ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BSF Soldiers: 7 ದಿನ... 7ಮೀಟಿಂಗ್‌...ನೋ ರೆಸ್ಪಾನ್ಸ್‌! ಪಾಕ್‌ ವಶದಲ್ಲಿರುವ BSF ಯೋಧನ ಗತಿಯೇನು?

ಏಳು ದಿನ, ಏಳು ಸಭೆಗಳಾದರೂ ಆಕಸ್ಮಿಕವಾಗಿ ಗಡಿ ದಾಟಿದ ಬಿಎಸ್‌ಎಫ್ ಯೋಧನ ( BSF Jawan) ಬಿಡುಗಡೆಗೆ ಪಾಕಿಸ್ತಾನವು (pakistan) ಸುಖಾ ಸುಮ್ಮನೆ ನೆಪ ಹೇಳುತ್ತಿದೆ. ಸುಮಾರು 15 ನಿಮಿಷಗಳ ಕಾಲ ನಡೆದ ಪ್ರತಿಯೊಂದು ಸಭೆಯಲ್ಲಿಯೂ ಪಾಕಿಸ್ತಾನಿ ಅಧಿಕಾರಿಗಳು ಉನ್ನತ ಅಧಿಕಾರಿಗಳ ಸೂಚನೆಗಳಿಗಾಗಿ ಕಾಯುತ್ತಿರುವುದಾಗಿ ಏಳು ದಿನಗಳಿಂದ ಹೇಳುತ್ತಿದ್ದಾರೆ.

ಯೋಧನ  ಬಿಡುಗಡೆಗೆ ಆದೇಶ ಸಿಕ್ಕಿಲ್ಲ; ಪಾಕ್ ನೆಪ

ಫಿರೋಜ್‌ಪುರ: ಏಳು ದಿನ, ಏಳು ಸಭೆಗಳಾದರೂ ಆಕಸ್ಮಿಕವಾಗಿ ಗಡಿ ದಾಟಿದ ಬಿಎಸ್‌ಎಫ್ ಯೋಧನ (BSF Soldier) ಬಿಡುಗಡೆಗೆ ಪಾಕಿಸ್ತಾನವು (Pakistan) ಒಂದೇ ನೆಪವೊಡ್ಡಿದೆ. ಸುಮಾರು 15 ನಿಮಿಷಗಳ ಕಾಲ ನಡೆದ ಪ್ರತಿಯೊಂದು ಸಭೆಯಲ್ಲಿಯೂ ಪಾಕಿಸ್ತಾನಿ ಅಧಿಕಾರಿಗಳು ಉನ್ನತ ಅಧಿಕಾರಿಗಳ ಸೂಚನೆಗಳಿಗಾಗಿ ಕಾಯುತ್ತಿರುವುದಾಗಿ ಏಳು ದಿನಗಳಿಂದ ಹೇಳುತ್ತಿದ್ದಾರೆ. ಪಂಜಾಬ್‌ನ ಫಿರೋಜ್‌ಪುರ (Firozpur) ಬಳಿ ಅಂತಾರಾಷ್ಟ್ರೀಯ ಗಡಿಯನ್ನು ಆಕಸ್ಮಿಕವಾಗಿ ದಾಟಿದ 182ನೇ ಬೆಟಾಲಿಯನ್‌ನ ಗಡಿ ಭದ್ರತಾ ಪಡೆ (BSF)ಯ ಪಿಕೆ ಸಾಹು ಕಳೆದ ಏಳು ದಿನಗಳಿಂದ ಪಾಕಿಸ್ತಾನಿ ಸೈನಿಕರ ಬಂಧನದಲ್ಲಿದ್ದಾರೆ.

ಪಿಕೆ ಸಾಹು ಅವರನ್ನು ಪಾಕಿಸ್ತಾನ ರೇಂಜರ್‌ಗಳು ಸೆರೆಹಿಡಿದು ಬಂಧಿಸಿದ್ದರು. ಅವರ ಬಿಡುಗಡೆಗೆ ಎರಡೂ ಕಡೆಯ ಅಧಿಕಾರಿಗಳು ಸಭೆಗಳನ್ನು ನಡೆಸುತ್ತಿದ್ದರೂ ಪಾಕಿಸ್ತಾನ ರೇಂಜರ್‌ಗಳು ಹಿರಿಯ ಅಧಿಕಾರಿಗಳಿಂದ ಆದೇಶ ಬಂದಿಲ್ಲ ಎನ್ನುತ್ತಿದ್ದಾರೆ. ಕಳೆದ ಏಳು ದಿನಗಳಿಂದ ನಡೆದ ಪ್ರತಿಯೊಂದು ಸಭೆಯು ಸುಮಾರು 15 ನಿಮಿಷಗಳ ಕಾಲ ನಡೆಯುತ್ತಿದೆ.

ನಿತ್ಯವೂ ಪಾಕಿಸ್ತಾನಿ ರೇಂಜರ್ ಗಳನ್ನು ಭೇಟಿಯಾಗುತ್ತಿದ್ದೇವೆ. ಆದರೆ ಪ್ರತಿದಿನ ಅವರು ಒಂದೇ ಮಾತನ್ನು ಪುನರಾವರ್ತಿಸುತ್ತಿದ್ದಾರೆ. ಬಿಎಸ್‌ಎಫ್ ಜವಾನನ ಬಿಡುಗಡೆ ಮಾಡಲು ಹಿರಿಯ ಅಧಿಕಾರಿಗಳಿಂದ ಆದೇಶಗಳು ಬಂದಿಲ್ಲ ಎನ್ನುತ್ತಿದ್ದಾರೆ ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಅವರು ಪ್ರತಿದಿನ ಕೇಳುತ್ತಿದ್ದಾರೆ ಎನ್ನುತ್ತಿದ್ದಾರೆ. ಆದರೆ ಅವರ ಉನ್ನತ ನಾಯಕತ್ವದಿಂದ ಯಾವುದೇ ನಿರ್ದೇಶನ ಬಂದಿಲ್ಲ ಎನ್ನುತ್ತಾರೆ ಎಂದು ಅಧಿಕಾರಿ ಹೇಳಿದರು.

ಪಾಕಿಸ್ತಾನ ಭೂಪ್ರದೇಶದ ಕೇವಲ 1- 2 ಮೀಟರ್‌ಗಳೊಳಗೆ ದಾಟಿದ್ದ ಸಾಹು ಅವರನ್ನು ತಕ್ಷಣವೇ ಪಾಕಿಸ್ತಾನ ಬಿಡುಗಡೆ ಮಾಡಬಹುದಿತ್ತು. ಈ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಪರಿಹರಿಸಬಹುದಿತ್ತು.ಆದರೆ ಒಂದು ವಾರದ ಅನಂತರವೂ ಆತನ ಬಿಡುಗಡೆ ಮಾಡದೇ ಇರುವುದು ಆತಂಕ ಉಂಟುಮಾಡಿದೆ.

ಇದನ್ನೂ ಓದಿ: Ayyana Mane Web Series: 50 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್‌ ಮೂಲಕ ಒಟಿಟಿಯಲ್ಲಿ ದಾಖಲೆ ಬರೆದ ʼಅಯ್ಯನ ಮನೆʼ ವೆಬ್‌ ಸಿರೀಸ್‌

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಅನಂತರ ಎರಡು ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಉದ್ದೇಶಪೂರ್ವಕವಾಗಿಯೇ ಪಿಕೆ ಸಾಹು ಅವರನ್ನು ಬಂಧನದಲ್ಲಿ ಇರಿಸುವಂತೆ ತೋರುತ್ತಿದೆ ಎನ್ನಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ಭಯೋತ್ಪಾದಕರು ಪ್ರವಾಸಿಗರ ಗುಂಪಿನ ಮೇಲೆ ಗುಂಡು ಹಾರಿಸಿ 26 ಜನರನ್ನು ಕೊಂದ ಬಳಿಕ ಇದನ್ನು ತಾನು ಮಾಡಿರುವುದಾಗಿ ಲಷ್ಕರ್-ಎ-ತೈಬಾಗೆ ಸಂಬಂಧಿಸಿದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಒಪ್ಪಿಕೊಂಡಿದೆ. ಈ ಭಯೋತ್ಪಾದಕರಿಗೆ ಪಾಕಿಸ್ತಾನವು ನಿರಂತರ ಬೆಂಬಲ ನೀಡುತ್ತಿರುವುದರಿಂದ ಈ ಕ್ರೂರ ದಾಳಿ ಭಾರತದ ಆಕ್ರೋಶಕ್ಕೆ ಕಾರಣವಾಗಿದೆ.

2019ರಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯ ಅನಂತರ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ಸೆರೆ ಹಿಡಿದಿತ್ತು. ಅಂತಾರಾಷ್ಟ್ರೀಯ ಒತ್ತಡ ಹೆಚ್ಚಾದ ಬಳಿಕ ಅವರನ್ನು ಬಿಡುಗಡೆ ಮಾಡಿತ್ತು.