟೂರು ಗ್ರಾಮದ ನಾರಾಯಣಮ್ಮ, ಮುನಿಕೃಷ್ಣಪ್ಪ, ಡಿ.ಮಂಜುನಾಥ್, ತಿಪ್ಪೇನಹಳ್ಳಿ ಗ್ರಾಪಂ ಅಧ್ಯಕ್ಷ ಶಶಿಕುಮಾರ್, ಸದಸ್ಯ ಶ್ರೀಧರ್, ಸೇನೆಯ ತಾಲೂಕು ಅಧ್ಯಕ್ಷ ದೇವದಾಸು, ಗಂಗಪ್ಪ, ಕೃಷ್ಣಪ್ಪ, ಸೇನೆಯ ರಾಜ್ಯ ಉಪಾಧ್ಯಕ್ಷ ವೈ.ಶಂಕರ್, ಕಾರ್ಮಿಕ ಘಟಕದ ಅಧ್ಯಕ್ಷ ಹರೀಶ್, ಉಪಾಧ್ಯಕ್ಷ ಮುನಿರಾಜು, ಗಂಗರಾಜು, ಮಂಜು, ನಾಗೇಶ್, ವೆಂಕಟರಮಣಪ್ಪ, ಹರೀಶ್ ಮತ್ತಿತರರು ಇದ್ದರು.