ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ರೈತರು ಮತ್ತು ಕಾರ್ಮಿಕರು ದೇಶದ ಬೆನ್ನೆಲುಬು: ಕೆಪಿಸಿಸಿ ಕಾರ್ಮಿಕ ವಿಭಾಗ ರಾಜ್ಯ ಕಾರ್ಯದರ್ಶಿ ಕೋನಪಲ್ಲಿ ಕೋದಂಡ

ಕಾರ್ಮಿಕ ದಿನಾಚರಣೆಯು ಕಾರ್ಮಿಕರ ಕಠಿಣ ಪರಿಶ್ರಮವನ್ನು ಗೌರವಿಸುತ್ತದೆ ಮತ್ತು ಪ್ರಪಂಚ ದಾದ್ಯಂತ ಅವರ ಕಷ್ಟಗಳು ಮತ್ತು ಅಂತ್ಯವಿಲ್ಲದ ಪ್ರಯತ್ನಗಳನ್ನು ನೆನಪಿಸಿಕೊಳ್ಳುತ್ತದೆ. ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು, ಶೋಷಣೆಯನ್ನು ನಿಲ್ಲಿಸುವುದು ಮತ್ತು ಸಮಾನ ವೇತನ ಮತ್ತು ಸುಧಾರಿತ ಕೆಲಸದ ಪರಿಸ್ಥಿತಿಗಳನ್ನು ಉತ್ತೇಜಿಸುವುದು ಈ ದಿನದ ಉದ್ದೇಶ ವಾಗಿದೆ. ಕಾರ್ಮಿಕರ ದೈನಂದಿನ ಕಷ್ಟಗಳನ್ನು ಗೌರವಿಸುವುದನ್ನು ಪ್ರತಿಯೊಬ್ಬರು ಕಲಿಯ ಬೇಕು ಎಂದರು.

ರೈತರು ಮತ್ತು ಕಾರ್ಮಿಕರು ದೇಶದ ಬೆನ್ನೆಲುಬು

Profile Ashok Nayak May 1, 2025 11:34 PM

ಚಿಕ್ಕಬಳ್ಳಾಪುರ: ರೈತರು ಮತ್ತು ಕಾರ್ಮಿಕರು ದೇಶದ ಬೆನ್ನೆಲುಬು, ದೇಶದ ಅಭಿವೃದ್ದಿಯಲ್ಲಿ ಇವರ ಪಾತ್ರ ಬಹು ಮುಖ್ಯವಾಗಿದೆ ಎಂದು  ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗ ರಾಜ್ಯ ಕಾರ್ಯದರ್ಶಿ ಕೋನಪಲ್ಲಿ ಕೋದಂಡ ಹೇಳಿದರು. ನಗರದ ಬಿಬಿ ರಸ್ತೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗ ವತಿಯಿಂದ ಎರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಉಧ್ಘಾಟಿಸಿ ಮಾತನಾಡಿ,ನಾವು ಪ್ರತಿದಿನ ಕ್ರಮಿಸುವ ರಸ್ತೆಗಳು, ಪ್ರವೇಶಿಸುವ ಕಟ್ಟಡಗಳು, ಉಣ್ಣುವ ಅನ್ನದ ಹಿಂದೆ ಕಾರ್ಮಿಕರ ಬೆವರಿನ ಹನಿ ಇದೆ. ಕಾರ್ಮಿಕರು ದೇಶದ ಪ್ರಗತಿಯ ಬೆನ್ನೆಲುಬು. ಕಠಿಣ ಪರಿಶ್ರಮ, ಘನತೆಯ ದುಡಿಮೆಯ ಮೂಲಕ ಅವರು ಹಾಕುವ ಪ್ರತಿಯೊಂದು ಅಡಿಪಾಯವೂ ನಮ್ಮ ಸುಂದರ ನಾಳೆಗಳನ್ನು ನಿರ್ಮಿಸುತ್ತದೆ. ನಮ್ಮ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್  ಸರ್ಕಾರ ಸದಾ ಕಾರ್ಮಿಕರ ಪರವಾಗಿದ್ದು, ಅವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಎಲ್ಲಾ ಯೋಜನೆಗಳು ಕಾರ್ಮಿಕರಿಗೆ ತಲುಪಿಸುವ ಕೆಲಸವನ್ನು ನಮ್ಮ ಕಾರ್ಮಿಕ ವಿಭಾಗ ಮಾಡುತ್ತಿದೆ ಎಂದರು. 

ಇದನ್ನೂ ಓದಿ: Harish Kera Column: ಟ್ರೋಲ್‌ ಪಾವತಿಸಿ ಮುಂದೆ ಹೋಗಿ !

ಕಾರ್ಮಿಕ ದಿನಾಚರಣೆಯು ಕಾರ್ಮಿಕರ ಕಠಿಣ ಪರಿಶ್ರಮವನ್ನು ಗೌರವಿಸುತ್ತದೆ ಮತ್ತು ಪ್ರಪಂಚದಾದ್ಯಂತ ಅವರ ಕಷ್ಟಗಳು ಮತ್ತು ಅಂತ್ಯವಿಲ್ಲದ ಪ್ರಯತ್ನಗಳನ್ನು ನೆನಪಿಸಿಕೊಳ್ಳುತ್ತದೆ. ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು, ಶೋಷಣೆಯನ್ನು ನಿಲ್ಲಿಸುವುದು ಮತ್ತು ಸಮಾನ ವೇತನ ಮತ್ತು ಸುಧಾರಿತ ಕೆಲಸದ ಪರಿಸ್ಥಿತಿಗಳನ್ನು ಉತ್ತೇಜಿಸುವುದು ಈ ದಿನದ ಉದ್ದೇಶ ವಾಗಿದೆ. ಕಾರ್ಮಿಕರ ದೈನಂದಿನ ಕಷ್ಟಗಳನ್ನು ಗೌರವಿಸುವುದನ್ನು ಪ್ರತಿಯೊಬ್ಬರು ಕಲಿಯ ಬೇಕು ಎಂದರು.

 ಮಂಡಿಕಲ್ ಮತ್ತು ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್ ಮಾತನಾಡಿ, ವಿಶ್ವ ಕಾರ್ಮಿಕರೇ ಒಂದಾಗಿ ನಿಮಗೆ ಕಳೆದುಕೊಳ್ಳಲು ಸಂಕೋಲೆಗಳನ್ನೊರತು ಬೇರೇನಿಲ್ಲ, ಗೆಲ್ಲ ಲೊಂದು ಜಗತ್ತೇ ಇದೆ” ಎಂಬ ಘೋಷಣೆ ಇಂದು ಕಾರ್ಮಿಕ ವರ್ಗದ ಘೋಷವಾಕ್ಯವಾಗಬೇಕಿದೆ. ವಿಶ್ವದ ಎಲ್ಲಾ ದುಡಿಯುವ ಕಾರ್ಮಿಕರು ಒಂದಾದರೆ ಮಾತ್ರ ವಿಶ್ವವನ್ನು ಶೋಷಣೆಮಾಡುತ್ತಿರುವ ಬಂಡವಾಳಶಾಹಿ ಸಮಾಜವನ್ನು ಸೋಲಿಸಿ, ದುಡಿಯುವ ಜನರ   ಸಮಸಮಾಜವನ್ನು ಜಾರಿಗೆ ತರಲು ಸಾಧ್ಯ ಎಂದರು.

ಸಂವಿಧಾನ ಶಿಲ್ಪಿ ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ರವರು ಕಾರ್ಮಿಕರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಇವರ ಆದರ್ಶಗಳನ್ನು ನಮ್ಮ ಎಲ್ಲಾ ಕಾರ್ಯಕರ್ತರೂ ಮೈಗೂಡಿಸಿ ಕೊಂಡು ಕಾರ್ಮಿಕರಿಗೆ ನ್ಯಾಯ ಬದ್ದವಾಗಿ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಕೊಡಿಸ ಬೇಕು ಎಂದು ಮನವಿ ಮಾಡಿದರು.    

ಕಾಂಗ್ರೆಸ್ ಮುಖಂಡ  ಪಟ್ರೇನಹಳ್ಳಿ ಕೃಷ್ಣ ಮಾತನಾಡಿ,  ಕಾರ್ಮಿಕರಿಗೆ ನಮ್ಮ ರಾಜ್ಯ ಸರ್ಕಾರದ ಮಹತ್ವಾ ಕಾಂಕ್ಷಿ ಯೋಜನೆಯಾದ ಪಂಚ ಗ್ಯಾರಂಟಿಗಳನ್ನು ಚಾಚೂ ತಪ್ಪದೆ ತಲುಪಿಸಲು ಎಲ್ಲಾ ಕಾರ್ಯಕರ್ತರು ಪಣ ತೊಡಬೇಕು . ಏಕೆಂದರೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾರ್ಮಿಕರ ಪಾತ್ರವೂ ಸಹಾ ಮುಖ್ಯವಾಗಿತ್ತು ಎಂದರು.

ಈ ಸಂರ್ಧಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜಯರಾಮ್, ಕಾರ್ಮಿಕ ವಿಭಾಗದ ಕಾನೂನು ಘಟಕದ ಅಧ್ಯಕ್ಷ ಮುನಿಕೃಷ್ಣ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್,ಮುಖಂಡರಾದ ಕೆ.ಆರ್.ವೇಣುಗೋಪಾಲ್(ಡೈರಿ ಗೋಪಿ) ಬಾಬಾ ಜಾನ್, ರಾಮಕೃಷ್ಣಪ್ಪ, ಗವಿರಾಯಪ್ಪ, ನಾಯನ ಹಳ್ಳಿ ನಾರಾಯಣಸ್ವಾಮಿ, ಲಕ್ಷ್ಮಣ್, ವಿಜಯ್ ಕೃಷ್ಣ, ಮಮತಾಮೂರ್ತಿ, ಯಾಸ್ಮೀತಾಜ್, ವೆಂಕಟ ಲಕ್ಷ್ಮಿ, ವೆಂಕಟರತ್ನ, ನಾಸೀರಾ, ನಭಿಉಲ್ಲಾ,ಹೆಚ್.ವೆಂಕಟೇಶ್ ಮತ್ತಿತರರು ಇದ್ದರು.