Chikkaballapur News: ಮೇ ದಿನಾಚರಣೆ: ಬೃಹತ್ ಮೆರವಣಿಗೆ
29 ಕಾನೂನುಗಳನ್ನು ನಾಲ್ಕು ಸಂಹಿತೆಗಳನ್ನಾಗಿ ಮಾಡಿರುವ ಕೇಂದ್ರದ ಶಾಸನಗಳ ನಿಯಮಾವಳಿ ಗಳನ್ನು ರಾಜ್ಯ ಸರ್ಕಾರವು ಅನುಷ್ಠಾನಗೊಳಿಸಬಾರದು, ಎಲ್ಲ ವಿಭಾಗಗಳ ಕುಶಲ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂಬುದು ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು, ಮುಷ್ಕರ ಹಕ್ಕು ಮತ್ತು ಸಾಮೂಹಿಕ ಚೌಕಾಸಿಯ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ


ಬಾಗೇಪಲ್ಲಿ: ವಿಶ್ವ ಕಾರ್ಮಿಕರ ದಿನದ ಅಂಗವಾಗಿ ಪಟ್ಟಣದ ಗುರುವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಡಿ.ವಿ.ಜಿ.ರಸ್ತೆಯಲ್ಲಿ ಬೃಹತ್ ಮೆರವಣಿಗೆ ನಡೆಸಿತು. ಸಿಐಟಿಯು ಸಂಘಟನೆ ವ್ಯಾಪ್ತಿ ಯಲ್ಲಿನ ಎಲ್ಲ ಸಾಮೂಹಿಕ ಸಂಘಟನೆಗಳ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಪಟ್ಟಣದ ಸಿಪಿಐಎಂ ಪಕ್ಷದ ಕಛೇರಿ ಸುಂದರಯ್ಯ ಭವನದಿಂದ ಹೊರಟ ಗೂಳೂರು ವೃತ್ತದಲ್ಲಿ ಮೆರವಣಿಗೆ ನಡೆಸಿದ ಸಂಘಟನೆಗಳ ಸದಸ್ಯರು, ‘ಕಾರ್ಮಿಕರ ಹಕ್ಕು ಜಾರಿಯಾಗಲೇಬೇಕು. ಕಾರ್ಮಿಕ ರಿಗೆ ನ್ಯಾಯ ಸಿಗಲೇಬೇಕು, ಕನಿಷ್ಠ ಕೂಲಿ ಜಾರಿಗೆ ಮಾಡಬೇಕು, ಕಾರ್ಮಿಕರ ಕಾನೂನು ಗಳು ವಾಪಾಸಾಗಲಿ,ಕಾರ್ಮಿಕರ ಹಕ್ಕುಗಳು ದೊರಯಲಿ, ಕಾರ್ಮಿಕರ ನಾಲ್ಕು ಸಂಹಿತೆಗಳು ವಾಪಸ್ ಆಗಲಿ, ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರನ್ನು ಕಾಯಂಗೊಲಿಸಿ, ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಡಪಂಥೀಯ ಚಿಂತಕ ಡಾ.ಅನಿಲ್ ಕುಮಾರ್ ಮಾತನಾಡಿ ಅನೇಕ ವರ್ಷ ಗಳಿಂದ ಕಾರ್ಮಿಕರ ಹಕ್ಕು ಮತ್ತು ಹಿತರಕ್ಷಣೆ ಹೋರಾಟ ನಡೆಸಲಾಗುತ್ತಿದೆ. ಸಂಘಟಿತ ವಲಯ ಮತ್ತು ಅಸಂಘಟಿತ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರಿದ್ದು, ಅವರ ಬೇಡಿಕೆಗಳು ಈಡೇರಬೇಕಿದೆ’ ಎಂದರು.
ಇದನ್ನೂ ಓದಿ: Chikkaballapur Crime: ತಾಲೂಕಿನ ವರ್ಲಕೊಂಡ ಬಳಿ ಅಪಘಾತ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಸಾವು
29 ಕಾನೂನುಗಳನ್ನು ನಾಲ್ಕು ಸಂಹಿತೆಗಳನ್ನಾಗಿ ಮಾಡಿರುವ ಕೇಂದ್ರದ ಶಾಸನಗಳ ನಿಯಮಾವಳಿ ಗಳನ್ನು ರಾಜ್ಯ ಸರ್ಕಾರವು ಅನುಷ್ಠಾನಗೊಳಿಸಬಾರದು, ಎಲ್ಲ ವಿಭಾಗಗಳ ಕುಶಲ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂಬುದು ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು, ಮುಷ್ಕರ ಹಕ್ಕು ಮತ್ತು ಸಾಮೂಹಿಕ ಚೌಕಾಸಿಯ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರವು ರೂಪಿಸಿರುವ ನಾಲ್ಕು ಸಂಹಿತೆಗಳನ್ನು ವಾಪಸ್ ಪಡೆಯಬೇಕು. ಗುತ್ತಿಗೆ ಹಾಗೂ ಹೊರ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಹೇಳಿದರು.
ಸಂಘಟಿತ ಕಾರ್ಮಿಕರು ಹಾಗೂ ಅಸಂಘಟಿತ ಕಟ್ಟಡ ನಿರ್ಮಾಣ, ಆಟೋ ರಿಕ್ಷಾ, ಟ್ಯಾಕ್ಷಿ ಚಾಲಕರು, ಮನೆಗೆಲಸದವರು, ಹಮಾಲಿಗಳು, ಗ್ರಾಮ ಪಂಚಾಯಿತಿ ಕಾರ್ಮಿಕರು, ಉದ್ಯೋಗ ಖಾತ್ರಿ ಕಾರ್ಮಿಕರು, ವಿವಿಧ ಇಲಾಖೆಗಳ ಗುತ್ತಿಗೆ, ಹೊರಗುತ್ತಿಗೆ ಹಾಗೂ ‘ಸ್ಕೀಂ‘ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಸಿಪಿಐಎಂ ಪಕ್ಷದ ಮುಖಂಡ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ಮೇ 1 ರಂದು ಅಂತಾರಾಷ್ಟ್ರೀ ಯ ಕಾರ್ಮಿಕರ ದಿನ. ಕಾಯಕ ಯೋಗಿಗಳ, ಶ್ರಮ ಜೀವಿಗಳ ಕೆಲಸ, ಶ್ರಮ, ಶ್ರದ್ಧೆ ಗೌರವಿಸಿ, ಅವರ ಕಷ್ಟ ಆಲಿಸಿ, ನೆರವಾಗುವ ಉದ್ಧೇಶದಿಂದ ಮೇ 1ರಂದು ಜಾಗತಿಕವಾಗಿ 'ಅಂತಾರಾಷ್ಟ್ರೀಯ ಕಾರ್ಮಿಕರ ದಿನ' ವನ್ನಾಗಿ ಆಚರಿಸಲಾಗುವುದು. ಮೇ ಡೇ, ಲೇಬರ್ ಡೇ ಹಾಗೂ ವರ್ಕರ್ಸ್ ಡೇ ಎಂಬ ಹೆಸರಿನಿಂದಲೂ ಕರೆಯುತ್ತಾರೆ.
ಕಾರ್ಮಿಕರ ಬಗ್ಗೆ ಕನಿಷ್ಠ ಕಾಳಜಿ ಮತ್ತು ಕಳಕಳಿಯಿದ್ದಲ್ಲಿ, ಸರ್ಕಾರ ಕಾರ್ಮಿಕರು ಎದುರಿಸು ತ್ತಿರುವ ಸಂಕಷ್ಟಗಳನ್ನು ಪರಿಹರಿಸಬೇಕು’ ಎಂದರು. ಈ ಸಂಧರ್ಭದಲ್ಲಿ ಸಿಪಿಐಎಂ ಪಕ್ಷದ ಮುಖಂಡರಾದ ಸಿದ್ದಗಂಗಪ್ಪ ರಘುರಾಮ ರೆಡ್ಡಿ, ನಾಗರಾಜು, ಮುನಿಯಪ್ಪ, ಚನ್ನರಾಯಪ್ಪ, ವಾಲ್ಮೀಕಿ ಅಶ್ವತ್ಥಪ್ಪ,ಮುಸ್ತಫಾ, ಕೃಷ್ಣಪ್ಪ, ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿ ದ್ದರು.