Chikkaballapur News: 20ನೇ ವರ್ಷದ ಹಜರತ್ ಖ್ವಾಜ ಪೀರ್ ಸೈದ್ ಷಾ ಗಯಾಸಲ್ಲಾ ಷಾ ನಸೀರಿ ಉರುಸ್
ಹೈದರಾಬಾದ್ಚಿ ನ ಚಸ್ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಧರ್ಮಗುರು ಖ್ವಾಜ ಷಾ ಮಹಮದ್ ಶಜಾಉದ್ದೀನ್ ಚಿಸ್ಟಿ ಖಾದ್ರಿ ಇಫ್ತಖಾರಿ ಮುಂದಾಳತ್ವದಲ್ಲಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆ ಯಿತು. ಈ ಧಾರ್ಮಿಕ ಕಾರ್ಯಕ್ರಮದ ನಂತರ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಶಜಾಉದ್ದೀನ್ ಚಿಸ್ಟಿ ದೇವರ ಪ್ರಾರ್ಥನೆಯಲ್ಲಿ ಮನುಷ್ಯನ ಜೀವನ ಸಾಕಾರವಾಗಲಿದೆ .


ಚಿಕ್ಕಬಳ್ಳಾಪುರ: ಹಜರತ್ ಖ್ವಾಜ ಪೀರ್ ಸೈದ್ ಷಾ ಗಯಾಸಲ್ಲಾ ಷಾ ನಸೀರಿ ಅವರ 20ನೇ ಉರುಸ್ ಶ್ರದ್ಧಾ ಭಕ್ತಿಯಿಂದ ನಡೆಯಿತು. ನಗರದ ಹೊರವಲಯದಲ್ಲಿರುವ ಆಸ್ಥಾನ ಬಹಷ್ಟಿ ಗಂಜ್ ಹೊನ್ನೇನಹಳ್ಳಿಯಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಹಸ್ರಾರು ಭಕ್ತರು ಉರುಸ್ ಹಾಗು ಜಶನ್ ಚಿರಾಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರದ್ಧೆ ಭಕ್ತಿ ಮೆರೆದರು.
ಹೈದರಾಬಾದ್ಚಿ ನ ಚಸ್ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಧರ್ಮಗುರು ಖ್ವಾಜ ಷಾ ಮಹಮದ್ ಶಜಾಉದ್ದೀನ್ ಚಿಸ್ಟಿ ಖಾದ್ರಿ ಇಫ್ತಖಾರಿ ಮುಂದಾಳತ್ವದಲ್ಲಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆ ಯಿತು. ಈ ಧಾರ್ಮಿಕ ಕಾರ್ಯಕ್ರಮದ ನಂತರ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಶಜಾಉದ್ದೀನ್ ಚಿಸ್ಟಿ ದೇವರ ಪ್ರಾರ್ಥನೆಯಲ್ಲಿ ಮನುಷ್ಯನ ಜೀವನ ಸಾಕಾರವಾಗಲಿದೆ. ದೈವ ಭಕ್ತಯಲ್ಲಿ ಮನುಷ್ಯ ನು ಸುಖಕರ ಜೀವನ ಸಾಗಿಸಿಬಲ್ಲನು ದೇವರ ಕೃಪೆಗೆ ಪಾತ್ರರಾಗಬೇಕಾದರೆ ಧರ್ಮವನ್ನು ಪಾಲಿಸುತ್ತ ಧೈವ ಮತ್ಧತು ಧರ್ಮ ಗುರುಗಳ ಆದರ್ಶ ತತ್ವಗಳನ್ನು ಪಾಲಿಸಬೇಕು ಎಂದರು.
ಇದನ್ನೂ ಓದಿ:Chikkaballapur Crime: ತಾಲೂಕಿನ ವರ್ಲಕೊಂಡ ಬಳಿ ಅಪಘಾತ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಸಾವು
ಹಿರಿಯರು ಸಾರಿದಂತಹ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ನಮ್ಮ ಭಕ್ತಿ ಕೇವಲ izಕಾರ್ಯಕ್ರಮಗಳಿಗೆ ಸೀಮಿತವಾಗಬಾರದು ಎಂದರು. ಉರುಸ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿ ಗಳಾಗಿ ಬೆಂಗಳೂರಿನ ಖ್ವಾಜ ಸೈದ್ ಮುಖ್ತಾರ್ ಅಹಮದ್ ಅಲಿ, ಹಜ಼ರತ್ ನವೀದ್ ಮೂಯಿನ್ಉದ್ದಿನ್ ಷಾ ಖಾದ್ರಿ,ಬಿ ಎಸ್ ರಫೀಉಲ್ಲಾ, ಸೈದ್ ಷಾ ಸುಲ್ತಾನ್ ಚಿಸ್ಟಿ,ಆದಿಲ್ ಷಾ,ಆಸಿಫ್ ಷಾ,ಸೈದ್ ಷಾ ನಸೀರ್ ಉದ್ದೀನ್ ನಸೀರಿ ಚಿಸ್ಟಿ,ಸೈದ್ ಶಾಹಬುದ್ದೀನ್,ಸೈದ್ ಷಾ ಮಗ್ದುಮ್, ಇತರರು ಹಾಜರಿದ್ದರು