Rangaswamy Mookanahalli: ಒತ್ತಾಸೆಯಾದವರಿಗೆ ನಾವೂ ಹೆಗಲಾಗಬೇಕಲ್ಲವೇ?
ನಮಗೆ ನೆರವಾಗುತ್ತಲೇ ಬಂದಿರುವ ರಷ್ಯಾ ಮತ್ತು ಇಸ್ರೇಲ್ ಗೆ ನಾವು ನೇರವಾಗಿ ಇಂದಿಗೂ ಬೆಂಬಲ ಸೂಚಿಸಿಲ್ಲ. ರಷ್ಯಾ ಮತ್ತು ಉಕ್ರೈನ್ ನಡುವಿನ ಯುದ್ದವಾದಾಗ ಭಾರತ ತಟಸ್ಥವಾಗಿ ಉಳಿದುಕೊಂಡಿತು. ಮೀಡಿಯಾ ಮುಂದೆ ಸ್ವತಃ ಮೋದಿಯವರು ಇದು ಯುದ್ಧದ ಸಮಯವಲ್ಲ ಎಂದು ಹೇಳಿಕೆ ನೀಡಿದರು. ಅಮೇರಿಕಾ ಬೇಡ ಎಂದರೂ ರಷ್ಯಾದಿಂದ ನಾವು ತೈಲ ಕೊಂಡದ್ದು ಬಿಟ್ಟರೆ ನಾವು ಅವರಿಗೆ ಇನ್ನ್ಯಾವ ರೀತಿಯ ಸಹಾಯವನ್ನೂ ಬಾಯಿಮಾತಿಗೂ ಮಾಡಲಿಲ್ಲ. ಇನ್ನು ಇಸ್ರೇಲ್ ಮತ್ತು ಘಾಸಾದಲ್ಲಿನ ಹಮಾಸ್ ವಿರುದ್ದದ ಯುದ್ಧದಲ್ಲಿ ಕೂಡ ನಾವು ಇಸ್ರೇಲ್ ಪರ ಮಾತನಾಡದೆ ಸುಮ್ಮನೆ ಕುಳಿತೆವು.